LPG Price Hike : ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ ಗ್ಯಾಸ್‌ : 73.5 ರೂ ಹೆಚ್ಚಳ, ಎಷ್ಟಾಗಿದೆ ಗೊತ್ತಾ ಬೆಲೆ

ನವದೆಹಲಿ : ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯ ಬೆನ್ನಲ್ಲೇ ದೇಶದಲ್ಲಿ ಗ್ಯಾಸ್‌ ಬೆಲೆ ಏರಿಕೆ ಬರೆ ಎಳೆದಿದೆ. ಗ್ಯಾಸ್‌ ಸರಬರಾಜು ಸಂಸ್ಥೆಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 73.5 ರೂ. ಹೆಚ್ಚಳ ಮಾಡಿದೆ. ಪರಿಷ್ಕೃತ ದರ ಅಗಸ್ಟ್‌ 1ರಿಂದಲೇ ಜಾರಿಗೆ ಬರಲಿದೆ.

ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆಯಿಂದಾಗಿ ದೆಹಲಿಯಲ್ಲಿ ಗ್ಯಾಸ್‌ ಸಿಲಿಂಡರ್‌ ಬೆಲೆ 1623.00 ರೂಪಾಯಿಗೆ ಮಾರಾಟವಾಗುತ್ತಿದ್ದು, ಮುಂಬೈನಲ್ಲಿ1579.50 ರೂ. ಹೆಚ್ಚಿಸಲಾಗಿದೆ. ಕೊಲ್ಕತ್ತಾದಲ್ಲಿ 1629.00, ಚೆನ್ನೈನಲ್ಲಿ ೧೭೬೧ ರೂಪಾಯಿಗೆ ಏರಿಕೆಯಾಗಿದೆ.

https://kannada.newsnext.live/4-killed-in-helicopter-crash-in-northern-california/

ತೈಲ ಮತ್ತು ಅನಿಲ ಕಂಪನಿಗಳು ಪ್ರತಿ ತಿಂಗಳ 1 ರಂದು ಅಡುಗೆ ಅನಿಲದ ಬೆಲೆಯನ್ನು ಪರಿಷ್ಕರಿಸುತ್ತವೆ. ಆಗಸ್ಟ್ 2021 ರಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್ ದರಗಳು ಬದಲಾಗದೇ ಇದ್ದರೂ, ಜುಲೈ 1 ರಂದು ಬೆಲೆಗಳನ್ನು 25.50 ರೂ. ಜುಲೈನಲ್ಲಿ ಬೆಲೆ ಏರಿಕೆಯಾಗಿದೆ. ಇದರೊಂದಿಗೆ 14.2 ಕೆಜಿ ದೇಶೀಯ ಎಲ್ಪಿಜಿ ಸಿಲಿಂಡರ್ ಬೆಲೆ ಈಗ ದೆಹಲಿಯಲ್ಲಿ 834.50 ರೂ., ಮುಂಬೈನಲ್ಲಿ 834.50 ರೂ., ಕೊಲ್ಕತ್ತಾದಲ್ಲಿ 861 ರೂ. ಮತ್ತು ಚೆನ್ನೈನಲ್ಲಿ 850.50 ರೂ. ಹೆಚ್ಚಳವಾಗಿದೆ.

Comments are closed.