PAN Card ಕಳೆದು ಹೋದ್ರೆ ಹೊಸ ಪ್ಯಾನ್ ಕಾರ್ಡ್‌ ಪಡೆಯುವುದು ಹೇಗೆ ?

ಒಮ್ಮೆ ಪ್ಯಾನ್ ಕಾರ್ಡ್‌ ಹೊಂದಿದ ಮೇಲೆ ನೀವು ಅದನ್ನು ಜೋಪಾನವಾಗಿ ಕಾಪಾಡುವುದು ಕೂಡ ಮುಖ್ಯ. ಒಂದೊಮ್ಮೆ ಪ್ಯಾನ್ ಕಳೆದು (Pan Card Missing) ಹೋದ್ರೆ ಮರಳಿ ಹೊಸ ಕಾರ್ಡ್‌ ಪಡೆಯುವುದು ಹೇಗೆ ಅನ್ನೋ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.

ಭಾರತದಲ್ಲಿ ಯಾವುದೇ ಹಣಕಾಸಿನ ವ್ಯವಹಾರ ಮಾಡುವುದಕ್ಕೆ ಪ್ಯಾನ್ ಕಾರ್ಡ್‌ (Pan Card)  ಕಡ್ಡಾಯಗೊಳಿಸಲಾಗಿದೆ. ಆಧಾರ್‌ ಕಾರ್ಡ್‌ ಜೊತೆಗೆ ಪ್ಯಾನ್ ಕಾರ್ಡ್‌ ಲಿಂಕ್‌ ಮಾಡುವ ಮೂಲಕ ಅಕ್ರಮಗಳಿಗೆ ಕಡಿವಾಣ ಹಾಕಲಾಗಿದೆ. ಒಮ್ಮೆ ಪ್ಯಾನ್ ಕಾರ್ಡ್‌ ಹೊಂದಿದ ಮೇಲೆ ನೀವು ಅದನ್ನು ಜೋಪಾನವಾಗಿ ಕಾಪಾಡುವುದು ಕೂಡ ಮುಖ್ಯ. ಒಂದೊಮ್ಮೆ ಪ್ಯಾನ್ ಕಳೆದು (Pan Card Missing) ಹೋದ್ರೆ ಮರಳಿ ಹೊಸ ಕಾರ್ಡ್‌ ಪಡೆಯುವುದು ಹೇಗೆ ಅನ್ನೋ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.

ಭಾರತದ ಪ್ರಜೆಗಳಿಗೆ ಆದಾಯ ತೆರಿಗೆ ಇಲಾಖೆ ನೀಡುವ ವಿಶಿಷ್ಟ ಗುರುತಿನ ಚೀಟಿ ಎನಿಸಿಕೊಂಡಿರುವ ಪರ್ಮನೆಂಟ್‌ ಅಕೌಂಟ್‌ ನಂಬರ್‌ ಕಾರ್ಡ್‌ ಮೂಲಕವೇ ಜನರ ವಹಿವಾಟುಗಳ ಮೇಲೆ ಗಮನ ಇರಿಸಲಿದೆ. ಪ್ರಾಥಮಿಕ ಹಣಕಾಸು ಹಾಗೂ ತರಿಗೆ ಉದ್ದೇಶಗಳಿಗಾಗಿ ಈ ಕಾರ್ಡ್‌ನ್ನು ನೀಡಲಾಗುತ್ತದೆ.

PAN ಎಂದರೇನು?

ಆದಾಯ ತೆರಿಗೆ ಇಲಾಖೆಯಿಂದ ನೀಡುವ ಈ PAN ಎಂದರೆ ಶಾಶ್ವತ ಖಾತೆ ಸಂಖ್ಯೆ. ಆದಾಯ ತೆರಿಗೆ ಇಲಾಖೆಯಿಂದ ನೀಡುವ ಈ ಹತ್ತು ಸಂಖ್ಯೆಯ ಪ್ಯಾನ್ ಕಾರ್ಡ್‌ ಭಾರತದಲ್ಲಿ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಪ್ಯಾನ್ ಕಾರ್ಡ್‌ ವಿಶಿಷ್ಟ ಆಲ್ಫಾನ್ಯೂಮರಿಕ್ ಸಂಖ್ಯೆಯನ್ನು ಒಳಗೊಂಡಿದೆ.

ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್‌ ಅನ್ನು ಲ್ಯಾಮಿನೇಟೆಡ್‌ ಪ್ಲಾಸ್ಟಿಕ್‌ ಕಾರ್ಡ್‌ ರೂಪದಲ್ಲಿ ನೀಡುತ್ತದೆ. ಪ್ಯಾನ್‌ ಕಾರ್ಡ್‌ನಲ್ಲಿರುವ ಅಕ್ಷರಗಳು ತೀರಾ ವಿಭಿನ್ನವಾಗಿವೆ. PAN ನ ನಾಲ್ಕನೇ ಅಕ್ಷರವು PAN ಹೊಂದಿರುವವರ ಸ್ಥಿತಿಯನ್ನು ಪ್ರತಿನಿಧಿಸುತ್ತದೆ. ಪಾಲುದಾರಿಕೆ ಸಂಸ್ಥೆಯನ್ನು ‘F’ ಅಕ್ಷರದಿಂದ ಪ್ರತಿನಿಧಿಸಲಾಗುತ್ತದೆ (ಉದಾ. ALWFG5809L).

how to apply for new pan if your PAN card is lost
Image Credit to Original Source

ಪ್ಯಾನ್ ಕಾರ್ಡ್‌ (Pan Card) ಅನ್ನು ಯಾರು ಹೊಂದುವುದು ಕಡ್ಡಾಯ ?

ಭಾರತದಲ್ಲಿ ಪ್ಯಾನ್‌ ಕಾರ್ಡ್‌ ಅನ್ನು ಪ್ರತಿಯೊಬ್ಬರೂ ಕೂಡ ಹೊಂದಿರಲೇ ಬೇಕು. ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳು ಬ್ಯಾಂಕಿಂಗ್‌ ವ್ಯವಹಾರವನ್ನು ನಡೆಸಬೇಕಾದ್ರೆ ಬ್ಯಾಂಕ್‌ ಹಾಗೂ ಪೋಸ್ಟ್‌ ಆಫೀಸ್‌ಗಳಲ್ಲಿ ಖಾತೆಯನ್ನು ತೆರೆಯಲು ಕೂಡ ಈ ಪ್ಯಾನ್‌ ಕಡ್ಡಾಯವಾಗಿದೆ.

ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಯಾವುದೇ ವ್ಯವಹಾರ, ವೃತ್ತಿಯನ್ನು ನಡೆಸುವವರು ವಾರ್ಷಿಕವಾಗಿ ಐದು ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸುವವರು ಕಡ್ಡಾಯವಾಗಿ ಈ ಪ್ಯಾನ್‌ ಕಾರ್ಡ್‌ ಹೊಂದಿರಲೇ ಬೇಕು. ಆದಾಯ ತೆರಿಗೆ ಪಾವತಿಯಲ್ಲಿ ಈ ಪ್ಯಾನ್‌ ಕಾರ್ಡ್‌ ಮಹತ್ವದ ಪಾತ್ರವನ್ನು ವಹಿಸುತ್ತದೆ.

ಇದನ್ನೂ ಓದಿ : ಪಿಎಂ ಕಿಸಾನ್‌ ಯೋಜನೆಯಡಿ ರೈತರ ಖಾತೆಗೆ 8,000 ರೂ.: ಪ್ರಧಾನಿ ನರೇಂದ್ರ ಮೋದಿ ಬಿಗ್‌ ಗಿಫ್ಟ್‌

ಪ್ಯಾನ್ ಕಾರ್ಡ್‌ಗೆ (Pan Card) ಅರ್ಜಿ ಸಲ್ಲಿಸುವುದು ಹೇಗೆ ?

