ದಿನಭವಿಷ್ಯ 13 ಅಕ್ಟೋಬರ್‌ 2023 : ಬ್ರಹ್ಮ ಯೋಗದಿಂದ ಈ ನಾಲ್ಕುರಾಶಿಗಳ ಆದಾಯ ಹೆಚ್ಚಳ

ಇಂದು ದ್ವಾದಶ ರಾಶಿಗಳ ಮೇಲೆ ಫಲ್ಗುಣಿ ನಕ್ಷತ್ರದ ಪ್ರಭಾವ ಇರುತ್ತದೆ. ಬ್ರಹ್ಮ ಯೋಗದಿಂದ ನಾಲ್ಕುರಾಶಿಗಳ ಆದಾಯ ಹೆಚ್ಚಲಿದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಇಂದಿನ 12 ದ್ವಾದಶರಾಶಿಗಳ ದಿನಭವಿಷ್ಯ (Horoscope Today) ಹೇಗಿದೆ.

Horoscope Today : ಇಂದು ಅಕ್ಟೋಬರ್‌ 13 2023 ಶುಕ್ರವಾರ. ಇಂದು ದ್ವಾದಶ ರಾಶಿಗಳ ಮೇಲೆ ಫಲ್ಗುಣಿ ನಕ್ಷತ್ರದ ಪ್ರಭಾವ ಇರುತ್ತದೆ. ಬ್ರಹ್ಮ ಯೋಗದಿಂದ ನಾಲ್ಕುರಾಶಿಗಳ ಆದಾಯ ಹೆಚ್ಚಲಿದೆ. ಮೇಷರಾಶಿಯಿಂದ ಮೀನರಾ ಶಿಯ ವರೆಗೆ ಇಂದಿನ 12 ದ್ವಾದಶರಾಶಿಗಳ ಇಂದಿನ ದಿನಭವಿಷ್ಯ (Horoscope Today) ಹೇಗಿದೆ.

ಮೇಷರಾಶಿ ದಿನಭವಿಷ್ಯ
ಆರೋಗ್ಯದ ವಿಚಾರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ವ್ಯಾಪಾರಿಗಳು ಇಂದು ವ್ಯವಹಾರಕ್ಕಾಗಿ ಹೊಸ ಜನರ ಭೇಟಿ. ಸಾಲವು ಸುಲಭವಾಗಿ ನಿಮ್ಮ ಕೈ ಸೇರಲಿದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯುತ್ತಾರೆ.

ವೃಷಭರಾಶಿ ದಿನಭವಿಷ್ಯ
ಕುಟುಂಬದಲ್ಲಿ ಉದ್ವಿಗ್ನತೆಯನ್ನು ತಪ್ಪಿಸಿ. ಇಲ್ಲದಿದ್ದರೆ ನಿಮ್ಮ ಆರೋಗ್ಯವು ಹಾಳಾಗುತ್ತದೆ. ಸಂಗಾತಿಯ ಮಾತಿನಿಂದ ಸಂಬಂಧಗಳಲ್ಲಿ ಬಿರುಕು. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಆದಾಯಕ್ಕೆ ತಕ್ಕಂತೆ ಖರ್ಚು ಮಾಡಿ. ಇಲ್ಲವಾದ್ರೆ ಸಮಸ್ಯೆ ಎದುರಾಗಲಿದೆ.

ಇದನ್ನೂ ಓದಿ : ರೈತರು ಸಾಲ ಮರು ಪಾವತಿ ಮಾಡುವಂತಿಲ್ಲ: ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರಕಾರ

ಮಿಥುನರಾಶಿ ದಿನಭವಿಷ್ಯ
ಸಾಮಾಜಿಕ ಚಟುವಟಿಕೆಗಳಿಗೆ ಹಣ ವಿನಿಯೋಗ ಮಾಡುವಿರಿ. ವಿದ್ಯಾರ್ಥಿಗಳು ಹೊಸ ಅವಕಾಶಗಳನ್ನು ಪಡೆಯುತ್ತಾರೆ. ತಾಯಿಯ ಆರೋಗ್ಯದ ವಿಚಾರ ದಲ್ಲಿ ಶುಭ ಸಮಚಾರ. ಆರ್ಥಿಕವಾಗಿ ಹಲವು ಅನುಕೂಲತೆಗಳು ಸಿಗಲಿದೆ. ಹೊಸ ಸ್ನೇಹಿತರಿಂದ ಸಹಾಯ ದೊರೆಯಲಿದೆ.

