Cooking Oil : ಇಳಿಕೆಯಾಗಲಿದೆ ಅಡುಗೆ ಎಣ್ಣೆಯ ಬೆಲೆ : ಕೇಂದ್ರ ಮಾಡಿದೆ ಮಾಸ್ಟರ್‌ ಫ್ಲ್ಯಾನ್‌

ನವದೆಹಲಿ : ತೈಲ ಬೆಲೆ ಏರಿಕೆ ಗಗನಮುಖಿಯಾಗುತ್ತಿದೆ. ಜೊತೆಗೆ ಅಡುಗೆ ಎಣ್ಣೆ ಬೆಲೆ ಏರಿಕೆ ಗೃಹಿಣಿಯರಿಗೆ ತಲೆನೋವು ತರಿಸಿದೆ. ಸೋಯಾ, ಸಾಸಿವೆ ಎಣ್ಣೆ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಇದೀಗ ಕೇಂದ್ರ ಸರಕಾರ ಅಡುಗೆ ಎಣ್ಣೆ ಬೆಲೆ ಏರಿಕೆಗೆ ಬ್ರೇಕ್‌ ಹಾಕಲು ಮಾಸ್ಟರ್‌ ಫ್ಲ್ಯಾನ್‌ ರೂಪಿಸಿದೆ.

ಖಾದ್ಯ ತೈಲಗಳನ್ನು ಸಂಗ್ರಹ ಮಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ವಿಶೇಷ ಯೋಜನೆಯನ್ನು ರೂಪಿಸಿದೆ. ಅಂತೆಯೇ ಕೇಂದ್ರ ಸರಕಾರ ಖಾದ್ಯ ತೈಲ ಪೋರ್ಟಲ್‌ ಪ್ರಾರಂಭಿಸಿದೆ. ಈ ವೆಬ್‌ಸೈಟ್‌ನಲ್ಲಿ ಎಣ್ಣೆ ಬೀಜಗಳ ಬೆಲೆ, ದಾಸ್ತಾನು ವಿವರಗಳ ಮಾಹಿತಿ ಲಭ್ಯವಾಗಲಿದೆ. ಅಲ್ಲದೇ ವಾರದಲ್ಲಿ ಅಪ್ಡೇಟ್‌ ಮಾಡಲಾಗುತ್ತದೆ.

ಇದನ್ನೂ ಓದಿ: ಪ್ರತಿದಿನ ಸ್ನಾನ ಮಾಡದ ಪತ್ನಿ : ಇದೇ ಕಾರಣ ವಿಚ್ಛೇದನ ನೀಡಿದ ಪತಿ

ಖಾದ್ಯ ತೈಲ ವೆಬ್‌ಸೈಟ್‌ನಲ್ಲಿ ಪ್ರತಿ ವಾರ ಅಂಕಿಅಂಶಗಳನ್ನ ಬಿಡುಗಡೆ ಮಾಡಲಾಗುತ್ತದೆ. ಈ ಮೂಲಕ ಕಾಳಸಂತೆಯಲ್ಲಿ ಅಡುಗೆ ಎಣ್ಣೆ ಮಾರಾಟ ಹಾಗೂ ದಾಸ್ತಾನು ಮಾಡುವುದನ್ನು ತಡೆಯಲು ಹೆಚ್ಚು ಸಹಕಾರಿಯಾಗಲಿದೆ, ಅಷ್ಟೇ ಅಲ್ಲಾ ಬಳಕೆದಾರರು ಲಾಗಿನ್‌ ಐಡಿಯನ್ನು ರಚಿಸಿಕೊಂಡು ಎಲ್ಲಾ ಮಾಹಿತಿಯನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: ಮದುವೆಯಲ್ಲಿ ಬೋಳಿಸುತ್ತಾರೆ ವಧುವಿನ ಕೂದಲು ! ಇಲ್ಲಿನ ಜನರದ್ದು ವಿಚಿತ್ರ ಸಂಪ್ರದಾಯ

ಅಲ್ಲದೇ ಕೇಂದ್ರ ಸರಕಾರದ ಇಲಾಖೆಯೇ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತದೆ. ಹೀಗಾಗಿ ಪಾರದರ್ಶಕತೆಯನ್ನು ಹೆಚ್ಚಿಸುವುದರ ಜೊತೆಗೆ ಅಡುಗೆ ಎಣ್ಣೆಯ ಬೆಲೆ ಏರಿಕೆಗೆ ಮೂಗುದಾರ ಹಾಕಲು ಸಾಧ್ಯವಾಗಲಿದೆ ಎಂದು ಕೇಂದ್ರ ಸರಕಾರ ಹೇಳಿಕೊಂಡಿದೆ.

(The price of cooking oil will fall : The central government has made a master plan)

Comments are closed.