ಉಚಿತ ಬಸ್‌ ಶಕ್ತಿ ಯೋಜನೆ; ಮಹಿಳೆಯರಿಗೆ ಮತ್ತೊಂದು ಭರ್ಜರಿ ಗುಡ್‌ನ್ಯೂಸ್‌ ಕೊಟ್ಟ ಸರಕಾರ

Shakti Yojana Pink Buses  : ಶಕ್ತಿ ಯೋಜನೆಯ ಮೂಲಕ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಈಗಾಗಲೇ 295  ಕೋಟಿ ಮಹಿಳೆಯರು ಕರ್ನಾಟಕ ಸಾರಿಗೆ ಇಲಾಖೆಯ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಈ ನಡುವಲ್ಲೇ ಸರಕಾರ ಮಹಿಳೆಯರಿಗಾಗಿ ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟಿದೆ.

Shakti Yojana Pink Buses  : ಕಾಂಗ್ರೆಸ್‌ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯ ಮೂಲಕ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಈಗಾಗಲೇ 295  ಕೋಟಿ ಮಹಿಳೆಯರು ಕರ್ನಾಟಕ ಸಾರಿಗೆ ಇಲಾಖೆಯ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಈ ನಡುವಲ್ಲೇ ಸರಕಾರ ಮಹಿಳೆಯರಿಗಾಗಿ ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟಿದೆ.

ಪ್ರತೀ ಮಹಿಳೆಯರು ಕೂಡ ಉಚಿತವಾಗಿ ಸರಕಾರಿ ಬಸ್ಸುಗಳಲ್ಲಿ ಪ್ರಯಾಣಿಸಬೇಕು ಅನ್ನೋ ಉದ್ದೇಶದಿಂದಲೇ ಕರ್ನಾಟಕದ ಕಾಂಗ್ರೆಸ್‌ ಸರಕಾರ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಕರ್ನಾಟಕ ಸಾರಿಗೆ ಇಲಾಖೆಯ ನಾಲ್ಕು ವಿಭಾಗದಲ್ಲಿನ ಸಾಮಾನ್ಯ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ.

Karnataka Big Update Good news Shakti Yojana Pink Buses for Women
Image Credit to Original Source

ಶಕ್ತಿ ಯೋಜನೆ ಜಾರಿಯಾಗುತ್ತಿದ್ದಂತೆಯೇ ಸರಕಾರಿ ಬಸ್ಸುಗಳೆಂದ್ರೆ ಮೂಗು ಮುರಿಯುತ್ತಿದ್ದವೂ ಕೂಡ ಬಸ್‌ ಏರಿ ಪ್ರಯಾಣ ಆರಂಭಿಸಿದ್ದರು. ಕೆಲಸಕ್ಕೆ ತೆರಳು ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರಿಗೆ ಈ ಯೋಜನೆ ಸದ್ಯ ವರದಾನವಾಗಿ ಪರಿಣಮಿಸಿದೆ. ಅಷ್ಟೇ ಯಾಕೆ ನಷ್ಟದಲ್ಲಿ ಸಾರಿಗೆ ನಿಗಮದ ಬಸ್ಸುಗಳು ಇದೀಗ ಲಾಭದತ್ತ ಮುನ್ನೆಡೆಯುತ್ತಿವೆ.

ಸ್ತ್ರೀಯರಿಗಾಗಿ ಪ್ರತ್ಯೇಕ ಬಸ್‌

ಹೌದು, ಕರ್ನಾಟಕ ರಾಜ್ಯದಲ್ಲಿ ಸರಕಾರಿ ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆಯಲ್ಲಿ ಬಾರೀ ಏರಿಕೆ ಕಂಡಿದೆ. ಇದೇ ಕಾರಣದಿಂದಲೇ ರಾಜ್ಯ ಸರಕಾರ ಹೊಸ ಯೋಜನೆಯೊಂದನ್ನು ಜಾರಿಗೆ ತರಲು ಮುಂದಾಗಿದೆ. ಸರಕಾರಿ ಬಸ್ಸುಗಳಲ್ಲಿ ನೂಕು ನುಗ್ಗಲು ತಪ್ಪಿಸುವ ಸಲುವಾಗಿಯೇ ಕರ್ನಾಟಕದಲ್ಲಿ ಇನ್ಮುಂದೆ ಮಹಿಳೆಯರಿಗೆ ಪ್ರತ್ಯೇಕ ಬಸ್‌ ರಸ್ತೆಗೆ ಇಳಿಯಲಿವೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಹಣ ಪಡೆಯೋಕೆ ಇನ್ಮುಂದೆ ಈ ಕೆಲಸ ಮಾಡುವುದು ಕಡ್ಡಾಯ

