ಮಂಗಳವಾರ, ಏಪ್ರಿಲ್ 29, 2025
HomebusinessSavings accounts:ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ತೆರೆಯಬಹುದೇ ? ಇಲ್ಲಿದೇ ಕಂಪ್ಲೀಟ್‌ ಡಿಟೇಲ್ಸ್‌

Savings accounts:ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ತೆರೆಯಬಹುದೇ ? ಇಲ್ಲಿದೇ ಕಂಪ್ಲೀಟ್‌ ಡಿಟೇಲ್ಸ್‌

- Advertisement -

Savings accounts:ಸಾಮಾನ್ಯವಾಗಿ ಪ್ರತೀ ಭಾರತೀಯರು ಒಂದಿಲ್ಲೊಂದು ಬ್ಯಾಂಕುಗಳಲ್ಲಿ ಬ್ಯಾಂಕ್‌ ಖಾತೆಗಳನ್ನು ಹೊಂದಿರುತ್ತಾರೆ. ಆದ್ರೆ ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕುಗಳಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬಹುದು ಅನ್ನುವ ಗೊಂದಲ ಹಲವರನ್ನು ಕಾಡುತ್ತಿರುತ್ತದೆ. ಇನ್ನು ಹಲವರು ಒಂದಕ್ಕಿಂತ ಹೆಚ್ಚು ಬ್ಯಾಂಕುಗಳಲ್ಲಿ ಉಳಿತಾಯ ಖಾತೆಯನ್ನು ಹೊಂದಿರುತ್ತಾರೆ. ಹೀಗೆ ಒಂದಕ್ಕಿಂತ ಹೆಚ್ಚು ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ಹೊಂದಿರಬಹುದೇ. ಒಂದೊಮ್ಮೆ ಒಂದಕ್ಕಿಂತ ಹೆಚ್ಚು ಬ್ಯಾಂಕ್‌ ಖಾತೆ ಹೊಂದಿದ್ದರೆ ಲಾಭವೇನು ? ಹೀಗೆ ನಿಮ್ಮನ್ನು ಕಾಡುವ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಡಿಜಿಟಲೀಕರಣದಿಂದಾಗಿ ಪ್ರತೀ ಭಾರತೀಯರು ಬ್ಯಾಂಕ್‌ ಖಾತೆಯನ್ನು ಹೊಂದಿರಬೇಕಾಗುತ್ತದೆ. ಕೇಂದ್ರ ಸರಕಾರ ಕೂಡ ಪ್ರತೀ ನಾಗರೀಕರಿಗೂ ಬ್ಯಾಂಕ್‌ ಖಾತೆ ತೆರೆಯುವಂತೆ ಸೂಚಿಸುತ್ತಿದೆ. ಸರಕಾರದ ಸಹಾಯಧನ, ಸರಕಾರಿ ಯೋಜನೆಯ ಲಾಭವನ್ನು ಪಡೆಯಲು ಬ್ಯಾಂಕ್‌ ಖಾತೆ ಕಡ್ಡಾಯ. ಆದರೆ ನೀವು ಯಾವುದೇ ಬ್ಯಾಂಕಿನಲ್ಲಿ ಖಾತೆಯನ್ನು ತೆರೆದರೂ ಆ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ನಿರ್ವಹಿಸಬೇಕು. ಎಷ್ಟು ಕನಿಷ್ಠ ಮೊತ್ತವನ್ನು ಹೊಂದಿರಬೇಕು ಅನ್ನುವುದನ್ನು ಆಯಾ ಬ್ಯಾಂಕ್‌ ಗಳು ನಿರ್ಧರಿಸುತ್ತವೆ. ಕನಿಷ್ಠ ಮೊತ್ತವನ್ನು ನಿರ್ವಹಣೆ ಮಾಡದಿದ್ದರೆ ಖಾತೆದಾರರ ಮೇಲೆ ಬ್ಯಾಂಕ್‌ ಹೆಚ್ಚುವರಿ ಶುಲ್ಕವನ್ನು ವಿಧಿಸಬಹುದಾಗಿದೆ.

