ಹೋಳಿ ಹೆಸರಿನಲ್ಲಿ‌ ಮಹಿಳೆಯರಿಗೆ ಕಿರುಕುಳ : ವಿವಾದ ಮೂಡಿಸಿದ ಭಾರತ ಮ್ಯಾಟ್ರಿಮೋನಿ ಜಾಹೀರಾತು

ನವದೆಹಲಿ : ಪ್ರೊಡಕ್ಟ್ ಗಳ ಮಾರ್ಕೆಟಿಂಗ್‌ಗಾಗಿ ಜಾಹೀರಾತು ಸಿದ್ಧಪಡಿಸಲಾಗುತ್ತದೆ. ಆದರೆ ಕೆಲವೊಮ್ಮೆ ಈ ಜಾಹೀರಾತುಗಳು ಪ್ರೊಡಕ್ಟ್‌ನ ಮಾರ್ಕೆಟಿಂಗ್ ಮಾಡೋ ಬದಲು ವಿವಾದಕ್ಕೆ ಕಾರಣವಾಗುತ್ತದೆ. ಈಗ ಭಾರತ್ ಮ್ಯಾಟ್ರಿಮೋನಿ (India Matrimony Advertisement) ಅಂತಹುದೇ ವಿವಾದವೊಂದನ್ನು ಹುಟ್ಟು ಹಾಕಿದ್ದು ಬಹುಸಂಖ್ಯಾತ ಹಿಂದೂಗಳ ಮನಸ್ಸಿಗೆ, ಆಚರಣೆಗೆ ಅವಮಾನ ಮಾಡಿದ ಆರೋಪಕ್ಕೆ ಗುರಿಯಾಗಿದೆ.

ಹೋಳಿ ಹಬ್ಬದ ಆಚರಣೆಗೆ ಸಂಬಂಧಿಸಿದ ಜಾಹೀರಾತೊಂದನ್ನು ಸಿದ್ಧಪಡಿಸಿದೆ. ಈ ಜಾಹೀರಾತಿನಲ್ಲಿ ಹೋಳಿ‌ ಹಬ್ಬದಲ್ಲಿ ಬಣ್ಣ ಎರಚುವ ನೆಪದಲ್ಲಿ ಮಹಿಳೆಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬರ್ಥದಲ್ಲಿ ಜಾಹೀರಾತು ರೂಪಗೊಂಡಿದೆ. ಭಾರತ್ ಮ್ಯಾಟ್ರಿಮೋನಿಯ 75 ಸೆಕೆಂಡ್ ನ ವೀಡಿಯೋದಲ್ಲಿ ಯುವತಿಯೊಬ್ಬಳು ಹೋಳಿ ಆಟ ಮುಗಿಸಿ ಬರುತ್ತಾಳೆ. ಬಳಿಕ ಸಿಂಕ್ ನಲ್ಲಿ ಮುಖ ತೊಳೆಯುತ್ತಾಳೆ. ಈ ವೇಳೆ ಅವರ ಬಣ್ಣ ತೊಳೆದ ಮೇಲೆ ಮೂಗು ಹಾಗೂ ಗಲ್ಲದ ಮೇಲೆ ತರಚಿದ ಹಾಗೂ ಊದಿದ ಗುರುತುಗಳಿರುತ್ತವೆ. ಅಲ್ಲದೇ ಒಂದು ರೀತಿಯ ನೋವಿನ ಭಾವನೆ ವ್ಯಕ್ತಪಡಿಸುತ್ತಾರೆ.

ಅಲ್ಲದೇ ಕೆಲವು ಬಣ್ಣಗಳು ಸುಲಭವಾಗಿ ಮಾಸಿ ಹೋಗುವುದಿಲ್ಲ. ಹೋಳಿ ಸಂದರ್ಭದಲ್ಲಿ ಮಾಡುವ ಕಿರುಕುಳ ಮಹಿಳೆಯರಿಗೆ ಅಘಾತ ತರುತ್ತಿದೆ. ಇಂದು ಪ್ರತಿ ಮೂವರಲ್ಲಿ ಒಬ್ಬ ಮಹಿಳೆ ಈ ತೊಂದರೆ ಅನುಭವಿಸುತ್ತಾಳೆ ಮತ್ತು ಹೋಳಿ ಆಚರಿಸುವುದನ್ನು ನಿಲ್ಲಿಸಿದ್ದಾರೆ. ಹೀಗಾಗಿ ಈ ದಿನದಂದು ಹೋಳಿ ಬದಲು ಮಹಿಳಾ ದಿನಾಚರಣೆ ಆಚರಿಸೋಣ ಎಂದು ಟೆಕ್ಸ್ಟ್ ಕೂಡ ಹಾಕಲಾಗಿದೆ. ಅಲ್ಲದೇ ಇದೇ ಸಂಗತಿಯನ್ನು ಭಾರತ್ ಮ್ಯಾಟ್ರಿಮೋನಿ ಟ್ವೀಟ್ ಕೂಡ ಮಾಡಲಾಗಿದೆ. ಆದರೆ ಈಗ ಈ ಜಾಹೀರಾತು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದ್ದು, ಪರ ವಿರೋಧ ಚರ್ಚೆ ಜೋರಾಗಿದೆ.