ಪ್ಯಾನ್‌ ಕಾರ್ಡ್‌ಗಳಿಗೆ ಅರ್ಜಿಯನ್ನು ಸಲ್ಲಿಸುವುದು ಬಹು ಸುಲಭ. ನೀವು ಮನೆಯಲ್ಲಿಯೇ ಕುಳಿತು ಪ್ಯಾನ್‌ ಕಾರ್ಡ್‌ಗೆ ನಿಮ್ಮ ಮೊಬೈಲ್‌ನಲ್ಲೇ ಅರ್ಜಿಯನ್ನು ಸಲ್ಲಿಸಬಹುದು. ಪ್ಯಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಆನ್‌ಲೈನ್ ಅಪ್ಲಿಕೇಶನ್ – UTIITSL ಅಥವಾ ಪ್ರೊಟೀನ್ (ಹಿಂದೆ NSDL eGov) ವೆಬ್‌ಸೈಟ್‌ನಿಂದ ಆನ್‌ಲೈನ್ ಅರ್ಜಿಯನ್ನು ಮಾಡಬಹುದು.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ.
2) PAN ಅರ್ಜಿ ಕೇಂದ್ರದ ಮೂಲಕ – PAN ಗಾಗಿ ಅರ್ಜಿಯನ್ನು ಇಲ್ಲಿ ಸಲ್ಲಿಸಬಹುದು
PAN ಅರ್ಜಿ ಕೇಂದ್ರ
(ಎ) ಪ್ರೊಟೀನ್ (ಹಿಂದೆ NSDL eGov) (b) UTITSL
PAN ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ.
PAN ಡೇಟಾದಲ್ಲಿನ ಬದಲಾವಣೆಗಳು ಅಥವಾ ತಿದ್ದುಪಡಿಗಾಗಿ ಫಾರ್ಮ್

ಹೊಸ ಪ್ಯಾನ್‌ ಕಾರ್ಡ್‌ (Pan Card) ಶುಲ್ಕ ಎಷ್ಟು ?

ಪ್ಯಾನ್‌ ಕಾರ್ಡ್‌ ಅನ್ನು ಭಾರತೀಯ ಪ್ರತೀ ಪ್ರಜೆಯು ಕೂಡ ಅತ್ಯಂತ ಸುಲಭವಾಗಿ ಪಡೆದುಕೊಳ್ಳಬಹುದು. ಪ್ಯಾನ್‌ಗೆ ಅರ್ಜಿ ಸಲ್ಲಿಸಲು ಶುಲ್ಕ ರೂ. ಭಾರತದಲ್ಲಿನ ವಿಳಾಸಕ್ಕೆ ಪಡೆದುಕೊಳ್ಳಲು 110 (ಅರ್ಜಿ ಶುಲ್ಕ ರೂ. 93 + 18% GST) ಮತ್ತು ವಿದೇಶದಲ್ಲಿರುವ ವಿಳಾಸಕ್ಕೆ 1020ರೂ. (GST ಸೇರಿದಂತೆ) ನೀಡಬೇಕು.

ಪ್ಯಾನ್‌ ಕಾರ್ಡ್‌(Pan Card) ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಕಡ್ಡಾಯ ?

ಯಾವುದೇ ವ್ಯಕ್ತಿಯು ಪ್ಯಾನ್‌ ಕಾರ್ಡ್‌ ಪಡೇಯೇಕಾದ್ರೆ ಸರಕಾರ ನೀಡುವ ಯಾವುದೇ ದಾಖಲೆಗಳು ( ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ ) ನೀಡಿ ಪ್ಯಾನ್‌ ಕಾರ್ಡ್‌ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಒಂದೊಮ್ಮೆ ಯಾವುದೇ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ಯಾನ್‌ ಕಾರ್ಡ್‌ ಪಡೆಯಬೇಕಾದ್ರೆ,

ಭಾರತದಲ್ಲಿ ನೋಂದಾಯಿಸಲಾದ ಪಾಲುದಾರಿಕೆ ಸಂಸ್ಥೆಯು ರಿಜಿಸ್ಟ್ರಾರ್ ಆಫ್ ಫರ್ಮ್ಸ್ ನೀಡಿದ ನೋಂದಣಿ ಪ್ರಮಾಣಪತ್ರದ ನಕಲನ್ನು ಅಥವಾ ಪಾನ್ ಅರ್ಜಿ ನಮೂನೆಯೊಂದಿಗೆ ಪಾಲುದಾರಿಕೆಯ ಪತ್ರದ ಪ್ರತಿಯನ್ನು ಸಲ್ಲಿಸಬೇಕು. ಒಂದೊಮ್ಮೆ ಭಾರತ ಹೊರಗೆ ಪಾಲುದಾರಿಕೆ ಸಂಸ್ಥೆಯನ್ನು ಸ್ಥಾಪಿಸಿದ್ರೆ, ಆಗ, ಅರ್ಜಿದಾರರು ಅರ್ಜಿದಾರರು ನೆಲೆಸಿರುವ ನೀಡಲಾದ ನೋಂದಣಿ ಪ್ರಮಾಣಪತ್ರದ ನಕಲು ನೀಡಬೇಕು.

