Akshaya Tritiya : ಚಿನ್ನದ ವ್ಯಾಪಾರಕ್ಕೂ ಧರ್ಮದ ಬೇಡಿ : ಮುಸ್ಲಿಂ ಅಂಗಡಿ ಗೋಲ್ಡ್ ಬ್ಯಾನ್

ಹಲಾಲ ಮಾಂಸ ಹಾಗೂ ಮ್ಯಾಂಗೋ ಮಾರ್ಕೆಟ್ ಬಳಿಕ ಈಗ ಈ ಹಿಂದೂ ಮುಸ್ಲಿಂ ಧರ್ಮದಂಗಲ್ ಚಿನ್ನದ ಮಾರುಕಟ್ಟೆಗೂ ಕಾಲಿಟ್ಟಿದೆ. ಅಕ್ಷಯ ತೃತೀಯ (Akshaya Tritiya) ಸಮೀಪಿಸುತ್ತ ಇರುವುದರಿಂದ ಚಿನ್ನದ ಮಾರುಕಟ್ಟೆಯಲ್ಲೂ ಧರ್ಮ ವ್ಯಾಪಾರಕ್ಕೆ ಆಗ್ರಹ ಕೇಳಿಬರುತ್ತಿದೆ. ಸಾಮಾನ್ಯವಾಗಿ ಹಿಂದೂಗಳು ಅಕ್ಷಯಾ ತೃತೀಯದ ದಿನ ಚಿನ್ನ ಖರೀದಿ ಮಾಡುತ್ತಾರೆ. ಹೀಗಾಗಿ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸುವವರು ಹಿಂದೂಗಳ ಅಂಗಡಿಯಲ್ಲೇ ಖರೀದಿಸಿ ಎಂದು ಶ್ರೀರಾಮ ಸೇನೆ ಅಭಿಯಾನ ಆರಂಭಿಸಿದೆ.

ಹೌದು, ಹಿಂದೂಪರ ಚಿಂತನೆಯ ಜೊತೆ ನಿಂತಿರುವ ಶ್ರೀರಾಮಸೇನೆ ಅಕ್ಷಯ ತೃತೀಯಕ್ಕೆ ಹಿಂದೂಗಳ ಜುವೆಲ್ಲರಿಯಲ್ಲೇ ಚಿನ್ನ ಖರೀದಿಸಿ ಎಂದು ಟ್ವೀಟರ್ ಅಭಿಯಾನ ಆರಂಭಿಸಿದೆ. ಅಲ್ಲದೇ ಈ ಟ್ವೀಟ್ ಅಭಿಯಾನಕ್ಕೆ ಎಲ್ಲೆಡೆ ಶ್ರೀರಾಮ ಸೇನೆ ಸಂಪೂರ್ಣ ಬೆಂಬಲ ನೀಡಿದೆ‌. ಈ ಬಗ್ಗೆ ಬಾಗಲಕೋಟೆಯಲ್ಲಿ ಮಾತನಾಡಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ರಾಜ್ಯದಲ್ಲಿ ಇರುವ ಕೇರಳ ಮೂಲದ ಮುಸ್ಲಿಂರ ಜುವೆಲ್ಲರಿ ಶಾಪ್ ನಲ್ಲಿ ಚಿನ್ನ ಖರೀದಿಸಬೇಡಿ. ರಾಜ್ಯದಲ್ಲಿ ಕೇರಳ ಮೂಲದ ಮುಸ್ಲಿಂ ರ ಜುವೆಲ್ಲರಿಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಹೀಗಾಗಿ ಹಿಂದೂಗಳು ಅಲ್ಲಿ ಬಂಗಾರ ಖರೀದಿ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಮಾತ್ರವಲ್ಲ ಕೇರಳದಲ್ಲಿ 800 ಹಿಂದೂಗಳ ಕೊಲೆಯಾಗಿದೆ. ನೀವು ಇಲ್ಲಿರುವ ಕೇರಳದ ಮುಸ್ಲಿಂರ ಚಿನ್ನದ ಅಂಗಡಿಯಲ್ಲಿ ಖರೀದಿ ಮಾಡಿದ್ರೆ, ಅದರ ಲಾಭ ಕೇರಳದ ಮುಸ್ಲಿಂ ಸಂಘಟನೆಗಳಿಗೆ ಹೋಗುತ್ತದೆ. ಅದರ ಫಲವಾಗಿ ಹಿಂದೂಗಳ ಕೊಲೆ ಆಗುತ್ತದೆ. ದೌರ್ಜನ್ಯವೂ ಆಗುತ್ತಿದೆ. ಲವ್ ಜಿಹಾದ್ ಆಗುತ್ತಿದೆ ಎಂದು ಆರೋಪಿಸಿದ್ದಾರೆ. ಕೇರಳದಲ್ಲಿ ಇದುವರೆಗೂ 12 ಸಾವಿರ ಹುಡುಗಿಯರನ್ನ ಮುಸ್ಲಿಂಗೆ ಮತಾಂತರ ಮಾಡಿದ್ದಾರೆ. ನೀವು ಅವರ ಅಂಗಡಿಯಲ್ಲಿ ಬಂಗಾರ ಖರೀದಿ ಮಾಡಿದ್ರೆ ಇದಕ್ಕೆ ಪರೋಕ್ಷ ಬೆಂಬಲ ನೀಡಿದಂತಾಗುತ್ತದೆ. ಅಷ್ಟೇ ಅಲ್ಲ ಅದೆಲ್ಲ ದುಡ್ಡು ಕೊಟ್ಟು ನಮ್ಮ ತಲೆ ಮೇಲೆ ಚಪ್ಪಡಿ ಎಳೆದುಕೊಂಡಂತಾಗುತ್ತದೆ. ಹೀಗಾಗಿ ಅಕ್ಷಯ ತೃತೀಯಕ್ಕೆ ಹಿಂದೂ ಜುವೇಲರ್ಸ್ ಕಡೆಗೆ ಖರೀದಿ ಮಾಡಿ.ಬಾಗಲಕೋಟೆಯಲ್ಲಿ ಪ್ರಮೋದ್ ಮುತಾಲಿಕ್ ಮನವಿ ಮಾಡಿದ್ದಾರೆ.

