Welcome back, Air India ಎಂದ ರತನ್‌ ಟಾಟಾ : 68 ವರ್ಷದ ಬಳಿಕ ಸಂಸ್ಥಾಪಕರ ಮಡಿಲಿಗೆ ಏರ್‌ ಇಂಡಿಯಾ

ನವದೆಹಲಿ : ಭಾರತ ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾ ಕೊನೆಗೂ ಸಂಸ್ಥಾಪಕರ ಮಡಿಲು ಸೇರುತ್ತಿದೆ. ಏರ್‌ ಇಂಡಿಯಾವನ್ನು ಟಾಟಾ ಸಂಸ್ಥೆ ಸುಮಾರು 68 ವರ್ಷಗಳ ಬಳಿಕ ತನ್ನದಾಗಿಸಿಕೊಂಡಿದೆ. ಇದರ ಬೆನ್ನಲ್ಲೇ ಟಾಟಾ ಗ್ರೂಫ್‌ ಅಧ್ಯಕ್ಷ ರತನ್‌ ಟಾಟಾ ವೆಲ್ ಕಮ್‌ ಏರ್‌ ಇಂಡಿಯಾ ಎಂದು ಪೋಸ್ಟ್‌ ಮಾಡಿದ್ದಾರೆ.

ಟಾಟಾ ಸನ್ಸ್‌ ಒಡೆತನದಲ್ಲಿದ್ದ ಏರ್ ಇಂಡಿಯಾ ಸಂಸ್ಥೆಯನ್ನು ಖರೀದಿಸುವಲ್ಲಿ ಟಾಟಾ ಗ್ರೂಪ್ ಯಶಸ್ವಿಯಾಗಿದೆ. ಕೇಂದ್ರ ಸರಕಾರದ ಒಡೆತನದಲ್ಲಿದ್ದ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಗೆ ಕೊನೆಯ ಹಂತದ ಹೋರಾಟದಲ್ಲಿ ಟಾಟಾ ಸನ್ಸ್ 3000 ಕೋಟಿ ರೂ.ಗೆ ಏರ್ ಇಂಡಿಯಾವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಸ್ಪೈಸ್ ಜೆಟ್ ಸಂಸ್ಥೆ ಕೂಡ ಬಿಡ್ ಸಲ್ಲಿಸಿದ್ದರೂ ಅತೀ ಹೆಚ್ಚು ಬಿಡ್ ಮಾಡಿದ್ದ ಟಾಟಾ ಬಿಡ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಜೆಆರ್ ಡಿ ಟಾಟಾ 1932 ರಲ್ಲಿ ಟಾಟಾ ಏರ್‌ಲೈನ್ಸ್‌ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಈ ಮೂಲಕ ದೇಶದಲ್ಲಿ ವಿಮಾನಯಾನ ಸೇವೆಯನ್ನು ಆರಂಭಿಸಿದ್ದರು. ಆದರೆ ಸ್ವಾತಂತ್ರ್ಯಾ ನಂತರ, ವಾಯುಯಾನ ವಲಯವನ್ನು ರಾಷ್ಟ್ರೀಕರಣ ಗೊಳಿಸಲಾಗಿತ್ತು. ಸರ್ಕಾರವು ಟಾಟಾ ಏರ್ ಲೈನ್ಸ್ ಷೇರುಗಳಲ್ಲಿ ಶೇಕಡಾ 49 ರಷ್ಟನ್ನು ಖರೀದಿಸಿತು. ತದನಂತರದಲ್ಲಿ ಸಾರ್ವಜನಿಕ ಸೀಮಿತ ಕಂಪೆನಿಯಾಗಿ ಬದಲಾಯ್ತು, ಅಲ್ಲದೇ ಜುಲೈ 29, 1946 ರಂದು ಏರ್ ಇಂಡಿಯಾ ಎಂದು ಮರು ನಾಮಕರಣಗೊಂಡಿತ್ತು.

ನಾನಾ ರೀತಿಯ ಸಂಕಷ್ಟದ ನಡುವಲ್ಲೇ ಏರ್‌ ಇಂಡಿಯಾವನ್ನ ಖಾಸಗಿಕರಣ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಹೀಗಾಗಿ ಟಾಟಾ ಏರ್‌ಲೈನ್ಸ್‌ ಹುಟ್ಟುಹಾಕಿದ್ದ ಟಾಟಾ ಕಂಪೆನಿ ಮತ್ತೆ ಏರ್‌ ಇಂಡಿಯಾವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿತ್ತು. ಅತೀ ಹೆಚ್ಚು ಬಿಡ್‌ ಸಲ್ಲಿಕೆ ಮಾಡುವ ಮೂಲಕ ಏರ್‌ ಇಂಡಿಯಾವನ್ನು ತನ್ನದಾಗಿಸಿಕೊಂಡಿದೆ. ಇದರ ಬೆನ್ನಲ್ಲೇ ಟಾಟಾ ಸಮೂಹದ ಅಧ್ಯಕ್ಷ ರತನ್‌ ಟಾಟಾ ಅವರು ತಮ್ಮ ತಂದೆ ಜೆಆರ್‌ಡಿ ಟಾಟಾ ಅವರ ಪೋಟೋವನ್ನು ಶೇರ್‌ ಮಾಡಿಕೊಂಡು ವೆಲ್‌ಕಮ್‌ ಬ್ಯಾಕ್‌ ಏರ್‌ ಇಂಡಿಯಾ ಎಂದಿದ್ದಾರೆ.

