ಧ್ರುವ ಸರ್ಜಾ ಅಭಿಮಾನಿ ಬೈಕ್‌ ಅಪಘಾತದಿಂದ ವಿಧಿವಶ : ಆಸ್ಪತ್ರೆಗೆ ಭೇಟಿ ಪೋಷಕರಿಗೆ 5 ಲಕ್ಷ ನೀಡಿ ಆಸರೆಯಾದ ನಟ

ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ಅಭಿಮಾನಿ ಪೃಥ್ವಿರಾಜ್‌ (Dhruva Sarja Fan Died) ಎಂಬುವವರು ಫೆಬ್ರವರಿ 14ರಂದು ಬೈಕ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಲೆಗೆ ಹೆಲ್ಮೆಟ್ ಧರಿಸದ ಕಾರಣ ತಲೆಗೆ ಗಂಭೀರವಾಗಿ ಪೆಟ್ಟಾಗಿ ಕೋಮಾ ಸ್ಥಿತಿ ತಲುಪಿದ್ದು, ಬೆಂಗಳೂರಿನ ಎಂ.ಎಸ್.ರಾಮಯ್ಯ ಮೇಮೊರಿಯಲ್ ಆಸ್ಪತ್ರೆಯಲ್ಲಿ ಪೃಥ್ವಿರಾಜ್‌ಗೆ ಚಿಕಿತ್ಸೆ ಪಡೆದಿದ್ದು, ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದ್ದಾರೆ. ನಟ ಧ್ರುವ ಸರ್ಜಾ ಆಸ್ಪತ್ರೆಗೆ ಭೇಟಿ ನೀಡಿ ಅಭಿಮಾನಿಯ ಕುಟುಂಬಕ್ಕೆ ಧೈರ್ಯ ತುಂಬಿ, ಪೋಷಕರಿಗೆ 5 ಲಕ್ಷ ನೀಡಿ ಆಸರೆಯಾಗಿದ್ದಾರೆ. ಸದ್ಯ ಈ ಸುದ್ದಿ ಸಖತ್‌ ಸದ್ದು ಮಾಡುತ್ತಿದೆ.

ಧ್ರುವ ಸರ್ಜಾ ಅಪ್ಪಟ ಅಭಿಮಾನಿಯಾಗಿದ್ದ ಪೃಥ್ವಿರಾಜ್‌ಗೆ ನೆಚ್ಚಿನ ನಟನನ್ನು ನೋಡುವ ಆಸೆಯಿತ್ತು. ಇನ್ನು ಗಾಯಾಳು ಪೃಥ್ವಿರಾಜ್ ಪೋಷಕರು ಮಗನ ದೇಹವನ್ನು ದಾನ ಮಾಡಲು ಮುಂದಾಗಿದ್ದಾರೆ. ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ 4 ದಿನಗಳ ಹಿಂದೆ ಅಪಘಾತ ಸಂಭವಿಸಿತ್ತು. ನೋವಿನಲ್ಲೂ ಪೃಥ್ವಿರಾಜ್ ಪೋಷಕರು ಮಗನ ದೇಹವನ್ನು ದಾನ ಮಾಡಲು ಮನಸ್ಸು ಮಾಡಿದ್ದಾರೆ. ಅವರ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಎದೆ ಎತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ನಟ ಧ್ರುವ ಸರ್ಜಾ ಎದುರು ಪೃಥ್ವಿರಾಜ್ ತಂದೆ ಮಗನ ಬಗ್ಗೆ ಕಂಡ ಕನಸುಗಳನ್ನೆಲ್ಲಾ ಹೇಳಿಕೊಂಡಿದ್ದಾರೆ. ನಾವು ಅವನ ಮೇಲೆ ಜೀವವನ್ನೇ ಇಟ್ಟುಕೊಂಡಿದ್ದೇವೆ. ಅವನ ಈಗ ಈ ಸ್ಥಿತಿಯಲ್ಲಿ ಮಲಗಿದ್ದಾನೆ ಎಂದು ನೋವು ತೋಡಿಕೊಂಡಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾತನಾಡಿದ ನಟ ಧ್ರುವ ಸರ್ಜಾ, “ಭಾನುವಾರ ಬಂತು ಅಂದ್ರೆ ಪೃಥ್ವಿ ಬರ್ತಿದ್ರು, ಬಹಳ ಸಲ ಭೇಟಿ ಮಾಡಿದ್ದೇನೆ. ತುಂಬಾ ನೋವಾಗುತ್ತಿದೆ. ಅವರ ತಂದೆ ತಾಯಿಗೆ ಏನು ಹೇಳಿ ಸಮಾಧಾನ ಮಾಡಬೇಕು ಅಂತ ಗೊತ್ತಾಗ್ತಿಲ್ಲ. ಹೆಲ್ಮೆಟ್ ಹಾಕಿಕೊಂಡು ಬೈಕ್ ಚಾಲನೆ ಮಾಡಬೇಕು. ಪೃಥ್ವಿ ತಂದೆ ತಾಯಿ ಬಹಳ ಧೈರ್ಯದ ನಿರ್ಧಾರ ತೆಗೆದುಕೊಂಡಿದ್ದಾರೆ. ಆತನ ಅಂಗಾಂಗಗಳನ್ನು ದಾನ‌ ಮಾಡಲು ಮುಂದಾಗಿದ್ದಾರೆ. ಎಲ್ಲಿದ್ದರೂ ಆತನ ಆತ್ಮಕ್ಕೆ ಶಾಂತಿ ಸಿಗಲಿ, ಎಲ್ಲರಲ್ಲೂ ನನ್ನ ವಿನಂತಿ ಏನು ಅಂದ್ರೆ, ದಯವಿಟ್ಟು ಹೆಲ್ಮೆಟ್ ಧರಿಸಿ, ನಮ್ಮ ಅಜ್ಜಿನ ಆಸ್ಪತ್ರೆಯಲ್ಲಿ ನೋಡಿದ ಮೇಲೆ ಇನ್ಮುಂದೆ ಆಸ್ಪತ್ರೆಗೆ ಹೋಗೋದು ಬೇಡ ಅಂದುಕೊಂಡಿದ್ದೆ. ಆದರೆ ಈಗ ಬರುವಂತಾಯಿತು” ಎಂದಿದ್ದಾರೆ.

ಇದನ್ನೂ ಓದಿ : ಮೇಘಾ ಶೆಟ್ಟಿ ಮೇಲೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಗರಂ ಆಗಿದ್ದು ಯಾಕೆ ?

ಇದನ್ನೂ ಓದಿ : Project K Movie Release Date : ಮಹಾಶಿವರಾತ್ರಿಯಂದು ನಟ ಪ್ರಭಾಸ್‌ ನಟನೆಯ ‘ಪ್ರಾಜೆಕ್ಟ್ ಕೆ’ ರಿಲೀಸ್‌ ಡೇಟ್ ಅನೌನ್ಸ್

ಇದನ್ನೂ ಓದಿ : ಮಹಾಶಿವರಾತ್ರಿಯಂದು ನಟ ಶಿವ ರಾಜ್‌ಕುಮಾರ್‌ ಅಭಿನಯದ ‘ಭೈರತಿ ರಣಗಲ್’ ಪ್ರೀಕ್ವೆಲ್ ಅನೌನ್ಸ್

ಇನ್ನು ಮಗನ ಆಸ್ಪತ್ರೆ ಖರ್ಚಿಗಾಗಿ ಪೃಥ್ವಿರಾಜ್ ತಂದೆ ಜಗದೀಶ್ ಸಾಲ ಮಾಡಿದ್ದರು. ಇದೀಗ ನಟ ಧ್ರುವ ಸರ್ಜಾ 5 ಲಕ್ಷ ಹಣ ನೀಡುವ ಮೂಲಕ ಅಭಿಮಾನಿಯ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಒಂದು ಕಡೆ ಮಗನನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವ ನೋವು, ಮತ್ತೊಂದು ಕಡೆ ಸಾಲ ಮಾಡಿ ಕಂಗೆಟ್ಟಿದ್ದರು. ನಟ ಧ್ರುವ ಸರ್ಜಾ ಅವರ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ.

Dhruva Sarja’s fan died in a bike accident: The actor visited the hospital and offered 5 lakhs to his parents

Comments are closed.