ಭಾನುವಾರ, ಏಪ್ರಿಲ್ 27, 2025
HomebusinessKarnataka Bank : ಮನೆಯಲ್ಲೇ ಕುಳಿತು ತೆರೆಯಬಹುದು ಹೊಸ ಬ್ಯಾಂಕ್​ ಖಾತೆ : ಕರ್ಣಾಟಕ ಬ್ಯಾಂಕ್​ನಿಂದ...

Karnataka Bank : ಮನೆಯಲ್ಲೇ ಕುಳಿತು ತೆರೆಯಬಹುದು ಹೊಸ ಬ್ಯಾಂಕ್​ ಖಾತೆ : ಕರ್ಣಾಟಕ ಬ್ಯಾಂಕ್​ನಿಂದ ಹೊಸ ಸೌಕರ್ಯ

- Advertisement -

Karnataka Bank : ಬ್ಯಾಂಕ್​ ಖಾತೆಯನ್ನು ತೆರೆಯಬೇಕು ಅಂದರೆ ನೀವು ಏನು ಮಾಡುತ್ತೀರಿ..? ಯಾವ ಬ್ಯಾಂಕ್​ನಲ್ಲಿ ಖಾತೆ ತೆರೆಯಬೇಕು ಎಂದುಕೊಂಡಿದ್ದೀರೋ ಆ ಶಾಖೆಗೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್, ಪಾನ್​ ಕಾರ್ಡ್​ ಹಾಗೂ ಫೋಟೋಗಳನ್ನು ನೀಡಿ ಅಲ್ಲಿನ ಸಿಬ್ಬಂದಿಯ ಸಹಾಯದಿಂದ ಖಾತೆಯನ್ನು ತೆರೆಯುತ್ತೀರಿ. ಆದರೆ ಕರ್ಣಾಟಕ ಬ್ಯಾಂಕ್​ನಲ್ಲಿ ನೀವು ಖಾತೆಯನ್ನು ತೆರೆಯಬೇಕು ಎಂದುಕೊಂಡಿದ್ದರೆ ಇನ್ಮುಂದೆ ನೀವು ಬ್ಯಾಂಕ್​ಗೆ ಅಲೆದಾಡಬೇಕು ಎಂಬ ಪ್ರಮೇಯ ಇರೋದಿಲ್ಲ. ಏಕೆಂದರೆ ಕರ್ಣಾಟಕ ಬ್ಯಾಂಕ್​​​ ಆನ್​ಲೈನ್​​ ಉಳಿತಾಯ ಬ್ಯಾಂಕ್​​ ಖಾತೆ ತೆರೆಯುವ ಸೌಲಭ್ಯವನ್ನು ವಿಡಿಯೋ ಆಧಾರಿತ ಗ್ರಾಹಕರ ಗುರುತಿಸುವಿಕೆ ಪ್ರಕ್ರಿಯೆಯಾದ ವಿ – ಸಿಐಪಿ ಮೂಲಕ ಆರಂಭಿಸಿದೆ. ಅಂದರೆ ನೀವು ಇನ್ಮುಂದೆ ನೀವಿದ್ದ ಸ್ಥಳದಲ್ಲಿಯೇ ಕುಳಿತು ವಿಡಿಯೋ ಕಾಲ್​ ಮಾಡುವ ಮೂಲಕ ಖಾತೆಯನ್ನು ತೆರೆಯಬಹುದಾಗಿದೆ.

