kalyana Karnataka development : ಕಲ್ಯಾಣ ಕರ್ನಾಟಕದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ : ಸಿಎಂ ಬಸವರಾಜ ಬೊಮ್ಮಾಯಿ

ಕಲಬುರಗಿ:kalyana Karnataka development : ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕಲಬುಗರಗಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ. ದೇಶಕ್ಕೆ 75ನೇ ಅಮೃತ ಮಹೋತ್ಸವ ಒಂದು ವರ್ಷದ ಹಿಂದೆ ಆಗಿತ್ತು. ಆದರೆ ಕಲ್ಯಾಣ ಕರ್ನಾಟಕ ಒಂದು ವರ್ಷ ತಡವಾಗಿ ವಿಮೋಚನೆಯಾಯ್ತು. ನಮ್ಮ ಸರ್ಕಾರದ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ಯಾವ ಕಾರಣಕ್ಕಾಗಿ ಕಲ್ಯಾಣ ಕರ್ನಾಟಕ ಹಿಂದೆ ಉಳಿದಿತ್ತು. ಅವೆಲ್ಲವನ್ನು ಸರಿಪಡಿಸಿ ಅಭಿವೃದ್ಧಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ.

ನಾವು ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಳಿತು ಕಲ್ಯಾಣ ಕರ್ನಾಟಕದ ಬಗ್ಗೆ ಚರ್ಚೆ ಮಾಡುತ್ತೇವೆ. ಆದರೆ ಇಲ್ಲಿ ಜನ ಸಮಸ್ಯೆ ಜೊತೆ ಜೀವನ ಮಾಡುತ್ತಾರೆ. ಯಾವ ಸರ್ಕಾರ ಜನರ ಮಧ್ಯೆ ಹೋಗಿ ಜನರ ಸಮಸ್ಯೆಯನ್ನು ಆಲಿಸುತ್ತದೆಯೋ ಅದೇ ನಿಜವಾದ ಸರ್ಕಾರ. ಹತ್ತು ಹಲವು ಸಿಎಂಗಳನ್ನು ಮಾಡಿದವರು, ಹಲವು ನಾಯಕರನ್ನು ದೊಡ್ಡವರನ್ನಾಗಿ ಮಾಡಿದ್ದೀರಿ. ಆದರೆ ನೀವು ಹಿಂದೆ ಎಲ್ಲಿದ್ದೀರೋ ಅಲ್ಲೇ ಇದ್ದೀರಿ. ಆದರೆ ಈಗ ಬದಲಾವಣೆ ಗಾಳಿ ಬೀಸುತ್ತಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗಗಕ್ಕೆ ಮೂಲಭೂತ ಸೌಕರ್ಯವನ್ನು ಕಲ್ಪಿಸುವ ಸಂಕಲ್ಪವನ್ನು ಹೊತ್ತು ಬಂದಿದ್ದೇನೆ. 1500 ಕೋಟಿ ರೂಪಾಯಿಯಲ್ಲ ಮೂರು ಸಾವಿರ ಕೋಟಿ ರೂಪಾಯಿ ಕೊಡುತ್ತೇನೆಂದು ಹೇಲಿದ್ದೆ. ಅದರಂತೆ ಬಜೆಟ್​​ನಲ್ಲಿ ಅನುಮೋದನೆ ಕೊಟ್ಟು ಕಾಮಗಾರಿಗಳಿಗೆ ಚಾಲನೆ ಕೊಡಲು ಬಂದಿದ್ದೇನೆ . ಕಲ್ಯಾಣ ಕರ್ನಾಟಕದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲು ಆದೇಶ ಮಾಡಿದ್ದೇನೆ. 2500 ಅಂಗನವಾಡಿಗಳಿಗೆ ಚಾಲನೆ ನೀಡಿದ್ದೇನೆ. ಕಲ್ಯಾಣ ಕರ್ನಾಟಕದ ಒಂದು ಸಾವಿರ ಹಳ್ಳಿಗಳಲ್ಲಿ ಸ್ತ್ರೀ ಸಾಮರ್ಥ್ಯ ಹೆಚ್ಚಿಸಲು ಒಂದು ಲಕ್ಷ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೊಡೋದಕ್ಕೆ ಮುಂದಾಗಿದ್ದೇನೆ.ಎರಡು ಲಕ್ಷ ಯುವಕರಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಿದ್ದೇನೆ ಎಂದು ಹೇಳಿದರು.

ಇದನ್ನು ಓದಿ : Vinay Kumar : MI ಎಮಿರೇಟ್ಸ್ ತಂಡಕ್ಕೆ ದಾವಣಗೆರೆ ಎಕ್ಸ್‌ಪ್ರೆಸ್ ವಿನಯ್ ಕುಮಾರ್ ಬೌಲಿಂಗ್ ಕೋಚ್

ಇದನ್ನೂ ಓದಿ : Minister CC Patil :ಭ್ರಷ್ಟಾಚಾರದ ವಿಚಾರದಲ್ಲಿ ವಿಪಕ್ಷಗಳ ಜೊತೆ ಡೀಲ್​ ಮಾಡಿಕೊಳ್ಳಲು ಮುಂದಾದ್ರಾ ಸಚಿವ ಸಿ.ಸಿ ಪಾಟೀಲ್​

ಇದನ್ನೂ ಓದಿ : Namibian cheetahs :ಬರೋಬ್ಬರಿ 70 ವರ್ಷಗಳ ಬಳಿಕ ಭಾರತಕ್ಕೆ ಮತ್ತೆ ಮರಳಿದ ಚೀತಾ : ಐತಿಹಾಸಿಕ ದಿನವಾಗಿ ಬದಲಾಯ್ತು ಮೋದಿ ಬರ್ತಡೇ

CM Basavaraja Bommai’s statement on kalyana Karnataka development

Comments are closed.