ದೇಶದ ಮಹಿಳೆಯರನ್ನು ಆರ್ಥಿಕವಾಗಿ ಆತ್ಮನಿರ್ಭರರನ್ನಾಗಿಸಲು ಮತ್ತು ಅವರ ಉದ್ದೇಶಗಳನ್ನು ಬಲಪಡಿಸಲು ಕೇಂದ್ರ ಸರ್ಕಾರವು ಉಚಿತ ಹೊಲಿಗೆ ಯಂತ್ರ ಯೋಜನೆಗೆ ಚಾಲನೆ ನೀಡಿದೆ(PM Free Silai Machine Yojana). ಈ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರ(Sewing Machine)ಗಳನ್ನು ನೀಡಲಾಗುತ್ತಿದೆ.
ಇದರ ಉದ್ದೇಶ ದೇಶದ ಮಹಿಳೆಯರನ್ನು ಸಶಕ್ತರನ್ನಾಗಿಸುವುದಾಗಿದೆ. ದೇಶದ ಮಹಿಳೆಯರು ಅರ್ಜಿ ಸಲ್ಲಿಸುವುದರ ಮೂಲಕ ಪ್ರಧಾನಂತ್ರಿಗಳ ಉಚಿತ ಹೊಲಿಗೆ ಯಂತ್ರ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ.
ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ?
ಈ ಯೋಜನೆಯನ್ನು ಕೇಂದ್ರ ಸರ್ಕರ ದೇಶದ ಪ್ರತಿ ರಾಜ್ಯದ 50 ಸಾವಿರ ಮಹಿಳೆಯರಿಗೆ ಸಿದ್ಧಪಡಿಸಿದೆ. ಈ ಯೋಜನೆಯಡಿಯಲ್ಲಿ 20 ರಿಂದ 40 ವರ್ಷ ವಯಸ್ಸಿನ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದಾಗ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ದೊರೆಯಲಿದೆ.
ಯಾವ ರಾಜ್ಯಗಳಲ್ಲಿದೆ ಈ ಯೋಜನೆ?
ಪ್ರಧಾನಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆಯು ಕಲವೇ ರಾಜ್ಯಗಳಲ್ಲಿ ಚಾಲನೆಯಲ್ಲಿದೆ. ಇದರಲ್ಲಿ ಕರ್ನಾಟಕ, ಹರಿಯಾಣ, ಗುಜರಾತ್, ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳಿಗೆ. ಇಂತಹ ಪರಿಸ್ಥತಿಯಲ್ಲಿ ಈ ರಾಜ್ಯದ ಮಹಿಳೆಯರು ಇದರ ಲಾಭ ಪಡೆದುಕೊಳ್ಳಲಾಗುವುದು.
ಈ ಯೋಜನೆಗೆ ಯಾರು ಅರ್ಹರು?
- ಅರ್ಜಿದಾರರು ಭಾರತದ ಪ್ರಜೆಯಾಗಿರುವುದು ಕಡ್ಡಾಯವಾಗಿದೆ.
- ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಮಾತ್ರ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
- ಅರ್ಜಿದಾರ ಮಹಿಳೆಯ ಪತಿಯ ವಾರ್ಷಿಕ ಆದಾಯವು 12 ಸಾವಿರಕ್ಕಿಂತ ಹೆಚ್ಚಿರಬಾರದು.
- ವಿಧವೆಯರು ಮತ್ತು ದಿವ್ಯಾಂಗ ಮಹಿಳೆಯರು ಈ ಯೋಜನೆಯ ಲಾಭ ಪಡೆದುಕೋಳ್ಳಬಹುದಾಗಿದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
- ಈ ಯೋಜನೆಯ ಲಾಭ ಪಡೆಯಲು ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ. ಅದಕ್ಕಾಗಿ ಆನ್‌ಲೈನ್ ಅರ್ಜಿ ಸಹ ಸಲ್ಲಿಸಬಹುದಾಗಿದೆ.
- ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಸಿದ್ಧರಿರುವ ಯಾವುದೇ ಮಹಿಳೆ ಸರ್ಕಾರದ ಅಧಿಕೃತ ವೆಬ್‌ಸೈಟ್ www.india.gov.in ಗೆ ಭೇಟಿ ನೀಡಬೇಕಾಗುತ್ತದೆ.
- ವೆಬ್‌ಸೈಟ್‌ನ ಹೋಮ್ ಪೇಜ್‌ನಲ್ಲಿ ಹೊಲಿಗೆ ಯಂತ್ರದ ಉಚಿತ ಪೂರೈಕೆಗಾಗಿ ಅರ್ಜಿ ಸಲ್ಲಿಸುವ ಲಿಂಕ್ ಕಾಣಬಹುದು.
- ಅಲ್ಲಿ ಅಗತ್ಯ ದಾಖಲೆಗಳನ್ನು ಒದಗಿಸಿ. ನಂತರ ಫಾರ್ಮ್ ಅನ್ನು ಸಂಬಂಧಪಟ್ಟ ಕಛೇರಿಗೆ ಸಲ್ಲಿಸಿ. ನೀವು ಸಲ್ಲಿಸಿದ ಅರ್ಜಿಯಲ್ಲಿ ಎಲ್ಲಾ ಮಾಹಿತಿಗಳು ಸರಿಯಾಗಿದೆಯೇ ಎಂದು ಪರಿಶೀಲಿಸಲಾಗುವುದು. ನಂತರ ಉಚಿತ ಹೊಲಿಗೆ ಯಂತ್ರವನ್ನು ನೀಡಲಾಗುವುದು.
ಅಗತ್ಯವಿರುವ ದಾಖಲೆಗಳು:
- ಜನನ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಮೊಬೈಲ್ ನಂಬರ್
- ಪಾಸ್‌ಪೋರ್ಟ್ ಸೈಜ್‌ನ ಫೋಟೋ
ಇದನ್ನೂ ಓದಿ : Electricity Bill Scam : ಎಚ್ಚರ ! ವಿದ್ಯುತ್ತ ಬಿಲ್ ಕಟ್ಟಿ ಎಂದೂ ನಿಮ್ಮ ಹಣ ದೋಚಬಹುದು!!
ಇದನ್ನೂ ಓದಿ : Healthy Monsoon Diet : ಮಳೆಗಾಲದಲ್ಲಿ ಏನು ತಿಂದರೆ ಒಳ್ಳೆಯದು? ಬೆಸ್ಟ್ ಟಿಪ್ಸ್ ಹೇಳಿದ್ದಾರೆ ಫೇಮಸ್ ನ್ಯುಟ್ರಿಷನಿಸ್ಟ್!
(PM Free Silai Machine Yojana how to apply for sewing machine)