ಹೆಚ್‌ಡಿಎಫ್‌ಸಿ ಬ್ಯಾಂಕ್‌ ಗ್ರಾಹಕರ ಗಮನಕ್ಕೆ : FD ಮೇಲೆ ಶೇ. 6ರಷ್ಟು ಬಡ್ಡಿದರ ಹೆಚ್ಚಳ

ನವದೆಹಲಿ : ದೇಶದ ಜನತೆ ಹೆಚ್ಚಾಗಿ ಸ್ಥಿರ ಠೇವಣಿಗಳ ಮೇಲೆ ಹೂಡಿಕೆ ಮಾಡುತ್ತಾರೆ. ಯಾಕೆಂದರೆ ಭವಿಷ್ಯದ ಭದ್ರತೆ ಹಾಗೂ ಉತ್ತಮ ಲಾಭಕ್ಕಾಗಿ ಜನರು ಇದರಲ್ಲಿ ಹೂಡಿಕೆ ಮಾಡುತ್ತಾರೆ. ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಎಂದು ಕರೆಯಲ್ಪಡುವ ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank FD Interest Rate Hike) ಶನಿವಾರ 2 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಸ್ಥಿರ ಠೇವಣಿಗಳ (FD) ಬಡ್ಡಿದರಗಳನ್ನು ಹೆಚ್ಚಿಸಿದೆ ಎಂದು ತಿಳಿಸಿದೆ.

ಮುಖ್ಯವಾಗಿ, ಫೆಬ್ರವರಿ 8 ರಂದು ಆರ್‌ಬಿಐ (RBI) ಯ ರೆಪೊ ದರ ಹೆಚ್ಚಳಕ್ಕೆ ಅನುಗುಣವಾಗಿ ಬ್ಯಾಂಕ್ ಎಫ್‌ಡಿ ಬಡ್ಡಿ ದರವನ್ನು 25 ಮೂಲ ಅಂಶಗಳಿಂದ ಶೇ. 6.50 ಕ್ಕೆ ಹೆಚ್ಚಿಸಿದೆ. ಹೆಚ್‌ಡಿಎಫ್‌ಸಿ (HDFC) ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಇತ್ತೀಚಿನ ಸ್ಥಿರ ಠೇವಣಿಗಳ (FD)ದರಗಳು 17 ಫೆಬ್ರವರಿ 2023 ರಿಂದ ಜಾರಿಗೆ ಬರುತ್ತವೆ. ಇತ್ತೀಚಿನ ಬಡ್ಡಿದರ ಹೆಚ್ಚಳದ ನಂತರ, ಹೆಚ್‌ಡಿಎಫ್‌ಸಿ (HDFC) ಬ್ಯಾಂಕ್ ಈಗ ಠೇವಣಿಗಳ ಮೇಲಿನ ಬಡ್ಡಿದರಗಳನ್ನು 7 ದಿನಗಳಿಂದ 10 ವರ್ಷಗಳವರೆಗೆ ಸಾಮಾನ್ಯ ಜನರಿಗೆ ಶೇ. 4.75 ರಿಂದ ಶೇ. 7.00 ವರೆಗೆ ಮತ್ತು ಹಿರಿಯ ನಾಗರಿಕರಿಗೆ ಶೇ. 5.25 ರಿಂದ ಶೇ. 7.75 ವರೆಗೆ ನೀಡುತ್ತಿದೆ ಎಂದು ಹೇಳಿದೆ.

