LPG ಸಿಲಿಂಡರ್ ಬೆಲೆ, ಬ್ಯಾಂಕ್ ಸಾಲ, ರೈಲು ವೇಳಾಪಟ್ಟಿ : ಮಾರ್ಚ್ 1 ರಿಂದ ಪ್ರಮುಖ ನಿಯಮಗಳಲ್ಲಿ ಬದಲಾವಣೆ

ನವದೆಹಲಿ : ಸರಕಾರ ತಮ್ಮ ಆರ್ಥಿಕ ಮತ್ತು ವಿತ್ತೀಯ ನೀತಿಗಳನ್ನು ಆಗಾಗ್ಗೆ ಪರಿಷ್ಕರಿಸುತ್ತಾರೆ. ಬೆಲೆ ಏರಿಳಿತಕ್ಕೆ ಕೆಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಫೆಬ್ರವರಿ 1 ರಂದು ಕೇಂದ್ರ ಬಜೆಟ್ ನಡೆದಿದ್ದು, ಕೆಲವು ಹೊಸ ನಿಯಮಗಳು ಮಾರ್ಚ್ ನಿಂದ ಜಾರಿಗೆ ಬರಲಿದೆ. ಕೆಲವು ನಮ್ಮ ಕುಟುಂಬದ ಬಜೆಟ್‌ಗೆ ಹೊರೆಯಾಗಬಹುದು, ಕೆಲವು ಬದಲಾವಣೆಗಳು ನಮ್ಮ ಹೊರೆಯನ್ನು ಕಡಿಮೆ ಮಾಡಬಹುದು. ನಿಮ್ಮ ಸಾಮಾಜಿಕ ಜೀವನದ ಮೇಲೆ ಏನಾದರೂ ಪರಿಣಾಮ ಬೀರಬಹುದಾಗಿದೆ. ಎಲ್‌ಪಿಜಿ ಸಿಲಿಂಡರ್ ಬೆಲೆ, ಬ್ಯಾಂಕ್ ಸಾಲ, ಸಾಮಾಜಿಕ ಮಾಧ್ಯಮ ನಿಯಮಗಳು, ರೈಲು ವೇಳಾಪಟ್ಟಿ ಇತ್ಯಾದಿಗಳಲ್ಲಿ ಮಾರ್ಚ್ 1 ರಿಂದ ಕೆಲವು ಪ್ರಮುಖ ಬದಲಾವಣೆಗಳ (Major Rules Changes) ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಜಾಗೃತಿ ವಹಿಸಿ :
ಕೇಂದ್ರ ಸರಕಾರ ಇತ್ತೀಚೆಗೆ ಐಟಿ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್, ಇನ್‌ಸ್ಟಾಗ್ರಾಮ್ ಇತ್ಯಾದಿಗಳು ಕೇಂದ್ರ ಸರಕಾರದ ನಿಯಮಗಳಿಗೆ ಬದ್ಧವಾಗಿರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ನಾವು ಹಾಕುವ ಪೋಸ್ಟ್‌ಗಳು ಧಾರ್ಮಿಕ ಭಾವನೆಗಳನ್ನು ಕೆರಳಿಸಿದರೆ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಸುಳ್ಳು ಮಾಹಿತಿ ಹರಡುವವರಿಗೆ ದಂಡ ವಿಧಿಸಬಹುದು. ಇದು ಮಾರ್ಚ್ 1 ರಿಂದ ಜಾರಿಗೆ ಬರಲಿದೆ.

ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ :
ಎಲ್‌ಪಿಜಿ, ಸಿಎನ್‌ಜಿ ಮತ್ತು ಪಿಎನ್‌ಜಿ ಗ್ಯಾಸ್‌ನ ಬೆಲೆಯು ಮಾರ್ಚ್ 1 ತಿಂಗಳಿನಲ್ಲಿ ಬದಲಾಗಲಿದ್ದು, ಸಾಮಾನ್ಯ ಜನರ ಅಗತ್ಯವಾಗಿರುವ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಮಾರ್ಚ್ ತಿಂಗಳಲ್ಲಿ ಹೆಚ್ಚಾಗಲಿದೆ ಎಂದು ವರದಿ ಆಗಿದೆ. ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಪ್ರತಿ ತಿಂಗಳ ಆರಂಭದಲ್ಲಿ ಪರಿಷ್ಕರಿಸಲಾಗುತ್ತದೆ. ಫೆಬ್ರವರಿಯಲ್ಲಿ ಬೆಲೆ ಏರಿಕೆ ಆಗಿರಲಿಲ್ಲ. ಮಾರ್ಚ್ ತಿಂಗಳಲ್ಲಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ, ಸಿಎನ್‌ಜಿ ಮತ್ತು ಪಿಎನ್‌ಜಿ ಗ್ಯಾಸ್ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ.

ಬ್ಯಾಂಕ್ ಸಾಲ ದುಬಾರಿ :
ಆರ್‌ಬಿಐ ಇತ್ತೀಚೆಗೆ ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಅದರಂತೆ ಬಹುತೇಕ ಬ್ಯಾಂಕ್‌ಗಳು ತಮ್ಮ ಬಡ್ಡಿದರವನ್ನು ಹೆಚ್ಚಿಸಿವೆ. ಠೇವಣಿಗಳಿಗೆ ಹೆಚ್ಚಿನ ಬಡ್ಡಿ ಸಿಗುತ್ತಿದೆ. ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ಇದು ಪ್ರಯೋಜನಕಾರಿಯಾಗಿದೆ. ಅದೇ ರೀತಿ ಸಾಲದ ಮೇಲಿನ ಬಡ್ಡಿ ದರವೂ ಹೆಚ್ಚಿದೆ. ಇದರಿಂದಾಗಿ ಸಾಲದ ಇಎಮ್‌ಐ ಗಳ ಪ್ರಮಾಣ ಹೆಚ್ಚಾಗಿದೆ. ಗೃಹ ಸಾಲ ಪಡೆದವರಿಗೆ ಹೊರೆಯಾಗುತ್ತಿದೆ. ಮಾರ್ಚ್ ತಿಂಗಳಲ್ಲಿ ವಿವಿಧ ಹಬ್ಬಗಳ ಕಾರಣ 12 ದಿನಗಳ ಕಾಲ ಬ್ಯಾಂಕ್ ಗಳು ರಜೆ ಇರುತ್ತದೆ. ಇದರಲ್ಲಿ ನಾಲ್ಕು ಭಾನುವಾರ ಮತ್ತು ಎರಡು ಶನಿವಾರ ರಜೆಗಳು ಸೇರಿವೆ.

ಇದನ್ನೂ ಓದಿ : ಎಫ್‌ಡಿ ಬಡ್ಡಿದರಗಳು : ಅಂಚೆ ಕಚೇರಿಗಿಂತ ಸಣ್ಣ ಹಣಕಾಸು ಬ್ಯಾಂಕ್ ಉತ್ತಮ

ಇದನ್ನೂ ಓದಿ : ಪಿಂಚಣಿದಾರರ ಗಮನಕ್ಕೆ : ಇಪಿಎಫ್‌ಒ ಹೆಚ್ಚಿನ ಪಿಂಚಣಿ ಆಯ್ಕೆಗೆ ಮೇ 3ಕ್ಕೆ ವಿಸ್ತರಣೆ

ರೈಲು ವೇಳಾಪಟ್ಟಿ:
ಬೇಸಿಗೆ ರಜೆ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ತನ್ನ ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಿದೆ. ಮಾರ್ಚ್ 1 ರಿಂದ 5,000 ಸರಕು ಸಾಗಣೆ ರೈಲುಗಳ ವೇಳಾಪಟ್ಟಿ ಬದಲಾಗಲಿದೆ. ಅಂತೆಯೇ ಸಾವಿರಾರು ಪ್ಯಾಸೆಂಜರ್ ರೈಲುಗಳ ವೇಳಾಪಟ್ಟಿಯೂ ಬದಲಾಗಲಿದೆ. ಫೆಬ್ರವರಿ 28 ರಂದು ರೈಲ್ವೆ ಇಲಾಖೆ ಈ ಬದಲಾವಣೆಗಳನ್ನು ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ.

Major Rules Changes : LPG cylinder price, bank loan, train schedule : Change in major rules from March 1

Comments are closed.