how to apply for new pan if your PAN card is lost
Image Credit to Original Source

ಜೊತೆಗೆ “ಅಪೋಸ್ಟಿಲ್” (1961 ರ ಹೇಗ್ ಅಪೋಸ್ಟಿಲ್ ಕನ್ವೆನ್ಶನ್‌ಗೆ ಸಹಿ ಮಾಡಿದ ದೇಶಗಳಿಗೆ ಸಂಬಂಧಿಸಿದಂತೆ) ಅಥವಾ ಭಾರತೀಯ ರಾಯಭಾರ ಕಚೇರಿ ಅಥವಾ ಹೈ ಕಮಿಷನ್ ಅಥವಾ ಕಾನ್ಸುಲೇಟ್‌ನಿಂದ ದೃಢೀಕರಿಸಲ್ಪಟ್ಟಿದೆ ಅರ್ಜಿದಾರರು ಇರುವ ದೇಶ ಅಥವಾ ಭಾರತದಲ್ಲಿ ನೋಂದಾಯಿಸಲಾದ ಶೆಡ್ಯೂಲ್ಡ್ ಬ್ಯಾಂಕ್‌ಗಳ ಸಾಗರೋತ್ತರ ಶಾಖೆಗಳ ಅಧಿಕೃತ ಅಧಿಕಾರಿಗಳು, ಭಾರತದಲ್ಲಿ ನೀಡಲಾದ ನೋಂದಣಿ ಪ್ರಮಾಣಪತ್ರದ ಪ್ರತಿ ಅಥವಾ ಭಾರತೀಯ ಅಧಿಕಾರಿಗಳು ಭಾರತದಲ್ಲಿ ಕಚೇರಿಯನ್ನು ಸ್ಥಾಪಿಸಲು ಮಂಜೂರು ಮಾಡಿದ ಅನುಮೋದನೆಯ ಪ್ರತಿ.

ಇದನ್ನೂ ಓದಿ : ಈ ಗೃಹಿಣಿಯರಿಗೆ ಮಾತ್ರವೇ ನಾಳೆ ಜಮೆ ಆಗಲಿದೆ ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ ಹಣ

ಪ್ಯಾನ್‌ ಕಾರ್ಡ್‌ (Pan Card) ಅರ್ಜಿಯ ಸ್ಟೇಟಸ್‌ ಹೀಗೆ ಟ್ರ್ಯಾಕ್ ಮಾಡಿ

ಪ್ಯಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ ಬಳಿಕ ಸ್ವೀಕೃತಿಯನ್ನು ಅರ್ಜಿದಾರರು ಸ್ವೀಕಾರ ಮಾಡುತ್ತಾರೆ. ಈ ವೇಳೆಯಲ್ಲಿ ನೀಡುವ ಸಂಖ್ಯೆಯನ್ನು ಬಳಸಿಕೊಂಡು, ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ ಮೂಲಕ ನಿಮ್ಮ ಅರ್ಜಿಯ ಸ್ಟೇಟಸ್‌ ಚೆಕ್‌ ಮಾಡಬಹುದು.

ಪ್ಯಾನ್‌ ಕಾರ್ಡ್‌ (Pan Card missing) ಕಳೆದು ಹೋದ್ರೆ ಹೊಸ ಪ್ಯಾನ್‌ ಪಡೆಯುವುದು ಹೇಗೆ ?

ಆದಾಯ ತೆರಿಗೆ ಇಲಾಖೆಯು ಭಾರತದ ಪ್ರತಿಯೊಬ್ಬ ಪ್ರಜೆಯು ಕೂಡ ಕಡ್ಡಾಯವಾಗಿ ಪ್ಯಾನ್‌ ಕಾರ್ಡ್‌ ಹೊಂದಬೇಕು ಅನ್ನೋ ಕಾರಣಕ್ಕೆ ಪ್ಯಾನ್‌ ಪಡೆಯುವ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸಿದೆ. ಅದ್ರಲ್ಲೂ ಒಂದೊಮ್ಮೆ ನಿಮ್ಮ ಪ್ಯಾನ್‌ ಕಾರ್ಡ್‌ ಕಳೆದುಹೊದ್ರೆ ಯಾವುದೇ ಚಿಂತೆ ಬೇಡ.

