ವಿಶ್ವಕಪ್‌ ಸೆಮಿಫೈನಲ್‌ : ಪಾಕಿಸ್ತಾನಕ್ಕೆ ಇನ್ನೂ ಇದೆ ಅವಕಾಶ, ಭಾರತ – ಪಾಕಿಸ್ತಾನ ಮುಖಾಮುಖಿ ?

World Cup semi-final Pakistan still has a chance, India-Pakistan encounter ? ಪಾಕಿಸ್ತಾನ ಸದ್ಯ ಫಿನಿಕ್ಸ್‌ ನಂತೆ ಎದ್ದು ನಿಂತಿದ್ದು, ಸೆಮಿಫೈನಲ್‌ ನಲ್ಲಿ ಆಡುವುದಕ್ಕೆ ಇನ್ನೂ ಒಂದು ಅವಕಾಶವಿದೆ. ಜೊತೆಗೆ ವಿಶ್ವಕಪ್‌ ಸೆಮಿಫೈನಲ್‌ ಭಾರತ - ಪಾಕಿಸ್ತಾನ (India vs Pakistan) ಕದನಕ್ಕೆ ವೇದಿಕೆ ಆಗುತ್ತಾ ಅನ್ನೋ ಕುತೂಹಲವೂ ಮೂಡುತ್ತಿದೆ.

World Cup 2023 Semi final : ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಈ ಬಾರಿ ಬಹುತೇಕ ಲೀಗ್‌ನಿಂದಲೇ ಹೊರ ಬೀಳುತ್ತೆ ಅಂತಾ ಹೇಳಲಾಗುತ್ತಿತ್ತು. ಆದ್ರೆ ಪಾಕಿಸ್ತಾನ ಸದ್ಯ ಫಿನಿಕ್ಸ್‌ ನಂತೆ ಎದ್ದು ನಿಂತಿದ್ದು, ಸೆಮಿಫೈನಲ್‌ ನಲ್ಲಿ ಆಡುವುದಕ್ಕೆ ಇನ್ನೂ ಒಂದು ಅವಕಾಶವಿದೆ. ಜೊತೆಗೆ ವಿಶ್ವಕಪ್‌ ಸೆಮಿಫೈನಲ್‌ ಭಾರತ – ಪಾಕಿಸ್ತಾನ (India vs Pakistan) ಕದನಕ್ಕೆ ವೇದಿಕೆ ಆಗುತ್ತಾ ಅನ್ನೋ ಕುತೂಹಲವೂ ಮೂಡುತ್ತಿದೆ.

World Cup semi-final Pakistan still has a chance, India-Pakistan encounter
Image Credit to Original Source

ಭಾರತ – ಪಾಕಿಸ್ತಾನ ಪಂದ್ಯ ವೀಕ್ಷಿಸಲು ವಿಶ್ವವೇ ತುದಿಗಾಲಿನಲ್ಲಿ ನಿಂತಿರುತ್ತೆ. ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿ ಆಗಲಿವೆ ಅಂತಾ ಹೇಳಲಾಗಿತ್ತು. ಆದ್ರೆ ಲೀಗ್‌ ಹಂತದ ಆರಂಭಿಕ ಪಂದ್ಯಗಳಲ್ಲಿ ಪಾಕಿಸ್ತಾನ ಮುಗ್ಗರಿಸಿತ್ತು. ಆದರೆ ಕೊನೆಗೂ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ ತಂಡ ಸೆಮಿಫೈನಲ್‌ಗೆ ಎಂಟ್ರಿ ಕೊಡುವ ಕನಸು ಕಾಣುತ್ತಿದೆ.

ಪಾಕಿಸ್ತಾನದ ಆರ್ಭಟದಿಂದಾಗಿ ಇದೀಗ ನ್ಯೂಜಿಲೆಂಡ್‌ ಸೆಮಿಫೈನಲ್‌ ಕನಸು ತೂಗುಯ್ಯಾಲೆಯಲ್ಲಿದೆ. ಜೊತೆಗೆ ಪಾಕಿಸ್ತಾನ ತಂಡಕ್ಕೆ ಕೂಡ ಸೆಮಿಫೈನಲ್‌ಗೆ ಎಂಟ್ರಿ ಕೊಡುವ ಅವಕಾಶ ಒದಗಿ ಬಂದಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಈಗಾಗಲೇ ಸೆಮಿಫೈನಲ್‌ ಟಿಕೆಟ್‌ ಪಡೆದುಕೊಂಡಿವೆ. ಉಳಿದಂತೆ ಎರಡು ಸ್ಥಾನಕ್ಕಾಗಿ ನಾಲ್ಕು ತಂಡಗಳು ಪೈಪೋಟಿ ನಡೆಸುತ್ತಿವೆ.

