T20 World Cup 2024: ಟಿ20 ವಿಶ್ವಕಪ್’ನಲ್ಲಿ ಸ್ಕಾಟ್ಲೆಂಡ್ ತಂಡಕ್ಕೆ “ನಂದಿನಿ” ಪ್ರಾಯೋಜಕತ್ವ, ಜರ್ಸಿ ಬಿಡುಗಡೆಗೊಳಿಸಿದ ಸ್ಕಾಟ್ಲೆಂಡ್ ಕ್ರಿಕೆಟ್

ಚುಟುಕು ಕ್ರಿಕೆಟ್ ವಿಶ್ವಕಪ್’ನಲ್ಲಿ ಸ್ಕಾಟ್ಕೆಂಡ್ ಪುರುಷರ ತಂಡಕ್ಕೆ ಕರ್ನಾಟಕ ಹಾಲು ಒಕ್ಕೂಟ (Karnataka Milk Federation) ಪ್ರಾಯೋಜಕತ್ವ ವಹಿಸಲಿದೆ. ಟಿ20 ವಿಶ್ವಕಪ್’ನಲ್ಲಿ ಆಡಲಿರುವ ಸ್ಕಾಟ್ಲೆಂಡ್ ಪುರುಷರ ತಂಡದ ಜರ್ಸಿ ಬಿಡುಗಡೆಯಾಗಿದ್ದು, ಎಡ ತೋಳಿನಲ್ಲಿ ನಂದಿನಿ ಹಾಲಿನ ಚಿಹ್ನೆಯಿದೆ.

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ (ICC Men’s T20 World Cup 2024) ಆಡಲಿರುವ ಸ್ಕಾಟ್ಲೆಂಡ್ ಕ್ರಿಕೆಟ್ ತಂಡಕ್ಕೆ ನಮ್ಮ ಕರ್ನಾಟಕದ ನಂದಿನಿ (Nandini) ಹಾಲು ಅಧಿಕೃತ ಸ್ಪಾನ್ಸರ್.

ಚುಟುಕು ಕ್ರಿಕೆಟ್ ವಿಶ್ವಕಪ್’ನಲ್ಲಿ ಸ್ಕಾಟ್ಕೆಂಡ್ ಪುರುಷರ ತಂಡಕ್ಕೆ ಕರ್ನಾಟಕ ಹಾಲು ಒಕ್ಕೂಟ (Karnataka Milk Federation) ಪ್ರಾಯೋಜಕತ್ವ ವಹಿಸಲಿದೆ. ಟಿ20 ವಿಶ್ವಕಪ್’ನಲ್ಲಿ ಆಡಲಿರುವ ಸ್ಕಾಟ್ಲೆಂಡ್ ಪುರುಷರ ತಂಡದ ಜರ್ಸಿ ಬಿಡುಗಡೆಯಾಗಿದ್ದು, ಎಡ ತೋಳಿನಲ್ಲಿ ನಂದಿನಿ ಹಾಲಿನ ಚಿಹ್ನೆಯಿದೆ.

T20 world cup 2024: nandini as the official sponsor for scotland team
Image credit to original source

“2024ರ ಐಸಿಸಿ ಟಿ20 ವಿಶ್ವಕಪ್’ನಲ್ಲಿ ಸ್ಕಾಟ್ಲೆಂಡ್ ಕ್ರಿಕೆಟ್ ತಂಡಕ್ಕೆ “ನಂದಿನಿ”ಯನ್ನು ಅಧಿಕೃತ ಸ್ಪಾನ್ಸರ್ ಎಂದು ಘೋಷಿಸುತ್ತಿರುವುದಕ್ಕೆ ಕ್ರಿಕೆಟ್ ಸ್ಕಾಟ್ಲೆಂಡ್ ಮತ್ತು ಕರ್ನಾಟಕ ಮಿಲ್ಕ್ ಫೆಡರೇಷನ್ ಸಂತಸ ಪಡುತ್ತದೆ” ಎಂದು ಕ್ರಿಕೆಟ್ ಸ್ಕಾಟ್ಲೆಂಡ್ ಟ್ವೀಟ್ ಮಾಡಿದೆ.

ಐಸಿಸಿ ಟಿ20 ವಿಶ್ವಕಪ್-2024 ಟೂರ್ನಿ ಜೂನ್ 2ರಂದು ಆರಂಭವಾಗಲಿದೆ. ಈ ಬಾರಿಯ ಚುಟುಕು ವಿಶ್ವಕಪ್’ಗೆ ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ಆತಿಥ್ಯ ವಹಿಸಲಿವೆ. ಫೈನಲ್ ಪಂದ್ಯ ಜೂನ್ 29ರಂದು ವೆಸ್ಟ್ ಇಂಡೀಸ್’ನ ಬ್ರಿಡ್ಜ್’ಟೌನ್’ನಲ್ಲಿ ನಡೆಯಲಿದೆ.

ಬಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಸ್ಕಾಟ್ಲೆಂಡ್ ತಂಡ ಜೂನ್ 4ರಂದು ಬ್ರಿಡ್ಜ್’ಟೌನ್’ನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಬಿ ಗುಂಪಿನಲ್ಲಿ ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ಜೊತೆ ಓಮನ್, ನಮೀಬಿಯಾ ಮತ್ತು ಆಸ್ಟ್ರೇಲಿಯಾ ತಂಡಗಳು ಸ್ಥಾನ ಪಡೆದಿವೆ.

T20 world cup 2024: nandini as the official sponsor for scotland team
Image credit to original source

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಟಿ20 ವಿಶ್ವಕಪ್’ನಲ್ಲಿ ಜೂನ್ 5ರಂದು ತನ್ನ ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಜೂನ್ 9ರಂದು ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ, ಕೆನಡಾ, ಅಮೆರಿಕ ಮತ್ತು ಐರ್ಲೆಂಡ್ ತಂಡಗಳ ಜೊತೆ ಗ್ರೂಪ್ ’ಎ’ನಲ್ಲಿ ಸ್ಥಾನ ಪಡೆದಿದೆ.

ಇದನ್ನೂ ಓದಿ: Dhoni Meets CISF Soldiers: RCB ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸೈನಿಕರನ್ನು ಭೇಟಿ ಮಾಡಿದ ಧೋನಿ!

ಐಸಿಸಿ ಟಿ20 ವಿಶ್ವಕಪ್ 2024: ಭಾರತದ ಲೀಗ್ ಪಂದ್ಯಗಳ ವೇಳಾಪಟ್ಟಿ (ICC Men’s T20 World Cup 2024)

ಜೂನ್ 05: ಭಾರತ Vs ಐರ್ಲೆಂಡ್ (ನ್ಯೂಯಾರ್ಕ್, ರಾತ್ರಿ 7.30ಕ್ಕೆ)

ಜೂನ್ 09: ಭಾರತ Vs ಪಾಕಿಸ್ತಾನ (ನ್ಯೂಯಾರ್ಕ್, ರಾತ್ರಿ 8ಕ್ಕೆ)

ಜೂನ್ 12: ಭಾರತ Vs ಅಮೆರಿಕ (ನ್ಯೂಯಾರ್ಕ್, ರಾತ್ರಿ 8ಕ್ಕೆ)

ಜೂನ್ 15: ಭಾರತ Vs ಕೆನಡಾ (ಲಾಡರ್’ಹಿಲ್, ರಾತ್ರಿ 8ಕ್ಕೆ)

Comments are closed.