Bigg boss Kannada season 9: ಸೆಪ್ಟೆಂಬರ್‌ 24 ರಿಂದ ಬಿಗ್‌ಬಾಸ್‌ ಸೀಸನ್ 9 ಆರಂಭ : ವಾಹಿನಿ ಮುಂದೆ ಬೇಡಿಕೆ ಇಟ್ಟ ವೀಕ್ಷಕರು

(Bigg boss Kannada season 9) ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಬಿಗ್‌ಬಾಸ್‌ ಮತ್ತೆ ಟಿವಿಯಲ್ಲಿ ಪ್ರಸಾರವಾಗಲಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಓಟಿಟಿಯಲ್ಲಿ ಬಿಗ್‌ಬಾಸ್‌ ಆರಂಭಿಸಿದ್ದು, ಟಿವಿಯಲ್ಲಿ ನೋಡಲು ಸಾಧ್ಯವಾಗದ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಕಲರ್ಸ್‌ ಕನ್ನಡ ವಾಹಿನಿ ಬಿಗ್‌ಬಾಸ್‌ ಸೀಸನ್ 9 ಆರಂಭಕ್ಕೆ ಮುಂದಾಗಿದೆ. ಈಗಾಗಲೇ ಕಾರ್ಯಕ್ರಮದ ಪ್ರೊಮೋ ಬಿಡುಗಡೆ ಮಾಡಿದೆ. ಇದೇ ಬರುವ ಸೆಪ್ಟೆಂಬರ್‌ 24 ಶನಿವಾರ ಸಂಜೆ 6 ಗಂಟೆಗೆ ಬಿಗ್‌ಬಾಸ್‌ ಕನ್ನಡ ಸೀಸನ್‌ 9 ರ ಕಾರ್ಯಕ್ರಮದ ಸಂಚಿಕೆ ಟಿವಿಯಲ್ಲಿ ಪ್ರಸಾರವಾಗಲಿದೆ. ಪ್ರತಿ ಸೋಮವಾರದಿಂದ ಶನಿವಾರದವರೆಗೂ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಈ ಬಾರಿ ಸಂಚಿಕೆಯನ್ನು ರಾತ್ರಿ 9.30ಕ್ಕೆ ತಡವಾಗಿ ಪ್ರಸಾರ ಮಾಡಿದ್ದರಿಂದ ಬಿಗ್‌ಬಾಸ್‌ ಅಭಿಮಾನಿಗಳು ಅತೀವ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ರಾತ್ರಿ 8 ಗಂಟೆಯಿಂದ 9 ಗಂಟೆವರೆಗೆ ಪ್ರಸಾರವಾಗುತ್ತಿದ್ದರಿಂದ ಬಿಗ್‌ಬಾಸ್‌ ಶೋವನ್ನು ಹೆಚ್ಚಿನ ಜನರು ವೀಕ್ಷಣೆ ಮಾಡುತ್ತಿದ್ದರು. ಆದ್ರೀಗ ವಿಳಂಭವಾಗುತ್ತಿರುವುದು ಸಹಜವಾಗಿಯೇ ಬೇಸರ ಮೂಡಿಸಿದೆ.