ಕರ್ಣಾಟಕ ಬ್ಯಾಂಕ್​ನ ಕಾರ್ಪೋರೇಟ್​ ವೆಬ್​ಸೈಟ್​​​ಗಳಲ್ಲಿ ಈ ಸೌಲಭ್ಯವನ್ನು ಸಕ್ರಿಯಗೊಳಿಸಲಾಗಿದ್ದು ಆನ್​​ಲೈನ್​ ಪ್ರಕ್ರಿಯೆ ಮೂಲಕ ಎಸ್​ಬಿ ಖಾತೆಯನ್ನು ತೆರೆಯಲು ನೀವು ಅನುಕೂಲಕರ ಸ್ಥಳದಲ್ಲಿ ಕುಳಿತು ಬ್ಯಾಂಕ್​ ಸಿಬ್ಬಂದಿ ಜೊತೆಯಲ್ಲಿ ವಿಡಿಯೋ ಕಾಲ್​ ಮಾಡುವ ಮೂಲಕ ನಿಮ್ಮ ಕೆವೈಸಿ ಪೂರ್ಣಗೊಳಿಸಿ ಬ್ಯಾಂಕ್​ ಖಾತೆಯನ್ನು ಹೊಂದಬಹುದಾಗಿದೆ. ಇಂದು ಸಂಪೂರ್ಣ ಕಾಗದ ರಹಿತ ಪ್ರಕ್ರಿಯೆಯಾಗಿದ್ದು ಕರ್ಣಾಟಕ ಬ್ಯಾಂಕ್​​ನ ಅಪ್ಲಿಕೇಶನ್​ ಪ್ರೋಗ್ರಾಮಿಂಗ್​ ಇಂಟರ್ಫೇಸ್​​ ನಿಯಂತ್ರಣದಲ್ಲಿ ನೀವು ಬ್ಯಾಂಕ್​ ಖಾತೆಯನ್ನು ತೆರೆಯಲಿದ್ದೀರಿ. ಇದು ನೀವು ಖಾತೆ ತೆರೆಯಬೇಕಾದ ಅರ್ಜಿಯನ್ನು ಸ್ವಯಂ ತುಂಬಿಕೊಳ್ಳುತ್ತದೆ.

ನಿಮ್ಮ ಪಾನ್​​ ಕಾರ್ಡ್​ ಹಾಗೂ ಆಧಾರ್​ ಸಂಖ್ಯೆಗಳನ್ನು ಪ್ರೋಗ್ರಾಮಿಂಗ್​ ಇಂಟರ್ಫೇಸ್​ ನಿಯಂತ್ರಣವು ತಕ್ಷಣವೇ ಮೌಲ್ಯೀಕರಿಸಲಿದೆ. ಹಾಗೂ ವಿಡಿಯೋ ಕಾಲ್​ ಮಾಡುವ ಮೂಲಕ ನಿಮ್ಮ ಕೆವೈಸಿ ಮಾಹಿತಿಯನ್ನು ಪೂರ್ಣಗೊಳಿಸುತ್ತದೆ. ಇದಾದ ಬಳಿಕ ಕೆಲವೇ ಕ್ಷಣಗಳಲ್ಲಿ ನಿಮ್ಮ ಬ್ಯಾಂಕ್​ ಖಾತೆ ತೆರೆಯಲಿದೆ. ‘

ವಿ – ಸಿಐಪಿ ಮೂಲಕ ಆನ್​ಲೈನ್​ ಎಸ್​ಬಿ ಖಾತೆ ತೆರೆಯುವ ಸೌಕರ್ಯವು ಗ್ರಾಹಕರ ಬ್ಯಾಂಕಿಂಗ್​ ಅನುಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ನಾವು ನಂಬಿದ್ದೇವೆಂದು ಬ್ಯಾಂಕ್​ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಬಲೇಶ್ವರ ಎಂಎಸ್​​ ಹೇಳಿದ್ದಾರೆ.

ಇದನ್ನು ಓದಿ : ಲಂಡನ್‌ನಲ್ಲಿ ಕ್ರಿಸ್ ಗೇಲ್ ಭೇಟಿ ಮಾಡಿದ ಆರ್‌ಸಿಬಿ ಮಾಜಿ ಓನರ್ ವಿಜಯ್ ಮಲ್ಯ

ಇದನ್ನೂ ಓದಿ : Karnataka cricket team : ಕರ್ನಾಟಕ ಕ್ರಿಕೆಟನ್ನು ಹಳ್ಳ ಹಿಡಿಸಿದ್ದು ಇದೇ ವ್ಯಕ್ತಿನಾ ?

Karnataka Bank launches video-based customer identification process for account opening

RELATED ARTICLES

Most Popular