ಹೊಸ ವರ್ಷ 2024ನೇ ಸಾಲಿನ ಸರಕಾರಿ, ಶಾಲಾ ರಜೆ ಪಟ್ಟಿ ಪ್ರಕಟ

Holiday List 2024 : 52 ಭಾನುವಾರಗಳು, 21 ಸಾಮಾನ್ಯ ರಜಾದಿನಗಳು, 15 ಸಾಂದರ್ಭಿಕ ರಜಾದಿನಗಳು ಮತ್ತು 2 ಸೀಮಿತ ರಜಾದಿನಗಳು, 5 ಸ್ಥಳೀಯ ರಜಾದಿನಗಳು ಒಟ್ಟು 95 ರಜಾದಿನಗಳು ಮತ್ತು 271 ಕೆಲಸದ ದಿನಗಳು

Holiday List 2024 : ಹೊಸ ವರ್ಷ ಆರಂಭಗೊಂಡಿದೆ. ಹೊಸ ವರ್ಷದ ಕ್ಯಾಲೆಂಡರ್‌ ಬದಲಾಗಿದೆ. ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆಯೇ ಈ ವರ್ಷ ಎಷ್ಟು ದಿನಗಳ ಕಾಲ ರಜೆ ಇರಲಿದೆ ಅನ್ನೋದನ್ನು ಪ್ರತಿಯೊಬ್ಬರೂ ಕೂಡ ಲೆಕ್ಕ ಹಾಕುತ್ತಾರೆ. ಹಾಗಾದ್ರೆ ಈ ಬಾರಿ ಎಷ್ಟು ದಿನ ಶಾಲೆಗಳಿಗೆ, ಸಾರ್ವಜನಿಕ ರಜೆ ಇರಲಿದೆ ಎಂಬ ಮಾಹಿತಿಯನ್ನು ನೋಡೋಣಾ.

ಹೊಸ ವರ್ಷದಲ್ಲಿ ಒಟ್ಟು 52 ಭಾನುವಾರಗಳು, 21 ಸಾಮಾನ್ಯ ರಜಾದಿನಗಳು, 15 ಸಾಂದರ್ಭಿಕ ರಜಾದಿನಗಳು ಮತ್ತು 2 ಸೀಮಿತ ರಜಾದಿನಗಳು, 5 ಸ್ಥಳೀಯ ರಜಾದಿನಗಳು ಒಟ್ಟು 95 ರಜಾದಿನಗಳು ಹಾಗೂ ವರ್ಷದಲ್ಲಿ 271 ಕೆಲಸದ ದಿನಗಳು ಮಾತ್ರ.

New Year 2024 government and school holiday list published
Image Credit to Original Source

ಬ್ಯಾಂಕ್ ಉದ್ಯೋಗಿಗಳ ರಜಾದಿನಗಳು : 2024 ಅಧಿಕ ವರ್ಷವಾಗಿದೆ ಆದ್ದರಿಂದ 366 ದಿನಗಳು ಇರಲಿದೆ. 52 ಭಾನುವಾರಗಳು, 24 ಎರಡನೇ ಮತ್ತು ನಾಲ್ಕನೇ ಶನಿವಾರಗಳು, 21 ಸಾರ್ವಜನಿಕ ರಜಾದಿನಗಳು, 12 ಉದ್ಯೋಗಿಗಳಿಗೆ ವೈಯಕ್ತಿಕ ರಜಾದಿನಗಳು ಸೇರಿದಂತೆ ಒಟ್ಟು 109 ರಜೆಗಳಿವೆ. ಕೆಲಸದ ದಿನಗಳು ಕೇವಲ 257. ಜನವರಿಯಲ್ಲಿ ಬ್ಯಾಂಕ್ ಉದ್ಯೋಗಿಗಳಿಗೆ 13, 14 ಮತ್ತು 15 ಮೂರು ದಿನಗಳ ಹ್ಯಾಟ್ರಿಕ್ ರಜೆ ಲಭ್ಯವಿದೆ.

ಫೆಬ್ರವರಿಯಲ್ಲಿ 29 ದಿನಗಳು ಇದ್ದರೂ, ಯಾವುದೇ ಸಾರ್ವಜನಿಕ ರಜೆ ಇಲ್ಲ. ಮಾರ್ಚ್‌ನಲ್ಲಿ 8,9,10 ದಿನಾಂಕಗಳು ಬ್ಯಾಂಕ್ ಉದ್ಯೋಗಿಗಳಿಗೆ ಮತ್ತೊಂದು ಹ್ಯಾಟ್ರಿಕ್ ರಜಾದಿನವಾಗಿದೆ. ಮಾರ್ಚ್ 29 ಗುಡ್ ಫ್ರೈಡೆ ರಜೆ ಮತ್ತು ಮಾರ್ಚ್ 30 ರಂದು ಶನಿವಾರ ಸೀಮಿತ ರಜೆಯಾಗಿದ್ದರೆ, ನೌಕರರು ಭಾನುವಾರ 31 ಸೇರಿದಂತೆ 3 ದಿನಗಳ ರಜೆ ಪಡೆಯಬಹುದು.

