ಶೃಂಗೇರಿ ಶಾರದಾಂಬೆಯ ದರ್ಶನ ಪಡೆದ ರಾಷ್ಟ್ರಪತಿ ರಮಾನಾಥ ಕೋವಿಂದ್‌

ಚಿಕ್ಕಮಗಳೂರು : ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶೃಂಗೇರಿಗೆ ಆಗಮಿಸಿ ಶ್ರೀಶಾರದಾಂಬೆಯ ದರ್ಶನ ಪಡೆದಿದ್ದಾರೆ. ದರ್ಶನದ ಬಳಿಕ ಶೃಂಗೇರಿ ಶಾರದಾಪೀಠದ ಜಗದ್ಗುರು ಭಾರತೀ ತೀರ್ಥ ಮಹಾಸ್ವಾಮಿಗಳ ಆಶೀರ್ವಾದವನ್ನು ಪಡೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಶ್ರೀಶಾರದಾಂಬೆಯ ದರ್ಶನಕ್ಕಾಗಿ ರಮಾನಾಥ ಕೋವಿಂದ್‌ ಅವರು ಆಗಮಿಸಿದ್ದರು. ಪತ್ನಿ ಸವಿತಾ ಕೋವಿಂದ್‌ ಹಾಗೂ ಪುತ್ರಿ ಸ್ವಾತಿ ಕೋವಿಂದ್‌ ಅವರು ಕೂಡ ಜೊತೆಯಲ್ಲಿದ್ದರು. ಮಂಗಳೂರಿನಿಂದ ಹೆಲಿಕಾಫ್ಟರ್‌ ಮೂಲಕ ಆಗಮಿಸಿದ ರಾಷ್ಟ್ರಪತಿಗಳಿಗೆ ಶೃಂಗೇರಿಯಲ್ಲಿ ಆನೆ, ಆಶ್ವ, ಪೂರ್ಣಕುಂಭದೊಂದಿಗೆ ಸ್ವಾಗತ ಕೋರಲಾಯಿತು. ನಂತರ ಕುಟುಂಬ ಸಮೇತರಾಗಿ ಶಾರದಾಂಬೆಯ ದರ್ಶನ ಪಡೆದು ನವರಾತ್ರಿ ಉತ್ಸವದಲ್ಲಿ ಭಾಗಿಯಾದ್ರು. ರಾಷ್ಟ್ರಪತಿ ರಮಾನಾಥ ಕೋವಿಂದ್‌ ಅವರು ಶೃಂಗೇರಿ ಗುರುಗಳ ಆಶೀರ್ವಾದವನ್ನು ಪಡೆದಿದ್ದಾರೆ.

ಕಾರಿನಿಂದ ಕೆಳಗಿಳಿದು ಮಕ್ಕಳತ್ತ ಕೈ ಬೀಸಿದ ರಾಷ್ಟ್ರಪತಿ

ಶೃಂಗೇರಿ ದೇವಸ್ಥಾನದಿಂದ ಹೆಲಿಫ್ಯಾಡ್‌ಗೆ ತೆರಳುವ ವೇಳೆಯಲ್ಲಿ ರಸ್ತೆಯಲ್ಲಿ ಕಾರಿನಿಂದ ಕೆಳಗೆ ಇಳಿದ ರಾಷ್ಟ್ರಪತಿ ರಮಾನಾಥ ಕೋವಿಂದ್‌ ಅವರು ರಸ್ತೆ ಪಕ್ಕದಲ್ಲಿ ದೇಶದ ನಾಯಕನನ್ನು ಕಾಣಲು ನಿಂತಿದ್ದ ಮಕ್ಕಳತ್ತ ಕೈ ಬೀಸಿದ್ದಾರೆ. ಭದ್ರತೆಯನ್ನೂ ಲೆಕ್ಕಿಸದೇ ರಾಷ್ಟ್ರಪತಿಗಳು ಕಾರಿನಿಂದ ಕೆಳಗಿಳಿಯುತ್ತಲೇ ನೆರೆದಿದ್ದವರು ಸಂಭ್ರಮಿಸಿದರು.

ಶೃಂಗೇರಿಯಲ್ಲಿ ಸಂಪೂರ್ಣ ಬಂದ್‌

ಶೃಂಗೇರಿ ಶಾರದಾಂಭೆಯ ಸನ್ನಿಧಾನಕ್ಕೆ ರಾಷ್ಟ್ರಪತಿ ರಾಮಾನಾಥ ಕೋವಿಂದ್‌ ಅವರ ಆಗಮನದ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಲೂ ಬಿಗಿ ಭದ್ರತೆಯನ್ನೂ ಒದಗಿಸಲಾಗಿತ್ತು. ಶೃಂಗೇರಿ ಪಟ್ಟಣವನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿತ್ತು. ಪಟ್ಟಣದಲ್ಲಿ ಎನ್‌ಎಸ್‌ಜಿ ಕಮಾಂಡೋಗಳ ಜೊತೆಗೆ ಎಂಟು ನೂರರಿಂದ ಸಾವಿರಕ್ಕೂ ಅಧೀಕ ಪೊಲೀಸರು, ಸ್ಟೇಟ್ ಹಾಗೂ ಸೆಂಟ್ರಲ್ ಇಂಟಲಿಜೆನ್ಸ್ ಪೊಲೀಸರು ಬಿಗಿ ಪೊಲೀಸ್‌ ಭದ್ರತೆಯನ್ನು ಕೈಗೊಂಡಿದ್ದರು.

( President Ramanatha Kovind visit Sringeri Shardhamba temple)

Comments are closed.