ಯುವನಿಧಿಗೆ ಅರ್ಜಿ ಸಲ್ಲಿಸಲು ಹೊಸ ರೂಲ್ಸ್‌ : ಆನ್ಲೈನ್‌, ಆಫ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?

uva Nidhi Scheme Karnataka New rules : ಗೃಹ ಲಕ್ಷ್ಮೀ (GruhaLakshmi), ಗೃಹಜ್ಯೋತಿ (Gruha Jyothi) ಯಂತಹ ಯೋಜನೆಗಳ ಮೂಲಕ ಜನಮನ್ನಣೆ ಗಳಿಸಿರೋ ಕಾಂಗ್ರೆಸ್ ಸರ್ಕಾರ ಚುನಾವಣೆ ವೇಳೆ ಘೋಷಿಸಿದ ಯುವನಿಧಿ ಯೋಜನೆ (Yuva Nidhi Scheme)  ಜಾರಿಗೆ ಸಿದ್ಧತೆ ನಡೆಸಿದೆ.

Yuva Nidhi Scheme Karnataka New rules : ಗೃಹ ಲಕ್ಷ್ಮೀ (GruhaLakshmi), ಗೃಹಜ್ಯೋತಿ (Gruha Jyothi) ಯಂತಹ ಯೋಜನೆಗಳ ಮೂಲಕ ಜನಮನ್ನಣೆ ಗಳಿಸಿರೋ ಕಾಂಗ್ರೆಸ್ ಸರ್ಕಾರ ಚುನಾವಣೆ ವೇಳೆ ಘೋಷಿಸಿದ ಯುವನಿಧಿ ಯೋಜನೆ (Yuva Nidhi Scheme)  ಜಾರಿಗೆ ಸಿದ್ಧತೆ ನಡೆಸಿದೆ. ಹಾಗಿದ್ದರೇ ಯುವನಿಧಿ ಯೋಜನೆ ಪಡೆಯೋಕೆ ಅರ್ಹ ಅಭ್ಯರ್ಥಿಗಳು ಏನು ಮಾಡ್ಬೇಕು? ಯೋಜನೆಯ ಮಾನದಂಡವೇನು ? ಮಾಹಿತಿ ಇಲ್ಲಿದೆ.

ರಾಜ್ಯದಲ್ಲಿ ಹೊಸ ವರ್ಷದಿಂದ ಪದವೀಧರ ನಿರುದ್ಯೋಗಿಗಳ ಸಹಾಯಕ್ಕಾಗಿ ಸರ್ಕಾರ ಯುವನಿಧಿ ಮೂಲಕ ಸಹಾಯಧನ ವಿತರಿಸಲಿದೆ. ಇದಕ್ಕಾಗಿ ಡಿಸೆಂಬರ್ 26 ರಿಂದ ಅರ್ಜಿ ಸಂಗ್ರಹ ನಡೆಯಲಿದೆ. ಆದರೆ ಯುವನಿಧಿಗೆ ಎಲ್ಲಿ ಅರ್ಜಿ ಸಲ್ಲಿಸಬೇಕು ? ಯಾರು ಅರ್ಹರು ? ಹೇಗೆ ಅರ್ಜಿ ಸಲ್ಲಿಸಬೇಕೆಂಬ ಬಗ್ಗೆ ನೂರಾರು ಅನುಮಾನಗಳು ಯುವಕರನ್ನು ಕಾಡುತ್ತಿದೆ. ಎಲ್ಲ ಅನುಮಾನಗಳಿಗೂ ಇಲ್ಲಿ ಸ್ಪಷ್ಟ ಉತ್ತರವಿದೆ. ಯಾರೆಲ್ಲ ಯುವನಿಧಿಗೆ ಅರ್ಹರು ಅನ್ನೋದನ್ನು ನೋಡೋದಾದರೇ,

