ಹೊಸವರ್ಷ ದಿನಭವಿಷ್ಯ ಜನವರಿ 1 2024 : ಹೇಗಿದೆ ದ್ವಾದಶ ರಾಶಿಗಳ ಇಂದಿನ ರಾಶಿಫಲ

New Year 2024 Horoscope Today : ಹೊಸವರ್ಷ ದಿನಭವಿಷ್ಯ  ಜನವರಿ 1 2024 ಸೋಮವಾರ. ಹೊಸ ವರ್ಷದ ಮೊದಲ ದಿನದಂದು ದ್ವಾದಶ ರಾಶಿಗಳ ಮೇಲೆ ಫಲ್ಗುಣಿ ನಕ್ಷತ್ರದ ಪ್ರಭಾವ ಇರುತ್ತದೆ. ಅಲ್ಲದೇ ಕನ್ಯಾರಾಶಿಯಲ್ಲಿ ಚಂದ್ರನು ಸಾಗುತ್ತಾನೆ. ಸಿಂಹ ರಾಶಿ ಹಾಗೂ ಕರ್ಕಾಟಕ ರಾಶಿಯವರು ಅಧಿಕ ಹಣಕಾಸಿನ ಲಾಭವನ್ನು ಪಡೆಯುತ್ತಾರೆ.

New Year 2024 Horoscope Today : ಹೊಸವರ್ಷ ದಿನಭವಿಷ್ಯ  ಜನವರಿ 1 2024 ಸೋಮವಾರ. ಹೊಸ ವರ್ಷದ ಮೊದಲ ದಿನದಂದು ದ್ವಾದಶ ರಾಶಿಗಳ ಮೇಲೆ ಫಲ್ಗುಣಿ ನಕ್ಷತ್ರದ ಪ್ರಭಾವ ಇರುತ್ತದೆ. ಅಲ್ಲದೇ ಕನ್ಯಾರಾಶಿಯಲ್ಲಿ ಚಂದ್ರನು ಸಾಗುತ್ತಾನೆ. ಸಿಂಹ ರಾಶಿ ಹಾಗೂ ಕರ್ಕಾಟಕ ರಾಶಿಯವರು ಅಧಿಕ ಹಣಕಾಸಿನ ಲಾಭವನ್ನು ಪಡೆಯುತ್ತಾರೆ. ಮೇಷರಾಶಿಯಿಂದ ಮೀನ ರಾಶಿಯ ವರೆಗೆ ಒಟ್ಟು 12ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಕೆಲಸ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳ್ಳಲಿದೆ. ಆದರೆ ನೀವು ಇಂದು ಎಚ್ಚರಿಕೆಯಿಂದ ಇರಬೇಕು. ಹಣಕಾಸಿನ ವಿಚಾರದಲ್ಲಿ ಲಾಭದಾಯಕವಾದ ದಿನ. ಕುಟುಂಬ ಸದಸ್ಯರ ಜೊತೆಗೆ ಭಾವನಾತ್ಮಕ ಸಂಬಂಧಗಳು ವೃದ್ದಿಸಲಿದೆ. ವ್ಯವಹಾರ ಕ್ಷೇತ್ರದಲ್ಲಿ ಅಭಿವೃದ್ದಿ ಕಾಣಲಿದೆ.

ವೃಷಭರಾಶಿ ದಿನಭವಿಷ್ಯ
ಆಕಸ್ಮಿಕ ಹಣಕಾಸಿನ ಲಾಭವಿದೆ. ಸಾಮಾಜಿಕ ಜೀವನವು ಉತ್ತಮವಾಗಿ ಇರಲಿದೆ. ಸ್ನೇಹಿತರ ಹಾಗೂ ಬಂಧುಗಳ ಆಗಮನದಿಂದ ಮನಸಿಗೆ ನೆಮ್ಮದಿ. ಅಗತ್ಯಕ್ಕಿಂತ ಅಧಿಕ ಖರ್ಚುಗಳನ್ನು ಮಾಡಬೇಡಿ. ಸ್ನೇಹಿತರ ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆಯುತ್ತೀರಿ.

