Omicron cases : ಹೊಸ ರೂಪಾಂತರಿಯ ಹುಟ್ಟಿಗೆ ಕಾರಣವಾಗಲಿದೆ ಓಮಿಕ್ರಾನ್​ : ಡಬ್ಲುಹೆಚ್​ಓ ಎಚ್ಚರಿಕೆ

Omicron cases :ಓಮಿಕ್ರಾನ್​ ರೂಪಾಂತರಿಯು ಹೆಚ್ಚು ಗಂಭೀರ ತೊಂದರೆಗಳನ್ನು ಉಂಟು ಮಾಡುವುದಿಲ್ಲ ಎಂದುಕೊಳ್ಳುತ್ತಿರುವಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಪ್ರಪಂಚಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿರುವ ಕೋವಿಡ್​ 19 ಓಮಿಕ್ರಾನ್​ ರೂಪಾಂತರಿಯ ಬಗ್ಗೆ ಆಘಾತಕಾರಿ ಮಾಹಿತಿಯನ್ನು ಹೊರ ಹಾಕಿದೆ.

ಆಫ್ರಿಕಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೋವಿಡ್​ 19ನ ಹೊಸ ರೂಪಾಂತರಿ ಓಮಿಕ್ರಾನ್​​ ಹರಡುತ್ತಿರುವ ವೇಗವನ್ನು ನೋಡಿದರೆ ಇದು ಶೀಘ್ರದಲ್ಲಿಯೇ ಹೆಚ್ಚೆಚ್ಚು ಹೊಸ ರೂಪಾಂತರಿಗಳ ಹೊರಹೊಮ್ಮುವಿಕೆಗೆ ಕಾರಣವಾಗುವ ಸಾಧ್ಯತೆ ದಟ್ಟವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಕಳವಳ ವ್ಯಕ್ತಪಡಿಸಿದೆ.

ಈ ವಿಚಾರವಾಗಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ತುರ್ತು ಅಧಿಕಾರಿ ಕ್ಯಾಥರೀನ್​ ಸ್ಮಾಲ್ವುಡ್​ ಆರಂಭದ ದಿನಗಳಲ್ಲಿ ಓಮಿಕ್ರಾನ್​ ಹೆಚ್ಚು ಗಂಭೀರ ಪರಿಣಾಮ ಉಂಟು ಮಾಡುವುದಿಲ್ಲ ಎಂದು ಭಾವಿಸಲಾಗಿತ್ತು. ಆದರೆ ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ನೋಡಿದರೆ ಇದು ಭೀಕರ ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಿದರು.


ಓಮಿಕ್ರಾನ್​ ಸೋಂಕು ಡೆಡ್ಲಿ ಅಥವಾ ಸಂಭಾವ್ಯ ಡೆಡ್ಲಿ ರೂಪಾಂತರಿಯಾಗಿದೆ. ಈ ಸೋಂಕು ಆರಂಭದಲ್ಲಿ ಗಂಭೀರ ಪರಿಣಾಮವನ್ನು ಉಂಟು ಮಾಡುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು.ಹೀಗಾಗಿ ಇದೊಂದು ರೂಪಾಂತರಿ ಮುಗಿದ ಬಳಿಕ ವಿಶ್ವದಲ್ಲಿ ಸಾಂಕ್ರಾಮಿಕದ ಕಾಟ ಇರುವುದಿಲ್ಲ. ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಎಂದು ಎಲ್ಲರೂ ಭಾವಿಸಿದ್ದರು . ಆದರೆ ಏರುತ್ತಿರುವ ಸೋಂಕಿನ ಪ್ರಮಾಣವನ್ನು ನೋಡಿದರೆ ಇದು ಭೀಕರ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ಭಾವಿಸಬಹುದು ಎಂದು ಸ್ಮಾಲ್ವುಡ್​ ಹೇಳಿದರು.

ಓಮಿಕ್ರಾನ್​ ರೂಪಾಂತರಿಯು ಡೆಲ್ಟಾ ರೂಪಾಂತರಿಯಷ್ಟು ಗಂಭೀರ ಪರಿಣಾಮಗಳನ್ನು ಸೋಂಕಿತರಲ್ಲಿ ತೋರಿಸುತ್ತಿಲ್ಲ. ಆದರೆ ಇದು ಹರಡುವಿಕೆಯ ವೇಗವನ್ನು ನೋಡುತ್ತಿದ್ದರೆ ಇದು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ರೂಪಾಂತರಿಗಳನ್ನು ಹುಟ್ಟು ಹಾಕುವ ಸಾಧ್ಯತೆ ದಟ್ಟವಾಗಿದೆ. ಈ ಹೊಸ ರೂಪಾಂತರಿಗಳು ಎಷ್ಟು ಭಯಾನಕ ಇರಬಹುದು ಎಂಬುದನ್ನು ಈಗಲೇ ಅಂದಾಜಿಸಲು ಸಾಧ್ಯವಿಲ್ಲ ಎಂದು ಸ್ಮಾಲ್ವುಡ್​ ಹೇಳಿದರು.


ಕೊರೊನಾ ವೈರಸ್​ ಆರಂಭವಾದಾಗಿನಿಂದ ಇಲ್ಲಿಯವರೆಗೆ ಯುರೋಪ್​​ನಲ್ಲಿ 100 ಮಿಲಿಯನ್​ಗೂ ಅಧಿಕ ಪ್ರಕರಣಗಳು ವರದಿಯಾಗಿವೆ. ಆದರೆ 2021ರ ಕೊನೆಯ ವಾರದಲ್ಲೊಂದರಲ್ಲೇ 5 ಮಿಲಿಯನ್​ಗೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಅಂದರೆ ಯುರೋಪ್​ ಭಾಗಗಳಲ್ಲಿ ಸೋಂಕಿನ ಸಂಖ್ಯೆಯಲ್ಲಿ ಅತಿಯಾದ ಏರಿಕೆ ಕಂಡು ಬರುತ್ತಿರೋದನ್ನು ನಾವಿಲ್ಲಿ ಗಮನಿಸಬಹುದು. ಇದು ಮುಂದೆ ಯಾವ ರೀತಿಯ ಪರಿಣಾಮ ಉಂಟು ಮಾಡಬಹುದು ಎಂಬುದು ನಮಗೆ ತಿಳಿದಿಲ್ಲ ಎಂದು ಸ್ಮಾಲ್ವುಡ್​ ಹೇಳಿದರು.

ಅಲ್ಲದೇ ಫ್ರಾನ್ಸ್​ನಲ್ಲಿ ಈಗಾಗಲೇ ಕೋವಿಡ್​ನ ಹೊಸ ರೂಪಾಂತರಿಯು ಪತ್ತೆಯಾಗಿದೆ. ಇದಕ್ಕೆ ತಾತ್ಕಾಲಿಕವಾಗಿ ಐಹೆಚ್​ಯು ಎಂದು ಹೆಸರಿಡಲಾಗಿದೆ.

Spiralling Omicron cases could lead to more dangerous variants, warns WHO

ಇದನ್ನು ಓದಿ : fresh COVID cases : ದೇಶದಲ್ಲಿ ಒಂದೇ ದಿನ 58,097 ಹೊಸ ಕೋವಿಡ್​ ಪ್ರಕರಣಗಳು ವರದಿ

ಇದನ್ನೂ ಓದಿ : VIMS Corona explosion : ವಿಮ್ಸ್‌ ವೈದ್ಯಕೀಯ ಕಾಲೇಜಿನಲ್ಲಿ ಕೊರೊನಾ ಸ್ಪೋಟ : 21 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

Comments are closed.