ಯುಗಾದಿ ಹಬ್ವದ ವೇಳೆ ಮುಸ್ಲಿಂರ ಅಂಗಡಿಯಲ್ಲಿ ಚಿನ್ನ ಖರೀದಿ ಮಾಡದಂತೆ ಅಭಿಯಾನ ನಡೆಸಿದ್ದ ಶ್ರೀರಾಮಸೇನೆ ಜಟ್ಕಾ ಕಟ್ ಮಾಂಸ ತಿನ್ನಲು ಆಹ್ವಾನ‌ ನೀಡಿತ್ತು.‌ಮಾತ್ರವಲ್ಲ ಇನ್ಮುಂದೆ ಹಿಂದೂ ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ಮುಸ್ಲಿಂ ಚಾಲಕರ ವಾಹನವನ್ನು ಬಳಸದಂತೆ ಶ್ರೀರಾಮಸೇನೆ ಮನವಿ ಮಾಡಿತ್ತು. ಒಟ್ಟಿನಲ್ಲಿ ಈ ಧರ್ಮ‌ದಂಗಲ್ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ತಿದೆ.

ಇದನ್ನೂ ಓದಿ : ಸೋತು ಸುಣ್ಣವಾದ ಮುಂಬೈ ತಂಡ ಸೇರಿದ ಭಾರತದ ಈ ಖ್ಯಾತ ಬೌಲರ್‌, ವೀಕ್ಷಕ ವಿವರಣೆಗಾರ

ಇದನ್ನೂ ಓದಿ : ಚೀನಾದಲ್ಲಿ ಕೋವಿಡ್‌ ಮಹಾ ಸ್ಪೋಟ : ಲಾಕ್‌ಡೌನ್ ವಿಸ್ತರಣೆ ಪಿಪಿಇ ಕಿಟ್ ಧರಿಸಿದ ಮಕ್ಕಳು

Akshaya Tritiya Muslim Gold Ban Movement Sriram sena

Comments are closed.