ನೀವು ಮನೆಯಲ್ಲಿಯೇ ಇದ್ದುಕೊಂಡು ಹೊಸ ಪ್ಯಾನ್‌ ಕಾರ್ಡ್‌ಗೆ ಅರ್ಜಿಯನ್ನು ಸಲ್ಲಿಸಬಹುದು. ಹೊಸ ಪ್ಯಾನ್ ಕಾರ್ಡ್‌ಗಾಗಿ ವಿನಂತಿ ಅಥವಾ/ ಮತ್ತು ಪ್ಯಾನ್ ಡೇಟಾದಲ್ಲಿನ ಬದಲಾವಣೆಗಳು ಅಥವಾ ತಿದ್ದುಪಡಿಗಾಗಿ” ಫಾರ್ಮ್ ಅನ್ನು ಸಲ್ಲಿಸುವ ಮೂಲಕ ನಕಲಿ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು ಮತ್ತು ಫಾರ್ಮ್‌ನೊಂದಿಗೆ ಎಫ್‌ಐಆರ್ ಪ್ರತಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ : ನಿಮ್ಮ ಹೆಣ್ಣು ಮಗಳ ಮದುವೆಗೆ ಸಿಗುತ್ತೆ 25 ಲಕ್ಷ ರೂ. : ಪ್ರಧಾನಿ ನರೇಂದ್ರ ಮೋದಿ ಸರಕಾರದಿಂದ ಹೊಸ ಯೋಜನೆ

ನಿಮ್ಮ ಪ್ಯಾನ್ ಕಾರ್ಡ್ ಕಳೆದು ಹೋದರೆ ಮತ್ತು ನಿಮ್ಮ PAN ಸಂಖ್ಯೆಯನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳದೇ ಇದ್ದರೆ, ಅಂತಹ ಸಂದರ್ಭದಲ್ಲಿ ಆದಾಯ ತರಿಗೆ ಇಲಾಖೆ ಒದಗಿಸಿದ ನಿಮ್ಮ PAN ಅನ್ನು ತಿಳಿಯಿರಿ ವಿಭಾಗಕ್ಕೆ ಭೇಟಿ ನೀಡಿ ನಿಮ್ಮ ಪ್ಯಾನ್‌ ಸಂಖ್ಯೆಯನ್ನು ತಿಳಿದುಕೊಳ್ಳಬಹುದು. ಈ ಸೌಲಭ್ಯವನ್ನು ನೀವು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ : www.incometaxindia.gov.in ಮೂಲಕ ತಿಳಿಯಬಹುದು.

ನಿಮ್ಮ ಹೆಸರು, ತಂದೆಯ ಹೆಸರು, ಇತರ ದಾಖಲೆಯನ್ನು ಬಳಸಿಕೊಂಡು ನೀವು ಆನ್‌ಲೈನ್‌ನಲ್ಲಿಯೇ ಹೊಸ ಪ್ಯಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. ಜೊತೆಗೆ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಪ್ರತಿಯನ್ನು ಸಲ್ಲಿಸಬೇಕು. ನಿಮ್ಮ ಅರ್ಜಿ ಸರಿಯಾಗಿದ್ದರೆ ವರ್ಚುವಲ್‌ ಪ್ಯಾನ್‌ ಕಾರ್ಡ್‌ ಶೀಘ್ರದಲ್ಲಿಯೇ ಸಿಗುತ್ತದೆ. ಅಲ್ಲದೇ ಪೋಸ್ಟ್‌ ಮೂಲಕ ಮನೆಗೆ ಪ್ಯಾನ್‌ ಕಾರ್ಡ್‌ ಕೆಲವೇ ದಿನಗಳಲ್ಲಿ ಬರುತ್ತದೆ.

how to apply for pan if your PAN card is lost

Comments are closed.