ಮಿಥುನರಾಶಿ ದಿನಭವಿಷ್ಯ
ಉದ್ಯೋಗಿಗಳಿಗೆ ಮಾನಸಿಕ ಕಿರಿಕಿರಿ ಉಂಟಾಗಲಿದೆ. ಕುಟುಂಬದ ಸದಸ್ಯರ ಜೊತೆಗೆ ಉತ್ತಮ ಬಾಂಧವ್ಯ. ಆರೋಗ್ಯದ ವಿಚಾರದಲ್ಲಿ ನೆಮ್ಮದಿ. ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಅತೀ ಅಗತ್ಯ. ಕೆಲವೊಂದು ವಿಚಾರಗಳು ನಿಮಗೆ ಇಂದು ಪ್ರತಿಕೂಲವಾಗಿ ಇರಲಿದೆ.

ಕರ್ಕಾಟಕರಾಶಿ ದಿನಭವಿಷ್ಯ
ಉದ್ಯೋಗಿಗಳು ಕಚೇರಿಯಲ್ಲಿ ಶುಭ ಸುದ್ದಿಯನ್ನು ಕೇಳುತ್ತಾರೆ. ಮೇಲಾಧಿಕಾರಿಗಳ ಸಹಕಾರ ದೊರೆಯಲಿದೆ. ಕುಟುಂಬದ ಹಿರಿಯ ಸಲಹೆಯನ್ನು ಪಾಲಿಸಿ. ನಿಮ್ಮ ಇಷ್ಟಾರ್ಥಗಳು ಈಡೇರುವ ಕಾಲ. ಆರ್ಥಿಕವಾಗಿಯೂ ಸಾಕಷ್ಟು ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ.

ಸಿಂಹರಾಶಿ ದಿನಭವಿಷ್ಯ
ಕುಟುಂಬದ ವಾತಾವರಣವು ನಕಾರಾತ್ಮಕವಾಗಿ ಇರಲಿದೆ. ಯಾವುದೇ ಕಾರಣಕ್ಕೂ ಯಾರಿಗೂ ಇಂದು ಯಾವುದೇ ವಿಚಾರದಲ್ಲಿ ಭರವಸೆಯನ್ನು ನೀಡಬೇಡಿ. ನೀವು ಇಂದು ಜಾಗರೂಕರಾಗಿ ಇರಬೇಕು. ಆರ್ಥಿಕವಾಗಿ ಅಧಿಕ ಲಾಭವಿದೆ. ಆದರೆ ಎಚ್ಚರಿಕೆಯಿಂದ ಇರಬೇಕು.

New Year 2024 Horoscope Today 01 January 2024 Zodiac Sign 
Image Credit to Original Source

ಕನ್ಯಾರಾಶಿ ದಿನಭವಿಷ್ಯ
ದೂರ ಪ್ರಯಾಣವನ್ನು ಮುಂದೂಡುವ ಸಾಧ್ಯತೆಯಿದೆ. ಹಣಕಾಸಿನ ವಿಚಾರದಲ್ಲಿ ಶುಭ ಸುದ್ದಿಯನ್ನು ಕೇಳುವಿರಿ. ಮನೆಯಲ್ಲಿ ಆಹ್ಲಾದಕರ ವಾತಾವರಣ ಇರಲಿದೆ. ಆರ್ಥಿಕವಾಗಿಯೂ ಸ್ಥಿರತೆ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ.

ತುಲಾರಾಶಿ ದಿನಭವಿಷ್ಯ
ಉದ್ಯೋಗಿಗಳಿಗೆ ಕಚೇರಿಯಲ್ಲಿ ಗೊಂದಲದ ವಾತಾವರಣ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಆರೋಗ್ಯದ ಸಮಸ್ಯೆ ನಿಮ್ಮನ್ನು ಕಾಡಲಿದೆ. ಖರ್ಚುಗಳು ಅಧಿಕವಾಗಲಿದೆ. ಮಂಗಳ ಕಾರ್ಯಕ್ಕೆ ಮನೆಯಲ್ಲಿ ಸಿದ್ದತೆಗಳು ನಡೆಯಲಿವೆ.

ಇದನ್ನೂ ಓದಿ : UPI ಗ್ರಾಹಕರ ಗಮನಕ್ಕೆ ! ಈ ಕೆಲಸ ಮಾಡದಿದ್ರೆ ರದ್ದಾಗಲಿದೆ ನಿಮ್ಮ ಯುಪಿಐ ಐಡಿ

ವೃಶ್ಚಿಕರಾಶಿ ದಿನಭವಿಷ್ಯ
ವ್ಯಾಪಾರಸ್ಥರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಆರ್ಥಿಕವಾಗಿ ಇಂದು ಅಧಿಕ ಲಾಭವಿದೆ. ಅನಾರೋಗ್ಯದ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ. ನೌಕರರಿಗೆ ಮಾನಸಿಕ ಕಿರಿಕಿರಿ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ದೊರೆಯಲಿದೆ.

