Chhattisgarh woman dies: 30 ನಿಮಿಷಗಳ ಕಾಲ ಕಾಡು ಹಂದಿಯೊಂದಿಗೆ ಸೆಣೆಸಾಡಿ ಮಗಳನ್ನು ರಕ್ಷಿಸಿದ ಮಹಿಳೆ ಸಾವು

ಛತ್ತೀಸ್‌ ಗಢ: (Chhattisgarh woman dies) 45 ವರ್ಷದ ಮಹಿಳೆಯೊಬ್ಬರು ತನ್ನ 11 ವರ್ಷದ ಮಗಳನ್ನು ರಕ್ಷಿಸಲು ಕಾಡು ಹಂದಿಯೊಂದಿಗೆ ಹೋರಾಡಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಪಸನ್ ಅರಣ್ಯ ಪ್ರದೇಶದ ತೆಲಿಯಮಾರ್ ಗ್ರಾಮದಲ್ಲಿ ನಡೆದಿದೆ. ದುವ್ಸಿಯಾ ಬಾಯಿ (45 ವರ್ಷ) ಮೃತ ಮಹಿಳೆ.

ಮಹಿಳೆ ದುವ್ಸಿಯಾ ಬಾಯಿ ಮತ್ತು ಆಕೆಯ ಮಗಳು ರಿಂಕಿ ಜಮೀನಿನಲ್ಲಿ ಕೆಲಸಕ್ಕೆ ಹೋಗಿದ್ದರು ಈ ವೇಳೆ ಅಲ್ಲಿ ಕಾಡು ಹಂದಿ ರಿಂಕಿ ಮೇಲೆ ದಾಳಿ ಮಾಡಿದೆ. ಇದನ್ನು ಕಂಡ ದುವ್ಸಿಯಾ ಬಾಯಿ ತನ್ನ ಮಗಳನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಕಾಡುಪ್ರಾಣಿಯೊಂದಿಗೆ ಹೋರಾಟಕ್ಕೆ ಇಳಿದಳು. ಮಹಿಳೆ ಹೋರಾಟ ಮುಂದುವರಿಸಿದ್ದು, ಸುಮಾರು ಅರ್ಧ ಗಂಟೆಗಳ ಕಾಲ ಹೋರಾಟ ನಡೆಸಿದ್ದಾರೆ.

ದುರದೃಷ್ಟವಶಾತ್, ದುವ್ಸಿಯಾ ಬಾಯಿ ಹೋರಾಟದಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡಳು. ಆದರೆ ಅವಳು ಕಾಡು ಪ್ರಾಣಿಯನ್ನು ಸಹ ಕೊಂದು ತನ್ನ ಮಗಳನ್ನು ದಾಳಿಯಿಂದ ರಕ್ಷಿಸಿದಳು. ಕಾಡುಹಂದಿಯ ದಾಳಿಗೆ ಗಾಯಗೊಂಡ ರಿಂಕಿ ಗ್ರಾಮದ ಕಡೆಗೆ ಓಡಿ ಬಂದು ಎಲ್ಲರಿಗೂ ಮಾಹಿತಿ ನೀಡಿದ್ದಾಳೆ. ಕೂಡಲೇ ಸ್ಥಳಕ್ಕೆ ಗ್ರಾಮಸ್ಥರು ಜಮಾಯಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಅರಣ್ಯ ಇಲಾಖೆ ಹಾಗೂ ಪೋಲೀಸರು ಸ್ಥಳಕ್ಕೆ ಆಗಮಿಸಿದ್ದು, ರಿಂಕಿ ಅವರನ್ನು ಚಿಕಿತ್ಸೆಗಾಗಿ ಪಸನ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಘಟನೆ ವಿರುದ್ದ ಕ್ರಮ ಕೈಗೊಂಡಿದ್ದಾರೆ. ಧೈರ್ಯ ಮತ್ತು ತಾಯಿಯ ಪ್ರೀತಿಯ ಪ್ರತೀಕವಾಗಿ ಈ ಘಟನೆ ನಡೆದಿದ್ದು, ಮಗಳನ್ನು ರಕ್ಷಿಸುವ ಸಲುವಾಗಿ ತನ್ನ ಜೀವವನ್ನೇ ಪಣಕ್ಕಿಟ್ಟ ತಾಯಿಯ ತ್ಯಾಗ ಅಪಾರವಾದದ್ದು.

ಇದನ್ನೂ ಓದಿ : Father murdered son: ಹೆಬ್ರಿ: ಕುಡಿದ ಮತ್ತಿನಲ್ಲಿ ರಂಪಾಟ ಮಾಡುತ್ತಿದ್ದ ಮಗನ ಕೊಲೆಗೈದ ತಂದೆ

ತನ್ನ ಮಕ್ಕಳು ಅಪಾಯದಲ್ಲಿದ್ದಾಗ ಅವರನ್ನು ರಕ್ಷಿಸಲು ತಾಯಿ ಏನು ಬೇಕಾದರೂ ಮಾಡಬಲ್ಲಳು ಎನ್ನುವುದಕ್ಕೆ ಇದೊಂದು ಸಾಕ್ಷಿ. ಇದಕ್ಕೆ ಹೇಳುವುದಲ್ಲವೇ ತಾಯಿಯೋರ್ವಳು ತ್ಯಾಗಮಯಿ, ಕರುಣಾಮಯಿಯೆಂದು.

ಇದನ್ನೂ ಓದಿ : ಆಸ್ತಿ ವಿಚಾರವಾಗಿ ಪತ್ನಿ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಇದನ್ನೂ ಓದಿ : ರೋಗಿಯನ್ನು ಹೊತ್ತೊಯ್ಯುತ್ತಿದ್ದ ಏರ್‌ ಲಿಫ್ಟ್ ವಿಮಾನ ಪತನ: 5 ಮಂದಿ ಸಾವು

Chhattisgarh woman dies: Woman dies after fighting with wild boar for 30 minutes to save daughter

Comments are closed.