Karnataka Budget 2023 : ಶಾಲೆ, ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್

ಬೆಂಗಳೂರು : (Free bus pass) ರಾಜ್ಯದಲ್ಲಿನ ಶಾಲೆ, ಕಾಲೇಜು ವಿದ್ಯಾರ್ಥಿನಿಯರಿಗೆ ಅನುಕೂಲಕ್ಕಾಗಿರ ಉಚಿತ ಬಸ್ ಪಾಸ್ ಯೋಜನೆಯನ್ನು(Karnataka Budget 2023) ಜಾರಿಗೆ ತರಲಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಹೊಸ ಯೋಜನೆಯಿಂದಾಗಿ ಇನ್ಮುಂದೆ ವಿದ್ಯಾರ್ಥಿನಿಯರು ಶಾಲೆ, ಕಾಲೇಜಿಗಳಿಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇದೇ ಮೊದಲ ಬಾರಿಗೆ 3 ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಿದ್ದಾರೆ. ಕಳೆದ ಬಾರಿ 2,65,720 ಕೋಟಿ ರೂಪಾಯಿ ಬಜೆಟ್ ಮಂಡನೆ ಮಾಡಿದ್ದರು. ಈ ಬಾರಿಯ ಬಜೆಟ್ ನಲ್ಲಿ ಮಹಿಳೆಯರಿಗೆ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇನ್ಮುಂದೆ ಶಾಲೆ, ಕಾಲೇಜು ವಿದ್ಯಾರ್ಥಿನಿಯರಿಗೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ಇದನ್ನೂ ಓದಿ : Expectations from state budget: ಗೃಹಿಣಿಯರಿಗೆ ಗೌರವ ಧನ, ರೈತರಿಗೆ ಶೂನ್ಯ ಬಡ್ಡಿಗೆ ಹೆಚ್ಚು ಸಾಲ: ರಾಜ್ಯ ಬಜೆಟ್‌ನಲ್ಲಿ ಹಲವು ನಿರೀಕ್ಷೆ

ಇದನ್ನೂ ಓದಿ : Karnataka budget 2023 expectations: ಬಿಜೆಪಿ ಸರಕಾರದ ಕೊನೆಯ ಬಜೆಟ್‌ ನ ನಿರೀಕ್ಷೆಗಳೇನು?

ಇದನ್ನೂ ಓದಿ : State Budget 2023 : ರಾಜ್ಯ ಬಜೆಟ್ 2023: ಸಿಎಂ ಬೊಮ್ಮಾಯಿ ಬಜೆಟ್‌ನಲ್ಲಿ ಕರಾವಳಿ ನಿರೀಕ್ಷೆಗಳೇನು ?

ಇದನ್ನೂ ಓದಿ : Sports Budget 2023 : ಬಜೆಟ್‌ನಲ್ಲಿ ಕ್ರೀಡೆಗೆ ದಾಖಲೆಯ ಮೊತ್ತ 3397.32 ಕೋಟಿ

ವಿದ್ಯಾರ್ಥಿನಿಯರೂ ಮಾತ್ರವಲ್ಲದೇ ಮಹಿಳಾ ಕಾರ್ಮಿಕರಿಗೂ ಕೂಡ ಉಚಿತ ಪ್ರಯಾಣದ ಅವಕಾಶವನ್ನು ಕಲ್ಪಿಸಲಾಗಿದೆ. ಮಹಿಳಾ ಕಾರ್ಮಿಕರಿಗೂ ಕೂಡ ಉಚಿತ ಬಸ್ ಪಾಸ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಅಲ್ಲದೇ ರಾಜ್ಯದಲ್ಲಿ ಗೃಹಿಣಿ ಶಕ್ತಿ ಯೋಜನೆಯನ್ನು ಜಾರಿಗೆ ತಂದು, ಗೃಹಿಣಿಯರಿಗೆ ೫೦೦ ರೂಪಾಯಿ ಸಹಾಯಧನವನ್ನು ವಿತರಣೆ ಮಾಡಲಾಗುತ್ತಿದೆ. ಅಲ್ಲದೇ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೂ ಕೂಡ ಸಹಾಯಧನ ನೀಡಲು ರಾಜ್ಯ ಸರಕಾರ ಮುಂದಾಗಿದೆ.

ವಿದ್ಯಾವಾಹಿನಿ ಯೋಜನೆ ಯಡಿ 350 ಕೋಟಿ ವೆಚ್ಚದಲ್ಲಿ ಉಚಿತ ಬಸ್ಸು ಪಾಸ್ ಸೌಲಭ್ಯ ಒದಗಿಸಲಾಗುತ್ತಿದೆ. ಇದರಿಂದ ರಾಜ್ಯದ 8 ಲಕ್ಷ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಸರಕಾರ ಕೊಡುಗೆ ನೀಡಲಾಗಿದೆ. ಇನ್ನು ದುಡಿಯುವ ವಲಯದ ಹೆಣ್ಣು ಮಕ್ಕಳಿಗೂ ಉಚಿತ ಬಸ್ ಪಾಸ್ ಯೋಜನೆಯನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ 30 ಲಕ್ಷ ಮಹಿಳೆಯರಿಗೆ ಅನುಕೂಲವಾಗಲಿದೆ. ಈ ಯೋಜನೆಗಾಗಿ ಬರೋಬ್ಬರಿ 1 ಸಾವಿರ ಕೋಟಿ ರೂಪಾಯಿ ಹಣವನ್ನು ವ್ಯಯಿಸಲಾಗುತ್ತಿದೆ. ಇನ್ನು ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತರಿಗಾಗಿ ಬಡ್ಡಿ ರಹಿತ ಸಾಲ ಯೋಜನೆಯನ್ನು ಘೋಷಣೆ ಮಾಡಲಾಗಿದೆ. ರಾಜೀವ್ ಗಾಂಧಿ ವಸತಿ ನಿಗಮ ದಿಂದ ವಸತಿ ಸೌಲಭ್ಯ ಮತ್ತು ಸ್ವಯಂ ಉದ್ಯೋಗಕ್ಕಾಗಿ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಇದಲ್ಲದೆ ಉತ್ಕೃಷ್ಟ ಚಿಕಿತ್ಸೆ ಮತ್ತು ಕಾನೂನು ನೆರವು ನೀಡಲು ಮಹಿಳಾ ಅಭಿವೃದ್ಧಿ ನಿಗಮದಲ್ಲಿ ವಿಶೇಷ ನಿಧಿ ಸ್ಥಾಪನೆ ಮಾಡಲಾಗುತ್ತದೆ.

Karnataka Budget 2023 : Free bus pass for school and college girls

Comments are closed.