Facebook ಫೇಸ್‌ಬುಕ್ ಇನ್ನು ಔಟ್‌ಆಫ್ ಟ್ರೆಂಡ್ !


ಇಂದಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳು ಬಹುತೇಕ ಯುವಕರ ಬದುಕಿನ ಅವಿಭಾಜ್ಯ ಅಂಗವಾಗಿದೆ. ದಿನೇ ದಿನೇ ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚುತ್ತಿದೆ. ಒಂದೆಡೆ ಸಾಮಾಜಿಕ ಜಾಲತಾಣಗಳು ಮಾಹಿತಿ, ಅಭಿಪ್ರಾಯಗಳನ್ನು ಹಂಚಿಕೊಳ್ಳವ ಉತ್ತಮ ವೇದಿಕೆಯಾದರೆ ಇನ್ನೊಂದೆಡೆ ಸುಳ್ಳು ಸುದ್ದಿಗಳ ಹರಿದಾಟ, ಬೆದರಿಕೆಗಳು, ನಿಂದನೆ, ವೈಯಕ್ತಿಕ ಮಾನಹಾನಿಗಳಿಗೂ ದಾರಿಯಾಗಿ, ಸಮಾಜದ ಮುಂದಿರುವ ದೊಡ್ಡ ಸವಾಲಾಗಿವೆ. ಇವೆಲ್ಲದರಿಂದ ಫೇಸ್‌ಬುಕ್ ಏನೂ ಹೊರತಲ್ಲ!


೨೦೦೪ರಲ್ಲಿ ಮಾರ್ಕ್ ಝುಕೆರ್ ಬರ್ಗ್ ಅವರಿಂದ ಆರಂಭಗೊಂಡ ಫೇಸ್‌ಬುಕ್ ಆಪ್ ವಿಶ್ವವ್ಯಾಪಿ ಸಾಮಾಜಿಕ ಸಂಪರ್ಕ ಜಾಲತಾಣಗಳಲ್ಲಿ ಪ್ರಮುಖ ಸ್ಥಾನಗಿಟ್ಟಿಸಿಕೊಂಡಿತ್ತು. ಬಹಳಷ್ಟು ಬದಲಾವಣೆಗಳಿಗೆ ತೆರೆದುಕೊಂಡಿರುವ ಫೇಸ್‌ಬುಕ್ ಜನರಿಗೆ ನಾನಾ ವಿಧದ ಸೇವೆಗಳನ್ನು ಒದಗಿಸುತ್ತಾ ಬಂದಿದೆ. ಅದೆಷ್ಟೋ ಮಂದಿಗೆ ಉದ್ಯೋಗ ನೀಡಿ ವಿಶ್ವದ ಬಹುದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ.


ಫೇಸ್‌ಬುಕ್ ಮಾಲಿಕ ಮಾರ್ಕ್ ಝುಕೆರ್ ಬರ್ಗ್ ಕೆಲ ವರ್ಷಗಳ ಹಿಂದೆ ವಾಟ್ಸಾಪ್ ಹಾಗೂ ಇನ್ಸ್ಟಾಗ್ರಾಮ್ ಅನ್ನೂ ಕೊಂಡುಕೊಂಡರು, ಇದರ ಬೆನ್ನಲ್ಲೇ ಫೇಸ್‌ಬುಕ್ ಸಂಸ್ಥೆಯ ಹೆಸರನ್ನು ಮೆಟಾವರ್ಸ್ ಎಂದೂ ಸಹಾ ಬದಲಾಯಿಸಿದ್ದರು. ಜೊತೆಗೆ ಹೊಸ ಹೊಸ ಫಿಚರ್ಸ್ಗಳನ್ನು ಪರಿಚಯಿಸಿದರು. ಇಷ್ಟೆಲ್ಲಾ ಮಾಡಿದ್ರು ಒಂದು ಕಾಲದಲ್ಲಿ ಎಲ್ಲರ ಬಾಯಲ್ಲಿ ಹರಿದಾಡುತ್ತಿದ್ದ ಫೇಸ್‌ಬುಕ್ ಇದೀಗ ನಿಧಾನವಾಗಿ ಎಲ್ಲರಿಂದ ದೂರವಾಗುತ್ತಿದೆ. ಹೌದು ‘ಮೆಟಾ’ ಆಗಿ ಅಪಡೆಟ್ ಆದ ಮೇಲಂತೂ ಬಹುತೇಕರು ಫೇಸ್‌ಬುಕ್ ಅನ್ನು ಮರೆತಿದ್ದಾರೆ. ಇದರ ಬದಲಾಗಿ ಪರ್ಯಾಯ ಆಪ್‌ಗಳ ಮೊರೆ ಹೋಗಿದ್ದಾರೆ. ಅದರಲ್ಲೂ ಯುವಕರು ಸ್ನಾಪ್ ಚಾಟ್ ಹಾಗೂ ಚೀನಾ ಮೂಲದ ಟಿಕ್‌ಟಾಕ್ ಅನ್ನು ಹೆಚ್ಚಾಗಿ ಬಳಸುತ್ತಿದ್ದಾರೆ.


ಕಳೆದ ವರ್ಷ ಲೀಕ್ ಆದ ಫೇಸ್‌ಬುಕ್‌ನ ಆಂತರಿಕ ದಾಖಲೆಗಳ ಪ್ರಕಾರ ೨೦೧೯ರಲ್ಲಿ ಶೇ. ೧೯ ರಷ್ಟು ಯುವಕರು ಫೇಸ್‌ಬುಕ್ ಅನ್ನು ತ್ಯಜಿಸಿದ್ದು ಇದೇ ರೀತಿ ಮುಂದುವರಿದಲ್ಲಿ ಇನ್ನೆರಡು ವರ್ಷಗಳಲ್ಲಿ ಬಳಕೆದಾರರ ಸಂಖ್ಯೆ ಶೇ.೪೫ ರಷ್ಟು ಪ್ರತಿ ಶತ ಕಡಿಮೆಯಾಗಲಿದೆ ಎಂದಿದ್ದಾರೆ. ೨೦೨೦ ರಿಂದ ೨೦೨೫ರ ವರೆಗೆ ಸುಮಾರು ೧.೫ ಮಿಲಿಯನ್ ನಷ್ಟು ಯುವ ಬಳಕೆದಾರರನ್ನು ಫೇಸ್‌ಬುಕ್ ಕಳೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಒಂದು ಕಾಲದಲ್ಲಿ ಸಾಮಾಜಿಕ ಜಾಲತಾಣಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದ ಫೇಸ್‌ಬುಕ್ ಇದೀಗ ನಿಧಾನವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎಂಬುದು ಕಟುಸತ್ಯ.


ಇದನ್ನೂ ಓದಿ: Pension Scheme ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ


ಇದನ್ನೂ ಓದಿ: KSRTC bus collides with Metro Pillar : ಮೆಟ್ರೋ ಪಿಲ್ಲರ್​​ಗೆ ಡಿಕ್ಕಿ ಹೊಡೆದ ಕೆಎಸ್​ಆರ್​ಟಿಸಿ ಬಸ್​ :ನಾಲ್ವರ ಸ್ಥಿತಿ ಗಂಭೀರ

Facebook is Now Out of Trend

Comments are closed.