Special Train : ಡಿಸೆಂಬರ್‌ 9 ರಿಂದ ಮಂಗಳೂರು–ಮುಂಬೈ ನಡುವೆ ವಿಶೇಷ ರೈಲು; ರೈಲಿನ ವೇಳಾಪಟ್ಟಿ ಇಲ್ಲಿದೆ

ಹಬ್ಬ ಮತ್ತು ವರ್ಷಾಂತ್ಯದಲ್ಲಿ ಆಗುವ ಪ್ರಯಾಣಿಕರ ದಟ್ಟಣೆಯನ್ನು ತಪ್ಪಿಸುವ ಸಲುವಾಗಿ ಕೊಂಕಣ ರೈಲ್ವೆಯು ಕೇಂದ್ರ ರೈಲ್ವೆಯ ಜೊತೆಗೂಡಿ ಡಿಸೆಂಬರ್ 9 ರಿಂದ ಮುಂಬೈ ಮತ್ತು ಮಂಗಳೂರು ನಡುವೆ ವಿಶೇಷ ರೈಲು (Special Train) ಗಳನ್ನು ಏರ್ಪಡಿಸಿದೆ ಎಂದು ಭಾನುವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಈ ರೈಲುಗಳು ಒಂದು ಟು-ಟೈರ್ ಎಸಿ ಕೋಚ್, ಮೂರು 3-ಟೈರ್ ಎಸಿ ಮತ್ತು ಎಂಟು ಸ್ಲೀಪರ್ ಕೋಚ್‌ಗಳು ಸೇರಿದಂತೆ ಒಟ್ಟು 17 ಕೋಚ್‌ಗಳನ್ನು ಹೊಂದಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವಿಶೇಷ ಮಂಗಳೂರು-ಮುಂಬೈ ರೈಲು:
ರೈಲು ಸಂಖ್ಯೆ 01453 ಲೋಕಮಾನ್ಯ ತಿಲಕ್ (ಟಿ)-ಮಂಗಳೂರು ಜಂಕ್ಷನ್ ವಿಶೇಷ (ಸಾಪ್ತಾಹಿಕ):
ವಿಶೇಷ ಮಂಗಳೂರು–ಮುಂಬೈ ರೈಲಿನ ಸಂಖ್ಯೆಯು 01453 ಆಗಿದ್ದು ಇದು ಲೋಕಮಾನ್ಯ ತಿಲಕ್ (ಟಿ) ನಿಂದ ಮಂಗಳೂರು ಜಂಕ್ಷನ್ ನಡುವೆ ಓಡಲಿದೆ. ವಿಶೇಷ (ಸಾಪ್ತಾಹಿಕ) ರೈಲು ಡಿಸೆಂಬರ್ 9 ರಿಂದ ಜನವರಿ 6 ರವರೆಗೆ ಪ್ರತಿ ಶುಕ್ರವಾರ ಲೋಕಮಾನ್ಯ ತಿಲಕ್‌ನಿಂದ ರಾತ್ರಿ 10.15 ಕ್ಕೆ ಹೊರಡಲಿದೆ. ರೈಲು ಮರುದಿನ ಸಂಜೆ 5.05 ಕ್ಕೆ ಮಂಗಳೂರು ಜಂಕ್ಷನ್‌ಗೆ ತಲುಪಲಿದೆ.

ರೈಲು ಸಂಖ್ಯೆ 01454 ಮಂಗಳೂರು ಜಂಕ್ಷನ್-ಲೋಕಮಾನ್ಯ ತಿಲಕ್ ವಿಶೇಷ (ಸಾಪ್ತಾಹಿಕ):
ಸಾಪ್ತಾಹಿಕವಾಗಿ ಓಡುವ ವಿಶೇಷ ರೈಲು ಸಂಖ್ಯೆ 01454 ಆಗಿದ್ದು ಇದು ಮಂಗಳೂರು ಜಂಕ್ಷನ್ ನಿಂದ ಲೋಕಮಾನ್ಯ ತಿಲಕ್ ಹೋಗಲಿದೆ. ಇದು ಮಂಗಳೂರು ಜಂಕ್ಷನ್‌ನಿಂದ ಡಿಸೆಂಬರ್ 10 ರಿಂದ ಜನವರಿ 7 ರವರೆಗೆ ಪ್ರತಿ ಶನಿವಾರ ಸಂಜೆ 6.45 ಕ್ಕೆ ಹೊರಡಲಿದೆ. ರೈಲು ಮರುದಿನ ಮಧ್ಯಾಹ್ನ 2.25 ಕ್ಕೆ ಲೋಕಮಾನ್ಯ ತಿಲಕ್ ತಲುಪಲಿದೆ.

