Loan Apps : ಸಾಲ ಕೊಡುವ ಆಪ್‌ಗಳಲ್ಲಿ ಅಸಲಿ ಎಷ್ಟು, ನಕಲಿ ಎಷ್ಟು? ಎಚ್ಚರ ತಪ್ಪಿದರೆ ನಷ್ಟ ನಿಮಗೇ!

ಈಗ ಸ್ಮಾರ್ಟ್‌ಫೋನ್‌ (Smartphone) ಯುಗ. ತಮ್ಮ ಹತ್ತಿರದ ಆತ್ಮೀಯರೊಂದಿಗೆ ಸಂವಹನ ನಡೆಸಲು ಮತ್ತು ಸುತ್ತಲಿನ ಪ್ರಪಂಚದೊಂದಿಗೆ ಸಂಪರ್ಕ ಸಾಧಿಸಲು ಸ್ಮಾರ್ಟ್‌ಫೋನ್‌ ಒಂದು ಸುಲಭ ಮಾರ್ಗ. ವಂಚಕರು ಮುಗ್ಧ ಸ್ಮಾರ್ಟ್‌ಫೋನ್‌ ಬಳಕೆದಾರರನ್ನೇ ಗುರಿಯಾಗಿಸಿಕೊಂಡು ಸುಲಭವಾಗಿ ಅವರ ಹಣವನ್ನು ದೋಚುತ್ತಿದ್ದಾರೆ (Loan Apps). ಹೊಸ ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಅವುಗಳಲ್ಲಿ ಆಪ್‌ ಮುಖಾಂತರ ಸಾಲ ಕೊಡುವ (Loan Apps) ನೆಪವೊಡ್ಡಿ ವಂಚಿಸುವುದು ಒಂದಾಗಿದೆ.

ಇಂದು ಕಡಿಮೆ ಬಡ್ಡಿ ದರದಲ್ಲಿ ಸಾಲದ ಭರವಸೆ ನೀಡುವ ಅನೇಕ ಅಪ್ಲಿಕೇಶನ್‌ಗಳನ್ನು ನಾವು ಇಂಟರ್‌ನೆಟ್‌ನಲ್ಲಿ ಕಾಣಬಹುದು. ಅವುಗಳಲ್ಲಿ ಕೆಲವು ಅಸಲಿ ಮತ್ತು ಇನ್ನು ಕೆಲವು ನಕಲಿ ಆಪ್‌ಗಳಿವೆ. ಇತ್ತೀಚೆಗೆ ಆಪ್‌ಗಳನ್ನು ಉಪಯೋಗಿಸಿ ಹಣ ದೋಚುವ ಘಟನೆಗಳು ಬೆಳಕಿಗೆ ಬಂದಿವೆ. ಅನೇಕ ಜನರು ಈ ವಂಚನೆಗೆ ಬಲಿಯಾಗಿದ್ದಾರೆ ಕೂಡಾ. ಹಾಗಾದರೆ, ಅಸಲಿ ಮತ್ತು ನಕಲಿ ಆಪ್‌ಗಳನ್ನು ಗುರುತಿಸುವುದಾದರು ಹೇಗೆ?

ಸಾಲ ನೀಡುವ ಆಪ್‌ ಡೌನ್‌ಲೋಡ್‌ ಮಾಡುವ ಮೊದಲು:
ಸಾಲ ನೀಡುವ ಆಪ್‌ ಡೌನ್‌ಲೋಡ್‌ ಮಾಡುವ ಮೊದಲು ಅದು ಯಾವ ಬ್ಯಾಂಕ್‌ಗೆ ಸಂಬಂಧ ಪಟ್ಟಿದೆ ಎಂದು ತಿಳಿದುಕೊಳ್ಳಿ. ಬ್ಯಾಂಕಿಂಗ್‌ ಅಲ್ಲದ ಹಣಕಾಸು ಕಂಪನಿಯೇ ಎಂಬುದನ್ನು ಪರಿಶೀಲಿಸಿ. ಯಾವುದೇ ಸಾಲ ನೀಡುವ ಆಪ್‌ಗಳು NBFC ಅಡಿ ನೋಂದಾಯಿಸಲ್ಪಟ್ಟಿರಬೇಕು. ಒಂದುವೇಳೆ ಆಪ್‌ ಯಾವುದೇ ಬ್ಯಾಂಕ್‌ ಸಂಪರ್ಕ ಹೊಂದಿಲ್ಲವಾದರೆ ಆಗ ನೀವು ಎಚ್ಚರವಹಿಸುವುದು ಅಗತ್ಯ.