ಏರ್‌ ಇಂಡಿಯಾ ಬಿಡ್‌ ಗೆದ್ದ ಟಾಟಾ ಸಮೂಹ ಸಂಸ್ಥೆಯನ್ನು ಸ್ಪೈಸ್‌ ಜೆಟ್‌ ಅಭಿನಂದನೆಯನ್ನು ಸಲ್ಲಿಸಿದೆ. ಸ್ಪೈಸ್ ಜೆಟ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್‌ ಅವರು ಏರ್‌ ಇಂಡಿಯಾ ಬಿಡ್‌ ಗೆದ್ದ ಟಾಟಾ ಸಮೂಹವನ್ನು ನಾನು ಅಭಿನಂದಿಸುತ್ತೇನೆ. ಅಲ್ಲದೇ ಅವರಿಗೆ ಯಶಸ್ಸನ್ನು ಬಯಸುತ್ತೇನೆ. ಏರ್ ಇಂಡಿಯಾಕ್ಕೆ ಬಿಡ್ ಮಾಡಲು ಶಾರ್ಟ್‌ಲಿಸ್ಟ್ ಆಗಿರುವುದು ನನ್ನ ಗೌರವ. ಟಾಟಾ ಸಮೂಹವು ಏರ್ ಇಂಡಿಯಾ ವೈಭವವನ್ನು ಮರಳಿ ಸ್ಥಾಪಿಸಲಿದ್ದು, ಇದನ್ನು ಇಡೀ ಭಾರತ ಹೆಮ್ಮೆಪಡುತ್ತದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಇದನ್ನೂ ಓದಿ : ಕೊರೊನಾ ಹಿನ್ನೆಲೆ ವಿಮಾನ ರದ್ದು : ಪ್ರಯಾಣಿಕರಿಗೆ ಏರ್ ಇಂಡಿಯಾ ಪಾವತಿಸಲು ಬಾಕಿ ಇದೆ 250 ಕೋಟಿ !

ಇನ್ನು ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾ ಟಾಟಾ ಗ್ರೂಪ್‌ ಪಾಲಾಗಿದ್ದರೂ ಕೂಡ ಮೊದಲ ವರ್ಷ ಏರ್‌ ಇಂಡಿಯಾದ ಎಲ್ಲಾ ಉದ್ಯೋಗಿಗಳನ್ನು ಉಳಿಸಿಕೊಳ್ಳಲಿದೆ. ಎರಡನೇ ವರ್ಷ ಯಾರನ್ನು ಉಳಿಸಿಕೊಳ್ಳಬೇಕು. ಯಾರಿಗೆ ಸ್ವಯಂ ಪ್ರೇರಿತ ನಿವೃತ್ತಿ ನೀಡುತ್ತಾರೆ ಅನ್ನೋದನ್ನು ಕಾದು ನೋಡಬೇಕು ಎಂದು ನಾಗರಿಕ ವಿಮಾನಯಾನ ಕಾರ್ಯದರ್ಶಿ ರಾಜೀವ್‌ ಬನ್ಸಾಲ್‌ ತಿಳಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಏರ್‌ ಇಂಡಿಯಾ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೀಲ್ ಮಾಡಿದ ಬಿಡ್‌ಗಳನ್ನು ತೆರೆಯುವ ಮುನ್ನ ಏರ್ ಇಂಡಿಯಾದ ಮೀಸಲು ಬೆಲೆಯನ್ನು ನಿಗದಿಪಡಿಸಲಾಗಿತ್ತು. ಟಾಟಾ ಸಮೂಹವು ಡಿಸೆಂಬರ್ 2021 ರ ವೇಳೆಗೆ ಎಲ್ಲಾ ಷೇರುಗಳನ್ನು ಪಡೆಯಲಿದೆ. ಆಗಸ್ಟ್ 31 ರ ವೇಳೆಗೆ ಏರ್ ಇಂಡಿಯಾ ಒಟ್ಟು 61,562 ಕೋಟಿ ಸಾಲವನ್ನು ಹೊಂದಿತ್ತು. ಯಶಸ್ವಿ ಬಿಡ್ ನೊಂದಿಗೆ ಟಾಟಾ ಸಮೂಹವು ಈಗ 15,300 ಕೋಟಿ ಸಾಲವನ್ನು ತೆಗೆದುಕೊಳ್ಳುತ್ತದೆ. ಉಳಿದ 46,262 ಕೋಟಿ ರೂ ಉಳಿದ ಸಾಲವು SPV ಗೆ ಹೋಗುತ್ತದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಟಾಟಾ ತೆಕ್ಕೆಗೆ ಏರ್‌ ಇಂಡಿಯಾ : 68 ವರ್ಷದ ಬಳಿಕ ಮರಳಿ ಪಡೆದ ಟಾಟಾ ಗ್ರೂಪ್

( Welcome b ack, Air India : Tata Group’s Chairman Ratan Tata celebrates successful Air India bid )

Comments are closed.