ಹಿಂದೂ ಪರ ಸಂಘಟನೆಗಳು ಭಾರತ್ ಮ್ಯಾಟ್ರಿಮೋನಿ ವಿರುದ್ಧ ತಿರುಗಿ ಬಿದ್ದಿದ್ದು, #BoycottBharatMatrimony ಎಂದು ಟ್ವೀಟ್ ಅಭಿಯಾನ ಆರಂಭಿಸಿದ್ದಾರೆ. ಇದು ಹಿಂದೂ ವಿರೋಧಿ ಅಭಿಯಾನ. ನಾನು ಜೀವನ ಪೂರ್ತಿ ಅವಿವಾಹಿತನಾಗಿಯಾದ್ರೂ ಉಳಿಯುತ್ತೇನೆ. ಬದಲಾಗಿ ಭಾರತ್ ಮ್ಯಾಟ್ರಿಮೋನಿಯಿಂದ ಹುಡುಗಿಯನ್ನು ಹುಡುಕಲು ಸಹಾಯ ಪಡೆಯುವುದಿಲ್ಲ ಎಂದು ಅಕಾಶ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Bank manager suicide case: ಮಹಾಲಕ್ಷ್ಮಿ ಕೋ ಆಪರೇಟಿವ್‌ ಬ್ಯಾಂಕ್‌ ಮ್ಯಾನೇಜರ್‌ ಆತ್ಮಹತ್ಯೆ ಪ್ರಕರಣ: ಬ್ಯಾಂಕ್‌ ಅಧ್ಯಕ್ಷ ಸೇರಿ ಐವರ ವಿರುದ್ದ ದೂರು

ಇದನ್ನೂ ಓದಿ : BMTC ಬಸ್‌ನಲ್ಲಿ ಅಗ್ನಿ ದುರಂತ, ಕಂಡಕ್ಟರ್‌ ಸಜೀವ ದಹನ

ಇದನ್ನೂ ಓದಿ : ಮಾರ್ಕೆಟ್ ಕಾಂಪ್ಲೆಕ್ಸ್‌ನಲ್ಲಿ ಭಾರೀ ಬೆಂಕಿ ಅವಘಡ; 3 ಮಂದಿಗೆ ಗಾಯ

ಭಾರತ ಮ್ಯಾಟ್ರಿಮೋನಿ ವಧು ವರರನ್ನು ಅನ್ವೇಷಿಸುವ ಭಾರತದ ಅತಿದೊಡ್ಡ ಆನ್ ಲೈನ್ ತಾಣವಾಗಿದೆ. ದೇಶದ ಎಲ್ಲ ಜಾತಿ ಜನಾಂಗಗಳ ವಧು-ವರರನ್ನು ಒಗ್ಗೂಡಿಸುವುದಾಗಿ ಮ್ಯಾಟ್ರಿಮೋನಿ ಹೇಳಿಕೊಂಡಿದೆ. ಈ ಭಾರತ್ ಮ್ಯಾಟ್ರಿಮೋನಿಯನ್ನು ತಮಿಳುನಾಡಿನ ಮುರುಗವೇಲು ಜಾನಕಿರಾಮ್ ಸಂಸ್ಥಾಪಿಸಿ ಮುನ್ನಡೆಸುತ್ತಿದ್ದಾರೆ. ಈಗ ಹೋಳಿ ಹಬ್ಬದ ಜಾಹೀರಾತು ಸೃಷ್ಟಿಸಿದ ವಿವಾದಕ್ಕೆ ಸಂಸ್ಥೆ ಯಾವ ಸ್ಪಷ್ಟನೆ ನೀಡಲಿದೆ ಅನ್ನೋದನ್ನು ಕಾದುನೋಡಬೇಕಿದೆ.

Harassment of women in the name of Holi: India Matrimony advertisement created controversy

Comments are closed.