ಇದನ್ನೂ ಓದಿ : ವಿರಾಟ್‌ ಕೊಹ್ಲಿ ಶತಕ ವಿಶ್ವದಾಖಲೆ : ತನ್ನ ದಾಖಲೆ ಸರಿಗಟ್ಟಿದ ಕೊಹ್ಲಿ ಬಗ್ಗೆ ಸಚಿನ್‌ ತೆಂಡೂಲ್ಕರ್‌ ಹೀಗೆ ಹೇಳಿದ್ಯಾಕೆ ?

ಆಸ್ಟ್ರೇಲಿಯಾ ತಂಡ ಅಪ್ಘಾನಿಸ್ತಾನದ ವಿರುದ್ದ ಗೆಲುವು ದಾಖಲಿಸಿದ್ರೆ ಬಹುತೇಕ ಸೆಮಿಫೈನಲ್‌ಗೆ ಎಂಟ್ರಿ ಕೊಡಲಿದೆ. ಆಸ್ಟ್ರೇಲಿಯಾ ಒಟ್ಟು 7 ಪಂದ್ಯ ಗಳನ್ನು ಆಡಿದ್ದು, ಈ ಪೈಕಿ 5 ಪಂದ್ಯಗಳನ್ನು ಜಯಿಸಿ 10  ಅಂಕಗಳನ್ನು ಪಡೆದುಕೊಂಡಿದೆ. ವಿಶ್ವಕಪ್‌ನ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ

World Cup semi-final Pakistan still has a chance, India-Pakistan encounter
Image Credit to Original Source

ಒಂದೊಮ್ಮೆ ಆಸ್ಟ್ರೇಲಿಯಾ ಅಪ್ಘಾನಿಸ್ತಾನದ ವಿರುದ್ದ ಮುಗ್ಗರಿಸಿದ್ರೆ ಸೆಮಿಫೈನಲ್‌ ಎಂಟ್ರಿಗಾಗಿ ಉಳಿದ ತಂಡಗಳ ಜೊತೆಗೆ ಪೈಪೋಟಿ ನಡೆಸಬೇಕಾಗುತ್ತದೆ. ಇನ್ನು ಅಪ್ಘಾನಿಸ್ತಾನ ತಂಡ ಕೂಡ ಸೆಮಿಫೈನಲ್‌ ಕನಸು ಕಾಣುತ್ತಿದೆ. ಈಗಾಗಲೇ ಅಪ್ಘಾನಿಸ್ತಾನ ತಂಡ ಒಟ್ಟು 7 ಪಂದ್ಯಗಳನ್ನು ಆಡಿದ್ದು, 4 ಪಂದ್ಯಗಳನ್ನು ಜಯಿಸಿ 8 ಅಂಕ ಸಂಪಾದಿಸಿದೆ.

ಇದನ್ನೂ ಓದಿ : ವಿಶ್ವಕಪ್‌ ಸೆಮಿಫೈನಲ್‌ಗೆ ಅಫ್ಘಾನಿಸ್ತಾನ ತಂಡ ಎಂಟ್ರಿ ಫಿಕ್ಸ್‌ : ಇಲ್ಲಿದೆ ತಂಡಗಳ ಸೋಲು ಗೆಲುವಿನ ಪಕ್ಕಾ ಲೆಕ್ಕಾಚಾರ

ಆಸ್ಟ್ರೇಲಿಯಾ ವಿರುದ್ದ ಗೆಲುವು ಸಾಧಿಸಿದ್ರೆ 10 ಅಂಕ ಪಡೆಯಲಿದೆ. ದಕ್ಷಿಣ ಆಫ್ರಿಕಾ ವಿರುದ್ದದ ಮುಂದಿನ ಪಂದ್ಯವನ್ನು ಜಯಿಸಿದ್ರೆ ಸೆಮಿಫೈನಲ್‌ ಆಡುವುದು ಖಚಿತ. ಇನ್ನು ನ್ಯೂಜಿಲೆಂಡ್‌ ತಂಡ ಕೂಡ 8 ಪಂದ್ಯಗಳ ಪೈಕಿ 8 ಅಂಕ ಸಂಪಾದಿಸಿದೆ. ನ್ಯೂಜಿಲೆಂಡ್‌ ಅಂತಿಮ ಲೀಗ್‌ ಪಂದ್ಯವನ್ನು ಶ್ರೀಲಂಕಾ ವಿರುದ್ದ ಆಡಲಿದೆ. ನ್ಯೂಜಿಲೆಂಡ್‌ ಜಯಿಸಿದ್ರೆ 10 ಅಂಕ ಸಂಪಾದಿಸಲಿದೆ

