ಪೆಟ್ರೋಲ್, ಡೀಸೆಲ್ ಬೆಲೆಗಳು : ಪ್ರಮುಖ ನಗರಗಳಲ್ಲಿ ಇಂದಿನ ಬೆಲೆ ಎಷ್ಟಿದೆ ಗೊತ್ತಾ ?

ನವದೆಹಲಿ : ದಿನದಿಂದ ದಿನಕ್ಕೆ ಗರಿಷ್ಠ ಮಟ್ಟದ ಏರಿಕೆ ಕಾಣುತ್ತಿರುವ ಅಡುಗೆ ಅನಿಲ್, ಪೆಟ್ರೋಲ್, ಡಿಸೇಲ್ (Petrol Diesel Price Today) ಮಧ್ಯಮವರ್ಗದವರಿಗೆ ಬರೆ ಎಳೆದಂತೆ ಆಗಿದೆ. ಇತ್ತಕಡೆ ಅಡುಗೆ ಅನಿಲ ಸಾವಿರದ ಗಡಿ ದಾಟಿದ್ದು, ಪೆಟ್ರೋಲ್ ಕೂಡ ನೂರರ ಗಡಿ ದಾಟಿ ದಿನನಿತ್ಯದ ಜೀವನ ಸಾಗಿಸುವುದು ಕಷ್ಟಕರವಾಗಿದೆ. ಭಾರತ ಸರಕಾರವು ಜೂನ್ 2017 ರಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗೆ ದೈನಂದಿನ ಬೆಲೆ ಪರಿಷ್ಕರಣೆ ಕಾರ್ಯವಿಧಾನವನ್ನು ಹೊರ ತಂದಿದೆ. ಅಂದಿನಿಂದ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿದಿನ ಬೆಳಿಗ್ಗೆ ದರಗಳನ್ನು ಪರಿಷ್ಕರಿಸುತ್ತಿದೆ. ಸರಕಾರದ ಈ ಕ್ರಮಕ್ಕೆ ಮೊದಲು, ಇಂಧನ ಬೆಲೆಗಳನ್ನು ಹದಿನೈದು ದಿನಗಳ ಕಾಲ ಪರಿಷ್ಕರಿಸಲಾಗಿದೆ. ಇನ್ನು ಈ ಕೆಳಗೆ ಇಂದು (ಏಪ್ರಿಲ್ 3) ಸೋಮವಾರದಂದು ದೆಹಲಿ, ಮುಂಬೈ ಮತ್ತು ಹೆಚ್ಚಿನ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಹಾಗೂ ಇತ್ತೀಚಿನ ಇಂಧನ ಬೆಲೆಗಳನ್ನು ತಿಳಿಸಲಾಗಿದೆ.

ಭಾರತೀಯ ಪ್ರಮುಖ ವಾಣಿಜ್ಯ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ವಿವರ :

ನಗರ ಪೆಟ್ರೋಲ್ ಬೆಲೆ ಡೀಸೆಲ್ ಬೆಲೆ/ಲೀಟರ್

  • ದೆಹಲಿ ರೂ 96.72 ರೂ 89.62
  • ಮುಂಬೈ ರೂ 106.25 ರೂ 94.22
  • ಬೆಂಗಳೂರು ರೂ 101.96 ರೂ 87.91
  • ಕೋಲ್ಕತ್ತಾ ರೂ 105.97 ರೂ 92.71
  • ಚೆನ್ನೈ ರೂ 102.58 ರೂ 94.19
  • ವೈಜಾಗ್ ರೂ 110.45 ರೂ 98.27
  • ಪಾಟ್ನಾ ರೂ 107.35 ರೂ 94.05
  • ಸೂರತ್ ರೂ 96.31 ರೂ 92.06
  • ಗುರಗಾಂವ್ ರೂ 97.2 ರೂ 90.07
  • ಚಂಡೀಗಢ ರೂ 96.21 ರೂ 84.28

ಇದನ್ನೂ ಓದಿ : ಐಡಿಬಿಐ ಬ್ಯಾಂಕ್ ಗ್ರಾಹಕರಿಗೆ ಗುಡ್‌ ನ್ಯೂಸ್‌ : ಈ ಹೊಸ ಎಫ್‌ಡಿ ಯೋಜನೆಯಿಂದ ಸಿಗಲಿದೆ ಶೇ. 7.65 ಬಡ್ಡಿದರ

ಇದನ್ನೂ ಓದಿ : ಹಾಲಿನ ಬೆಲೆ ಲೀಟರ್ ಗೆ 2 ರೂಪಾಯಿ ಏರಿಕೆ : ಗ್ರಾಹಕರಿಗೆ ಮತ್ತೆ ಬರೆ

ಮೇ 2022 ರಲ್ಲಿ ಸಂಭವಿಸಿದ ಇಂಧನ ಬೆಲೆಗಳ ಕೊನೆಯ ಪರಿಷ್ಕರಣೆಯಿಂದ ಸೋಮವಾರದಂದು ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸತತ 11 ನೇ ತಿಂಗಳಿಗೆ ಬದಲಾಗದೆ ಉಳಿದಿವೆ. ನಗರದೊಳಗೆ ಔಟ್ಲೆಟ್ನಿಂದ ಔಟ್ಲೆಟ್‌ಗೆ ಬೆಲೆಗಳಲ್ಲಿ ಸ್ವಲ್ಪ ವ್ಯತ್ಯಾಸವಿರಬಹುದು. ಈ ಡೇಟಾವನ್ನು ಸ್ಕೈಕ್ಯಾಪ್‌ನ ಇಂಧನ ಬೆಲೆಯಿಂದ ಪಡೆಯಲಾಗಿದೆ. ಇದು ಪ್ರತಿದಿನವೂ ಎಲ್ಲಾ ಪ್ರಮುಖ ನಗರಗಳಲ್ಲಿ ಇಂಧನ ಬೆಲೆಗಳ ನವೀಕರಣಗಳನ್ನು ಪಡೆಯಲಾಗುತ್ತದೆ.

ಇದನ್ನೂ ಓದಿ : ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ : ಅಂಚೆ ಕಚೇರಿಯ ಈ ಯೋಜನೆಯಲ್ಲಿ ಮಹಿಳೆಯರಿಗೆ ಸಿಗಲಿದೆ ಗರಿಷ್ಠ ಮಟ್ಟದ ಆದಾಯ

Petrol Diesel Price Today: Petrol, Diesel Prices: Do you know what is the price today in major cities?

Comments are closed.