ಭಾನುವಾರ, ಏಪ್ರಿಲ್ 27, 2025
HomebusinessIndian Railways Online ticket Booking : ದ್ವಿಗುಣಗೊಂಡ ರೈಲ್ವೆ ಟಿಕೆಟ್ ಬುಕ್ಕಿಂಗ್

Indian Railways Online ticket Booking : ದ್ವಿಗುಣಗೊಂಡ ರೈಲ್ವೆ ಟಿಕೆಟ್ ಬುಕ್ಕಿಂಗ್

- Advertisement -

ರೈಲ್ವೆಯಲ್ಲಿ ಪ್ರಯಾಣ ಮಾಡುವುದು ಅಂದ ಕೂಡಲೇ ಕೆಲವರಿಗೆ ತುಂಬಾ ಖುಷಿಯಾದರು ಸಮಯಕ್ಕೆ ಸರಿಯಾಗಿ ಮತ್ತು ತುಂಬಾ ಜನಾ ಪ್ರಯಾಣ ಬೆಳೆಸುವುದು ಕಷ್ಟ ಎಂಬ ವಿಚಾರ ತಿಳಿದಿದೆ. ರೈಲ್ವೆಯಲ್ಲಿ ಪ್ರಯಾಣ ಬೆಳೆಸುವಾಗ ಕೆಲವರು ರೈಲ್ವೆ ಟಿಕೆಟ್ ಅನ್ನು ಆನ್ ಲೈನ್ ಬುಕ್ಕಿಂಗ್ (Online ticket Booking) ಮಾಡಿಕೊಂಡರೆ ಇನ್ನು ಕೆಲವರು ರೈಲ್ವೆ ನಿಲ್ದಾಣಕ್ಕೆ ಹೋಗಿ ಟಿಕೆಟ್ ಪಡೆಯುತ್ತಾರೆ. ಕೆಲವರಿಗೆ ಟಿಕೆಟ್ ಸಿಕ್ಕರೆ ಇನ್ನು ಕೆಲವರಿಗೆ ಟಿಕೆಟ್ ಸಿಗುವುದಿಲ್ಲ ಅಥವಾ  ಅಂದುಕೊಂಡ ಬೋಗಿಯಲ್ಲಿ ಸಾಗಲು ಸಾಧ್ಯವಾಗುವುದಿಲ್ಲ. ಆದರೆ ಈಗ ರೈಲ್ವೆ ಟಿಕೆಟ್ ಬುಕ್ ಮಾಡುವ ವಿಷಯಕ್ಕೆ ಸಂಭಂದಿಸಿದಂತೆ ಯಾವುದೇ ಅಳುಕನ್ನು ಹೊಂದುವ ಅವಶ್ಯಕತೆ ಇಲ್ಲ. ಇದೀಗ ರೈಲ್ವೆ ಟಿಕೆಟ್ಗೆ ಸಂಭಂದಿಸಿದಂತೆ ಹೊಸದೊಂದು ವಿಚಾರವನ್ನು ಅಪ್ಡೇಟ್ ಮಾಡಲಾಗಿದೆ.

