Moto G73 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಅನಾವರಣ; 1TB ವರೆಗೆ ಸ್ಟೊರೇಜ್‌ ವಿಸ್ತರಣೆ

ಮೊಟೊರೋಲಾ (Motorola) ಕಂಪನಿ ಭಾರತದ ಮಾರುಕಟ್ಟೆಗೆ ತನ್ನ ಹೊಸದಾದ ಮೊಟೊ G73 5G (Moto G73 5G) ಸ್ಮಾರ್ಟ್‌ಫೋನ್‌ ಅನ್ನುಪರಿಚಯಿಸಿದೆ. ಈ ಫೋನ್‌ ಅನ್ನು ಈ ಮೊದಲೇ ಯೂರೋಪ್‌ನ ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಲಾಗಿತ್ತು. ಆದರೆ ಈಗ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡು ಭಾರತದಲ್ಲಿ ಲಾಂಚ್‌ ಆಗಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 930 ಪ್ರೊಸೆಸ್ಸರ್‌ ಹೊಂದಿದ್ದು, 8GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಬಿಡುಗಡೆಯಾಗಿದೆ. ಮೊಟೊ ದ ಈ ಹೊಸ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 13ನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಓದಿ.

ಮೊಟೊ G73 5G ಬೆಲೆ ಮತ್ತು ಲಭ್ಯತೆ :
ಮೋಟೋರೋಲಾದ ಹೊಸ ಸ್ಮಾರ್ಟ್‌ಫೋನ್‌ G73 5G ಯ ಬೆಲೆ 18,999 ರೂ. ಗಳಾಗಿವೆ. ಈ ಬೆಲೆಯು 8GB RAM ಮತ್ತು 128GB ಸಂಗ್ರಹಣೆಯಿರುವ ಆವೃತ್ತಿಯ ಫೋನ್‌ದ್ದಾಗಿದೆ. ಕಂಪನಿಯು ಈ ಫೋನ್‌ನ ಖರೀದಿಗೆ ಎರಡು ಬಣ್ಣಗಳಲ್ಲಿ ಮಿಡ್‌ನೈಟ್‌ ಬ್ಲ್ಯೂ ಮತ್ತು ಲ್ಯುಸೆಂಟ್‌ ವೈಟ್‌ ಆಯ್ಕೆಗಳನ್ನು ನೀಡಿದೆ. G73 5G ಸ್ಮಾರ್ಟ್‌ಫೋನ್ ಲಾಂಚ್‌ ಆಗಿದ್ದರೂ, ಇದರ ಮಾರಾಟವು ಮಾರ್ಚ್‌ 16 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಆರಂಭವಾಗಲಿದೆ. ಗ್ರಾಹಕರಿಗೆ ಲಾಂಚ್‌ ಆಫರ್‌ಗಳು ಸಿಗಲಿವೆ.

ಮೊಟೊ G73 5G ಫೋನ್‌ನ ವೈಶಿಷ್ಟ್ಯಗಳು:
ಮೊಟೊ G73 5G ಫೋನ್‌ 6.5 ಇಂಚಿನ ಫುಲ್‌ HD+ LCD ಡಿಸ್ಪ್ಲೇ ಹೊಂದಿದ್ದು, 120 Hz ರಿಫ್ರೆಶ್‌ ದರವನ್ನು ಬೆಂಬಲಿಸಲಿದೆ. ಈ ಫೋನ್‌ನ ಡಿಸ್ಪ್ಲೇಯಲ್ಲಿ ಪಂಚ್‌ ಹೋಲ್‌ ಕಟೌಟ್‌ ನೀಡಲಾಗಿದೆ. ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 930 ಪ್ರೊಸೆಸ್ಸರ್‌ನಿಂದ ಚಾಲನೆಗೊಳ್ಳಲಿದೆ ಮತ್ತು ಆಂಡ್ರಾಯ್ಡ್‌ 13 ಸಹಾಯದಿಂದ ಕಾರ್ಯನಿರ್ವಹಿಸಲಿದೆ. ಈ ಫೋನ್‌ 8GB RAM ಮತ್ತು 128 GB ಸ್ಟೊರೇಜ್‌ ಹೊಂದಿದೆ. ವಿಶೇಷವಾಗಿ ಇದರ ಸ್ಟೊರೇಜ್‌ ಕೆಪಾಸಿಟಿಯನ್ನು ಮೈಕ್ರೋಎಸ್‌ಡಿ ಕಾರ್ಡ್‌ ಮೂಲಕ 1TB ಯ ವರಗೆ ವಿಸ್ತರಿಸಬಹುದಾಗಿದೆ.

ಮೊಟೊ G73 5G ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಫೋನ್‌ನ ಹಿಂಭಾಗದಲ್ಲಿ ಇದರ ಪ್ರೈಮರಿ ಕ್ಯಾಮೆರಾವು 50MP ಸೆನ್ಸಾರ್‌ ಮತ್ತು ಎರಡನೇ ಕ್ಯಾಮೆರಾವು 8MP ಅಲ್ಟ್ರಾ–ವೈಡ್‌ ಡೆಪ್ತ್‌ ಸೆನ್ಸಾರ್‌ ಹೊಂದಿದೆ. ಸೆಲ್ಫೀ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 16MP ಕ್ಯಾಮೆರಾ ಹೊಂದಿದೆ.

ಈ ಫೋನ್‌ 30 ವ್ಯಾಟ್‌ ವೇಗದ ಚಾರ್ಜಿಂಗ್‌ ಬೆಂಬಲಿಸುವ 5000mAh ಬ್ಯಾಟರಿ ಪ್ಯಾಕ್‌ನೊಂದಿಗೆ ಬರಲಿದೆ. ಇದು ಸಂಪರ್ಕಕ್ಕಾಗಿ 5G, Wi-Fi, ಬ್ಲೂಟೂತ್‌, ಜಿಪಿಎಸ್‌, LTEPP, ಯುಎಸ್‌ಬಿ ಟೈಪ್‌–ಸಿ, ಮತ್ತು ಹೆಡ್‌ ಫೋನ್‌ ಜ್ಯಾಕ್‌ ಮುಂತಾದವುಗಳನ್ನು ಬೆಂಬಲಿಸಲಿದೆ.

ಇದನ್ನೂ ಓದಿ : Earphone Vs Headphone : ಇಯರ್‌ಪೋನ್‌ ಮತ್ತು ಹೆಡ್‌ಫೋನ್‌ಗಳಲ್ಲಿ ಯಾವುದು ಆಯ್ಕೆ ಮಾಡಿಕೊಳ್ಳುವುದು ಬೆಸ್ಟ್‌; ನಿಮ್ಮ ಗೊಂದಲಕ್ಕೆ ಇಲ್ಲದೆ ಪರಿಹಾರ

ಇದನ್ನೂ ಓದಿ : Realme C55 : ಐಫೋನ್‌ ನಂತೆಯೇ ಡೈನಾಮಿಕ್ ಐಲ್ಯಾಂಡ್‌ನಂತಹ ವಿನ್ಯಾಸದೊಂದಿಗೆ ಲಾಂಚ್‌ ಆದ ರಿಯಲ್‌ಮಿ C55

(Moto G73 5G smartphone launched in India. know the price and specifications)

Comments are closed.