ಕರ್ಕಾಟಕರಾಶಿ ದಿನಭವಿಷ್ಯ
ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತದೆ. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿಬರಲಿದೆ. ಕುಟುಂಬದ ಸದಸ್ಯರ ಸಹಕಾರ ದೊರೆಯಲಿದೆ. ಮಕ್ಕಳ ವ್ಯವಹಾರದಲ್ಲಿ ಹೂಡಿಕೆ ಮಾಡುವುದರಿಂದ ಅನುಕೂಲ.

ಇದನ್ನೂ ಓದಿ : ಮೇಘನಾ‌ ರಾಜ್‌ ಸರ್ಜಾ ಮನಗೆದ್ದ ಮಾತು ! ಅಶ್ವಿನಿ ಪುನೀತ್ ರಾಜ್‌ ಕುಮಾರ್‌ ಕೊಟ್ಟ ಪ್ರೇರಣೆ ನೆನೆದ ಕುಟ್ಟಿಮಾ

ಸಿಂಹರಾಶಿ ದಿನಭವಿಷ್ಯ
ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಸಂಜೆ ಮನೆಗೆ ಅತಿಥಿಗಳು ಆಗಮಿಸುತ್ತಾರೆ. ವ್ಯವಹಾರದಲ್ಲಿ ಅಧಿಕ ಲಾಭದಿಂದ ಮನಸಿಗೆ ಸಂತಸ. ಮಕ್ಕಳ ವಿಚಾರದಲ್ಲಿಯೂ ಶುಭ ಸುದ್ದಿಯನ್ನು ಕೇಳುವಿರಿ. ಭೂಮಿ ಖರೀದಿಯ ಯೋಚನೆ ಇಂದು ಕೈಗೂಡಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲವಿದೆ.

ಕನ್ಯಾರಾಶಿ ದಿನಭವಿಷ್ಯ
ಪ್ರೀತಿಯ ಜೀವನ ಗಟ್ಟಿಯಾಗುತ್ತದೆ. ಆರೋಗ್ಯದ ವಿಚಾರದಲ್ಲಿ ತೀರಾ ಎಚ್ಚರಿಕೆಯನ್ನು ವಹಿಸಿ. ದೂರ ಪ್ರಯಾಣದಿಂದ ಶುಭ ಸುದ್ದಿಯನ್ನು ಕೇಳುವಿರಿ. ನೌಕರರಿಗೆ ಮೇಲಾಧಿಕಾರಿಗಳಿಂದ ಬೆಂಬಲ ದೊರೆಯಲಿದೆ. ಪ್ರೀತಿಯ ಜೀವನದಲ್ಲಿ ಸಂಬಂಧಗಳು ಗಟ್ಟಿಯಾಗಲಿದೆ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ನೆಮ್ದದಿ.

Horoscope Today 13 October 2023 Zordic Sign
Image Credit to Original Source

ತುಲಾರಾಶಿ ದಿನಭವಿಷ್ಯ
ಕುಟುಂಬ ಸದಸ್ಯರ ಜೊತೆಗೆ ಜಗಳವಾಗುವ ಸಾಧ್ಯತೆಯಿದೆ. ಸಹೋದರರ ಜೊತೆಗಿನ ವಿವಾದಗಳು ಇಂದು ಕೊನೆಯಾಗಲಿದೆ. ಮಾತುಗಳ ಮೇಲೆ ನಿಯಂತ್ರಣ ತೀರಾ ಅಗತ್ಯ. ಹೊಸ ಹೂಡಿಕೆಯ ವಿಚಾರದಲ್ಲಿ ತಂದೆಯ ಸಲಹೆಯನ್ನು ಪಡೆಯುವುದು ತೀರಾ ಅಗತ್ಯ. ಉದ್ಯೋಗ ಹುಡುಕುತ್ತಿರುವವರು ಸ್ವಲ್ಪ ಸಮಯದ ವರೆಗೆ ಕಾಯಲೇ ಬೇಕು.

ಇದನ್ನೂ ಓದಿ : ಪಿಎಂ ಕಿಸಾನ್‌ ಯೋಜನೆಯಡಿ ರೈತರ ಖಾತೆಗೆ 8,000 ರೂ.: ಪ್ರಧಾನಿ ನರೇಂದ್ರ ಮೋದಿ ಬಿಗ್‌ ಗಿಫ್ಟ್‌

ವೃಶ್ಚಿಕರಾಶಿ ದಿನಭವಿಷ್ಯ
ತೆಗೆದುಕೊಂಡ ನಿರ್ಧಾರದಿಂದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಶುತ್ರುಗಳ ಬಗ್ಗೆ ಎಚ್ಚರವಾಗಿ ಇರಿ. ವೈವಾಹಿಕ ಜೀವನವು ಸುಖಮಯವಾಗಿ ಇರುತ್ತದೆ. ವಿವಾರಕ್ಕೆ ತೆರಳುವ ಸಾಧ್ಯತೆಯಿದೆ. ಆರ್ಥಿಕ ಪರಿಸ್ಥಿತಿಯು ಸುಧಾಣೆ ಕಾಣಲಿದೆ. ಉದ್ಯೋಗಿಗಳು ಅನೇಕ ಸವಾಲುಗಳನ್ನು ಎದುರಿಸಲಿದ್ದಾರೆ.

