RBI hikes rates : ದೇಶದಲ್ಲಿ ಹಣದುಬ್ಬರವನ್ನು ಹತೋಟಿಗೆ ತರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ದೇಶದ ಜನತೆಗೆ ಶಾಕ್ ನೀಡಿದೆ. ಆರ್ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡುವ ಮೂಲಕ ಶ್ರೀ ಸಾಮಾನ್ಯನ ಜೇಬಿಗೆ ಬರೆ ಏಳೆದಿದೆ. ರೆಪೋ ಮೂಲಾಂಕ ಏರಿಕೆಯಿಂದಾಗಿ ಶೇಕಡಾ 5.4ಕ್ಕೆ ರೆಪೊ ದರ ತಲುಪಿದೆ. ಈ ಹಿಂದೆ ಕೂಡ ಇದೇ ರೀತಿ ಭಾರತೀಯ ರಿಸರ್ವ್ ಬ್ಯಾಂಕ್ ದಿಢೀರ್ ರೆಪೋ ದರ ಏರಿಕೆ ಮಾಡಿತ್ತು.
ಏಪ್ರಿಲ್ ತಿಂಗಳವರೆಗೂ 10 ಬಾರಿ ರೆಪೊ ದರದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ದೇಶದಲ್ಲಿ ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಈ ಹಿಂದೆ ಕೂಡ ಮಹತ್ವದ ನಿರ್ಧಾರವನ್ನು ಕೈಗೊಂಡಿತ್ತು. ಮೇ ತಿಂಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಕೂಡಲೇ ಅನ್ವಯವಾಗುವಂತೆ ಏರಿಕೆ ಮಾಡಿ ಜನತೆಗೆ ಶಾಕ್ ನೀಡಿತ್ತು.
ಮೇ ತಿಂಗಳ ಬಳಿಕ ಜೂನ್ನಲ್ಲಿಯೂ ಮತ್ತೆ ರೆಪೋ ದರವನ್ನು ಏರಿಕೆ ಮಾಡಲಾಗಿತ್ತು. ಜೂನ್ ತಿಂಗಳಲ್ಲಿಯೂ 50 ಮೂಲಾಂಕ ಏರಿಕೆಯಾಗಿದ್ದ ರೆಪೋ ದರ ಶೇಕಡಾ 4.90ಪ್ರತಿಶತ ತಲುಪಿತ್ತು. ಇದೀಗ ಮತ್ತೆ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ 50 ಮೂಲಾಂಕ ಏರಿಕೆ ಮಾಡಿದ್ದು ಶೇಕಡಾ 5.4ಕ್ಕೆ ತಲುಪಿದೆ.
ರೆಪೋ ದರ ಏರಿಕೆಯ ಜೊತೆಯಲ್ಲಿ ಎಂಎಸ್‌ಎಫ್ ಹಾಗೂ ಬ್ಯಾಂಕ್ ದರವನ್ನು ಕೂಡ ಪರಿಷ್ಕರಣೆ ಮಾಡಲಾಗಿದೆ. ಪ್ರಸ್ತುತ ಬ್ಯಾಂಕ್ ದರವು 5.65ಕ್ಕೆ ತಲುಪಿದೆ. ಹೀಗಾಗಿ ಬ್ಯಾಂಕ್ನಲ್ಲಿ ಸಾಲದ ಮೇಲಿನ ಬಡ್ಡಿ ದರ ಹಾಗೂ ಎಫ್ಡಿ ಮೇಲಿನ ದರಗಳು ಏರಿಕೆ ಕಾಣಲಿವೆ. ಆಗಸ್ಟ್ 2019ರ ಬಳಿಕ ಇದೇ ಮೊದಲ ಬಾರಿಗೆ ರೆಪೋ ದರವು ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ಕಂಡಿದೆ. ರೆಪೋ ದರದ ಏರಿಕೆಯಿಂದಾಗಿ ಬ್ಯಾಂಕುಗಳಲ್ಲಿ ರೆಪೋ ಆಧಾರಿತ ಸಾಲದ ಮೇಲಿನ ಬಡ್ಡಿದರಗಳಲ್ಲಿ ಏರಿಕೆ ಉಂಟಾಗಲಿದೆ.
ಏನಿದು ರೆಪೋ..?
ದೇಶದಲ್ಲಿರುವ ವಾಣಿಜ್ಯ ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡುವ ಸಾಲದ ಮೇಲಿನ ಬಡ್ಡಿದರವನ್ನು ರೆಪೋ ಎಂದು ಕರೆಯಲಾಗುತ್ತದೆ. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆ ಉಂಟಾದ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಹಣ ಪಡೆಯುತ್ತವೆ. ಸಾಲ ಪಡೆದ ಹಣಕ್ಕೆ ನೀಡುವ ಬಡ್ಡಿದರವೇ ರೆಪೋ ಆಗಿದೆ. ಹೀಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ ಏರಿಕೆ ಮಾಡಿದಷ್ಟು ಜನತೆಗೆ ಸಾಲದ ಮೇಲಿನ ಬಡ್ಡಿ ದರ ಹೆಚ್ಚುತ್ತಾ ಹೋಗುತ್ತದೆ.
ಇದನ್ನು ಓದಿ : Janotsava in Davangere : ಸಿದ್ಧರಾಮೋತ್ಸವಕ್ಕೆ ಟಕ್ಕರ್ ಕೊಡುತ್ತಾ ಬಿಜೆಪಿ : ದಾವಣಗೆರೆಯಲ್ಲೇ ಜನೋತ್ಸವಕ್ಕೆ ಕಮಲಪಡೆ ಸಜ್ಜು
ಇದನ್ನೂ ಓದಿ : BS Yediyurappa advised Amit Shah : ಸಿದ್ಧರಾಮೋತ್ಸವವನ್ನು ಗಂಭೀರವಾಗಿ ಪರಿಗಣಿಸಿ : ಅಮಿತ್ ಶಾಗೆ ಸಲಹೆ ಕೊಟ್ಟ ಬಿ.ಎಸ್.ಯಡಿಯೂರಪ್ಪ
Loan EMIs to go up after RBI hikes rates by 50 basis points to 5.4%