108 tender Scam : ಐಎಎಸ್ ಅಧಿಕಾರಿ ಪಂಕಜ್ ಪಾಂಡೆ ವಿರುದ್ಧ ತನಿಖೆಗೆ ಹೈಕೋರ್ಟ್ ಸೂಚನೆ

ಬೆಂಗಳೂರು : ಈಗಾಗಲೇ ಬೆಂಗಳೂರಿನ ಮಾಜಿ ಡಿಸಿ ಹಾಗೂ ಐಎಎಸ್ ಅಧಿಕಾರಿ ಮಂಜುನಾಥ್ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದ ಬೆನ್ನಲ್ಲೇ ಈಗ ಇನ್ನೋರ್ವ ಐಎಎಸ್ ಅಧಿಕಾರಿ ಸಂಕಷ್ಟಕ್ಕೆ ಸಿಲುಕಿದ್ದು, ಆರೋಗ್ಯ ಕವಚ ಯೋಜನೆಯಲ್ಲಿ (108 tender Scam) ನೂರಾರು ಕೋಟಿ ಗೋಲ್ ಮಾಲ್ ಆರೋಪ ಹೊತ್ತಿರುವ ಐಎಎಸ್ ಅಧಿಕಾರಿ ಪಂಕಜ್ ಪಾಂಡೆ ವಿರುದ್ಧ ತನಿಖೆಗೆ ಅನುಮತಿ ನೀಡಲು ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಈಗಾಗಲೇ ಆರೋಗ್ಯ ಕವಚ ಹಗರಣದಲ್ಲಿ ಕಿಕ್ ಬ್ಯಾಕ್ ಪಡೆದ ಆರೋಪ ಎದುರಿಸುತ್ತಿರುವ IAS ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ವಿರುದ್ದ ತನಿಖೆಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಸಲ್ಲಿಸಿದ್ದ ದೂರಿನ ವಿಚಾರಣೆ ಬಳಿಕ ಹೈಕೋರ್ಟ್ ಆದೇಶ ಹೊರಡಿಸಿದ್ದು, ಕಳೆದ ಒಂದು ವರ್ಷಗಳಿಂದ ಸರ್ಕಾರ ತನಿಖೆಗೆ ಅನುಮತಿ ನೀಡಿರಲಿಲ್ಲ.

2008-2018 ವರೆಗು ಬಡವರಿಗೆ ಉಚಿತ ಆಂಬ್ಯುಲೆನ್ಸ್ ವ್ಯವಸ್ಥೆ ನೀಡಲು ಸರ್ಕಾರ ಟೆಂಡರ್ ನೀಡಿತ್ತು. ಈ ಆರೋಗ್ಯ ಕವಚ ಯೋಜನೆಯಲ್ಲಿ ಆ್ಯಂಬ್ಯಲೆನ್ಸ್ ನೀಡಲು GVK ಕಂಪನಿಗೆ ಟೆಂಡರ್ ನೀಡಲಾಗಿತ್ತು. 2018 ರಲ್ಲಿ ಟೆಂಡರ್ ಅವಧಿ ಮುಗಿದಿದ್ರು GVK ಕಂಪನಿಗೆ ಅಕ್ರಮವಾಗಿ ಹಣ ಬಿಡುಗಡೆ ಮಾಡಲಾಗಿದೆ. ಕಿಕ್ ಬ್ಯಾಕ್ ಪಡೆದು ಪಂಕಜಕುಮಾರ್ ಪಾಂಡೇ ಆರೋಗ್ಯ ಕವಚ ಯೋಜನೆಯಲ್ಲಿ GVK ಕಂಪನಿಗೆ ನೂರಾರು ಕೋಟಿ ಹಣ ನೀಡಿ ಗೋಲ್ ಮಾಲ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಟೆಂಡರ್ ನಿಯಮ ಉಲ್ಲಂಘನೆ ಮಾಡಿ ನೂರಾರು ಕೋಟಿ ಹಣ ನೀಡಿರೋ ಆರೋಪ ಎದುರಿಸುತ್ತಿರುವ ಅಂದಿನ ಆರೋಗ್ಯ ಇಲಾಖೆ ಕಮೀಷನರ್ ಪಂಕಜ್ ಕುಮಾರ್ ಪಾಂಡೆ ವಿರುದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಸಿಬಿಗೆ ದೂರು ಕೊಟ್ಟಿದ್ದರು. ಈ ದೂರನ್ನು ಆಧರಿಸಿ ಪ್ರಾರ್ಥಮಿಕ ತನಿಖೆ ನಡೆಸಿದ್ದ ಎಸಿಬಿಗೆ ಹಗರಣದ ನಡೆದಿರುವ ಶಂಕೆ‌ವ್ಯಕ್ತಪಡಿಸಿತ್ತು. ಅಲ್ಲದೇ ಮೇಲ್ನೋಟಕ್ಕೆ ಪಂಕಜ್ ಕು‌ಮಾರ್ ಪಾಂಡೆ ಅವ್ಯವಹಾರ ಮಾಡಿ ಹಣ ಬಿಡುಗಡೆ ಮಾಡಿದ್ದು ಕಂಡು ಬಂದಿದೆ ಎಂದಿತ್ತು.

ಈ ಸಂಬಂಧ 17(A) ನಲ್ಲಿ ತನಿಖೆ ನಡೆಸಲು ಅನುಮತಿ ಕೋರಿ ಎಸಿಬಿ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಸರ್ಕಾರ ಅನುಮತಿ ಕೋರಿ ಒಂದು ವರ್ಷವಾದ್ರು ಸರ್ಕಾರ ಅನುಮತಿ‌ ನೀಡಿರಲಿಲ್ಲ. ಸರ್ಕಾರದ ವರ್ತನೆ ವಿರುದ್ಧ ದಿನೇಶ್ ಕಲ್ಲಹಳ್ಳಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮೂರು ತಿಂಗಳಲ್ಲಿ ಅನಮತಿ ನೀಡುವಂತೆ ಸರ್ಕಾರಕ್ಕೆ ಆದೇಶಿಸಿ ಚುರುಕು ಮುಟ್ಟಿಸಿದೆ.

ಇದನ್ನೂ ಓದಿ : car lorry accident 6 died : ಕಾರು -ಲಾರಿ ಭೀಕರ ಅಪಘಾತ : 6 ಮಂದಿ ದುರ್ಮರಣ, ಮುಡಿಕೊಟ್ಟು ಬರುವಾಗ ದುರಂತ

ಇದನ್ನೂ ಓದಿ : BS Yediyurappa advised Amit Shah : ಸಿದ್ಧರಾಮೋತ್ಸವವನ್ನು ಗಂಭೀರವಾಗಿ ಪರಿಗಣಿಸಿ : ಅಮಿತ್ ಶಾಗೆ ಸಲಹೆ ಕೊಟ್ಟ ಬಿ.ಎಸ್.ಯಡಿಯೂರಪ್ಪ

108 tender Scam High Court notice for investigation against IAS officer Pankaj Pandey

Comments are closed.