ದೇಶದ ಯಾವುದೇ ರಾಷ್ಟ್ರೀಯಕೃತ ಹಾಗೂ ಖಾಸಗಿ ಬ್ಯಾಂಕುಗಳಲ್ಲಿ ಖಾತೆಯನ್ನು ಹೊಂದಿರಲು ಅವಕಾಶವಿದೆ. ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕುಗಳಲ್ಲಿ ಬೇಕಾದ್ರೂ ಖಾತೆಯನ್ನು ಹೊಂದಿರಬಹುದಾಗಿದೆ. ಆದರೆ ಒಂದಕ್ಕಿಂತ ಹೆಚ್ಚು ಬ್ಯಾಂಕ್‌ ಖಾತೆಯನ್ನು ಹೊಂದಿದ್ದರೆ, ಕನಿಷ್ಠ ಮೊತ್ತವನ್ನು ಹೊಂದಿಸುವುದು ಸ್ವಲ್ಪ ಕಷ್ಟದ ಕೆಲಸ. ಆದರೆ ಉಳಿತಾಯ ಖಾತೆಯಲ್ಲಿ ಜಮೆ ಮಾಡಿರುವ ಹಣವನ್ನು ಹಿಂಪಡೆಯುವ ವೇಳೆಯಲ್ಲಿ ದಿನದ ಮಿತಿಯ ಆಧಾರದಲ್ಲಿ ಒಂದಕ್ಕಿಂತ ಹೆಚ್ಚು ಖಾತೆಯನ್ನು ಹೊಂದಿದ್ದರೆ ಸ್ವಲ್ಪ ಮಟ್ಟಿಗೆ ಅನುಕೂಲಕರ. ತುರ್ತು ಪರಿಸ್ಥಿತಿಯಲ್ಲಿ ಹೆಚ್ಚು ಖಾತೆಯನ್ನು ಹೊಂದಿದ್ದರೆ, ಹೆಚ್ಚು ಹಣವನ್ನು ಎಟಿಎಂಗಳ ಮೂಲಕ ಪಡೆಯಬಹುದಾಗಿದೆ. ನಿಮ್ಮ ಉಳಿತಾಯ ಖಾತೆ ದೀರ್ಘ ಕಾಲದ ವರೆಗೆ ಚಟುವಟಿಕೆಯಲ್ಲಿ ಇಲ್ಲದೇ ಇದ್ರೆ ಅಂತಹ ಬ್ಯಾಂಕ್‌ ಖಾತೆಗಳನ್ನು ನಿಷ್ಕ್ರೀಯ ಖಾತೆ ಎಂದು ಪರಿಗಣಿಸುವ ಸಾಧ್ಯತೆಯಿದೆ. ಅಲ್ಲದೇ ಲೋ ಬ್ಯಾಲೆನ್ಸ್‌ ಹೊಂದಿದ್ದರೆ ಅದಕ್ಕೆ ಬ್ಯಾಂಕುಗಳು ಶುಲ್ಕವನ್ನು ಕೂಡ ವಿಧಿಸುವ ಸಾಧ್ಯತೆಯಿದೆ.

ಇದನ್ನೂ ಓದಿ:ಸೆಪ್ಟೆಂಬರ್‌ 24 ರಿಂದ ಬಿಗ್‌ಬಾಸ್‌ ಸೀಸನ್ 9 ಆರಂಭ : ವಾಹಿನಿ ಮುಂದೆ ಬೇಡಿಕೆ ಇಟ್ಟ ವೀಕ್ಷಕರು

ಇದನ್ನೂ ಓದಿ:ಮಂಗಳೂರಿನಲ್ಲಿ ಎನ್​ಐಎ ವಿರುದ್ಧ ಪ್ರತಿಭಟನೆ : 60 ಪಿಎಫ್​ಐ ಕಾರ್ಯಕರ್ತರು ವಶಕ್ಕೆ

ಇನ್ನು ಬ್ಯಾಂಕುಗಳು ಅನೇಕ ಸೇವೆಗಳನ್ನು ಉಚಿತವಾಗಿ ನೀಡುತ್ತವೆ ಆದರೆ ಕೆಲವು ಸೇವೆಗಳಿಗೆ ಶುಲ್ಕವನ್ನು ವಿಧಿಸುತ್ತದೆ. ಅನೇಕ ಸಂದರ್ಭಗಳಲ್ಲಿ ಗ್ರಾಹಕರಿಗೆ ಬ್ಯಾಂಕ್‌ ಶುಲ್ಕದ ಬಗ್ಗೆ ತಿಳಿದಿರುವುದಿಲ್ಲ. ಆದ್ದರಿಂದ ಯಾವುದೇ ಬ್ಯಾಂಕ್‌ ಆಗಲಿ ಖಾತೆಯನ್ನು ತೆರೆಯುವಾಗ ಆ ಬ್ಯಾಂಕ್‌ ನ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ನಂತರ ಖಾತೆಯನ್ನು ತೆರೆಯಬೇಕು.

How many savings accounts can be opened: Here is the information

RELATED ARTICLES

Most Popular