LPG Subsidy : ಎಲ್‌ಪಿಜಿ ಸಬ್ಸಿಡಿ, ಹೊಸ ನಿಯಮ ಪ್ರಕಟಿಸಿದ ಸರಕಾರ

ನವದೆಹಲಿ : ಎಲ್‌ಪಿಜಿ ಸಿಲಿಂಡರ್‌ ಸಬ್ಸಿಡಿಗೆ (LPG Subsidy)ಸಂಬಂಧಿಸಿದಂತೆ ಸರಕಾರದ ಹೊಸ ನಿಯಮ ಪ್ರಕಟಿಸಿದೆ. ಎಲ್‌ಪಿಜಿ ಸಿಲಿಂಡರ್‌ ಬೆಲೆ ಸದ್ಯದಲ್ಲಿಯೇ 1000ಕ್ಕೆ ತಲುಪಲಿದೆ ಎಂಬ ಚರ್ಚೆಗಳು ನಡೆಯುತ್ತಿರುವ ಹೊತ್ತಲಲೇ ಎಲ್‌ಪಿಜಿ ಸಿಲಿಂಡರ್‌ ಹಣದುಬ್ಬರ ಏರುತ್ತಿರುವ ಬಗ್ಗೆ ಸರಕಾರ ಹೊಸ ನಿಯಮ ಜಾರಿಗೆ ಮುಂದಾಗಿದೆ.

ಎಲ್‌ಪಿಜಿ ಸಿಲಿಂಡರ್‌ಗಳ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ನಿಯಮಗಳನ್ನು ಜಾರಿಗೆ ತರಲಿದೆ. ಒಂದು ಸರಕಾರ ಸಬ್ಸಿಡಿ ರಹಿತ ಸಿಲಿಂಡರ್‌ಗಳನ್ನು ಪೂರೈಸಬೇಕು. ಇಲ್ಲಾ ಕೆಲವು ಆಯ್ದ ಗ್ರಾಹಕರು ಸಹ ಸಬ್ಸಿಡಿಯ ಲಾಭವನ್ನು ನೀಡಬೇಕು. ಅನುದಾನ ನೀಡುವ ಬಗ್ಗೆ ಸರಕಾರ ಇದುವರೆಗೆ ಯಾವುದೇ ಸ್ಪಷ್ಟ ನಿಲುವನ್ನು ಕೈಗೊಂಡಿಲ್ಲ. ಸದ್ಯದ ಮಾಹಿತಿಯ ಪ್ರಕಾರ 10 ಲಕ್ಷ ಆದಾಯ ಎಂಬ ನಿಯಮ ಜಾರಿಯಲ್ಲಿದ್ದು, ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಹಾಯಧನದ ಲಾಭ ದೊರೆಯಲಿದೆ.

ಉಳಿದ ಜನರಿಗೆ ಸಬ್ಸಿಡಿ ಕೊನೆಗೊಳ್ಳುವ ಸಾಧ್ಯತೆಯಿದೆ. ಕಳೆದ ಹಲವು ತಿಂಗಳುಗಳಿಂದ ಎಲ್‌ಪಿಜಿ ಮೇಲಿನ ಸಬ್ಸಿಡಿಯನ್ನು ಸ್ಥಗಿತಗೊಳಿಸಲಾಗಿದೆ. ಕೊರೊನಾ ವೈರಸ್‌ ಸೋಂಕಿನ ಆರ್ಭಟದ ವೇಳೆಯಲ್ಲಿಅಂರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಹಾಗೂ ಅಡುಗೆ ಅನಿಲದ ಬೆಲೆಗಳಲ್ಲಿ ನಿರಂತರವಾಗಿ ಕುಸಿತವನ್ನು ಕಂಡಿತ್ತು. ದೇಶದಾದ್ಯಂತ ಇದುವರೆಗೆ ಸಂಪೂರ್ಣವಾಗಿ ಸಬ್ಸಿಡಿ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿಲ್ಲ. ಜನವರಿ 2015 ರಲ್ಲಿ ಎಲ್‌ಪಿಜಿ ಸಬ್ಸಿಡಿ ವ್ಯವಸ್ಥೆಯನ್ನು ಸರಕಾರ ಜಾರಿಗೆ ತಂದಿತ್ತು. ಇದರ ಅಡಿಯಲ್ಲಿ ಗ್ರಾಹಕರು ಸಬ್ಸಿಡಿ ರಹಿತ ಎಲ್‌ ಪಿಜಿ ಸಿಲಿಂಡರ್‌ನ ಪೂರ್ಣ ಮೊತ್ತವನ್ನು ಪಾವತಿ ಮಾಡಬೇಕು. ನಂತರದಲ್ಲಿ ಗ್ರಾಹಕರ ಖಾತೆಗಳಿಗೆ ಸಬ್ಸಿಡಿ ಹಣವನ್ನು ಸರಕಾರ ವರ್ಗಾವಣೆ ಮಾಡುತ್ತಿತ್ತು.

ಡಿಬಿಟಿಎಲ್‌ ( DBTL ) ಯೋಜನೆಯ ಅನ್ವಯ ಸಬ್ಸಿಡಿ ಹಣವನ್ನು ನೇರವಾಗಿ ಗ್ರಾಹಕರ ಖಾತೆಗಳಿಗೆ ಸರಕಾರ ಪಾವತಿಯನ್ನು ಮಾಡುತ್ತದೆ. ಈ ಮರುಪಾವತಿ ನೇರವಾಗಿ ಬ್ಯಾಂಕ್‌ ಖಾತೆಗೆ ಆಗುವುದರಿಂದ ಗ್ರಾಹಕರಿಗೆ ಅನುಕೂಲವಾಗಿತ್ತು. ಸೆಪ್ಟೆಂಬರ್ 1 ರಂದು ಸರ್ಕಾರವು ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 25 ರೂ.ಗಳಷ್ಟು ಹೆಚ್ಚಿಸಿತ್ತು. ಗೃಹ ಬಳಕೆಯ14.2 ಕೆಜಿ ಸಿಲಿಂಡರ್ ಗಳ ಮೇಳೆ ದರ ಏರಿಕೆ ಮಾಡಿರುವುದರಿಂದ ದೆಹಲಿಯಲ್ಲಿ ಸಿಲಿಂಡರ್‌ ಬೆಲೆಯಲ್ಲಿ 884.50 ರೂ.ಗೆ ಏರಿಕೆಯಾಗಿತ್ತು. ಪ್ರಸ್ತುತ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ಮುಂಬೈನಲ್ಲಿ 884.50 ಮತ್ತು ಚೆನ್ನೈನಲ್ಲಿ 900.50 ರೂ.ಇದೆ. ಶೀಘ್ರದಲ್ಲಿಯೇ ಗ್ಯಾಸ್‌ ಸಿಲಿಂಡರ್‌ ಬೆಲೆಯಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : Pay CM campaign: ಕರಾವಳಿ ಭಾಗದಲ್ಲಿ ಜೋರಾಗಿದೆ ಪೇ ಸಿಎಂ ಅಭಿಯಾನ

ಇದನ್ನೂ ಓದಿ :October Bank Holidays 2022 : ಗ್ರಾಹಕರ ಗಮನಕ್ಕೆ ; ಅಕ್ಟೋಬರ್‌ನಲ್ಲಿ 21 ದಿನ ಬ್ಯಾಂಕ್‌ ರಜೆ

LPG Subsidy government announced new rules

Comments are closed.