ಆಪ್‌ ಬಗ್ಗೆ ಮಾಹಿತಿ ಸಂಗ್ರಹಿಸಿ :
ಆಪ್‌ ಮೂಲಕ ಸಾಲ ಪಡೆಯುವ ಮೊದಲು ಅದು ಯಾವ ಕಂಪನಿಗೆ ಸೇರಿದೆ ಎಂದು ತಿಳಿದುಕೊಳ್ಳಿ. ಕಂಪನಿಯ ಟ್ರ್ಯಾಕ್‌ ರೆಕಾರ್ಡ್‌ ಪರಿಶೀಲಿಸಿ. ಅವರ ವೆಬ್‌ಸೈಟ್‌, ಫೋನ್‌ನಂಬರ್‌, ಕಛೇರಿಯ ವಿಳಾಸ ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿಕೊಳ್ಳಿ. ಸಾಲ ಕೊಡುವ ಆಪ್‌ನ ಕಛೇರಿ ಭಾರತದಲ್ಲಿದೆಯೇ ಇದೆಯೇ ಎಂದೂ ಪರೀಕ್ಷಿಸಿ.

ಪ್ಲೇ ಸ್ಟೋರ್‌ ವಿಮರ್ಶೆಗಳನ್ನು ಗಮನಿಸಿ:
ಸಾಲ ನೀಡುವ ಆಪ್‌ ಡೌನ್‌ಲೋಡ್‌ ಮಾಡುವ ಮೊದಲು ಪ್ಲೇ ಸ್ಟೋರ್‌ ನಲ್ಲಿರುವ ವಿಮರ್ಶೆಗಳನ್ನು ಗಮನವಿಟ್ಟು ಓದಿ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾವು ವಿವಿಧ ಆಪ್‌ ಸ್ಟೋರ್‌ಗಳಲ್ಲಿ ಸುಮಾರು 600 ನಕಲಿ ಸಾಲದ ಆಪ್‌ಗಳು ಕಾರ್ಯನಿರ್ವಹಿಸುತ್ತವೆ ಎಂದು ತನ್ನ ವರದಿಯಲ್ಲಿ ಹೇಳಿದೆ.

ಮಾಹಿತಿ ನೀಡುವ ಮೊದಲು ಎಚ್ಚರವಹಿಸಿ:
ನಕಲಿ ಆಪ್‌ಗಳು ಬಳಕೆದಾರರಿಗೆ ಹಲವು ವೈಯಕ್ತಿಕ ಮಾಹಿತಿಗಳನ್ನು ಕೇಳುತ್ತವೆ. ಅವು ನಿಮ್ಮ ವೈಯಕ್ತಿಕ ದತ್ತಾಂಶಗಳು ಸೋರಿಕೆಯಾಗು ಅಪಾಯ ಹೆಚ್ಚಿಸುತ್ತವೆ. ಆದರೆ ಅಸಲಿ ಆಪ್‌ಗಳು ಅಂತಹ ಯಾವುದೇ ಮಾಹಿತಿಯನ್ನು ಕೇಳುವುದಿಲ್ಲ. ಅವು ಅಗತ್ಯವಿರು ಮಾಹಿತಿಯನ್ನ ಮಾತ್ರ ಕೇಳುತ್ತವೆ.

ಇದನ್ನೂ ಓದಿ : Senior Citizens : ಹಿರಿಯ ನಾಗರಿಕರಿಗೆ FDಗಳ ಮೇಲೆ ಹೆಚ್ಚಿನ ಬಡ್ಡಿ!!

ಇದನ್ನೂ ಓದಿ :SUV for less than 5 lakh : 25 ಕಿಲೋಮೀಟರ್‌ ಮೈಲೇಜ್‌ ನೀಡುವ SUV ಕಾರ್‌ ಕೈಗೆಟುಕುವ ಬೆಲೆಯಲ್ಲಿ! ನ್ಯೂ ಎಸ್‌–ಪ್ರಸ್ಸೊ ಬಿಡುಗಡೆ ಮಾಡಿದ ಮಾರುತಿ ಸುಝುಕಿ

(Loan App How to know which loan apps are fake and real)

Comments are closed.