ಇದನ್ನೂ ಓದಿ : ಯುವನಿಧಿ ಯೋಜನೆ ನೋಂದಣಿ ಆರಂಭ : ಯುವನಿಧಿ ಟೋಲ್ ಫ್ರೀ ಸಂಖ್ಯೆ 1800 599 9918ಗೆ ಕರೆ ಮಾಡಿ

ಏಪ್ರಿಲ್ 9 ರಂದು ಯುಗಾದಿ ಮತ್ತು 11 ರಂದು ರಂಜಾನ್. ಈ ನಡುವೆ, 10 ಮತ್ತು 12 ರಂದು ಸಾಂದರ್ಭಿಕ ರಜೆ, 13 ನೇ 2 ನೇ ಶನಿವಾರ 5 ದಿನಗಳ ದೀರ್ಘ ರಜೆ ಸೇರಿದಂತೆ ನೀಡಲಾಗುತ್ತದೆ. 14 ಮತ್ತು 21 ಭಾನುವಾರಗಳು ಕ್ರಮವಾಗಿ ಅಂಬೇಡ್ಕರ್ ಜಯಂತಿ ಮತ್ತು ಮಹಾವೀರ ಜಯಂತಿ ಆಗಿರುವುದರಿಂದ 2 ರಜೆಗಳು ಕಡಿಮೆ ಮತ್ತು 2 ಕೆಲಸದ ದಿನಗಳು ಹೆಚ್ಚು. ಜೂನ್‌ನಲ್ಲಿ, ಮುಸ್ಲಿಂ ನೌಕರರು 17 ರಂದು 1 ಕ್ಯಾಶುಯಲ್ ರಜೆ ತೆಗೆದುಕೊಂಡರೆ, ಅವರು 16, 17 ಮತ್ತು 18 ರಂದು ಮೂರು ದಿನ ರಜೆ ಪಡೆಯಬಹುದು.

ಸೆಪ್ಟಂಬರ್‌ನಲ್ಲಿ ಸ್ವರ್ಣಗೌರಿ ವ್ರತಕ್ಕೆ ಸೆಪ್ಟಂಬರ್‌ 6ರಂದು ಸೀಮಿತ ರಜೆ ನೀಡಲಾಗಿದ್ದು, ಸೆಪ್ಟಂಬರ್‌ 7 ರಂದು ಗಣೇಶ ಚತುರ್ಥಿ ರಜೆ ಇದ್ದು, ಸೆಪ್ಟಂಬರ್‌ 8ನೇ ಭಾನುವಾರದವರೆಗೆ ರಜೆ ಇರುವುದರಿಂದ ಮಹಿಳಾ ನೌಕರರು 3 ದಿನಗಳ ಹಬ್ಬ ಆಚರಿಸಬಹುದು. ಸೆಪ್ಟಂಬರ್‌ 14, ಸೆಪ್ಟಂಬರ್‌ 15 ಮತ್ತು ಸೆಪ್ಟಂಬರ್‌16 ರಂದು ಬ್ಯಾಂಕ್ ಉದ್ಯೋಗಿಗಳಿಗೆ ಮತ್ತೊಂದು ಹ್ಯಾಟ್ರಿಕ್ ರಜೆ ಸಿಗಲಿದೆ.

ಇದನ್ನೂ ಓದಿ : UPI ಗ್ರಾಹಕರ ಗಮನಕ್ಕೆ ! ಈ ಕೆಲಸ ಮಾಡದಿದ್ರೆ ರದ್ದಾಗಲಿದೆ ನಿಮ್ಮ ಯುಪಿಐ ಐಡಿ

ಅಕ್ಟೋಬರ್‌ನಲ್ಲಿ 11, 12 ಮತ್ತು 13 ಸರಣಿ ರಜೆಗಳಿವೆ. ಅಕ್ಟೋಬರ್‌ 12 ಎರಡನೇ ಶನಿವಾರ ವಿಜಯದಶಮಿಯ ಸಾರ್ವತ್ರಿಕ ರಜೆ. ಅಕ್ಟೋಬರ್ 31 ನರಕ ಚತುರ್ದಶಿ, ನವೆಂಬರ್ 1 ರಾಜ್ಯೋತ್ಸವ, 2ನೇ ಬಲಿಪಾಡ್ಯಮಿ, 3ನೇ ಭಾನುವಾರ ರಜೆ.

