ಮಂಗಳವಾರ, ಏಪ್ರಿಲ್ 29, 2025
HomebusinessPM ಕಿಸಾನ್ ಯೋಜನೆ : ದೀಪಾವಳಿ ಹೊತ್ತಲ್ಲೇ 8 ಕೋಟಿಗೂ ಅಧಿಕ ರೈತರಿಗೆ ಇಲ್ಲಿದೆ ಭರ್ಜರಿ...

PM ಕಿಸಾನ್ ಯೋಜನೆ : ದೀಪಾವಳಿ ಹೊತ್ತಲ್ಲೇ 8 ಕೋಟಿಗೂ ಅಧಿಕ ರೈತರಿಗೆ ಇಲ್ಲಿದೆ ಭರ್ಜರಿ ಗುಡ್‌ನ್ಯೂಸ್‌

- Advertisement -

ಪ್ರಧಾನಿ ನರೇಂದ್ರ ಮೋದಿ ಅವರ ಕನಸು ಪಿಎಂ ಕಿಸಾನ್‌ ಯೋಜನೆ (PM Kissan Yojana). ಈ ಯೋಜನ ಮೂಲಕ ವಾರ್ಷಿಕವಾಗಿ ರೈತರಿಗೆ ನೆರವಾಗುವ ಕಾರ್ಯವನ್ನು ಕೇಂದ್ರ ಸರಕಾರ ಮಾಡುತ್ತಿದೆ. ಇದರ ಜೊತೆಗೆ ದೀಪಾವಳಿ ಹಬ್ಬ(Deepavali Festival) ಹೊತ್ತಲ್ಲೇ ಕೇಂದ್ರ ಸರಕಾರ ದೇಶದ 8 ಕೋಟಿಗೂ ಅಧಿಕ ರೈತರಿಗೆ ಭರ್ಜರಿ ಗುಡ್‌ ನ್ಯೂಸ್‌ ಕೊಟ್ಟಿದೆ.

ಪಿಎಂ ಕಿಸಾನ್‌ ಸಮ್ಮಾನ ಯೋಜನೆಯ 15 ನೇ ಕಂತು ದೀಪಾವಳಿ ಹಬ್ಬದ ನಂತರ ಬಿಡುಗಡೆಯಾಗಲಿದೆ. ನವೆಂಬರ್ ಕೊನೆಯ ವಾರದಲ್ಲಿ 8 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ತಲಾ 2,000 ರೂ.ಜಮೆ ಆಗಲಿದೆ. ಆದರೆ ಮುಂದಿನ ಕಂತಿನ ಪ್ರಯೋಜನವನ್ನು ರೈತರು ಪಡೆಯಲು ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.

PM Kisan 15th Installment Great news for more than 8 crore farmers on Diwali
Image credit to Original Source

ಪ್ರಧಾನ ಮಂತ್ರಿ ಕಿಸಾಜ್‌ ಯೋಜನೆಗೆ ಸಂಬಂಧಿಸಿದಂತೆ KYC ಅನ್ನು ನವೀಕರಣ ಮಾಸಿದವರಿಗೆ ಮಾತ್ರವೇ ಹಣ ಸಿಗುತ್ತದೆ. ಆದರೆ ಆಧಾರ್‌ ಕಾರ್ಡ್‌ ದಾಖಲೆಯಲ್ಲಿ ಇರುವ ಹೆಸರಿನ ಪ್ರಕಾರವೇ ಕಿಸಾನ್‌ ಯೋಜನೆಗೆ ಅರ್ಜಿ ಸಲ್ಲಿಸದೇ ಇರುವವರಿಗೆ ಮುಂದಿನ ಕಂತಿನ ಹಣ ಸಿಗೋದಿಲ್ಲ. ಒಂದೊಮ್ಮೆ ತಮ್ಮ ದಾಖಲೆಯಲ್ಲಿ ಲೋಪದೋಷಗಳಿದ್ರೆ ಅದನ್ನು ಸರಿಪಡಿಸಲು ಅವಕಾಶವಿದೆ.

ಇದನ್ನೂ ಓದಿ : ಈ ಕೆಲಸ ಮಾಡಿಸದಿದ್ರೆ ನಿಷ್ಕ್ರೀಯಗೊಳ್ಳಲಿದೆ ನಿಮ್ಮ ಪ್ಯಾನ್‌ಕಾರ್ಡ್‌ : ಸರಕಾರದಿಂದ ಹೊಸ ರೂಲ್ಸ್‌ ಜಾರಿ

ಪಿಎಂ ಕಿಸಾನ್‌ ಪೋರ್ಟಲ್‌ಗೆ ಲಾಗ್ಇನ್‌ ಆಗುವ ಮೂಲಕ ಮನೆಯಲ್ಲಿಯೇ ಕುಳಿತು ತಮ್ಮ ದಾಖಲೆಗಳನ್ನು ನೀಡುವ ಮೂಲಕ ತಿದ್ದುಪಡಿಗೆ ಅವಕಾಶ ವಿದೆ. ಒಂದೊಮ್ಮೆ ಆನ್‌ಲೈನ್‌ ಮೂಲಕ ತಿದ್ದುಪಡಿ ಮಾಡಿಸಲು ಸಾಧ್ಯವಾಗದೇ ಇರುವವರು ನೇರವಾಗಿಸಿಎಸ್‌ಸಿ ಕೇಂದ್ರಗಳಿಗೆ ತೆರಳಿ ಈ ಕೆವೈಸಿ ಮಾಡಿಸಬಹುದಾಗಿದೆ.