Yuva Nidhi Scheme Karnataka New rules How to apply online, offline application
Image Credit to Original Source
  • ಕಳೆದ ಆರು ವರ್ಷದಿಂದ ಬೆಂಗಳೂರಿನಲ್ಲಿ ವಾಸವಾಗಿರುವ ಪದವೀಧರರು. ಆದರೆ ಆ ಪದವಿಧರರು ಕರ್ನಾಟಕದಲ್ಲೇ ಪದವಿ ಅಥವಾ ಡಿಪ್ಲೋಮಾ ಹಾಗೂ ತತ್ಸಮಾನ ಅಧ್ಯಯನ ಮಾಡಿರಬೇಕು.
  • ಇನ್ನು ಕರ್ನಾಟಕದ ನಿವಾಸಿ ಎಂದು ಸಾಬೀತುಪಡಿಸಲು ಈ ಕೆಳಗಿನ ದಾಖಲೆ‌ಸಲ್ಲಿಸಬೇಕು.
  • ಕರ್ನಾಟಕ ವಾಸಿ ಎಂದು ನಿರೂಪಿಸಲು ಎಸ್ ಎಸ್ ಎಲ್ ಸಿ ಅಥವಾ ಪಿಯುಸಿ ಪ್ರಮಾಣ ಪತ್ರ, ಸಿಇಟಿ ನೋಂದಣಿ ಸಂಖ್ಯೆ ಅಥವಾ ಪಡಿತರ ಚೀಟಿ ಸಲ್ಲಿಸಬೇಕು.
  • ಡಿಪ್ಲೋಮಾ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಬಳಿಕ ಡಿಪ್ಲೋಮಾ‌ ಮಾಡಿದ್ದರೇ ಎಂಟು ಒಂಬತ್ತನೇ ತರಗತಿ ಅಂಕಪಟ್ಟಿ ಅಥವಾ ರೇಷನ್ ಕಾರ್ಡ್ ನಂಬರ್ ಸಲ್ಲಿಸಬೇಕು ‌
  • ಯುವನಿಧಿಗೆ ಅರ್ಜಿ ಸಲ್ಲಿಸಲು ಪದವೀಧರರಿಗೆ Sslc ಮಾರ್ಕ್ಸ್‌ಕಾರ್ಡ್, ಪಿಯುಸಿ ಮಾರ್ಕ್ಸ್ ಕಾರ್ಡ್,ಡಿಗ್ರಿ ಮಾರ್ಕ್ಸ್ ಕಾರ್ಡ್ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ ಸಲ್ಲಿಸಬೇಕು.
  • ಡಿಪ್ಲೋಮಾ ಪದವೀಧರರು ಎಸ್ ಎಸ್ ಎಲ್ ಸಿ ಅಂಕಪಟ್ಟಿ,ಪಿಯುಸಿ ಅಂಕಪಟ್ಟಿ ಡಿಪ್ಲೋಮಾ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ ಸಲ್ಲಿಸಬೇಕು.
  • ಯುವನಿಧಿಗೆ ಅರ್ಜಿ ಸಲ್ಲಿಸಲು ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳು,ಗ್ರಾಮ್ ಒನ್ ಕೇಂದ್ರದಲ್ಲೂ ಅರ್ಜಿ ಸಲ್ಲಿಸಬಹುದು. ಸೇವಾಸಿಂಧು ಪೋರ್ಟಲ್ ನಲ್ಲಿ ಲಾಗಿನ್ ಮಾಡಿಕೊಂಡು ಯುವನಿಧಿ ಯೋಜನೆ ಸೇವೆ ಆಯ್ಕೆ ಮಾಡಿಕೊಳ್ಳಬೇಕು.

ಇದನ್ನೂ ಓದಿ : LPG EKYC : ಎಲ್‌ಪಿಜಿ ಗ್ಯಾಸ್‌ ಸಬ್ಸಿಡಿ ಪಡೆಯಲು ಮನೆಯಿಂದಲೇ ಮಾಡಿ ಇಕೆವೈಸಿ

sevasindhugs.Karnataka.gov.in ಲಾಗಿನ್ ಮಾಡಿ ಅರ್ಜಿ ಸಲ್ಲಿಸಬೇಕು. ಈಗಾಗಲೇ ಪದವಿ/ಡಿಪ್ಲೋಮಾ ತೇರ್ಗಡೆಯಾದ ಅಭ್ಯರ್ಥಿಗಳ ಶೈಕ್ಷಣಿಕ ಪ್ರಮಾಣ ಪತ್ರವನ್ನು ಎನ್ ಎಡಿ ಪೋರ್ಟಲ್ ಸಂಬಂಧಪಟ್ಟ ವಿವಿಗಳು, ಶೈಕ್ಷಣಿಕ ಸಂಸ್ಥೆಗಳು ಮಂಡಳಿಗಳು ಧೃಡಿಕರಿಸಲು nad.karnataka.gov.in/#/YuvaNidhi ಜಾಲತಾಣದಲ್ಲಿ ಲಾಗಿನ್ ಮಾಡಬೇಕು.

ಇದನ್ನೂ ಓದಿ : ಮಹಿಳೆಯರ ಹೆಲ್ಪ್ ಡೆಸ್ಕ್ ರದ್ದು : 250 ಆಪ್ತ ಸಮಾಲೋಚಕಿಯರಿಗೆ ಸಂಕಷ್ಟ

ಅರ್ಜಿ ಸಲ್ಲಿಸುವ ಮುನ್ನ ನಿಬಂಧನೆಗಳನ್ನು ಓದಿಕೊಳ್ಳಬೇಕು. ಲಾಗಿನ್ ಮಾಡಿದ ಬಳಿಕ ಅಭ್ಯರ್ಥಿಗಳು ಮೊದಲು ಜಿಲ್ಲೆ,ತಾಲೂಕು ಆಯ್ಕೆ ಮಾಡಿ ಕೊಳ್ಳಬೇಕು. ಆಧಾರ ಸಂಖ್ಯೆ ನಮೂದಿಸಿ ಒಟಿಪಿ ಪಡೆದು ಕೈವೈಸಿ ಚೆಕ್ ಮಾಡಿಕೊಳ್ಳಬೇಕು. ನಿಮ್ಮ ಶೈಕ್ಷಣಿಕ ಪ್ರಮಾಣ ಪತ್ರದ ನೋಂದಣಿ ಸಂಖ್ಯೆ ನಮೂದಿಸಿದ ಬಳಿಕ ಎನ್ ಎ ಡಿ ಪೋರ್ಟಲ್ ಸಕ್ರಿಯಗೊಳ್ಳಲಿದ್ದು, ಬಳಿಕ ಜಾತಿ ಪ್ರವರ್ಗ ಆಯ್ಕೆಮಾಡಿಕೊಳ್ಳಬೇಕು.

ಇದನ್ನೂ ಓದಿ : ಕೊರೊನಾ ನಡುವೆ ಇಯರ್ ಎಂಡ್, ಕ್ರಿಸ್‌ಮಸ್ ರಜೆ: ಪ್ರವಾಸಿಗರಿಂದ್ಲೇ‌ ಬೆಂಗಳೂರಿಗೆ ಸೋಂಕು ಉಲ್ಬಣಿಸುವ ಭೀತಿ

ಮೊಬೈಲ್ ಸಂಖ್ಯೆ ಅಪ್ಡೇಟ್ ಮಾಡಿ ಇಮೇಲ್ ವಿಳಾಸ ನೀಡಿ ಒಟಿಪಿ ಪಡೆದು ಮತ್ತೊಮ್ಮೆ ದಾಖಲಿಸಬೇಕು. ಅಂತಿಮವಾಗಿ ಮತ್ತೊಮ್ಮೆ ಸ್ವಯಂ ಘೋಷಣೆ ಮಾಡಿದ ನಂತರ ಅರ್ಜಿ ಸಲ್ಲಿಕೆ ಪೂರ್ಣಗೊಳ್ಳಲಿದೆ. ಬಳಿಕ ಅಭ್ಯರ್ಥಿಯ ರಜಿಸ್ಟರ್ಡ್ ಮೊಬೈಲ್ ನಂಬರ್ ಗೆ ಅರ್ಜಿ ಸ್ವಿಕೃತಿಯ ಮಾಹಿತಿ ರವಾನೆ ಯಾಗುತ್ತದೆ. ಈ ರಿಸೀಟ್ ನ್ನು ಅಭ್ಯರ್ಥಿಯು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

Yuva Nidhi Scheme Karnataka New rules How to apply online, offline application
Image Credit to Original Source

ಕೊನೆಯದಾಗಿ ಸರ್ಕಾರದ ಯುವನಿಧಿ ಯೋಜನೆ ಲಾಭ ಪಡೆಯುವ ನಿರುದ್ಯೋಗಿ ತನ್ನ ನಿರುದ್ಯೋಗವನ್ನು ಖಚಿತಪಡಿಸಲು ತಿಂಗಳ 25 ತಾರೀಕಿನ ಮೊದಲು ಆಧಾರ ಒಟಿಪಿ ಮೂಲಕ ಉದ್ಯೋಗ ಲಭ್ಯವಾಗಿಲ್ಲ ಎಂಬುದನ್ನು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ನಿಯಮ ಉಲ್ಲಂಘಿಸಿ ಅತಿಕ್ರಮವಾಗಿ ಯುವನಿಧಿ ಪಡೆದಲ್ಲಿ ಕ್ರಿಮಿನಲ್ ಮೊಕದ್ದಮೆ‌ ದಾಖಲಿಸಿ ದಂಡವಿಧಿಸಲು ಸರ್ಕಾರ ಚಿಂತನೆ ನಡೆಸಿದೆ.

Yuva Nidhi Scheme Karnataka New rules How to apply online, offline application

Comments are closed.