ಭಾನುವಾರ, ಏಪ್ರಿಲ್ 27, 2025
HomebusinessPM Awas Yojana : ಹೊಸ ಮನೆ ಕಟ್ಟಿಸುವವರಿಗೆ ಕೇಂದ್ರ ಸರಕಾರದಿಂದ ಸಿಗಲಿದೆ 30 ಲಕ್ಷ...

PM Awas Yojana : ಹೊಸ ಮನೆ ಕಟ್ಟಿಸುವವರಿಗೆ ಕೇಂದ್ರ ಸರಕಾರದಿಂದ ಸಿಗಲಿದೆ 30 ಲಕ್ಷ ರೂಪಾಯಿ

- Advertisement -

PM Awas Yojana : ಮನೆ ಕಟ್ಟಿಸಬೇಕು ಅನ್ನೋದು ಪ್ರತಿಯೊಬ್ಬರ ಕನಸು. ಬಡವರು ಕೂಡ ಸ್ವತಃ ಸೂರು ಹೊಂದ ಬೇಕು ಅನ್ನೋ ಉದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯೊಂದನ್ನು ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ ಹೊಸದಾಗಿ ಮನೆ ಕಟ್ಟಿಸುವ ಬಡವರಿಗೆ ಬರೋಬ್ಬರಿ 30 ಲಕ್ಷ ರೂಪಾಯಿ ದೊರೆಯಲಿದೆ.

ಪ್ರಧಾನ ಮಂತ್ರಿ ಆವಾಸ್‌ ಯೋಜನೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗುತ್ತಲೇ ಜಾರಿಗೆ ಬಂದ ಯೋಜನೆಯಾಗಿದ್ದು, ಈ ಯೋಜನೆ ಯನ್ನು ಕೇಂದ್ರ ಸರಕಾರ ಮುಂದುವರಿಸುವುದಾಗಿ ಘೋಷಣೆ ಮಾಡಿದೆ. ಸ್ವಯಂ ಉದ್ಯೋಗಿಗಳು, ಅಂಗಡಿ ಮುಂಗಟ್ಟು ನೆಡೆಸುವವರು. ಸಣ್ಣ ವ್ಯಾಪಾರಿ ಗಳು ಸ್ವತಃ ಮನೆಯನ್ನು ನಿರ್ಮಿಸಲು ಈ ಯೋಜನೆಯ ಅಡಿಯಲ್ಲಿ ನೆರವು ದೊರೆಯಲಿದೆ.

PM Awas Yojana Updates new houses will get 30 lakh rupees from the PM Narendra Modi government
Image Credit to Original Source

ಪ್ರಧಾನ ಮಂತ್ರಿ ಆವಾಸ್‌ ಯೋಜನೆಯ ಅಡಿಯಲ್ಲಿ 35 ಲಕ್ಷ ವೆಚ್ಚದ ಮನೆಗೆ ಸಬ್ಸಿಡಿ ಸಾಲವನ್ನು 30 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಸುಮಾರು 20  ವರ್ಷಗಳ ಅವಧಿಗೆ ಈ ಸಾಲ ದೊರೆಯುತ್ತಿದ್ದು, ಸಬ್ಸಿಡಿ ರೂಪದಲ್ಲಿ 2.67  ಲಕ್ಷ ರೂಪಾಯಿ ಬಡ್ಡಿ ಉಳಿಕೆ ಮಾಡಬಹುದಾಗಿದೆ. ಗ್ರಾಮೀಣ ಜನತೆ ಮಾತ್ರವಲ್ಲದೇ, ಮೆಟ್ರೋ ಮತ್ತು ನಾನ್‌ ಮೆಟ್ರೋ ನಗರಗಳಲ್ಲಿ 35  ಲಕ್ಷದ ವರೆಗೆ ಮನೆಯನ್ನು ಖರೀದಿ ಮಾಡಬಹುದಾಗಿದೆ. ದಿಕ್ಕೆ 30  ಲಕ್ಷ ರೂಪಾಯಿಯ ಗೃಹ ಸಾಲ ದೊರೆಯಲಿದೆ.

ಇದನ್ನೂ ಓದಿ : ಕೇಂದ್ರ ಸರಕಾರದಿಂದ ರೈತರಿಗೆ ಗುಡ್‌ನ್ಯೂಸ್‌ : ಕಿಸಾನ್‌ ಸಮ್ಮಾನ್‌ ಯೋಜನೆಯ 17 ನೇ ಕಂತಿನ ಹಣ ಈ ದಿನ ಜಮೆ

ಗೃಹ ಸಾಲ ಪಡೆಯುವವರ ವಾರ್ಷಿಕ ಆದಾಯ 18  ಲಕ್ಷ ರೂಪಾಯಿ ಮೀರಿದ್ರೆ ಅಂತಹ ಸಂದರ್ಭದಲ್ಲಿ 12 ಲಕ್ಷ ರೂಪಾಯಿ ಹಣವನ್ನು ಗೃಹ ಸಾಲವಾಗಿ ಪಡೆದುಕೊಳ್ಳಬಹುದಾಗಿದೆ. ಕಾಂಗ್ರೆಸ್‌ ಪಕ್ಷ ಕರ್ನಾಟಕದಲ್ಲಿ ವಿವಿಧ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಲೋಕಸಭಾ ಚುನಾವಣೆಯ ಹೊತ್ತಲ್ಲಿ ಮತ್ತಷ್ಟು ಗ್ಯಾರಂಟಿ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರ ಪಿಎಂ ಆವಾಸ್‌ ಯೋಜನೆಯನ್ನು ವಿಸ್ತರಣೆ ಮಾಡುವುದಾಗಿ ಘೋಷಣೆ ಮಾಡಿದೆ.

