45 ದಿನಗಳ ಕಾಲ ಬಾರ್‌ ಬಂದ್‌ : ಮದ್ಯಪ್ರಿಯರಿಗೆ ಬಿಗ್ ಶಾಕ್ ಕೊಟ್ಟ ಸರಕಾರ !

( ಮದ್ಯಪಾನ ಆರೋಗ್ಯಕ್ಕೆ ಹಾನಿಕರ )

ದೆಹಲಿ : ಹೊಸ ಮದ್ಯ ನೀತಿಯ ಅನುಷ್ಟಾನ ಇದೀಗ ಮದ್ಯ ಪ್ರಿಯರಿಗೆ ಬಿಗ್‌ ಶಾಕ್‌ ಕೊಟ್ಟಿದೆ. ಮುಂದಿನ 45 ದಿನಗಳ ಕಾಲ ಬಾರ್‌ ಬಂದ್‌ ಆಗಲಿದೆ. ಅಕ್ಟೋಬರ್‌ 1 ರಿಂದಲೇ ಬಾಗಿಲು ಮುಚ್ಚುವ ಬಾರ್‌ಗಳು ನವೆಂಬರ್‌ 16 ರವರೆಗೆ ಮುಚ್ಚಿರುತ್ತವೆ.ಹೊಸ ಮದ್ಯ ನೀತಿ ಇದೀಗ ದೆಹಲಿಯಲ್ಲಿ ಮದ್ಯ ಬಿಕ್ಕಟ್ಟಿಗೆ ಕಾರಣವಾಗಿದೆ.

ದೆಹಲಿ ಸರಕಾರ ಕಳೆದ ಜುಲೈನಲ್ಲಿ ತನ್ನ ಹೊಸ ಮದ್ಯ ನೀತಿಯನ್ನು ಪ್ರಕಟಿಸಿದೆ. ನಗರದಲ್ಲಿ ಏಕರೂಪದಲ್ಲಿ ಮದ್ಯ ವಿತರಣೆ ಮಾಡೋದು ಹೊಸ ನೀತಿಯ ಮೂಲ ಉದ್ದೇಶ. ಹೊಸ ಮದ್ಯ ನೀತಿಯ ಅನುಷ್ಠಾನದಿಂದಾಗಿ ದೆಹಲಿಯಲ್ಲಿ 45 ದಿನಗಳ ಕಾಲ ಬಾರ್ ಬಂದ್ ಆಗಲಿವೆ. ಮದ್ಯ ಸರಬರಾಜಿನಲ್ಲಿ ವ್ಯತ್ಯಯ ಕೂಡ ಉಂಟಾಗಲಿದೆ. ಆದರೆ ಸರಕಾರಿ ಮದ್ಯದ ಅಂಗಡಿಗಳಲ್ಲಿ ಮದ್ಯ ಖರೀದಿಯನ್ನು ಮಾಡಬಹುದಾಗಿದೆ.

ಪ್ರಸ್ತುತ ಜಾರಿಯಲ್ಲಿರುವ ಮದ್ಯ ನೀತಿಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗುತ್ತಿದೆ. ಹೊಸ ನೀತಿಯಲ್ಲಿ ಎಂಆರ್‌ಪಿ ದರದ ಮೇಲೆ ರಿಯಾಯಿತಿಯನ್ನು ನೀಡಲು ಪರವಾನಗಿದಾರರಿಗೆ ಅನುಮತಿಯನ್ನು ನೀಡಲಾಗುತ್ತದೆ. ನವೆಂಬರ್‌ 16ರಿಂದ ಹೊಸ ಮದ್ಯ ನೀತಿಯು ಜಾರಿಗೆ ಬರುತ್ತಿದ್ದು, ಖಾಸಗಿ ಮದ್ಯದ ಅಂಗಡಿಗಳು ಅಕ್ಟೋಬರ್‌ 1 ರಿಂದ ನವೆಂಬರ್ 16 ರವರೆಗೆ ಮುಚ್ಚಿರುತ್ತವೆ.

ದೆಹಲಿಯಲ್ಲಿಒಟ್ಟು 849 ಮದ್ಯದಂಗಡಿಗಳಿದ್ದು, ಇದರಲ್ಲಿ ಸುಮಾರು 276 ಮದ್ಯದ ಅಂಗಡಿಗಳನ್ನು ಖಾಸಗಿಯಾಗಿ ನಡೆಸಲಾಗುತ್ತಿದೆ. ಉಳಿದ ಮದ್ಯದ ಅಂಗಡಿಗಳನ್ನು ದೆಹಲಿ ಸರಕಾರ ಏಜೆನ್ಸಿಗಳ ಮೂಲಕ ನಡೆಸುತ್ತಿದೆ. ಇದೀಗ ಹೊಸ ನೀತಿಯ ಅನುಷ್ಟಾನದ ಹಿನ್ನೆಲೆಯಲ್ಲಿ ಮದ್ಯದ ಅಂಗಡಿ ಬಂದ್‌ ಮಾಡಲು ಆದೇಶ ಹೊರಡಿಸಿರುವುದು ಮದ್ಯಪ್ರಿಯರಿಗೆ ಶಾಕ್‌ ಕೊಟ್ಟಿದೆ.

ಇದನ್ನೂ ಓದಿ : ಜನಸಾಮಾನ್ಯರಿಗೆ ಸಿಹಿಸುದ್ದಿ ಕೊಟ್ಟ ಕೇಂದ್ರ : ಪಿಎಂ ಡಿಜಿಟಲ್‌ ಹೆಲ್ತ್‌ ಮಿಷನ್‌ ಯೋಜನೆಗೆ ಮೋದಿ ಚಾಲನೆ

ಇದನ್ನೂ ಓದಿ : ಮುಂದಿನ ತಿಂಗಳಿಂದ ಬದಲಾಗಲಿವೆ ಈ ನಿಯಮ : ಚೆಕ್‌ಬುಕ್‌, ಪಿಂಚಣಿ, ಡೆಬಿಟ್‌ ಕಾರ್ಡ್‌ ನಿಯಮ ಅರಿತುಕೊಳ್ಳಿ

( Liquor Shop close 45 Days, starting from next month in Delhi)

Comments are closed.