ಹೌದು ಇದೀಗ ರೈಲ್ವೆಯಲ್ಲಿ ಪ್ರಯಾಣಿಸುವವರಿಗೆ ಭಾರತೀಯ ರೈಲ್ವೆ ಇಲಾಖೆ ಹೊಸದೊಂದು ಅವಕಾಶವನ್ನು ಮಾಡಿಕೊಟ್ಟಿದೆ. ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಶನ್ (IRCTC) ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಮೂಲಕ ಆನ್‌ಲೈನ್ ಟಿಕೆಟ್‌ಗಳನ್ನು ಬುಕ್ ಮಾಡುವ ಮಿತಿಯನ್ನು ಹೆಚ್ಚಿಸಲಾಗಿದೆ. ಪ್ರಸ್ತುತ, ರಾಷ್ಟ್ರೀಯ ಸಾಗಣೆದಾರರು ಆಧಾರ್ ಲಿಂಕ್ ಮಾಡದ ಬಳಕೆದಾರರ ಐಡಿಯಿಂದ ತಿಂಗಳಿಗೆ ಗರಿಷ್ಠ ಆರು ಟಿಕೆಟ್‌ಗಳ ಟಿಕೆಟ್ ಬುಕಿಂಗ್ ಮಿತಿಯನ್ನು 12 ಟಿಕೆಟ್‌ಗಳಿಗೆ ಹೆಚ್ಚಿಸಿದ್ದಾರೆ ಹಾಗೂ ಆಧಾರ್‌ಗೆ ಲಿಂಕ್ ಮಾಡಲಾದ ಬಳಕೆದಾರ ಐಡಿಯಿಂದ ಒಂದು ತಿಂಗಳಲ್ಲಿ ಗರಿಷ್ಠ 12 ಟಿಕೆಟ್‌ಗಳಿಂದ 24 ಟಿಕೆಟ್‌ಗಳನ್ನು ಬುಕ್ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಅಲ್ಲದೇ ಬುಕ್ ಮಾಡಬೇಕಾದ ಟಿಕೆಟ್‌ನಲ್ಲಿರುವ ರೈಲು ಪ್ರಯಾಣಿಕರಲ್ಲಿ ಒಬ್ಬರು ಆಧಾರ್ ಮೂಲಕ ತಮ್ಮ ಟಿಕೆಟ್ ಗಳನ್ನು ಪರಿಶೀಲಿಸಬಹುದಾಗಿದೆ.

ಈ ರೀತಿಯಲ್ಲಿ ಟಿಕೆಟ್ ಬುಕ್ಕಿಂಗ್ ನಲ್ಲಿ ಹೆಚ್ಚಳ ಮಾಡಿರುವುದು ಎಲ್ಲ ಪ್ರಯಾಣಿಕರಿಗೂ ಖುಷಿತಂದಿದೆ ಮತ್ತು ಪದೇ ಪದೇ ರೈಲಿನಲ್ಲಿ ಓದಾಡುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಮೊದಲಿನ ತರ ಯಾವುದಾದರೂ ಟಿಕೆಟ್ ಸಿಗದಿದ್ದಾಗ ಅಥವಾ ಮಿಸ್ ಆದಾಗ ಕಾಯುವ ಅವಶ್ಯಕತೆ ಬೀಳುವುದಿಲ್ಲ. ಮತ್ತು ಮುಂಚಿತವಾಗಿಯೇ ನಮಗೆ ಎಷ್ಟು ಟಿಕೆಟ್ ಗಳ ಅವಶ್ಯಕತೆ ಇದೆಯೋ ಅಷ್ಟು ಟಿಕೆಟ್ ಗಳನ್ನು ಪಡೆಯ ಬಹುದಾಗಿರುತ್ತದೆ. ಪ್ರಯಾಣಿಕರು ತಮ್ಮ ಐಡಿಗೆ ಆಧಾರ್ ಲಿಂಕ್ ಮಾಡಿ  ಟಿಕೆಟ್ ಪಡೆಯುವುದರಿಂದ ಒಂದೇ ಬಾರಿಗೆ 24 ಜನರು ಒಟ್ಟಿಗೆ ಸಾಗಬಹುದಾಗಿದೆ. ಹೀಗೆ ಭಾರತೀಯ ರೈಲ್ವೆ ಇಲಾಖೆಯಿಂದ ಮಾಡಿರುವ ಈ ಯೋಜನೆಯು ಎಲ್ಲರಿಗೂ ಸಹಾಯವಾಗುವಂತದ್ದು.

ಇದನ್ನೂ ಓದಿ: Halu Rameshwara Temple: ಪುರಾಣ ಪ್ರಸಿದ್ಧ ತಾಣ ಹಾಲು ರಾಮೇಶ್ವರ

ಇದನ್ನೂ ಓದಿ: Eating Tips For Monsoon Season: ಮಳೆಗಾಲದಲ್ಲಿ ನಿಮ್ಮ ಆಹಾರ ಸೇವನೆ ಹೀಗಿರಲಿ

Indian Railways Doubles Online Ticket Booking Limit Through IRCTC

RELATED ARTICLES

Most Popular