BS Yediyurappa advised Amit Shah : ಸಿದ್ಧರಾಮೋತ್ಸವವನ್ನು ಗಂಭೀರವಾಗಿ ಪರಿಗಣಿಸಿ : ಅಮಿತ್ ಶಾಗೆ ಸಲಹೆ ಕೊಟ್ಟ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು : (BS Yediyurappa advised Amit Shah) ಮುಂದಿನ ಚುನಾವಣೆಯಲ್ಲೂ ಅಧಿಕಾರದ ಗದ್ದುಗೆ ಹಿಡಿಯುವ ಕನಸಿನಲ್ಲಿರೋ ಬಿಜೆಪಿಗೆ ನಿನ್ನೆ ದಾವಣಗೆರೆ‌ ಯಲ್ಲಿ ನಡೆದ ಸಿದ್ಧರಾಮೋತ್ಸವ ಚಳಿ ನಡುಕ ಮೂಡಿಸಿದೆ. ವೇದಿಕೆ ಕಾರ್ಯಕ್ರಮ, ಕಾರ್ಯಕರ್ತರ ಉತ್ಸಾಹ, ನೆರೆದಿದ್ದ ಜನಸ್ಥೋಮ ಕಂಡು ಕಂಗಾಲಾಗಿರುವ ಬಿಜೆಪಿಗೆ ಇನ್ನೊಂದೆಡೆ ರಾಜ್ಯಕ್ಕೆ ಬಂದಿರೋ ಅಮಿತ್ ಶಾ ಕೂಡ ಕ್ಲಾಸ್ ತೆಗೆದುಕೊಳ್ತಿದ್ದಾರೆ. ಈ ಮಧ್ಯೆ ರಾಜ್ಯ ಬಿಜೆಪಿಯ ಹಿರಿಯ ನಾಯಕ ಬಿಎಸ್ವೈರನ್ನು ಅಮಿತ್ ಶಾ ಭೇಟಿ ಮಾಡಿದ್ದು, ಈ ಭೇಟಿ ವೇಳೆಯೂ ಸಿದ್ಧರಾಮೋತ್ಸವದ ಸಂಗತಿ ಚರ್ಚೆಯಾಗಿದ್ದು ಬಿಎಸ್ವೈ ಬಿಜೆಪಿ ಹಾಗೂ ಹೈಕಮಾಂಡ್ ಗೆ ಸ್ಪಷ್ಟ ಚಿತ್ರಣ ಹಾಗೂ ಎಚ್ಚರಿಕೆ ಎರಡನ್ನು ರವಾನಿಸಿದ್ದಾರಂತೆ.

ಹೌದು ಅದ್ದೂರಿ ಸಿದ್ಧರಾಮೋತ್ಸವ ಕರ್ನಾಟಕದಲ್ಲಿ ಸದ್ದು ಮಾಡುತ್ತಿರುವಾಗಲೇ‌ ಕೇಂದ್ರ ಗೃಹಸಚಿವ ಅಮಿತ್ ಶಾ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಕಾಂಗ್ರೆಸ್ ಬೆಳವಣಿಗೆ ಗಮನಿಸಿದ ಶಾ ಬಿಎಸ್ವೈ ರನ್ನು ಭೇಟಿ ಮಾಡಿದ್ದು ಅರ್ಧ‌ಗಂಟೆಗೂ ಅಧಿಕ ಕಾಲ ಬಿಎಸ್ವೈ ಜೊತೆ ಶಾ ಮಾತುಕತೆ ನಡೆಸಿದ್ದಾರೆ. ಅಮಿತ್ ಶಾ ಗೆ ಬಿಎಸ್ವೈ ಸಿದ್ದರಾಮೋತ್ಸವದ ಪ್ರಾಥಮಿಕ ವರದಿ ನೀಡಿದ್ದು, ವಿವರವಾಗಿ ಯಡಿಯೂರಪ್ಪ ಅಮಿತ್ ಷಾ ಜೊತೆ ಮಾತುಕತೆ ನಡೆಸಿದ್ದಾರಂತೆ. ಈ ವೇಳೆ ಸಿದ್ಧರಾಮೋತ್ಸವದ ಬಗ್ಗೆ ಸ್ಪಷ್ಟವಾಗಿ ಮಾಹಿತಿ ನೀಡಿದ ಮಾಜಿಸಿಎಂ ಬಿಎಸ್ವೈ, ಸಿದ್ದರಾಮೋತ್ಸವ ಸಮಾವೇಶ ಚುನಾವಣಾ ಪ್ರಚಾರದ ದಿಕ್ಕನ್ನ ತೋರಿಸಿದೆ
ಇದನ್ನು ರಾಜ್ಯ ಬಿಜೆಪಿ ಹಾಗೂ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಬೇಕು.