(Bigg boss Kannada season 9)”ಬಿಗ್‌ ಬಾಸ್‌ ಕನ್ನಡದ ಓಟಿಟಿ ಸೀಸನ್‌ 1″ರ ಕಾರ್ಯಕ್ರಮ ಈಗಾಗಲೇ ಮುಗಿದಿದೆ. ಅದರ ಬೆನ್ನಲ್ಲೇ ಟಿವಿ ಬಿಗ್‌ ಬಾಸ್‌ ಶೋ ಪ್ರಾರಂಭವಾಗಲಿದ್ದು, ಇದರ ಬಗ್ಗೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರೋಮೊ ಕೂಡ ರೀಲಿಸ್‌ ಮಾಡಿದ್ದಾರೆ. ಬಿಗ್‌ ಬಾಸ್‌ ಕನ್ನಡ ಓಟಿಟಿ ಸೀಸನ್‌ನಿಂದ ರೂಪೇಶ್‌ ಶೆಟ್ಟಿಯವರು ವಿನ್ನರ್‌ ಆಗಿ ಹೊರಹೊಮ್ಮಿದ್ದಾರೆ. ಹಾಗೆ ಓಟಿಟಿ ಸೀಸನ್‌ಯಿಂದ ನೇರವಾಗಿ ರೂಪೇಶ್‌ ಶೆಟ್ಟಿ, ಸಾನ್ಯಾ ಅಯ್ಯರ್‌, ರಾಕೇಶ್‌ ಅಡಿಗ ಹಾಗೂ ಆರ್ಯವರ್ಧನ ಗುರೂಜಿ ಸೇರಿದಂತೆ ನಾಲ್ಕು ಜನ ಸ್ಪರ್ಧಿಗಳನ್ನು ಟಿವಿ ಸೀಸನ್‌ಗೆ ಈಗಾಗಲೇ ಆಯ್ಕೆ ಮಾಡಿದ್ದಾರೆ. ಹೀಗೆ ಆಯ್ಕೆಯಾದ ಸ್ಪರ್ಧಿಗಳು ಹಳೆಸ್ಪರ್ಧಿಗಳ ಲಿಸ್ಟ್‌ಗೆ ಸೇರುತ್ತಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ ೯ರಲ್ಲಿ ಒಟ್ಟು 18 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅದರಲ್ಲಿ ಓಟಿಟಿ ಸೀಸನ್‌ನಿಂದ 4 ಸ್ಪರ್ಧಿಗಳು ಆಯ್ಕೆ ಖಚಿತವಾಗಿದೆ. ಈ ಸಲದ “ಬಿಗ್‌ ಬಾಸ್‌ ಕನ್ನಡ ಸೀಸನ್‌ 9″ರಲ್ಲಿ ಪ್ರವೀಣರ ಜೊತೆ ನವೀನರ ಹಣಾಹಣಿ ನಡೆಯಲಿದೆ. ಇನ್ನುಳಿದಂತೆ 14 ಮಂದಿ ಯಾರಿರಬಹುದು ಎನ್ನುವ ಕುತೂಹಲ ಬಿಗ್‌ ಬಾಸ್‌ ಅಭಿಮಾನಿಗಳಿಗೆ ಮೂಡಿದೆ. ಕಳೆದ ಬಿಗ್‌ ಬಾಸ್‌ ಸೀಸನ್‌ನಲ್ಲಿ ಭಾಗವಹಿಸಿದ 9 ಸ್ಪರ್ಧಿಗಳು ಈ ಸಲದ ಬಿಗ್‌ಬಾಸ್‌ನಲ್ಲಿ ಭಾಗವಹಿಸಲಿದ್ದಾರೆ. ಅದರಲ್ಲಿ ಓಟಿಟಿಯಿಂದ ನಾಲ್ಕು ಮಂದಿ ಆಯ್ಕೆ ಆಗಿದ್ದಾರೆ. ಪ್ರೋಮೊದಲ್ಲಿ ಕಾಣಿಸಿಕೊಂಡ ದೀಪಿಕಾ ದಾಸ್‌, ಅನುಪಮಾ ಗೌಡ ಹಾಗೂ ಪ್ರಶಾಂತ್‌ ಸಂಬರಗಿಯವರು ಬರಲಿದ್ದಾರೆ ಎನ್ನುವ ಚರ್ಚೆ ಸೋಶಿಯಲ್‌ ಮೀಡಿಯಾದಲ್ಲಿ ನಡೆಯುತ್ತಿದೆ. ಹಾಗೆ ಈ ಸಲದ ಬಿಗ್‌ ಬಾಸ್‌ ಕನ್ನಡದ ಸೀಸನ್‌ 9 ರಲ್ಲಿ ಹೊಸ ಸ್ಪರ್ಧಿಗಳು ಯಾರು ಎನ್ನುವುದರ ಬಗ್ಗೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಅಂತೆ-ಕಂತೆಗಳು ಕೇಳಿಬರುತ್ತಿವೆ.

ಇದನ್ನೂ ಓದಿ : ‘ರಕ್ತದೋಕುಳಿ’ ಟೀಸರ್ ಲಾಂಚ್ ಮಾಡಿದ ಯುವ ನಟ ಧೀರೇನ್ ರಾಮ್ ಕುಮಾರ್

ಇದನ್ನೂ ಓದಿ : ಸೈಮಾ ಪಾರ್ಟಿ ವಿರುದ್ದ ದೂರು : ವೈರಲ್‌ ಆಯ್ತು ಸೆಲೆಬ್ರಿಟಿಗಳ ಮೋಜು ಮಸ್ತಿ

ಇದನ್ನೂ ಓದಿ : ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ್​ ವಿಧಿವಶ

ಹೊಸ ಸ್ಪರ್ಧಿಗಳಾಗಿ ಮುದ್ದುಮಣಿ ಸೀರಿಯಲ್‌ನಿಂದ ಸಮಿಕ್ಷಾ, ಮಜಾಭಾರತದಿಂದ ಪ್ರಿಯಾಂಕಾ ಕಾಮತ್‌, ಚಂದ್ರಪ್ರಭ, ರಾಘವೇಂದ್ರ, ದಿವ್ಯಾ ವಸಂತ, ಕಮಲಿ ಧಾರಾವಾಹಿಯಿಂದ ಅಮೂಲ್ಯ, ಮಿಮಿಕ್ರಿ ಗೋಪಿ, ಹಾಗೂ ಕಾಫಿನಾಡು ಚಂದ್ರು ರವರು ಆಯ್ಕೆಯಾಗುತ್ತಾರೆ ಎನ್ನುವ ಊಹಾಪೋಹಗಳು ಕೇಳಿಬರುತ್ತಿವೆ. ಆದರೆ ಇದರ ಬಗ್ಗೆ ನಿಖರವಾದ ಮಾಹಿತಿಯನ್ನು ಇನ್ನೂ ಯಾರು ಕೂಡ ಹೇಳಿಕೊಂಡಿಲ್ಲ.

Bigg Boss Season 9 Starts From September 24: Viewers Demanded Before The Channel

Comments are closed.