ಪಿಎಂ ಕಿಸಾನ್‌ ಯೋಜನೆ ಫಲಾನುಭವಿಗಳ ಪಟ್ಟಿ ವೀಕ್ಷಿಸುವುದು ಹೇಗೆ  ?

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ವೀಕ್ಷಿಸಲು ನೇರವಾಗಿ ಪಿಎಂ ಕಿಸಾನ್‌ ಪೋರ್ಟಲ್‌ಗೆ ಭೇಟಿ ನೀಡ ಬಹುದಾಗಿದೆ.  pmkisan.gov.in ಅಧಿಕೃತ ವೆಬ್‌ಸೈಟ್‌ಗೆ ಲಾಗ್‌ ಇನ್‌ ಆದ ನಂತರದಲ್ಲಿ ಕೆಳಗೆ ಸ್ಕ್ರಾಲ್‌ ಮಾಡಿ, ನಂತರ ಫಾರ್ಮಸ್‌ ಕಾರ್ನರ್‌ ಕಾಣಿಸುತ್ತದೆ.

ಇದನ್ನೂ ಓದಿ : ಪದವೀಧರರಿಗೆ 3000, ಡಿಪ್ಲೋಮಾ ಆದ್ರೆ 1500 ರೂ. : ಕರ್ನಾಟಕ ಯುವನಿಧಿ ಯೋಜನೆ ಅರ್ಜಿ ಸಲ್ಲಿಸಿದ್ರಾ ?

ಇಲ್ಲಿ ನೀವು ಟ್ಯಾಬ್‌ ಮೇಲೆ ಕ್ಲಿಕ್‌ ಮಾಡಿದ್ರೆ, ರಾಜ್ಯ, ಜಿಲ್ಲೆ, ತಾಲೂಕು, ಬ್ಲಾಕ್‌ ಅಂತಿಮವಾಗಿ ನಿಮ್ಮ ಗ್ರಾಮದ ಮಾಹಿತಿಯನ್ನು ನೀಡುವ ಮೂಲಕ ಫಲಾನುಭವಿಗಳ ಪಟ್ಟಿಯನ್ನು ಪಡೆಯಬಹುದಾಗಿದೆ. ಒಂದೊಮ್ಮೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೇ ಇದ್ರೆ ಕೂಡಲೇ ನಿಮ್ಮ ಇಕೆವೈಸಿಯನ್ನು ಮಾಡಿಸಿಕೊಳ್ಳಿ.

PM Kisan 15th Installment Great news for more than 8 crore farmers on Diwali
Image Credit to Original Source

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಕೇಂದ್ರ ಸರಕಾರ 2019 ರಲ್ಲಿ ಜಾರಿಗೆ ತಂದಿದೆ. ಪ್ರಮುಖವಾಗಿ ರೈತರಿಗೆ ಕೃಷಿಗಾಗಿ ಆರ್ಥಿಕ ನೆರವು ನೀಡುವ ಉದ್ದೇಶದಿಂದಲೇ ವಾರ್ಷಿಕ ಮೂರು ಕಂತುಗಳ ಮೂಲಕ ರೈತರ ಖಾತೆಗೆ ತಲಾ 2000 ರೂಪಾಯಿಯನ್ನು ಸರಕಾರ ವರ್ಗಾವಣೆ ಮಾಡುತ್ತಿದೆ.

ಇದನ್ನೂ ಓದಿ : ವಾರಕ್ಕೆ 5 ದಿನ ಕೆಲಸ, ವೇತನದಲ್ಲಿ ಶೇ.15ರಷ್ಟು ಹೆಚ್ಚಳ : ನೌಕರರಿಗೆ ಇಲ್ಲಿದೆ ಭರ್ಜರಿ ಗುಡ್‌ನ್ಯೂಸ್‌

ಒಟ್ಟು ಒಂದು ವರ್ಷದಲ್ಲಿ 6,000 ರೂ. ರೈತರ ಖಾತೆಗಳಿಗೆ ಜಮೆ ಆಗಲಿದೆ. ಎಪ್ರಿಲ್‌ ನಿಂದ ಜುಲೈ ವರೆಗೆ ಹಾಗೂ ಅಗಸ್ಟ್‌ ನಿಂದ ನವೆಂಬರ್‌ ಮತ್ತು ಡಿಸೆಂಬರ್‌ನಿಂದ ಮಾರ್ಚ್‌ ವರೆಗೆ ಒಟ್ಟು ಮೂರು ಬಾರಿ ರೈತರಿಗೆ ಹಣ ನೇರವಾಗಿ ಬ್ಯಾಂಕ್‌ ಖಾತೆಗೆ ಜಮೆ ಆಗುತ್ತಿದೆ. ತೀರಾ ಸಂಕಷ್ಟದಲ್ಲಿರುವ ರೈತರಿಗೆ ಪಿಎಂ ಕಿಸಾನ್‌ ಯೋಜನೆ ನಿಜಕ್ಕೂ ವರದಾನವಾಗಿದೆ. ಇದೀಗ ದೀಪಾವಳಿ ಹೊತ್ತಲ್ಲೇ ಸರಕಾರ ಮತ್ತೊಂದು ಕಂತಿನ ಹಣ ಬಿಡುಗಡೆ ಮುಂದಾಗಿದೆ.

PM Kisan 15th Installment Great news for more than 8 crore farmers on Diwali

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular