ಸೋಮವಾರ, ಏಪ್ರಿಲ್ 28, 2025
Homebusinessಮಾರಾಟಕ್ಕಿದೆ ಮೆಟ್ರೋ ಕ್ಯಾಶ್‌ ಆಂಡ್‌ ಕ್ಯಾರಿ : ಖರೀದಿಗೆ ಸಿದ್ದ ಎಂದ ರಿಲಾಯನ್ಸ್, ಟಾಟಾ ಗ್ರೂಪ್

ಮಾರಾಟಕ್ಕಿದೆ ಮೆಟ್ರೋ ಕ್ಯಾಶ್‌ ಆಂಡ್‌ ಕ್ಯಾರಿ : ಖರೀದಿಗೆ ಸಿದ್ದ ಎಂದ ರಿಲಾಯನ್ಸ್, ಟಾಟಾ ಗ್ರೂಪ್

- Advertisement -

ನವದೆಹಲಿ : ಕೊರೋನಾ ಬಳಿಕ ನಷ್ಟದತ್ತ ಮುಖಮಾಡಿರುವ ಉದ್ಯಮಗಳು ಬಾಗಿಲು ಮುಚ್ಚುವ ಸ್ಥಿತಿ ತಲುಪುತ್ತಿವೆ. ಈ ಪೈಕಿ ಅತ್ಯಂತ ಕಡಿಮೆ‌ ದರದಲ್ಲಿ ಗುಣಮಟ್ಟದ ವಸ್ತುಗಳನ್ನು ಒದಗಿಸುವ ಖ್ಯಾತಿ ಹೊಂದಿರುವ ಮೆಟ್ರೋ ಕ್ಯಾಶ್ ಅ್ಯಂಡ್ ಕ್ಯಾರಿ ಸಗಟು ಮಾರಾಟ ವ್ಯವಸ್ಥೆ ತನ್ನ ವ್ಯಾಪಾರೋದ್ಯಮವನ್ನು ಮಾರಾಟಕ್ಕಿಟ್ಟಿದೆ. ಹೀಗಾಗಿ ಮೆಟ್ರೋ ಕ್ಯಾಶ್ ಕ್ಯಾರಿ (Metro Cash & Carry) ಉದ್ಯಮ‌ ಖರೀದಿಗೆ ಭಾರತದ ಎರಡು ದೈತ್ಯ ಸಂಸ್ಥೆಗಳಾಗಿರುವ ರಿಲಾಯನ್ಸ್ ಹಾಗೂ ಟಾಟಾ ಗ್ರೂಪ್ ಗಳು ಮೆಟ್ರೋ ಖರೀದಿಗೆ ಉತ್ಸುಕರಾಗಿದ್ದಾರೆ ಎನ್ನಲಾಗ್ತಿದೆ.

ಮೆಟ್ರೋ ಕ್ಯಾಶ್ ಕ್ಯಾರಿ (Metro Cash & Carry) ಭಾರತದಾದ್ಯಂತ ಒಟ್ಟು 31 ಮಳಿಗೆಗಳನ್ನು ಹೊಂದಿದೆ. ಈ ಪೈಕಿ ಕರ್ನಾಟಕದ ಬೆಂಗಳೂರಿನಲ್ಲೇ ಹಲವು ದೈತ್ಯ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. 2003 ರಿಂದ ಭಾರತದಲ್ಲಿ ವ್ಯಾಪಾರ ಆರಂಭಿಸಿದ ಮೆಟ್ರೋ (Metro Cash & Carry) ಗುಣಮಟ್ಟದ ವಸ್ತುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವ ಮೂಲಕ ಜನಮನ್ನಣೆ ಗಳಿಸಿತ್ತು. ಆದರೆ ಈಗ ಸ್ಪರ್ಧೆಯಲ್ಲಿ ಉಳಿದುಕೊಳ್ಳಲು ಹಾಗೂ ಗುಣಮಟ್ಟ ಕಾಯ್ದುಕೊಳ್ಳಲು ಹೆಚ್ಚಿನ ಪ್ರಮಾಣದ ಹೂಡಿಕೆ ನೀರಿಕ್ಷಿಸುತ್ತಿದ್ದು, ಅದು ಸಾಧ್ಯವಾಗದ ಕಾರಣ ಮೆಟ್ರೋ ಕ್ಯಾಶ್ ಕ್ಯಾರಿ ಮಾರಾಟಕ್ಕೆ ನಿರ್ಧರಿಸಲಾಗಿದೆ.

ಸದ್ಯ ಮೆಟ್ರೋದ ಮಾರಾಟ ಬೆಲೆ 1.5 -1.75 ಬಿಲಿಯನ್ ಡಾಲರ್. ಬೆನ್ ಕೋ ಸಂಸ್ಥೆ ವಿವರವಾದ ಮಾಹಿತಿ ನೀಡಿದ ಬಳಿಕ ತಮ್ಮ ವ್ಯಾಪಾರವನ್ನು ಕೊಂಡುಕೊಳ್ಳಲು ಖರೀದಿದಾರರನ್ನು ಹುಡುಕುವ ಹೊಣೆಗಾರಿಕೆಯನ್ನು ಜೆಪಿಮಾರ್ಗನ್ ಹಾಗೂ ಗೋಲ್ಡ್ ಮನ್ ಸ್ಯಾಷ್ ಗೆ ವಹಿಸಿದೆ. ಮೆಟ್ರೋ‌ ಮಳಿಗೆಗಳ ಖರೀದಿಗೆ ವಿಶ್ವದ ಅತಿದೊಡ್ಡ ಚಿಲ್ಲರೆ ವ್ಯಾಪಾರ ಸಂಸ್ಥೆ ಅಮೆಜಾನ್,ಥೈಲ್ಯಾಂಡ್ ನ ಅತಿದೊಡ್ಡ ವ್ಯಾಪಾರ ಸಂಸ್ಥೆ ಚರೋಯೆನ್ ಪೋಕ್ಫಾಂಡ್ ,ಅವೆನ್ಯೂ ಸೂಪರ್ ಮಾರ್ಟ್ಸ್,ಟಾಟಾ ಗ್ರೂಪ್, ಲುಲು ಗ್ರೂಪ್ ,ಪಿಇ ಪಂಡ್ ಸಮಾರಾ ಕ್ಯಾಪಿಟಲ್ ಸಂಸ್ಥೆಗಳು ಆಸಕ್ತಿ ವಹಿಸಿವೆ ಎನ್ನಲಾಗ್ತಿದೆ. ಇದರ ಜೊತೆಗೆ ರಿಲಾಯನ್ಸ್ ಮತ್ತು ಟಾಟಾ ಗ್ರೂಪ್ ಗಳು ಸ್ಪರ್ಧೆಯಲ್ಲಿವೆ.

ಸದ್ಯ ಮೆಟ್ರೋ ಉತ್ತಮ‌ ಆದಾಯ ಗಳಿಸುತ್ತಿದೆ. 2021 ನೇ ಆರ್ಥಿಕ ವರ್ಷದಲ್ಲಿ ಮೆಟ್ರೋ 898 ಮಿಲಿಯನ್ ಡಾಲರ್ ಆದಾಯ ಗಳಿಸಿದ್ದು,2022 ರಲ್ಲಿ ಈ ಮೊತ್ತ ಒಂದು ಬಿಲಿಯನ್ ಡಾಲರ್ ಗೆ ತಲುಪುವ ನೀರಿಕ್ಷೆ ಇದೆ. ಆದರೆ ರಿಲಯನ್ಸ್ ಮತ್ತು ಉಡಾನ್ ನಂತಹ ಸಂಸ್ಥೆಯ ತೀವ್ರ ಸ್ಪರ್ಧೆಯಿಂದ ಮೆಟ್ರೋ ಸಂಕಷ್ಟಕ್ಕೆ ಸಿಲುಕಿದ್ದು, ಹೂಡಿಕೆದಾರರ ಕೊರತೆಯಿಂದ ಮಾರಾಟಕ್ಕೆ ಸಿದ್ಧವಾಗಿದೆ.

ಇದನ್ನು ಓದಿ : Price History ‘ಪ್ರೈಸ್ ಹಿಸ್ಟರಿ’ ಎಂಬ ಆನ್‌ಲೈನ್ ಶಾಪಿಂಗ್ ಮಾರ್ಗದರ್ಶಿ

ಇದನ್ನೂ ಓದಿ : Axis Bank Increases MCLR Rates : ಆಕ್ಸಿಸ್ ಬ್ಯಾಂಕ್ ಗ್ರಾಹಕರಿಗೆ ಶಾಕ್‌, ದುಬಾರಿಯಾಗಲಿದೆ ಗೃಹ, ವಾಹನ ಸಾಲ EMI

Metro Cash & Carry For Sale, Ready to buy Reliance Tata Group

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular