ಭಾನುವಾರ, ಏಪ್ರಿಲ್ 27, 2025
Homeagricultureಪಿಎಂ ಕಿಸಾನ್‌ ಯೋಜನೆಯಡಿ ರೈತರ ಖಾತೆಗೆ 8,000 ರೂ.: ಪ್ರಧಾನಿ ನರೇಂದ್ರ ಮೋದಿ ಬಿಗ್‌ ಗಿಫ್ಟ್‌

ಪಿಎಂ ಕಿಸಾನ್‌ ಯೋಜನೆಯಡಿ ರೈತರ ಖಾತೆಗೆ 8,000 ರೂ.: ಪ್ರಧಾನಿ ನರೇಂದ್ರ ಮೋದಿ ಬಿಗ್‌ ಗಿಫ್ಟ್‌

- Advertisement -

ನವದೆಹಲಿ : ದೇಶದಲ್ಲಿ ಲೋಕಸಭಾ ಚುನಾವಣೆ ಶೀಘ್ರದಲ್ಲಿಯೇ ಎದುರಾಗಲಿದೆ. ಲೋಕಸಭಾ ಚುನಾವಣೆಗೆ (Loka Sabha Election 2024) ಮೊದಲೇ ದೇಶದ ರೈತರಿಗೆ ಗುಡ್‌ನ್ಯೂಸ್‌ ಕೊಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಫ್ಲ್ಯಾನ್‌ ರೂಪಿಸಿಕೊಂಡಿದೆ. ಪಿಎಂ ಕಿಸಾನ್‌ ಯೋಜನೆಯಡಿ ರೈತರ ಖಾತೆಗೆ 8,000 ರೂ. ಜಮೆ ಆಗಲಿದೆ.

ದೇಶದಲ್ಲಿರುವ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್‌ ಯೋಜನೆಯನ್ನು ಜಾರಿಗೆ ತಂದಿದ್ದರು. ಈ ಯೋಜನೆಯ ಅಡಿಯಲ್ಲಿ ರೈತರ ಬ್ಯಾಂಕ್‌ ಖಾತೆಗಳಿಗೆ ವರ್ಷಕ್ಕೆ 6000 ರೂಪಾಯಿ ಹಣವನ್ನು ನೇರ ವರ್ಗಾವಣೆ ಮಾಡಲಾಗುತ್ತಿತ್ತು.

Indian Prime Minister Narendra Modi's Big Gift PM Kisan Yojana get 8,000 to farmers
Image Credit to Original Source

ಇದೀಗ ಕೇಂದ್ರದಲ್ಲಿ ಲೋಕಸಭಾ ಚುನಾವಣೆ ಮುಂದಿನ ಕೆಲವೇ ತಿಂಗಳಲ್ಲಿ ಎದುರಾಗಲಿದೆ. ಈ ಕಾರಣಕ್ಕೆ ಅನ್ನದಾತರಿಗೆ ಗುಡ್‌ನ್ಯೂಸ್‌ ಕೊಡಲು ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಫ್ಲ್ಯಾನ್‌ ಮಾಡಿಕೊಂಡಿದೆ. ಪಿಎಂ ಕಿಸಾನ್‌ ಯೋಜನೆಯ ಮೊತ್ತವನ್ನು ಏರಿಕೆ ಮಾಡುವುದು ಬಹುತೇಕ ಖಚಿತ.

ಇದನ್ನೂ ಓದಿ : APL, BPL ಕಾರ್ಡ್‌ದಾರರಿಗೆ ಗುಡ್‌ನ್ಯೂಸ್‌ : ರೇಷನ್‌ ಕಾರ್ಡ್‌ ತಿದ್ದುಪಡಿಗೆ ಮಹತ್ವದ ಸೂಚನೆ

ದೇಶದ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಪಿಎಂ ಕಿಸಾನ್‌ ಯೋಜನೆಯ ಅಡಿಯಲ್ಲಿ ವರ್ಷಕ್ಕೆ 6000 ರೂಪಾಯಿಗಳನ್ನು ನೀಡಲಾಗುತ್ತಿದೆ. ಈ ಮೊತ್ತವನ್ನು 8000 ರೂಪಾಯಿಗೆ ಏರಿಕೆ ಮಾಡಲಾಗುತ್ತದೆ. ಇದಕ್ಕಾಗಿಯೇ 2024ರ ಹಣಕಾಸು ವರ್ಷದಲ್ಲಿ ಮಂಡನೆ ಆಗುವ ಕೇಂದ್ರವು ಬಜೆಟ್ ನಲ್ಲಿ 60,000 ಕೋಟಿ ರೂ.ಗಳನ್ನು ನಿಗದಿಪಡಿಸಿದೆ.

