Again Raid On PFI: ಸೇಡು ತೀರಿಸಿಕೊಳ್ಳಲು ಸ್ಕೆಚ್.. PFI ಮೇಲೆ ಮತ್ತೆ ರೇಡ್

ದೆಹಲಿ : Again Raid On PFI ಕಳೆದವಾರ ನಡೆದ ನಡೆದ ಎನ್ಐಎ ಮೆಗಾ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಸಜ್ಜಾಗಿದೆ ಅನ್ನೋ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಮತ್ತೆ ಪಿಎಫ್ಐ ಸಂಘಟನೆ ಮೇಲೆ ಎನ್ಐಎ ಮತ್ತು ಸ್ಥಳೀಯ ಪೊಲೀಸರು ದಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶ, ಮಧ್ಯಪ್ರದೇಶ, ಆಸ್ಸಾಂ, ಗುಜರಾತ್, ದೆಹಲಿ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದೇಶದ 7 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಎನ್ಐಎ ಅಧಿಕಾರಿಗಳು, ಇಡಿ ಹಾಗೂ ಸ್ಥಳೀಯ ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಫಿಎಫ್ಐ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸುತ್ತಿದ್ದ ಸುಮಾರು 170ಕ್ಕೂ ಹೆಚ್ಚು ಪಿಎಫ್ಐ ಸದಸ್ಯರನ್ನ ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ ಅಂತಾ ಗೊತ್ತಾಗಿದೆ.

ಕಳೆದ ಗುರುವಾರ ಎನ್ಐಎ ದೇಶಾದ್ಯಂತ ಮೆಗಾ ರೇಡ್ ನಡೆಸಿತ್ತು. ಕರ್ನಾಟಕದ ಬೆಂಗಳೂರು, ಮಂಗಳೂರು, ಕಲಬುರಗಿ, ಸೇರಿದಂತೆ ದೇಶದ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪಿಎಫ್ಐ ಸಂಘಟನೆ ಮತ್ತದರ ಸದಸ್ಯರ ನಿವಾಸಗಳ ಮೇಲೆ ದಾಳಿ ನಡೆಸಿ 45ಜನರನ್ನ ಬಂಧಿಸಿತ್ತು. ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿ ಹೊತ್ತಿದ್ದ ನೂರಾರು ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಎನ್ಐಎ ನಡೆಸಿದ ದಾಳಿಯಿಂದ ಪಿಎಫ್ಐ ಸಂಘಟನೆ ಸದಸ್ಯರು ಸಿಟ್ಟಿಗೆದ್ದು ಪ್ರತಿಭಟನೆ ನಡೆಸಿದ್ರು. ಅಲ್ದೆ ಕೇಂದ್ರ ಗುಪ್ತಚರ ಇಲಾಖೆ ಆಘಾತಕಾರಿ ಮಾಹಿತಿಯನ್ನ ಹೊರಗೆಡವಿತ್ತು. ಎನ್ಐಎ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಪಿಎಫ್ಐ ಸಂಘಟನೆ ಸಜ್ಜಾಗಿತ್ತು. ದೇಶಾದ್ಯಂತ ಪ್ರತಿಭಟನೆ ನಡೆಸಲು, ವಿಧ್ವಂಸಕ ಕೃತ್ಯಗಳನ್ನ ನಡೆಸಲು ಹೊಂಚು ಹಾಕಿತ್ತು ಅಂತಾ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಅಲ್ದೆ, RSS ಮತ್ತು ಸರ್ಕಾರಿ ಸಂಸ್ಥೆಗಳ ಮೇಲೆ ಪಿಎಫ್ಐ ದಾಳಿ ನಡೆಸಲು ಪ್ಲ್ಯಾನ್ ರೂಪಿಸುತ್ತಿದೆ ಅಂತಾ ಇಂಟೆಲಿಜೆನ್ಸ್ ಮಾಹಿತಿ ನೀಡಿತ್ತು. ಇದೀಗ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಎನ್ಐಎ, ಇಡಿ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತೆ ದೇಶದ 7ಕ್ಕೂ ರಾಜ್ಯದಲ್ಲಿ ದಾಳಿ ನಡೆಸಿ ಹಲವರನ್ನ ವಶಕ್ಕೆ ಪಡೆದಿದೆ.

ಕರ್ನಾಟಕದಲ್ಲೂ ಹಲವೆಡೆ ದಾಳಿ : ರಾಜ್ಯದ ಹಲವೆಡೆಯೂ ಎನ್ಐಎ ದಾಳಿ ನಡೆಸಿದೆ. ಬೆಳಗಾವಿಯಲ್ಲಿ ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ಬೆಳಗ್ಗೆ 4 ಗಂಟೆಗೆ ಪಿಎಫ್ಐ ಮುಖಂಡರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಎನ್ಐಎ ದಾಳಿ ಖಂಡಿಸಿ ಪಿಎಫ್ಐ ಜಿಲ್ಲಾಧ್ಯಕ್ಷ ನವೀದ್ ಕಟಗಿ ನೇತೃತ್ವದಲ್ಲಿ ಬೆಳಗಾವಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇನ್ನು ಕೋಲಾರದಲ್ಲೂ ಪೊಲೀಸರು ಪಿಎಫ್ಐ ಮುಖಂಡರ ನಿವಾಸದ ಮೇಲೆ ದಾಳಿ ನಡೆಸಿದ್ದು, ಆರು ಜನರನ್ನ ವಶಕ್ಕೆ ಪಡೆಯಲಾಗಿದೆ ಅಂತಾ ಮಾಹಿತಿ ಸಿಕ್ಕಿದೆ. ಕೋಲಾರದ ಶಾಹಿಂದ್ ಷಾ ನಗರ ಸೇರಿದಂತೆ ವಿವಿಧೆಡೆಯಲ್ಲಿ, ಪಿಎಫ್ಐ ಮುಖಂಡರ ಮನೆ ಮೇಲೆ ದಾಳಿ ನಡೆದಿದೆ.

ಇದನ್ನೂ ಓದಿ: LPG Subsidy : ಎಲ್‌ಪಿಜಿ ಸಬ್ಸಿಡಿ, ಹೊಸ ನಿಯಮ ಪ್ರಕಟಿಸಿದ ಸರಕಾರ

Again Raid On PFI At least 170 Held amid Raids in Seven States over Inputs on Violent Stir

Comments are closed.