ಪ್ರಸ್ತುತ,ಹೆಚ್‌ಡಿಎಫ್‌ಸಿ (HDFC) ಬ್ಯಾಂಕ್ 46 ರಿಂದ 60 ದಿನಗಳವರೆಗೆ ಠೇವಣಿಗಳಿಗೆ ಶೇ. 5.75 ಮತ್ತು 61 ರಿಂದ 89 ದಿನಗಳವರೆಗೆ ಠೇವಣಿಗಳಿಗೆ ಶೇ. 6 ಬಡ್ಡಿದರಗಳನ್ನು ನೀಡುತ್ತದೆ. 90 ದಿನಗಳಿಂದ 6 ತಿಂಗಳವರೆಗೆ ಮೆಚ್ಯುರಿಟಿಯಾಗುವ ಸ್ಥಿರ ಠೇವಣಿಗಳು ಈಗ ಶೇ. 6.50ರಷ್ಟು ಬಡ್ಡಿಯನ್ನು ಗಳಿಸಿದರೆ, 6 ತಿಂಗಳುಗಳು, 1 ದಿನದಿಂದ 9 ತಿಂಗಳವರೆಗೆ ಮುಕ್ತಾಯಗೊಳ್ಳುವವರು ಈಗ ಶೇ.6.65ರಷ್ಟು ಬಡ್ಡಿಯನ್ನು ಗಳಿಸುತ್ತಾರೆ. ಆದರೆ, 9 ತಿಂಗಳ 1 ದಿನದಿಂದ 1 ವರ್ಷದವರೆಗೆ ಮೆಚ್ಯುರಿಟಿಯಾಗುವ ಬೃಹತ್ ಸ್ಥಿರ ಠೇವಣಿಗಳಿಗೆ, ಬ್ಯಾಂಕ್ ಶೇ. 6.75ರಷ್ಟು ಬಡ್ಡಿದರವನ್ನು ನೀಡುತ್ತಿದೆ. 1 ವರ್ಷದಿಂದ 15 ತಿಂಗಳವರೆಗೆ ಮೆಚ್ಯುರಿಟಿಯಾಗುವರಿಗೆ, ಹೆಚ್‌ಡಿಎಫ್‌ಸಿ (HDFC) ಬ್ಯಾಂಕ್ ಈಗ ಶೇ. 7ರಷ್ಟು ಬಡ್ಡಿದರವನ್ನು ನೀಡುತ್ತದೆ.

ಇದನ್ನೂ ಓದಿ : Tata Owned Air India : ಟಾಟಾ ಒಡೆತನದ ಏರ್ ಇಂಡಿಯಾ ಕುರಿತು ದೂರುಗಳ ಸರಣಿ ಟ್ವೀಟ್‌ ಮಾಡಿದ ಬಿಬೆಕ್ ಡೆಬ್ರಾಯ್

ಇದನ್ನೂ ಓದಿ : Credit Card Balance Transfer : ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ : ಈ ಸೌಲಭ್ಯದಿಂದ ನಿಮಗೆ ಹಣ ಉಳಿಸಲು ಹೇಗೆ ಸಾಧ್ಯ ಗೊತ್ತಾ ?

ಇದನ್ನೂ ಓದಿ : 7th Pay Commission News : ಶೀಘ್ರದಲ್ಲೇ ರಾಜ್ಯದಲ್ಲಿ 6,000 ಕೋಟಿ ರೂ. 7ನೇ ವೇತನ ಆಯೋಗ ಜಾರಿ

ಎಚ್‌ಡಿಎಫ್‌ಸಿ ಬ್ಯಾಂಕ್ ಈಗ 15 ತಿಂಗಳಿಂದ 2 ವರ್ಷಗಳ ಠೇವಣಿ ಅವಧಿಯ ಮೇಲೆ ಶೇ. 7.15ರಷ್ಟು ಬಡ್ಡಿದರವನ್ನು ಮತ್ತು 2 ವರ್ಷ 1 ದಿನದಿಂದ 10 ವರ್ಷಗಳ ಠೇವಣಿ ಅವಧಿಯ ಮೇಲೆ ಶೇ. 7.00ರಷ್ಟು ಬಡ್ಡಿದರವನ್ನು ನೀಡುತ್ತದೆ ಎಂದು ಹೇಳಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ವೆಬ್‌ಸೈಟ್ ಪ್ರಕಾರ, ಹಿರಿಯ ನಾಗರಿಕರು 7 ದಿನಗಳಿಂದ 5 ವರ್ಷಗಳಲ್ಲಿ ಮೆಚ್ಯುರಿಟಿಗೊಳ್ಳುವ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಬೃಹತ್ ಸ್ಥಿರ ಠೇವಣಿಗಳ ಮೇಲಿನ ನಿಯಮಿತ ದರಗಳಿಗಿಂತ ಶೇ. 0.50ರಷ್ಟು ಹೆಚ್ಚುವರಿ ಬಡ್ಡಿದರವನ್ನು ಪಡೆಯುತ್ತಾರೆ. ಇನ್ನು ಭಾರತೀಯ ನಿವಾಸಿಗಳು ಮತ್ತು ಕನಿಷ್ಠ 60 ವರ್ಷ ವಯಸ್ಸಿನ ಹಿರಿಯ ನಾಗರಿಕರು ಮತ್ತು ನಿವೃತ್ತ ಉದ್ಯೋಗಿಗಳು ಹೆಚ್ಚುವರಿ ಬಡ್ಡಿದರದ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ.

HDFC Bank FD Interest Rate Hike: Attention HDFC Bank Customers: 6 Interest Rate Hike on FD

Comments are closed.