PM Awas Yojana Updates new houses will get 30 lakh rupees from the PM Narendra Modi government
Image Credit to Original Source

ಇದನ್ನೂ ಓದಿ : ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆ ! ಮೇ 1 ರಿಂದ ಬದಲಾಗಲಿದೆ ಈ 10 ರೂಲ್ಸ್‌

ಪ್ರಧಾನಮಂತ್ರಿ ಆವಾಸ್‌ ಯೋಜನೆಯನ್ನು 2015 ರಲ್ಲಿ ಜಾರಿಗೆ ತರಲಾಗಿದ್ದು, ಈ ಯೋಜನೆಯಡಿಯಲ್ಲಿ ಇದುವರೆಗೆ ಒಟ್ಟು 20 ಮಿಲಿಯನ್‌ ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ. ಸದ್ಯ ಈ ಯೋಜನೆಯನ್ನು 2024 ರ ಅಂತ್ಯದ ವರೆಗೆ ವಿಸ್ತರಣೆ ಮಾಡಲಾಗಿದ್ದು, ಬಡವರ್ಗದವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಈ ಯೋಜನೆಯು ಅನುಕೂಲಕರವಾಗಲಿದೆ.

ಇದನ್ನೂ ಓದಿ : 40 ವರ್ಷ ಮೇಲ್ಪಟ್ಟವರಿಗೆ ಪ್ರತೀ ತಿಂಗಳು ಸಿಗಲಿದೆ 12,000 ರೂಪಾಯಿ !

ಮನೆಯಲ್ಲಿಯೇ ಕುಳಿತು ಪಿಎಂ ಆವಾಸ್‌ ಯೋಜನೆಗೆ ಅರ್ಜಿ ಸಲ್ಲಿಸಿ :

ಪ್ರಧಾನ ಮಂತ್ರಿ ಆವಾಸ್‌ ಯೋಜನೆಗೆ ಮನೆಯಲ್ಲಿಯೇ ಕುಳಿತು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಜನಸೇವಾ ಕೇಂದ್ರ, ಗ್ರಾಮ ಸೇವಕ, ಪಿಎಂ ಆವಾಸ್‌ ಯೋಜನೆಯ ಸಹಾಯಕರ ಸಹಾಯದಿಂದಾಗಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅಲ್ಲದೇ ಆನ್‌ಲೈನ್‌ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ 2024 ರಲ್ಲಿ ಅರ್ಜಿ ಸಲ್ಲಿಸಲು ಆನ್‌ಲೈನ್‌ ಫಾರ್ಮ್‌ ಇನ್ನೂ ಆರಂಭವಾಗಿಲ್ಲ.

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಬೇಕಾದ ದಾಖಲೆಗಳು :

  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ಫೋಟೋ ಜಾಬ್ ಕಾರ್ಡ್
  • ಸ್ವಚ್ಛ ಭಾರತ್ ಮಿಷನ್ ನೋಂದಣಿ ಸಂಖ್ಯೆ
  • ಬ್ಯಾಂಕ್ ಪಾಸ್‌ಬುಕ್
  • ಮೊಬೈಲ್ ಸಂಖ್ಯೆ
  • ಆದಾಯ ಪ್ರಮಾಣಪತ್ರ

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅರ್ಹತೆ :

  • ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು
  • ಅರ್ಜಿದಾರರು ಭಾರತದ ನಿವಾಸಿಯಾಗಿರಬೇಕು. ಅಲ್ಲದೇ ಶಾಶ್ವತ ನಿವಾಸವನ್ನು ಹೊಂದಿಬೇಕು
  • 16 ರಿಂದ 59 ವರ್ಷದ ಒಳಗಿನವರು ಈ ಯೋಜನೆಗೆ ಸೇರ್ಪಡೆ ಆಗಬಹುದು
  • ಅರ್ಜಿದಾರರ ವಾರ್ಷಿಕ ಆದಾಯ ₹ 300000 ರಿಂದ ₹ 6 ಲಕ್ಷದ ನಡುವೆ ಇರಬೇಕು
  • ಅರ್ಜಿದಾರರ ಹೆಸರು ಪಡಿತರ ಚೀಟಿ ಬಿಪಿಎಲ್ ಪಟ್ಟಿಯಲ್ಲಿರಬೇಕು

PM Awas Yojana Updates new houses will get 30 lakh rupees from the PM Narendra Modi government

 

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular