Palm Oil Exports: ಪಾಮ್‌ ಎಣ್ಣೆ ರಫ್ತು ಪುನರಾರಂಭಿಸಲು ಮುಂದಾದ ಇಂಡೋನೇಷ್ಯಾ ! ಖಾದ್ಯ ತೈಲ ಬೆಲೆ ಇಳಿಕೆ ಆಗಬಹುದೇ?

ಇಂಡೋನೇಷ್ಯಾ(Indonesia) ಪಾಮ್‌ ಎಣ್ಣೆ(Palm Oil) ರಫ್ತಿನ ಮೇಲೆ ಏಪ್ರಿಲ್‌ 28 ರಂದು ನಿಷೇಧ ಹೇರಿತ್ತು (Palm oil Exports). ಫೆಬ್ರವರಿಯಲ್ಲಿ ಉಕ್ರೇನ್‌ನ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ ಬೆಳೆ ಸಂರಕ್ಷಣಾವಾದದ ಅತಿದೊಡ್ಡ ಕಾರ್ಯಗಳಲ್ಲಿ ಇದೂ ಒಂದಾಗಿತ್ತು. ಇದರಿಂದ ಖಾದ್ಯ ತೈಲಗಳ ರಫ್ತುಗಳಲ್ಲಿ ತಡೆ ಉಂಟಾಗಿತ್ತು ಮತ್ತು ಜಾಗತಿಕ ಕೊರತೆಯನ್ನು ಇನ್ನಷ್ಟು ಹದಗೆಡಿಸಿತ್ತು.

ಆದಾಗ್ಯೂ, ಖಾದ್ಯ ತೈಲದ ದೇಶೀಯ ಸರಬರಾಜುಗಳನ್ನು ಸುರಕ್ಷಿತಗೊಳಿಸವು ಗುರಿಯನ್ನು ಹೊಂದಿರುವ ನಿಯಮಗಳ ಕುರಿತು ವಿವರಗಳು ಹೊರಹೊಮ್ಮುವವರೆಗೆ ಅದರ ಬೆಲೆಗಳು ತಕ್ಷಣವೇ ಕಡಿಮೆಯಾಗುವುದಿಲ್ಲ ಎಂದು ರಾಯಿಟರ್ಸ್‌ ಹೇಳಿದೆ.

ಗೋದ್ರೇಜ್‌ ಅಗ್ರೋವೆಟ್‌ ಲಿಮಿಟೆಡ್‌ ನ ಆಯಿಲ್‌ ಪಾಮ್‌ ಸಿಇಒ – ಸೌಗತ ನಿಯೋಗಿ ‘ಸೋಮವಾರದಿಂದ ಇಂಡೋನೇಷ್ಯಾ ತನ್ನ ಪಾಮ್‌ ಎಣ್ಣೆ ರಫ್ತು ನಿಷೇಧವನ್ನು ತೆಗೆದುಹಾಕುತ್ತದೆ ಎಂದು ಅನೇಕರು ಊಹಿಸಿದ್ದರು, ಆದರೆ ಇದು ನಿರೀಕ್ಷೆಗಿಂತ ಮುಂಚೆಯೇ ಸಂಭವಿಸಿದೆ. ಮುಖ್ಯವಾಗಿ ರೈತರಿಂದ ಹೆಚ್ಚುತ್ತಿರುವ ಒತ್ತಡವು ಸಮರ್ಪಕವಾಗಿತ್ತು. ಏಕೆಂದರೆ ಅವರ ಎಫ್‌ಎಫ್‌ಬಿಗಳನ್ನು ಮಿಲ್ಲರ್‌ಗಳು ಖರೀದಿಸಿರಲಿಲ್ಲ. ಆದರೂ ಬೆಲೆಯನ್ನು 14,000 ರೂಪಾಯಿಗಳಿಗೆ ಇಳಿಸುವ ಅಂತಿಮ ಉದ್ದೇಶವನ್ನು ಸಾಧಿಸಲಾಗಿಲ್ಲ. ಆದ್ದರಿಂದ ಅವರು ದೇಶೀಯ ಅಡುಗೆ ತೈಲ ಬೆಲೆಗಳಿಗೆ ಸ್ವಲ್ಪ ನಿಯಂತ್ರಣ ತರಬಹುದು. ನಾವು ವಿವರವಾದ ಮಾಹಿತಿಯ ಪ್ರಕಟಣೆಗೆ ಕಾಯುತ್ತಿದ್ದೇವೆ ಎಂದು ಹೇಳಿದರು.’

ವಿಶ್ವದ ಅತಿದೊಡ್ಡ ಪಾಮ್‌ ಎಣ್ಣೆ ಉತ್ಪಾದಕ ರಾಷ್ಟ್ರವಾದ ಆಗ್ನೇಯ ಏಷ್ಯಾದ ದೇಶವು ಏಪ್ರಿಲ್‌ 28 ರಿಂದ ಪಾಮ್‌ ಎಣ್ಣೆ ರಫ್ತುಗಳನ್ನು ಸ್ಥಗಿತಗೊಳಿಸಿತು. ಗಗನಕ್ಕೇರುತ್ತಿರುವ ಅಡುಗೆ ಎಣ್ಣೆ ಸ್ಥಳೀಯ ಬೆಲೆಗಳನ್ನು ತಗ್ಗಿಸುವ ಪ್ರಯತ್ನ ನಡೆಯುತ್ತಿತ್ತು. ಉಕ್ರೇನ್‌ ನಲ್ಲಿ ನಡೆಯುತ್ತಿರುವ ಯುದ್ಧದಿಂದ ಜಾಗತಿಕ ಖಾದ್ಯ ತೈಲ ಮಾರುಕಟ್ಟೆಗಳು ಈಗಾಗಲೇ ಸೂರ್ಯಕಾಂತಿ ಎಣ್ಣೆ ಪೂರೈಕೆಯ ಕೊರತೆ ಎದುರಿಸುತ್ತಿವೆ. ಪಾಮ್‌ ಎಣ್ಣೆಯನ್ನು ಖಾದ್ಯಗಳು, ಸೌಂದರ್ಯವರ್ಧಕಗಳು, ಶೌಚಾಲಯ ಉತ್ಪನ್ನಗಳು ಮತ್ತು ಶುಚಿಗೊಳಿಸುವ ಉತ್ಪನ್ನಗಳಲ್ಲಿ ಬಳಸಾಗುತ್ತದೆ.

ಇದನ್ನೂ ಓದಿ :Cooking Oil Price : ಕೈ ಸುಡುತ್ತಿದೆ ಅಡುಗೆ ಎಣ್ಣೆ, 200 ರೂಪಾಯಿ ಗಡಿದಾಟಿದ ಕುಕ್ಕಿಂಗ್ ಆಯಿಲ್

ಇದನ್ನೂ ಓದಿ :Qutub Minar Memorial, Not Place of Pooja: ಕುತುಬ್ ಮಿನಾರ್ ಸ್ಮಾರಕ, ಪೂಜಾ ಸ್ಥಳವಲ್ಲ

(Palm Oil Exports will Indonesia be set to resume palm oil exports)

Comments are closed.