ರಾಜ್ಯದಲ್ಲಿ ಸದ್ಯ ಎರಡು ದಿಕ್ಕಿಗೆ ಮುಖಮಾಡಿರುವ ಸಿದ್ದು ಹಾಗೂ ಡಿಕೆಶಿ ಒಂದೊಮ್ಮೆ ಹೊಂದಾಣಿಕೆಯಿಂದ ಕ್ಯಾಂಪೇನ್ ಮಾಡಿದರೆ ಬಿಜೆಪಿ ಚುನಾವಣೆ ಎದುರಿಸಲು ಬೇರೆ ತಂತ್ರಗಾರಿಕೆ ಮಾಡಬೇಕಾಗುತ್ತದೆ ಎಂದು ಬಿಎಸ್ವೈ ಎಚ್ಚರಿಸಿದ್ದಾರಂತೆ. ಸಿದ್ಧರಾಮೋತ್ಸವ ಕಾರ್ಯಕ್ರಮದಲ್ಲಿ ಸ್ವತಃ ಕಾಂಗ್ರೆಸ್ ಕೂಡ ಆ ಪ್ರಮಾಣದ ಜನರನ್ನ ನಿರೀಕ್ಷೆ ಮಾಡಿರಲಿಲ್ಲ. ಆದರೆ ಕಾರ್ಯಕ್ರಮಕ್ಕೆ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿದೆ. ಹೀಗಾಗಿ ಬಿಜೆಪಿಗೆ ಚುನಾವಣಾ ಹಾದಿ ಸುಲಭವಾಗಿಲ್ಲ. ನಮಗೆ ಪರಿಣಾಮಕಾರಿ ರಾಜಕೀಯ ತಂತ್ರಗಾರಿಕೆ ಅಗತ್ಯ ಇದೆ ಎಂದ ಬಿಎಸ್ವೈ ನೇರವಾಗಿ ಹೇಳಿದ್ದಾರಂತೆ.

ಇನ್ನು ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತರ ಆಕ್ರೋಶ, ನಂತರದ ಬೆಳವಣಿಗೆಗಳ ಬಗ್ಗೆ ಸಂಕ್ಷಿಪ್ತವಾಗಿ ಶಾ ಗೆ ಮಾಹಿತಿ ನೀಡಿರುವ ಯಡಿಯೂರಪ್ಪ ಇದರಿಂದ ಸರ್ಕಾರಕ್ಕೆ ಆದ ಮುಜುಗರ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದ್ದಾರಂತೆ. ಅಮಿತ್ ಶಾ ಕೂಡ ಸಿದ್ಧರಾಮೋತ್ಸದಿಂದ ಕಳವಳಕ್ಕಿಡಾಗಿದ್ದು, ಇದಕ್ಕಾಗಿಯೇ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ವಿವರಣೆ ಪಡೆಯುವ ಮುನ್ನವೇ ಯಡಿಯೂರಪ್ಪ ಅವರಿಂದ ಮಾಹಿತಿ ಪಡೆದಿದ್ದಾರಂತೆ. ಒಟ್ಟಿನಲ್ಲಿ ಸಿದ್ಧರಾಮೋತ್ಸವ ರಾಜ್ಯ ಬಿಜೆಪಿಯಲ್ಲಿ ಇನ್ನಷ್ಟು ರಾಜಕೀಯ ತಂತ್ರಗಾರಿಕೆಯನ್ನು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವನ್ನು ಸಾರಿದೆ ಎನ್ನಲಾಗ್ತಿದೆ.

ಇದನ್ನೂ ಓದಿ : DK Shivakumar hug Siddaramaiah : ಸಿದ್ದರಾಮಯ್ಯ ತಬ್ಬಿಕೊಳ್ಳಲು ಡಿಕೆ ಶಿವಕುಮಾರ್‌ಗೆ ರಾಹುಲ್ ಕೊಟ್ರಾ ಸಲಹೆ : ವೈರಲ್ ವಿಡಿಯೋದಲ್ಲಿ ಬಯಲಾಯ್ತು ಸತ್ಯ

ಇದನ್ನೂ ಓದಿ : Janotsava in Davangere : ಸಿದ್ಧರಾಮೋತ್ಸವಕ್ಕೆ ಟಕ್ಕರ್‌ ಕೊಡುತ್ತಾ ಬಿಜೆಪಿ : ದಾವಣಗೆರೆಯಲ್ಲೇ ಜನೋತ್ಸವಕ್ಕೆ ಕಮಲಪಡೆ ಸಜ್ಜು

BS Yediyurappa advised Amit Shah to take Siddharamotsava seriously

Comments are closed.