ಧನಸ್ಸುರಾಶಿ ದಿನಭವಿಷ್ಯ
ಸಹೋದರರ ನಡುವಿನ ಮನಸ್ತಾಪಗಳು ಇಂದು ಕೊನೆಯಾಗಲಿದೆ. ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳನ್ನು ಇಟ್ಟುಕೊಂಡು ಮುನ್ನೆಡೆಯಬೇಕು. ಮಗವಿಗಾಗಿ ಹೂಡಿಕೆ ಮಾಡುವುದು ತೀರಾ ಉತ್ತಮ. ಯಾವುದೇ ಕಾರಣಕ್ಕೂ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಮಕರರಾಶಿ ದಿನಭವಿಷ್ಯ
ರಾಜಕಾರಣಿಗಳು ಶುಭ ಸುದ್ದಿಯನ್ನು ಕೇಳುವಿರಿ. ಹಳೆಯ ಸ್ನೇಹಿತನ ಭೇಟಿಯಿಂದ ಮನಸಿಗೆ ಸಂತಸ. ಸಂಗಾತಿಯನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವಿರಿ. ಸಂಗಾತಿಯ ನಡುವಿನ ಸಂಬಂಧ ಗಟ್ಟಿಯಾಗಲಿದೆ. ಕೆಲಸದ ಸ್ಥಳದಲ್ಲಿ ಹೆಚ್ಚು ಲವಲವಿಕೆಯಿಂದ ಕೆಲಸಗಳನ್ನು ಮಾಡುವಿರಿ. ಇದರಿಂದ ಭವಿಷ್ಯದಲ್ಲಿ ಪ್ರಯೋಜನವಾಗಲಿದೆ.

ಇದನ್ನೂ ಓದಿ : ಭಾರತ- ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಗುಡ್‌ನ್ಯೂಸ್ : ಅಹಮದಾಬಾದ್‌ನಲ್ಲಿ ನೆಟ್‌ ಫ್ರ್ಯಾಕ್ಟಿಸ್‌ ನಡೆಸಿದ ಶುಭಮನ್‌ ಗಿಲ್‌

ಕುಂಭರಾಶಿ ದಿನಭವಿಷ್ಯ
ಕಾರ್ಯಕ್ಷೇತ್ರದಲ್ಲಿ ಸಾಕಷ್ಟು ಶ್ರಮವಹಿಸಬೇಕಾಗುತ್ತದೆ. ಬಾಕಿ ಉಳಿದಿರುವ ಕೆಲಸಗಳು ಇಂದು ಪೂರ್ಣಗೊಳ್ಳುತ್ತದೆ. ಅನಿರೀಕ್ಷಿತ ಲಾಭದಿಂದ ಮನಸಿಗೆ ಕೊಂಚ ನೆಮ್ಮದಿ. ಅಧಿಕ ಖರ್ಚು ನಿಮ್ಮನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಪ್ರೇಮ ಜೀವನವು ಸುಖಮಯವಾಗಿ ಇರುತ್ತದೆ.

ಮೀನರಾಶಿ ದಿನಭವಿಷ್ಯ
ಮಹಿಳಾ ಉದ್ಯೋಗಿಗಳಿಗೆ ಭಡ್ತಿ ದೊರೆಯುವ ಸಾಧ್ಯತೆಯಿದೆ. ಸಣ್ಣ ವ್ಯಪಾರಿಗಳು ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ. ಕುಟುಂಬದ ಹಿರಿಯರ ಸಲಹೆ ಯನ್ನು ಪಾಲಿಸಿ. ಆರೋಗ್ದ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಸರಿಯಾದ ತಜ್ಞ ವೈದ್ಯರ ಭೇಟಿಯಿಂದ ಆರೋಗ್ಯ ಸಮಸ್ಯೆ ಪರಿಹಾರವಾಗಲಿದೆ.

Horoscope Today 13 October 2023 Zordic Sign

Comments are closed.