ಧನಸ್ಸುರಾಶಿ ದಿನಭವಿಷ್ಯ
ಆದಾಯ ಹಾಗೂ ಖರ್ಚನ್ನು ಸರಿದೂಗಿಸಿಕೊಳ್ಳಿ. ವಾಹನ ಚಾಲನೆಯ ವೇಳೆಯಲ್ಲಿ ಎಚ್ಚರಿಕೆ ಅತೀ ಅಗತ್ಯ. ಕುಟುಂಬ ಸದಸ್ಯರ ಅನಾರೋಗ್ಯ ನಿಮ್ಮನ್ನು ಆತಂಕಕ್ಕೆ ದೂಡಲಿದೆ. ಉದ್ಯಮಿಗಳು ವಿರೋಧಿಗಳಿಂದ ಸಾಕಷ್ಟು ಪೈಪೋಟಿ ಎದುರಿಸಲಿದ್ದಾರೆ. ಕೌಟುಂಬಿಕ ಜೀವನ ಸುಖಮಯವಾಗಿ ಇರಲಿದೆ.

ಇದನ್ನೂ ಓದಿ : ಕೋಟದಲ್ಲಿ ಭೀಕರ ಅಪಘಾತ, 2 ಲಾರಿಗಳ ನಡುವೆ ಅಪ್ಪಚ್ಚಿಯಾದ ಮಾರುತಿ ಕಾರು : ಮಾರಿಯಮ್ಮನ ಪವಾಡದಿಂದ ಪಾರಾಯ್ತು ಕುಟುಂಬ !

ಮಕರರಾಶಿ ದಿನಭವಿಷ್ಯ
ನಿಮ್ಮ ಆಲೋಚನೆಗಳು ಶೀಘ್ರದಲ್ಲಿಯೇ ಸಾಕಾರವಾಗಲಿದೆ. ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಯಶಸ್ವಿ ಆಗುತ್ತೀರಿ. ವ್ಯಾಪಾರಿಗಳಿಗೆ ಉತ್ತಮ ಲಾಭ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಕುಟುಂಬದಲ್ಲಿ ಖರ್ಚು ವೆಚ್ಚಗಳು ಹೆಚ್ಚಾಗಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಕುಂಭರಾಶಿ ದಿನಭವಿಷ್ಯ
ಸರಕಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಪ್ರವಾಸದ ಯೋಚನೆ ಇಂದು ಸಾಕಾರವಾಗಲಿದೆ. ಆರ್ಥಿಕವಾಗಿಯೂ ಶುಭದಾಯಕವಾದ ದಿನ. ಸಹೋದ್ಯೋಗಿಗಳು ನಿಮ್ಮ ಸಹಾಯಕ್ಕೆ ನಿಲ್ಲಲಿದ್ದಾರೆ. ಸಂಬಂಧಿಕರ ಭೇಟಿಯಿಂದ ಸಂತಸ.

ಇದನ್ನೂ ಓದಿ : ಹೊಸ ವರ್ಷ 2024ಕ್ಕೆ ಏರ್‌ಟೆಲ್ ಬಿಗ್ ಆಫರ್ : ಕೇವಲ 148 ರೂ. ರಿಚಾರ್ಜ್‌ನಲ್ಲಿ ಡೇಟಾ, ಜೊತೆ 15 ಕ್ಕೂ ಹೆಚ್ಚು OTT ಉಚಿತ

ಮೀನರಾಶಿ ದಿನಭವಿಷ್ಯ
ಧಾರ್ಮಿಕ ಕ್ಷೇತ್ರಗಳ ಭೇಟಿ. ಹಳೆಯ ಕೆಲಸ ಕಾರ್ಯಗಳಿಂದ ಆರ್ಥಿಕ ಲಾಭದ ದೊರೆಯಲಿದೆ. ವೈವಾಹಿಕ ಜೀವನವು ಸಂತೋಷಮಯವಾಗಿ ಇರಲಿದೆ. ಸಂಗಾತಿಯಿಂದ ಪ್ರೀತಿಯನ್ನು ಪಡೆಯುತ್ತೀರಿ. ಉದ್ಯೋಗಿಗಳಿಗೆ ಕೆಲಸ ಸ್ಥಳದಲ್ಲಿ ಅನುಕೂಲಕರವಾಗಿ ಇರಲಿದೆ.

New Year 2024 Horoscope Today 01 January 2024 Zodiac Sign

Comments are closed.