Teen Killed In UP : ಫೇಸ್​ಬುಕ್​​ನಲ್ಲಿ ಫ್ರೆಂಡ್​ ರಿಕ್ವೆಸ್ಟ್​ ಒಪ್ಪದ ಬಾಲಕಿ : ಕೋಪಗೊಂಡ ಯುವಕನಿಂದ ಕೊಲೆ

ಉತ್ತರಪ್ರದೇಶ : Teen Killed In UP : ಈಗಂತೂ ಸೋಶಿಯಲ್​ ಮೀಡಿಯಾ ಯುಗ. ಜನರು ಮುಖಕ್ಕೆ ಮುಖ ಕೊಟ್ಟು ಮಾತನಾಡುವುದಕ್ಕಿಂತ ಸೋಶಿಯಲ್​ ಮೀಡಿಯಾ ಮೂಲಕ ಮಾತನಾಡುವುದೇ ಹೆಚ್ಚು ಎಂಬಂತಾಗಿದೆ. ಫೇಸ್​ಬುಕ್​, ಇನ್​ಸ್ಟಾಗ್ರಾಂ, ವಾಟ್ಸಾಪ್​, ಟ್ವಿಟರ್​ ಸ್ನಾಪ್​ಚಾಟ್​ ಹೀಗೆ ಸಾಕಷ್ಟು ಸೋಶಿಯಲ್​ ಮೀಡಿಯಾ ವೇದಿಕೆಯು ಬಳಕೆದಾರರಿಗಾಗಿ ಲಭ್ಯವಿದೆ. ಫೇಸ್​ಬುಕ್​ನಲ್ಲಿ 16 ವರ್ಷದ ಬಾಲಕಿಗೆ ಫ್ರೆಂಡ್​ಶಿಪ್​​ ರಿಕ್ವೆಸ್ಟ್​​ ಕಳಿಸಿದ್ದ ಯುವಕನೊಬ್ಬ ಆಕೆ ರಿಕ್ವೆಸ್ಟ್​ ಒಪ್ಪಿಕೊಂಡಿಲ್ಲ ಎಂಬ ಕಾರಣಕ್ಕೆ ಕೋಪಗೊಂಡು ಆಕೆಯನ್ನು ಕೊಲೆ ಮಾಡಿದ್ದು ಮಾತ್ರವಲ್ಲದೇ ಬಾಲಕಿಯ ತಾಯಿಗೂ ಗಾಯ ಮಾಡಿದ ಘಟನೆಯು ಉತ್ತರ ಪ್ರದೇಶದ ಮಥುರಾದಲ್ಲಿ ಇಂದು ವರದಿಯಾಗಿದೆ.


ಕೊಲೆಗೈದ ಆರೋಪಿಯನ್ನು ಮುಜಾಫರ್​ನಗರ ನಿವಾಸಿ ರವಿ ಎಂದು ಗುರುತಿಸಲಾಗಿದೆ ಎಂದು ಸೂಪರಿಟೆಂಡೆಂಟ್​ ಪೊಲೀಸ್​​​​ ಮಾರ್ಟಂಡ್​ ಪ್ರಕಾಶ್​ ಸಿಂಗ್​ ಮಾಹಿತಿ ನೀಡಿದ್ದಾರೆ. ಮೃತ ಬಾಲಕಿಯ ತಂದೆ ತೇಜವೀರ್​ ಸಿಂಗ್​ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದೇವೆಂದು ಸ್ಟೇಷನ್​ ಹೌಸ್​ ಆಫೀಸರ್​ ಅಜಯ್​ ಕೌಶಲ್​ ಮಾಹಿತಿ ನೀಡಿದ್ದಾರೆ. ಮೃತ ಬಾಲಕಿಯ ತಂದೆ ತೇಜವೀರ್​ ಸಿಂಗ್​​​ ಫರಿದಾಬಾದ್​ನ ಫ್ಯಾಕ್ಟರಿಯಲ್ಲಿ ಸೆಕ್ಯೂರಿಟಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ರವಿವಾರ ತಡರಾತ್ರಿ ಹೈವೇ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ನಾಗ್ಲಾ ಬೊಹ್ರಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ . ಮದುವೆ ಕಾರ್ಡ್ ನೀಡುವ ನೆಪದಲ್ಲಿ ಬಾಲಕಿಯ ಮನೆಗೆ ಆಗಮಿಸಿದ ಆರೋಪಿ ರವಿ ಈ ಕೃತ್ಯವನ್ನು ಎಸಗಿದ್ದಾನೆ. ಈ ಮದುವೆ ಆಮಂತ್ರಣವನ್ನು ಸ್ವೀಕರಿಸಲು ಬಾಲಕಿಯು ರವಿಯ ಸಮೀಪಕ್ಕೆ ತೆರಳುತ್ತಿದ್ದಂತೆಯೇ ಆತ ಚಾಕುವಿನಿಂದ ಇರಿದಿದ್ದಾನೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ. ಬಾಲಕಿಯ ತಾಯಿ ಸುನೀತಾ ಪುತ್ರಿಯನ್ನು ರಕ್ಷಿಸಲು ಹತ್ತಿರ ಬರುತ್ತಿದ್ದಂತೆಯೇ ರವಿ ಸುನೀತಾರ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ಅಧಿಕಾರಿ ಹೇಳಿದ್ದಾರೆ. ಬಳಿಕ ರವಿ ಅದೇ ಚಾಕುವಿನಿಂದ ತನ್ನನ್ನು ತಾನು ಸಾಯಿಸಿಕೊಳ್ಳಲೂ ಸಹ ಯತ್ನಿಸಿದ್ದ ಎನ್ನಲಾಗಿದೆ.
ಪೊಲೀಸರಿಗೆ ಸಲ್ಲಿಸಲಾದ ದೂರಿನಲ್ಲಿ ಬಾಲಕಿಯ ತಂದೆ ತೇಜವೀರ್​ ಸಿಂಗ್​ ನನ್ನ ಮಗಳು ಫ್ರೆಂಡ್​ ರಿಕ್ವೆಸ್ಟ್​ ಒಪ್ಪಿಕೊಳ್ಳದಕ್ಕೆ ಈತ ಈ ಕೃತ್ಯ ಎಸಗಿದ್ದಾನೆಂದು ದೂರಿದ್ದಾರೆ.

ಇದನ್ನು ಓದಿ : Indian Railways: ದ್ವಿಗುಣಗೊಂಡ ರೈಲ್ವೆ ಟಿಕೆಟ್ ಬುಕ್ಕಿಂಗ್

ಇದನ್ನೂ ಓದಿ : IND vs SA 5th T20 ಮಳೆಗೆ ಬಲಿ : 50% ಟಿಕೆಟ್ ಹಣ ವಾಪಸ್, KSCA ಮಹತ್ವದ ನಿರ್ಧಾರ

Teen Killed In UP For Not Accepting Friend Request On Facebook: Police

Comments are closed.