ಬಿಎಂಟಿಸಿ ಈಗಾಗಲೇ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಬಸ್ಸುಗಳನ್ನು ರಸ್ತೆ ಇಳಿಸಿದೆ. ರಾಜ್ಯ ಸರಕಾರ ಈಗಾಗಲೇ ಸಾವಿರಕ್ಕೂ ಅಧಿಕ ಹೊಸ ಬಸ್ಸುಗಳನ್ನು ಬುಕ್‌ ಮಾಡಿದ್ದು, ಮುಂದೆ ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ಮಹಿಳೆಯರು ಪ್ರತ್ಯೇಕವಾಗಿ ಪ್ರಯಾಣಿಸಬಹುದಾಗಿದೆ.

Karnataka Big Update Good news Shakti Yojana Pink Buses for Women
Image Credit to Original Source

ಶಕ್ತಿ ಯೋಜನೆಯಡಿ ಸರಕಾರಿ ಪಿಂಕ್‌ ಬಸ್‌

ಈಗಾಗಲೇ ಪಿಂಕ್‌ ಬಸ್‌ ಯೋಜನೆ ರಾಜ್ಯದಲ್ಲಿ ಜಾರಿಗೆ ಬಂದಿದೆ. ಇದೀಗ ಸರಕಾರ ಮಹಿಳೆಯರಿಗೆ ಪ್ರತ್ಯೇಕ ಬಸ್‌ ವ್ಯವಸ್ಥೆ ಜಾರಿ ಮಾಡಲು ಮುಂದಾಗಿರುವುದರ ಬೆನ್ನಲ್ಲೇ ಮಹಿಳೆಯರ ಬಸ್ಸುಗಳು ಪಿಂಕ್‌ ಬಣ್ಣಕ್ಕೆ ತಿರುಗಲಿವೆ. ಸರಕಾರ ಈಗಾಗಲೇ ಪಿಂಕ್‌ ಬಸ್‌ಗಳನ್ನು ಓಡಿಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ : ಕೇವಲ 50 ರೂ.ಹೂಡಿಕೆ ಮಾಡಿದ್ರೆ 35 ಲಕ್ಷ ರೂ. ಸಿಗುತ್ತೆ : ಅಂಚೆ ಇಲಾಖೆ ಗ್ರಾಮ ಸುರಕ್ಷಾ ಯೋಜನೆ

ನಿತ್ಯವೂ ಸರಕಾರಿ ಬಸ್ಸುಗಳಲ್ಲಿ ಪ್ರಯಾಣಿಸುವ ಸುಮಾರು 60 ರಿಂದ 65 ಲಕ್ಷ ಮಹಿಳೆಯರಿಗಾಗಿ ಪಿಂಕ್‌ ಬಸ್‌ ರಸ್ತೆ ಇಳಿಯಲಿದೆ. ಇದರಿಂದಾಗಿ ನಿತ್ಯವೂ ಕೆಲಸ ಕಾರ್ಯಕ್ಕೆ ತೆರಳುವ ಮಹಿಳೆಯರು ಆರಾಮದಾಯಕವಾಗಿ ಪ್ರಯಾಣಿಸ ಬಹುದಾಗಿದೆ. ಒಟ್ಟಿನಲ್ಲಿ ಸರಕಾರದ ಹೊಸ ಯೋಜನೆಗೆ ಅದ್ಯಾವ ರೀತಿಯಲ್ಲಿ ಮಹಿಳೆಯರು ಸ್ಪಂದಿಸುತ್ತಾರೆ ಅನ್ನೋದನ್ನು ಕಾದುನೋಡಬೇಕಾಗಿದೆ.

ಇದನ್ನೂ ಓದಿ : ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯು 300 ಯೂನಿಟ್ ವಿದ್ಯುತ್‌ ಉಚಿತ : ಕೇಂದ್ರ ಸರಕಾರದಿಂದ ಹೊಸ ಯೋಜನೆ

Karnataka Big Update Good news Shakti Yojana Pink Buses for Women

Comments are closed.