ಒಂದೊಮ್ಮೆ ಪಿಎಂ ಕಿಸಾನ್‌ ಯೋಜನೆಯ ಮೊತ್ತವನ್ನು ಏರಿಕೆ ಮಾಡಿದ್ರೆ ಕೇಂದ್ರ ಸರಕಾರಕ್ಕೆ ಬರೋಬ್ಬರಿ 20,000 ಕೋಟಿ ರೂ.ಗಳ ಹೆಚ್ಚುವರಿ ಹೊರೆ ಬೀಳಲಿದೆ. ಅಲ್ಲದೇ ವರ್ಷಕ್ಕೆ ಬರೋಬ್ಬರಿ 80,000 ಕೋಟಿ ರೂ.ಗಳನ್ನು ದೇಶದ ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ.

Indian Prime Minister Narendra Modi's Big Gift PM Kisan Yojana get 8,000 to farmers
Image Credit to Original Source

ದೇಶದ ಜನಸಂಖ್ಯೆಯ ಶೇ.65 ರಷ್ಟು ಜನರು ಗ್ರಾಮೀಣ ಭಾಗದಲ್ಲಿ ವಾಸವಾಗಿದ್ದಾರೆ. ಅದ್ರಲ್ಲೂ ರೈತರೇ ಅತೀ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಪಿಎಂ ಕಿಸಾನ್‌ ಯೋಜನೆ ಈಗಾಗಲೇ ದೇಶದ ರೈತರಿಗೆ ವರದಾನವಾಗಿ ಪರಿಣಮಿಸಿದೆ. ಕೃಷಿಯಿಂದ ವಿಮುಖರಾಗುತ್ತಿದ್ದ ರೈತರಿಗೆ ಈ ಯೋಜನೆ ಆರ್ಥಿಕ ನೆರವು ನೀಡಿತ್ತು.

ಇದನ್ನೂ ಓದಿ : ರೈತರು ಸಾಲ ಮರು ಪಾವತಿ ಮಾಡುವಂತಿಲ್ಲ: ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರಕಾರ

ಪಿಎಂ ಕಿಸಾನ್‌ ಯೋಜನೆಯ ಅಡಿಯಲ್ಲಿ ಈಗ ದೇಶದಲ್ಲಿ ಒಟ್ಟು 2000  ರೂಪಾಯಿಗಳ ಮೂರು ಕಂತುಗಳಲ್ಲಿ ರೈತರ ಖಾತೆಗೆ ಹಣ ವರ್ಗಾವಣೆ ಆಗುತ್ತಿದೆ. ಒಂದೊಮ್ಮೆ ಪಿಎಂ ಕಿಸಾನ್‌ ಯೋಜನೆಯ ಮೊತ್ತದ್ದಲ್ಲಿ ಏರಿಕೆ ಆದ್ರೆ ಹೆಚ್ಚುವರಿಯಾಗಿ ಪ್ರತೀ ರೈತರ ಖಾತೆಗೆ 2000 ರೂಪಾಯಿ ಹಣ ಜಮೆ ಆಗಲಿದೆ.

ದೇಶದಾದ್ಯಂತ ಈ ಬಾರಿ ಮಳೆ ಕೈಕೊಟ್ಟಿದೆ. ಇದರಿಂದಾಗಿ ಪ್ರಮುಖ ಬೆಳೆಗಳು ನೆಲಕಚ್ಚಿವೆ. ಫಸಲು ಕಳೆದುಕೊಂಡಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಐದು ವರ್ಷಗಳಲ್ಲಿ ಭಾರತ ಅತ್ಯಂತ ದುರ್ಬಲ ಮಾನ್ಸೂನ್‌ ಮಳೆಯನ್ನು ದಾಖಲಿಸಿದೆ.

ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆಯಿಂದ ಸಿಗುತ್ತೆ 4000ರೂ.: ದಸರಾ, ದೀಪಾವಳಿಗೆ ಬಿಗ್‌ ಗಿಫ್ಟ್‌

2018 ರ ಡಿಸೆಂಬರ್‌ ತಿಂಗಳಿನಲ್ಲಿ ಸಬ್ಸಿಡಿ ಕಾರ್ಯಕ್ರಮವನ್ನು ಕೇಂದ್ರ ಸರಕಾರ ಘೋಷಣೆ ಮಾಡಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು 2.42 ಲಕ್ಷ ಕೋಟಿ ಒದಗಿಸಲಾಗಿದೆ. ಇದೀಗ ನಿಯಮಗಳನ್ನು ಸಡಿಲಿಸುವ ಕುರಿತು ಕೇಂದ್ರ ಸರಕಾರ ಮುಂದೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದು, ಹೆಚ್ಚಿನ ರೈತರಿಗೆ ಪ್ರಯೋಜನ ಸಿಗಲಿದೆ.

Indian Prime Minister Narendra Modi’s Big Gift PM Kisan Yojana get 8,000 to farmers

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular