Hair Fall Problem Tips : ಕೂದಲು ಉದುರುವ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಚಿಂತೆ ಬೇಡ ಈ ಟಿಪ್ಸ್‌ ಅನುಸರಿಸಿ

(Hair Fall Problem Tips)ಮಹಿಳೆಯರು ಮತ್ತು ಪುರುಷರಲ್ಲಿ ಅತಿ ಹೆಚ್ಚಾಗಿ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೆಚ್ಚಿನವರು ಯಾವ ಎಣ್ಣೆ ಹಚ್ಚಬೇಕು,ಯಾವ ಶಾಂಪೂ ಬಳಸಬೇಕು ಎಂದು ತಲೆಕೆಡಿಸಿಕೊಳ್ಳುತ್ತಾರೆ. ಕೂದಲು ಉದುರುವಿಕೆ ಸಮಸ್ಯೆಗೆ ಗುಡ್‌ ಬೈ ಹೇಳಿ, ಮನೆಯಲ್ಲಿಯೇ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಿ. ದಾಸವಾಳ ಹೂವು, ದಾಸವಾಳ ಎಲೆ, ಅಕ್ಕಿ ಬಳಸಿ ನಿಮ್ಮ ಕೂದಲನ್ನು ರಕ್ಷಿಸಿಕೊಳ್ಳಬಹುದು. ನಿಮ್ಮ ಕೂದಲು ಹೇಗೆ ರಕ್ಷಿಸಿಕೊಳ್ಳುವುದು ಎನ್ನುವ ಮಾಹಿತಿ ತಿಳಿದುಕೊಳ್ಳೋಣ.

Hair Fall Problem Tips : ಬೇಕಾಗುವ ಸಾಮಾಗ್ರಿಗಳು:

ದಾಸವಾಳ ಹೂವು
ದಾಸವಾಳ ಎಲೆ
ಅಕ್ಕಿ
ಹರಳೆಣ್ಣೆ

ಮಾಡುವ ವಿಧಾನ

ಪಾತ್ರೆಯಲ್ಲಿ ನೀರು ಹಾಕಿಕೊಂಡು ತೊಳೆದ ಅಕ್ಕಿ ,ದಾಸವಾಳ ಹೂವು, ದಾಸವಾಳ ಎಲೆ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು ನೀರು ದಪ್ಪ ಆಗುತ್ತಿದ್ದ ಹಾಗೆ ಗ್ಯಾಸ್‌ ಆರಿಸಿಕೊಂಡು ಡಬ್ಬಿಯಲ್ಲಿ ಸೊಸಿಕೊಂಡು ಪ್ರಿಡ್ಜ್‌ ನಲ್ಲಿ ಇಟ್ಟುಕೊಳ್ಳಬೇಕು. ತಲೆ ಸ್ನಾನ ಮಾಡುವ ಎರಡು ಗಂಟೆಯ ಮುಂಚೆ ಬೌಲ್ ನಲ್ಲಿ ಎರಡು ಚಮಚ ರಸವನ್ನು ತೆಗೆದುಕೊಂಡು ಅದಕ್ಕೆ ಎರಡು ಚಮಚ ಹರಳೆಣ್ಣೆ ಹಾಕಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿಕೊಂಡು ನಂತರ ತಲೆಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ದಟ್ಟವಾಗಿ ಕೂದಲು ಬೆಳೆಯುತ್ತದೆ ಮತ್ತು ತಲೆಹೊಟ್ಟನ್ನು ನಿವಾರಣೆ ಮಾಡುತ್ತದೆ.

ಇದನ್ನೂ ಓದಿ:Dates Health Tips:ಖರ್ಜೂರ ಉಂಡೆ ತಿಂದು ಆರೋಗ್ಯ ಕಾಪಾಡಿಕೊಳ್ಳಿ

ಇದನ್ನೂ ಓದಿ:Calotropis gigantea Leaf Oil:ಮಂಡಿ ನೋವಿನಿಂದ ಬೇಸತ್ತಿದ್ದೀರಾ?ಎಕ್ಕ ಎಲೆಯ ಎಣ್ಣೆ ಬಳಸಿ ನೋಡಿ

ಇದನ್ನೂ ಓದಿ:Banana Scrub :ಚಳಿಗಾಲದಲ್ಲಿ ಮುಖ ಒಡೆಯದಂತೆ ರಕ್ಷಿಸಲು ಬಾಳೆಹಣ್ಣಿನ ಸ್ಕ್ರಬ್‌

ದಾಸವಾಳ ಹೂವು

ದಾಸವಾಳ ಹೂವು ಕೂದಲಿಗೆ ಸಂಬಂಧಪಟ್ಟ ತಲೆಹೊಟ್ಟು,ಬಿಳಿಕೂದಲು,ಕೂದಲು ಉದುರುವಿಕೆ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಮಹಿಳೆಯರ ಆರೋಗ್ಯ ಸಮಸ್ಯೆ ಗಳನ್ನು ಗುಣಪಡಿಸುವ ಶಕ್ತಿ ಈ ದಾಸವಾಳ ಹೂವಿಗೆ ಇದೆ. ಋತುಚಕ್ರದ ಸಂದರ್ಭದಲ್ಲಿ ದಾಸವಾಳ ಹೂವನ್ನು ಜಗಿದು ತಿನ್ನುವುದರಿಂದ ಹೆಚ್ಚು ರಕ್ತಸ್ರಾವ ಆಗದಂತೆ ನೋಡಿಕೊಳ್ಳುತ್ತದೆ.ರಕ್ತದೊತ್ತಡ ನಿಯಂತ್ರಿಸುವಂತಹ ಕೆಲಸವನ್ನು ದಾಸವಾಳ ಹೂವು ಮಾಡುತ್ತದೆ.

ದಾಸವಾಳ ಎಲೆ
ದಾಸವಾಳ ಗಿಡದ ಎಲೆಗಳ ರಸವನ್ನು ಗಾಯಗಳಿಗೆ ಹಚ್ಚಿದರೆ ಬಹಳ ಬೇಗನೆ ಅದನ್ನು ವಾಸಿ ಮಾಡುತ್ತದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಅಂಶವನ್ನು ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ. ದಾಸವಾಳ ಎಲೆಯು ಕೂದಲ ಹಲವು ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಕೂದಲಿನ ಒರಟುತನವನ್ನು ಕಡಿಮೆ ಮಾಡಿ ಮೃದುವಾಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ತಯಾರಿಸಿದ ಪೇಸ್ಟ್‌ ಕೂದಲಿಗೆ ಹಚ್ಚುವುದರಿಂದ ಕೂದಲಿನ ಬುಡವನ್ನು ಗಟ್ಟಿ ಮಾಡುತ್ತದೆ ಮತ್ತು ತಲೆ ಹೊಟ್ಟು ನಿವಾರಣೆ ಆಗುತ್ತದೆ.

Hair Fall Problem Tips Are you suffering from hair fall problem? Don’t worry just follow these tips

Comments are closed.