ರೈಲು ನಿಲುಗಡೆ ಸ್ಥಳಗಳು:
ಥಾಣೆ, ಪನ್ವೇಲ್, ರೋಹಾ, ಖೇಡ್, ಚಿಪ್ಲುನ್, ಸಂಗಮೇಶ್ವರ ರಸ್ತೆ, ರತ್ನಗಿರಿ, ಕಂಕಾವಲಿ, ಸಿಂಧುದುರ್ಗ, ಕುಡಾಲ್. ಸಾವಂತವಾಡಿ ರಸ್ತೆ, ಥಿವಿಂ, ಕರ್ಮಲಿ, ಮಡಗಾಂವ್ ಜೂ., ಕಾರವಾರ, ಗೋಕರ್ಣ ರಸ್ತೆ, ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ ಬೈಂದೂರು, ಕುಂದಾಪುರ, ಉಡುಪಿ ಮುಲ್ಕಿ ಮತ್ತು ಸುರತ್ಕಲ್ ನಿಲ್ದಾಣಗಳು.

ಇದನ್ನೂ ಓದಿ : Gujarath election: ಗುಜರಾತ್‌ ವಿಧಾನಸಭೆ 2ನೇ ಹಂತ ಚುನಾವಣೆಯ ಸಂಪೂರ್ಣ ವಿವರ

ಇದಲ್ಲದೇ ವಿಶೇಷ ಸಾಪ್ತಾಹಿಕ ರೈಲುಗಳು, ರೈಲು ಸಂಖ್ಯೆ 01455/01456 ಲೋಕಮಾನ್ಯ ತಿಲಕ್ ಟರ್ಮಿನಲ್‌ ನಿಂದ ಮಡಗಾಂವ್ ಜಂಕ್ಷನ್‌ಗೂ ಓಡಲಿದೆ.

ರೈಲು ಸಂಖ್ಯೆ 01455 ಲೋಕಮಾನ್ಯ ತಿಲಕ್ (ಟಿ)–ಮಡಗಾಂವ್‌ ಜಂ. ವಿಶೇಷ (ಸಾಪ್ತಾಹಿಕ):
ಲೋಕಮಾನ್ಯ ತಿಲಕ್ (ಟರ್ಮಿನಲ್‌) ನಿಂದ ಮಡಗಾಂವ್ ಜಂಕ್ಷನ್‌ಗೆ ಓಡುವ ರೈಲು ಲೋಕಮಾನ್ಯ ತಿಲಕ್‌ ಟರ್ಮಿನಲ್‌ನಿಂದ ಜನವರಿ 1, 2023, ಭಾನುವಾರದಂದು 22:15 ಗಂಟೆಗೆ (ರಾತ್ರಿ 10:15) ಹೊರಡಲಿದೆ. ಈ ರೈಲು ಮರುದಿನ 10:30 ಗಂಟೆಗೆ (10:30 AM) ಮಡಗಾಂವ್ ಜಂಕ್ಷನ್‌ ತಲುಪಲಿದೆ.

ರೈಲು ಸಂಖ್ಯೆ 01456 ಮಡಗಾಂವ್ ಜಂ. -ಲೋಕಮಾನ್ಯ ತಿಲಕ್ (ಟಿ) ವಿಶೇಷ (ಸಾಪ್ತಾಹಿಕ) :
ಮಡಗಾಂವ್ ಜಂಕ್ಷನ್‌ನಿಂದ ಜನವರಿ 2, 2023, ಸೋಮವಾರ 11:30 ಗಂಟೆಗೆ ಹೊರಡಲಿದ್ದು, ರೈಲು ಅದೇ ದಿನ 23:45 ಗಂಟೆಗೆ (11:45 PM) ಲೋಕಮಾನ್ಯ ತಿಲಕ್ (ಟಿ) ತಲುಪುತ್ತದೆ.

ರೈಲು ನಿಲುಗಡೆ ಸ್ಥಳಗಳು :
ಥಾಣೆ, ಪನ್ವೇಲ್, ರೋಹಾ, ಮಂಗಾವ್, ಖೇಡ್, ಚಿಪ್ಲುನ್, ಸಂಗಮೇಶ್ವರ ರಸ್ತೆ. ರತ್ನಗಿರಿ, ರಾಜಾಪುರ ರಸ್ತೆ, ವೈಭವ್ವಾಡಿ ರಸ್ತೆ, ಕಂಕಾವಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರಸ್ತೆ, ಥಿವಿಮ್ ಮತ್ತು ಕರ್ಮಾಲಿ ನಿಲ್ದಾಣಗಳು.

ಇದನ್ನೂ ಓದಿ : Janani Suraksha Yojana : ಗರ್ಭಿಣಿ ಮಹಿಳೆಯರಿಗೂ ಸಿಗುತ್ತೆ ಸರ್ಕಾರದಿಂದ 6,000 ರೂಪಾಯಿಗಳು

(IRCTC Introduce Special Train Mangalore to Mumbai check full schedule here)

Comments are closed.