ಹೊಸ ವರ್ಷ 2024: ಹೊಸ ವರ್ಷಕ್ಕೆ ಹೊಸ ರೂಲ್ಸ್‌ : ಜನವರಿ 1 ರಿಂದ ಈ ನಿಯಮಗಳಲ್ಲಿ ಬದಲಾವಣೆ

New Year 2024 New Rules  : ಹೊಸ ವರ್ಷದ ಆಗಮಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಪ್ರತೀ ತಿಂಗಳ ಮೊದಲ ದಿನದಿಂದಲೇ ಹಣಕಾಸು ನಿಯಮಗಳಲ್ಲಿ ಬದಲಾವಣೆ ಆಗಲಿದೆ. ಇದೀಗ, ಜನವರಿ 1, 2024 ರಿಂದ ದೇಶದಲ್ಲಿ ಅನೇಕ ಹಣಕಾಸು ನಿಯಮಗಳಲ್ಲಿ ಬಾರೀ ಬದಲಾವಣೆ ಆಗಲಿದೆ.

New Year 2024 New Rules  : ಹೊಸ ವರ್ಷದ ಆಗಮಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಪ್ರತೀ ತಿಂಗಳ ಮೊದಲ ದಿನದಿಂದಲೇ ಹಣಕಾಸು ನಿಯಮಗಳಲ್ಲಿ ಬದಲಾವಣೆ ಆಗಲಿದೆ. ಇದೀಗ, ಜನವರಿ 1, 2024 ರಿಂದ ದೇಶದಲ್ಲಿ ಅನೇಕ ಹಣಕಾಸು ನಿಯಮಗಳಲ್ಲಿ ಬಾರೀ ಬದಲಾವಣೆ ಆಗಲಿದೆ. ಈ ನಿಯಮಗಳು ನಿಮ್ಮ ಜೇಬಿಗೆ ಕತ್ತರಿ ಹಾಕಲಿದೆ. 1 ಜನವರಿ 2024 ಯಾವೆಲ್ಲಾ ನಿಯಮಗಳು ಬದಲಾವಣೆ ಆಗಲಿವೆ ಅನ್ನೋ ಸಂಪೂರ್ನ ಮಾಹಿತಿ ಇಲ್ಲಿದೆ.

New Year 2024 New Rules These Important Rules Will Change From January 1 in india
Image Credit to Original Source

ಜನವರಿ 1 ರಿಂದ ಪ್ರಮುಖವಾಗಿ ಆದಾಯ ತೆರಿಗೆ ರಿಟರ್ನ್ಸ್, ಸಿಮ್ ಕಾರ್ಡ್‌ಗಳು, ಡಿಮ್ಯಾಟ್ ಖಾತೆಗಳು ಮತ್ತು ಬ್ಯಾಂಕ್ ಲಾಕರ್‌ಗಳಿಗೆ ನಿಯಮಗಳಿಗೆ ಸಂಬಂಧಿಸಿದಂತೆ ಬಾರೀ ಬದಲಾವಣೆ ಆಗಲಿದೆ. ಮೊಬೈಲ್‌ ಸಿಮ್‌ ಕಾರ್ಡ್‌ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿಗೆ ಬರಲಿದೆ. ಇನ್ಮುಂದೆ ಟೆಲಿಕಾಂ ಕಂಪೆನಿಯ ಗ್ರಾಹಕರಿಗೆ ಯಾವುದೇ ಸಂದೇಶವನ್ನು ಕಳುಹಿಸುವ ಮೊದಲು ಅನುಮತಿಯನ್ನು ಪಡೆಯಬೇಕಾಗಿದೆ.

ಅಷ್ಟೇ ಅಲ್ಲದೇ ಸಿಮ್‌ ಕಾರ್ಡ್‌ಬಳಿಗೆ ಡಿಜಿಟಲ್‌ ಕೆವೈಸಿ (KYC) ಅನ್ನು ಕೇಂದ್ರ ಸರಕಾರ ಟೆಲಿಕಾಂ ಕಂಪೆನಿಗಳಿಗೆ ಸೂಚಿಸಿದೆ. ಜನವರಿ 1, 2024 ರಿಂದ, ನೀವು ಸಿಮ್ ಕಾರ್ಡ್ ಅನ್ನು ತೆಗೆದುಕೊಳ್ಳುವಾಗ ಬಯೋಮೆಟ್ರಿಕ್ ಮೂಲಕ ನಿಮ್ಮ ವಿವರಗಳನ್ನು ಪರಿಶೀಲನೆ ಮಾಡುವುದು ಕಡ್ಡಾಯವಾಗಲಿದೆ.

ಇದನ್ನೂ ಓದಿ :ಯುವನಿಧಿಗೆ ಅರ್ಜಿ ಸಲ್ಲಿಸಲು ಹೊಸ ರೂಲ್ಸ್‌ : ಆನ್ಲೈನ್‌, ಆಫ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?

ಇನ್ನು ಆದಾಯ ತೆರಿಗೆ ಸಲ್ಲಿಕೆ ವಿಚಾರದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ. 2022-23 ಹಣಕಾಸು ವರ್ಷಕ್ಕೆ ಐಟಿಆರ್‌ (ITR)ಸಲ್ಲಿಸದ ಎಲ್ಲಾ ತೆರಿಗೆದಾರರು 31 ಡಿಸೆಂಬರ್ 2023 ರೊಳಗೆ ITR ಕಡ್ಡಾಯವಾಗಿ ಸಲ್ಲಿಸಲೇ ಬೇಕು. 31 ಡಿಸೆಂಬರ್ 2023ರ ಒಳಗಾಗಿ ಆದಾಯ ತೆರಿಗೆ ಸಲ್ಲಿಕೆ ಮಾಡುವಾಗ ದಂಡ ಪಾವತಿ ಮಾಡಬೇಕಾಗುತ್ತದೆ. ತೆರಿಗೆದಾರರು ರಿಟರ್ನ್ಸ್ ಸಲ್ಲಿಸದಿದ್ದರೆ, ಅಂತವರ ವಿರುದ್ದ ಜನವರಿ 1, 2024 ರಿಂದ ಅವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ.

New Year 2024 New Rules These Important Rules Will Change From January 1 in india
Image Credit to Original Source

ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್‌ ಖಾತೆದಾರರಿಗೆ ಬ್ಯಾಂಕ್‌ ಲಾಕರ್‌ ವಿಚಾರದಲ್ಲಿ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಹೊಸ ಬ್ಯಾಂಕ್‌ ಲಾಕರ್‌ ಒಪ್ಪಂದವು 1 ಜನವರಿ 2024 ರಿಂದ ಜಾರಿಗೆ ಬರಲಿದೆ. ಹೊಸ ಲಾಕರ್‌ ಹೊಂದುವವರು ಕಡ್ಡಾಯವಾಗಿ ಹೊಸ ಬ್ಯಾಂಕ್‌ ಲಾಕರ್‌ ಒಪ್ಪಂದಕ್ಕೆ ಸಹಿ ಹಾಕಬೇಕಾಗುತ್ತದೆ.

ಇದನ್ನೂ ಓದಿ : ಯುವನಿಧಿ ಯೋಜನೆ ಇಂದಿನಿಂದ ಜಾರಿ : ಅರ್ಜಿ ಸಲ್ಲಿಸುವುದು ಹೇಗೆ ? ಯಾರೆಲ್ಲ ಅರ್ಹರು ?

ಡಿಮ್ಯಾಟ್‌ ಖಾತೆ ವಿಚಾರದಲ್ಲಿಯೂ ಹಲವು ಬದಲಾವಣೆಗಳು ಜಾರಿಗೆ ಬರಲಿದೆ. ಸೆಕ್ಯುರಿಟೀಸ್ ರೆಗ್ಯುಲೇಟರಿ ಬೋರ್ಡ್ ಆಫ್ ಇಂಡಿಯಾ (SEBI) ಡಿಮ್ಯಾಟ್ ಖಾತೆಗೆ ನಾಮನಿರ್ದೇಶನ ಮಾಡಲು 31 ಡಿಸೆಂಬರ್ 2023 ಕೊನೆಯ ದಿನವಾಗಿದೆ. ನಿಗದಿತ ದಿನಾಂಕದ ಒಳಗಾಗಿ ನಾಮಿನಿ ಸೇರಿಸದೇ ಇರುವ ಖಾತೆದಾರರ ಖಾತೆಗಳನ್ನು ಜನವರಿ 1, 2024 ರಿಂದ ಮುಚ್ಚಬಹುದು.

New Year 2024 New Rules These Important Rules Will Change From January 1 in india

Comments are closed.