World Cup semi-final Pakistan still has a chance, India-Pakistan encounter
Image Credit to Original Source

ಇನ್ನು ಪಾಕಿಸ್ತಾನ ತಂಡ ಈಗಾಗಲೇ 8 ಪಂದ್ಯಗಳನ್ನು ಆಡಿದ್ದು 4 ಪಂದ್ಯಗಳನ್ನು ಗೆದ್ದು 8 ಅಂಕ ಸಂಪಾದಿಸಿದೆ. ಇಂಗ್ಲೆಂಡ್‌ ತಂಡದ ವಿರುದ್ದ ಗೆಲುವು ದಾಖಲಿಸಿದ್ರೆ ಪಾಕಿಸ್ತಾನ ಸೆಮಿಫೈನಲ್‌ಗೆ ಎಂಟ್ರಿ ಕೊಡುವ ಅವಕಾಶವನ್ನು ಪಡೆಯಲಿದೆ. ಆದರೆ ಆಸ್ಟ್ರೇಲಿಯಾ, ಅಪ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್‌ ತಂಡಗಳ ಸೋಲು ಗೆಲುವಿನ ಲೆಕ್ಕಾಚಾರದ ಮೇಲೆ ಪಾಕಿಸ್ತಾನ ತಂಡದ ಭವಿಷ್ಯ ನಿಂತಿದೆ.

ಇದನ್ನೂ ಓದಿ : ವಿಶ್ವಕಪ್‌ನಲ್ಲಿ ವಿರಾಟ್‌ ಕೊಹ್ಲಿ ಪಾಲಿಗೆ 3 ಕೆಟ್ಟ ದಿನಗಳು !

ಭಾರತ, ಆಸ್ಟ್ರೇಲಿಯಾ, ಅಪ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ವಿರುದ್ದ ಪಾಕಿಸ್ತಾನ ಸೋಲನ್ನು ಕಂಡಿದೆ. ಆದರೆ ಬಾಂಗ್ಲಾದೇಶ, ನ್ಯೂಜಿಲೆಂಡ್‌, ಶ್ರೀಲಂಕಾ ಹಾಗೂ ನೆದರ್‌ಲ್ಯಾಂಡ್‌ ತಂಡಗಳ ವಿರುದ್ದ ಗೆಲುವು ಕಂಡಿದೆ. ಒಂದೊಮ್ಮೆ ಆಸ್ಟ್ರೇಲಿಯಾ ತಂಡ ಇಂದಿನ ಪಂದ್ಯವನ್ನು ಜಯಿಸಿದ್ರೆ ಪಾಕಿಸ್ತಾನ ಕ್ಕೆ ಸೆಮಿಫೈನಲ್‌ ಅವಕಾಶ ಹೆಚ್ಚಿದೆ.

World Cup semi-final Pakistan still has a chance, India-Pakistan encounter
Image Credit to Original Source

ಬಲಿಷ್ಟ ಆಟಗಾರರು ಇದ್ದರೂ ಕೂಡ ಪಾಕಿಸ್ತಾನ ತಂಡಕ್ಕೆ ಆರಂಭಿಕ ಆಟಗಾರರು ಕೈಕೊಟ್ಟಿದ್ದರು. ಆದರೆ ಅಂತಿಮ ಹಂತದಲ್ಲಿ ಫಖರ್‌ ಜಮಾನ್‌ ಆರ್ಭಟಿಸುತ್ತಿರುವುದು ಪಾಕಿಸ್ತಾನಕ್ಕೆ ಆನೆ ಬಲ ತಂದಿದೆ. ಆದರೆ ನಾಯಕ ಬಾಬರ್‌ ಅಜಂ ಫಾರ್ಮ್‌ ಕಳೆದುಕೊಂಡಿರುವುದು ಪಾಕಿಸ್ತಾನ ತಂಡಕ್ಕೆ ತಲೆನೋವು ತರಿಸಿದೆ. ಒಂದೊಮ್ಮೆ ಪಾಕಿಸ್ತಾನ ಸೆಮಿಫೈನಲ್‌ಗೆ ಎಂಟ್ರಿ ಕೊಟ್ರೆ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿವೆ.

World Cup semi-final Pakistan still has a chance, India-Pakistan encounter ?

Comments are closed.