Pension Scheme ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ

ಹಿರಿಯ ನಾಗರಿಕರು ಮೊದಲೆಲ್ಲ ನಿವೃತ್ತಿ ಹೊಂದಿದ ಬಳಿಕ ಪಿಂಚಣಿ ಹಣವನ್ನು ಪಡೆಯಲು ಜಿಲ್ಲಾ ಮತ್ತು ತಾಲ್ಲೂಕು ಕಛೇರಿಗೆ ತಿಂಗಳುಗಟ್ಟಲೆ ಅಲೆದಾಡ ಬೇಕಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಪಿಂಚಣಿಯನ್ನು ನೀಡಲು ಒಂದು ಹೊಸ ಯೋಚನೆಯನ್ನು ಜಾರಿಗೊಳಿಸಿದೆ. ಆ ಯೋಜನೆಯ ಪ್ರಕಾರ ಕುದ್ದು ಅಧಿಕಾರಿಗಳೇ ಮನೆ ಬಾಗಿಲಿಗೆ ಭೇಟಿ ಮಾಡಿ ಅರ್ಜಿ ಸ್ವೀಕರಿಸಿ ಪಿಂಚಣಿ ಬಿಡುಗಡೆ ಮಾಡುತ್ತಾರೆ. ಆದರೆ ಈ ರೀತಿ ಪಿಂಚಣಿಯನ್ನು ಪಡೆಯಲು ಕೆಲವು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.


ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳೆಂದರೆ
ಹಾಗಾದರೆ ಆ ಪ್ರಮುಖ ವಿಷಯಗಳು ಯಾವುದು ಎಂದು ನೋಡುವುದಾದರೆ ಕುಟುಂಬದ ವಾರ್ಷಿಕ ಆದಾಯ ರೂ . ೩೨,೦೦೦ ಕ್ಕಿಂತ ಕಡಿಮೆ ಇರುವ ವೃದ್ಧರು, ವಿಶೇಷ ಚೇತನರು, ವಿಧವೆಯರು ಹಾಗೂ ಅವಿವಾಹಿತ ಅಥವಾ ವಿಚ್ಚೇದಿತ ಮಹಿಳೆಯರು ಮಾಸಿಕ ಪಿಂಚಣಿ ಸೌಲಭ್ಯಕ್ಕಾಗಿ ಶುಲ್ಕರಹಿತ ಸಂಖ್ಯೆ ೧೫೫೨೪೫ ಕ್ಕೆ ಉಚಿತವಾಗಿ ದೂರವಾಣಿ ಕರೆ ಮಾಡುವುದರ ಮೂಲಕ ಆಧಾರ್ ಸಂಖ್ಯೆ ಒದಗಿಸಿ ಪಿಂಚಣಿ ಸೌಲಭ್ಯ ಕೋರಿಕೆ ಸಲ್ಲಿಸಬಹುದಾಗಿದೆ. ಆಗ ಅಲ್ಲಿಯ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿದಾರರ ಮನೆಬಾಗಿಲಿಗೆ ಭೇಟಿ ನೀಡಿ ‘ನವೋದಯ’ ಮೊಬೈಲ್ ಆಪ್ ಮೂಲಕ ಅರ್ಜಿದಾರರಿಂದ ಮಾಹಿತಿ ಹಾಗೂ ದಾಖಲಾತಿಗಳನ್ನು ಸಂಗ್ರಹ ಮಾಡುತ್ತಾರೆ.


ಅರ್ಜಿಗೆ ಬೇಕಾದ ದಾಖಲೆಗಳು
ಗ್ರಾಮ ಲೆಕ್ಕಾಧಿಕಾರಿಗಳು ಮನೆಗೆ ಭೇಟಿ ನೀಡಿದಾಗ ಅರ್ಜಿದಾರರು ಸಲ್ಲಿಸಬೇಕಾದ ದಾಖಲೆಗಳೆಂದರೆ ಆಧಾರ್ ಕಾರ್ಡ್, ವಿಳಾಸ ಮತ್ತು ವಯಸ್ಸಿಗೆ ಸಂಬಂಧಿಸಿದ ದಾಖಲಾತಿ (ಪಡಿತರ ಚೀಟಿ, ಚುನಾವಣೆ ಗುರುತಿನ ಚೀಟಿ ಅಥವಾ ಸರ್ಕಾರ ವಿತರಿಸಿದ ಗುರುತಿನ ಚೀಟಿ), ಬ್ಯಾಂಕ್ ಅಂಚೆ ಖಾತೆ ವಿವರದ ಪ್ರತಿ, ಅಲ್ಲದೇ ಅಲ್ಲಿಯೇ ಮೊಬೈಲ್ ಆಪ್ ಮೂಲಕ ಭಾವಚಿತ್ರ ಸೆರೆಹಿಡಿಯಲಾಗುತ್ತದೆ. ಅರ್ಹರಿಗೆ ೭೨ ಗಂಟೆಯೊಳಗೆ ನಾಡ ಕಚೇರಿ ಉಪ ತಹಸೀಲ್ದಾರರಿಂದ ಪಿಂಚಣಿ ಮಂಜೂರಾತಿ ಅನುಮೋದನೆಯಾಗುತ್ತದೆ. ಈ ರೀತಿ ಕೇಂದ್ರ ಸರ್ಕಾರದ ಪ್ರಾಯೋಜಿತ ಎನ್‌ಎನ್‌ಎಪಿ ಯೋಜನೆಯಡಿ ವೃದ್ಧರು, ವಿಶೇಷ ಚೇತನರು, ವಿಧವೆಯರು ಸೇರಿದಂತೆ ಒಟ್ಟು ೧೩.೯೮ ಲಕ್ಷ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡುವ ಮೂಲಕ ಮಾಸಿಕ ಪಿಂಚಣಿ ಸೌಲಭ್ಯ ನೀಡುತ್ತದೆ. ಈ ನೂತನ ಯೋಜನೆಯಿಂದಾಗಿ ಕಡಿಮೆ ಸಮಯದಲ್ಲಿ ವೇಗವಾಗಿ ಪಿಂಚಣಿ ಕೈಸೇರಲು ಸಾಧ್ಯವಾಗುತ್ತದೆ.


ಇದನ್ನೂ ಓದಿ: Shishileshwara Temple god fish : ಇಲ್ಲಿ ಬಂದರೆ ಚರ್ಮರೋಗ ಮಾಯ : ಮೀನುಗಳ ರೂಪದಲ್ಲಿ ಕಾಯುತ್ತಾನೆ ಶಿವ

ಇದನ್ನೂ ಓದಿ: Parenting Tips : ನಿಮ್ಮ ಮಕ್ಕಳು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದಾರೆಯೇ?

Pension Scheme to Door Step

Comments are closed.