New Year 2024 government and school holiday list published
Image Credit to Original Source

2024 ರ ಸರಕಾರಿ ರಜಾದಿನಗಳ ಪಟ್ಟಿ:

ಜನವರಿ 15, ಸೋಮವಾರ- ಮಕರ ಸಂಕ್ರಾಂತಿ

ಜನವರಿ 26, ಶುಕ್ರವಾರ – ಗಣರಾಜ್ಯೋತ್ಸವ

ಮಾರ್ಚ್ 8, ಶುಕ್ರವಾರ- ಮಹಾ ಶಿವರಾತ್ರಿ

ಮಾರ್ಚ್ 29, ಶುಕ್ರವಾರ – ಶುಭ ಶುಕ್ರವಾರ

ಏಪ್ರಿಲ್ 9, ಮಂಗಳವಾರ- ಯುಗಾದಿ

ಏಪ್ರಿಲ್ 11, ಗುರುವಾರ- ರಂಜಾನ್

ಮೇ 1, ಬುಧವಾರ – ಕಾರ್ಮಿಕರ ದಿನ

ಮೇ 10, ಶುಕ್ರವಾರ- ಬಸವ ಜಯಂತಿ/ ಅಕ್ಷಯ ತೃತೀಯ

ಜೂನ್ 17, ಸೋಮವಾರ- ಬಕ್ರೀದ್

ಜುಲೈ 17, ಬುಧವಾರ- ಮೊಹರಂ ಕೊನೆಯ ದಿನ

ಆಗಸ್ಟ್ 15, ಗುರುವಾರ – ಸ್ವಾತಂತ್ರ್ಯ ದಿನ

ಸೆಪ್ಟೆಂಬರ್ 7, ಶನಿವಾರ- ವರಸಿಧಿ ವಿನಾಯಕ ವ್ರತ

ಸೆಪ್ಟೆಂಬರ್ 16, ಸೋಮವಾರ- ಈದ್ ಮಿಲಾದ್

ಅಕ್ಟೋಬರ್ 2, ಬುಧವಾರ- ಗಾಂಧಿ ಜಯಂತಿ/ಮಹಾಲಯ ಅಮವಾಸ್ಯೆ

ಅಕ್ಟೋಬರ್ 11, ಶುಕ್ರವಾರ- ಮಹಾನವಮಿ/ ಆಯುಧಪೂಜೆ

ಇದನ್ನೂ ಓದಿ : ಹೊಸವರ್ಷ ದಿನಭವಿಷ್ಯ ಜನವರಿ 1 2024 : ಹೇಗಿದೆ ದ್ವಾದಶ ರಾಶಿಗಳ ಇಂದಿನ ರಾಶಿಫಲ

ಅಕ್ಟೋಬರ್ 17, ಗುರುವಾರ- ಮಹರ್ಷಿ ವಾಲ್ಮೀಕಿ ಜಯಂತಿ

ಅಕ್ಟೋಬರ್ 31, ಗುರುವಾರ- ನರಕ ಚತುರ್ದಶಿ

ನವೆಂಬರ್ 1, ಶುಕ್ರವಾರ- ಕನ್ನಡ ರಾಜ್ಯೋತ್ಸವ

ನವೆಂಬರ್ 2, ಶನಿವಾರ- ಬಲಿಪಾಡ್ಯಮಿ, ದೀಪಾವಳಿ

ನವೆಂಬರ್ 18, ಸೋಮವಾರ- ಕನಕದಾಸ ಜಯಂತಿ

ಡಿಸೆಂಬರ್ 25, ಬುಧವಾರ – ಕ್ರಿಸ್ಮಸ್

ಅಂಬೇಡ್ಕರ್ ಜಯಂತಿ (14.4.2024) ಮತ್ತು ಮಹಾವೀರ ಜಯಂತಿ (21.04.2024) ಭಾನುವಾರಗಳಾಗಿದ್ದು, ಸೌರ ವಿಜಯ ದಶಮಿ (12.10.2024) 2ನೇ ಶನಿವಾರದಂದು ರಜೆಯ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. 1.4.2024 ಬ್ಯಾಂಕ್‌ಗಳು ಮತ್ತು ಸರ್ಕಾರಿ ಬ್ಯಾಂಕ್‌ಗಳ ವಾರ್ಷಿಕ ಮುಚ್ಚುವ ದಿನವಾಗಿರುವುದರಿಂದ, ಆ ದಿನ ವಾಣಿಜ್ಯ ಮತ್ತು ಸರ್ಕಾರಿ ಬ್ಯಾಂಕ್‌ಗಳಿಗೆ ಮಾತ್ರ ರಜೆ ಇರುತ್ತದೆ.

New Year 2024 government and school holiday list published

Comments are closed.