OPEC+ Aggress Oil Output Hike From February: ತೈಲ ಉತ್ಪಾದನೆ ಹೆಚ್ಚಿಸಲು ಒಪೆಕ್ ನಿರ್ಧಾರ

ಫ್ರಾಂಕ್ಫರ್ಟ್: ಕೊರೊನಾ ಹೊಸ ಪ್ರಭೇದ ಓಮಿಕ್ರಾನ್ ಭೀತಿಯ ಮಧ್ಯೆಯೂ ತೈಲೋತ್ಪಾದನೆಯ ದೇಶಗಳ ಒಕ್ಕೂಟ ಒಪೆಕ್ (OPEC+) ಕಚ್ಚಾ ತೈಲ ಉತ್ಪಾದನೆಯನ್ನು ಕ್ರಮೇಣವಾಗಿ ದಿನಕ್ಕೆ 4 ಲಕ್ಷ ಬ್ಯಾರೆಲ್ ಹೆಚ್ಚಿಸಲು ನಿರ್ಧರಿಸಿವೆ. ವಿಶ್ವದಾದ್ಯಂತ ಕೊರೊನಾದ ಹೊಸ ಪ್ರಭೇದ ಒಮಿಕ್ರಾನ್ ಸೋಂಕಿನ ಪ್ರಸರಣ ವೇಗವಾಗುತ್ತಿರುವ ಮಧ್ಯೆಯೇ ಆರ್ಥಿಕ ಸ್ಥಿತಿ ಸುಧಾರಣೆ ಕಾಣತೊಡಗಿದೆ. ಈ ಹಿನ್ನೆಲೆಯಲ್ಲಿ ತೈಲೋತ್ಪಾದನೆ ಮಾಡುವ ರಾಷ್ಟ್ರಗಳ ಒಕ್ಕೂಟ ಒಪೆಕ್ ಮತ್ತು ಮಿತ್ರ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕ್ರಮೇಣವಾಗಿ ಏರಿಸಲು ಮಂಗಳವಾರ ನಡೆದ ಸಭೆಯಲ್ಲಿ ತೀರ್ಮಾನಿಸಿವೆ. ಸೌದಿ ಅರೇಬಿಯಾ ನೇತೃತ್ವದ 23 ಸದಸ್ಯ ರಾಷ್ಟ್ರಗಳ ಒಪೆಕ್ ಸದಸ್ಯ ದೇಶಗಳು ಮತ್ತು ರಷ್ಯಾ ಫೆಬ್ರುವರಿಯಿಂದ ದಿನಕ್ಕೆ 4 ಲಕ್ಷ ಬ್ಯಾರೆಲ್ ತೈಲ ಉತ್ಪಾದಿಸಲು ನಿರ್ಧಾರ ಕೈಗೊಂಡಿವೆ.

ಕಳೆದ ಏಪ್ರಿಲ್/ಮೇನಲ್ಲಿ ಕಾಣಿಸಿಕೊಂಡಿದ್ದ ಕೋವಿಡ್ ಸಂಕಷ್ಟದ ಬಳಿಕ ಲಾಕ್ಡೌನ್ ತೆರವುಗೊಳಿಸಿದ ವೇಳೆ ತೈಲ ಉತ್ಪಾದನೆ ಹೆಚ್ಚಿಸುವಂತೆ ಗ್ರಾಹಕ ರಾಷ್ಟ್ರಗಳು ಮನವಿ ಕೋರಿದ್ದವು. ಅದರೆ ಇದನ್ನು ಒಪೆಕ್ ಮತ್ತು ಮಿತ್ರ ರಾಷ್ಟ್ರಗಳು ತಿರಸ್ಕರಿಸಿದ್ದವು. ಇದರಿಂದ ತೈಲ ದರ ಗಣನೀಯ ಪ್ರಮಾಣದಲ್ಲಿ ಏರಿಕೆ ಆಯಿತು. ತೈಲ ದರವನ್ನು ಹತೋಟಿಗೆ ತರುವ ಉದ್ದೇಶದಿಂದ ಕಳೆದ ವರ್ಷ ನವೆಂಬರ್‌ ನಲ್ಲಿ ಅಮೆರಿಕ, ಭಾರತ ಸೇರಿ ಅನೇಕ ರಾಷ್ಟ್ರಗಳು ಆಪತ್ತಿನ ಸಂದರ್ಭಕ್ಕೆಂದು ತಮ್ಮಲ್ಲಿ ಕಾಪಿಟ್ಟುಕೊಂಡಿದ್ದ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದವು.

ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲದ ಪ್ರತಿ ಬ್ಯಾರೆಲ್ ದರ 76.33 ಡಾಲರ್ ಮತ್ತು ನ್ಯೂಯಾರ್ಕ್ನಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಬ್ಯಾರೆಲ್ಗೆ 79.23 ಡಾಲರ್ ಏರಿದೆ.

(OPEC+ Aggress Oil Output Hike From February)

ಇದನ್ನೂ ಓದಿ: Desh Bhakti ‘Offer’ : ನಿಮ್ಮ ಹಳೆಯ ಮೊಬೈಲ್​ ನೀಡಿದರೆ ಉಚಿತವಾಗಿ ಸಿಗಲಿದೆ ಈ ಬ್ರ್ಯಾಂಡ್ ನ್ಯೂ ಸ್ಮಾರ್ಟ್​ ಫೋನ್​

Comments are closed.