PM Kisan Samman Nidhi Yojana 15th Instalment : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುಡ್‌ನ್ಯೂಸ್ ಕೊಟ್ಟಿದ್ದಾರೆ. ದೀಪಾವಳಿಯ ಸಂಭ್ರಮದಲ್ಲಿರುವ ರೈತರ ಖಾತೆಗಳಿಗೆ ಪಿಎಂ ಕಿಸಾನ್ ಯೋಜನೆಯ 15 ನೇ ಕಂತಿನ ಹಣ ಜಮೆ ಆಗಲಿದೆ. ನವೆಂಬರ್ 15 ರಂದು ರೈತರಿಗೆ ಹಣ ಸಿಗುವ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿದೆ.
ದೇಶದ ಅನ್ನದಾತರು ದೀಪಾವಳಿಯ ಸಂಭ್ರಮದಲ್ಲಿದ್ದಾರೆ. ಇದೇ ಹೊತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವದ ಯೋಜನೆಯಾಗಿರುವ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಕಂತಿನ ಹಣ ರೈತರ ಖಾತೆಗಳಿಗೆ ಜಮೆ ಆಗಲಿದೆ. ಈಗಾಗಲೇ 14 ಕಂತುಗಳ ಪ್ರಯೋಜನ ಪಡೆದಿರುವ ರೈತರ ಖಾತೆಗಳಿಗೆ ಇದೀಗ 15ನೇ ಕಂತಿನ ಹಣ ಜಮೆ ಆಗಲಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ರೈತರ ಖಾತೆಗಳಿಗೆ ವರ್ಷಂಪ್ರತಿ 3 ಕಂತುಗಳಲ್ಲಿ ತಲಾ 2000 ರೂಪಾಯಿ ಜಮೆ ಮಾಡಲಾಗುತ್ತಿದೆ. ಈ ಮೂಲಕ ರೈತರು ವರ್ಷಂಪ್ರತಿ 6000 ರೂಪಾಯಿ ಸಹಾಯಧನವನ್ನು ಕೇಂದ್ರ ಸರಕಾರದಿಂದ ಪಡೆಯಲಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದಲೂ ಈ ಯೋಜನೆ ಜಾರಿಯಲ್ಲಿದೆ.
ಇದನ್ನೂ ಓದಿ : ಕೇವಲ 20 ರೂ. ಕಟ್ಟಿದ್ರೆ 2 ಲಕ್ಷ ರೂಪಾಯಿ ಉಚಿತ : ಪ್ರತಿಯೊಬ್ಬರಿಗೆ ನರೇಂದ್ರ ಮೋದಿ ಸರಕಾರದ ಗಿಫ್ಟ್
ಭಾರತ ಸುಮಾರು ೮ ಕೋಟಿಗೂ ಅಧಿಕ ರೈತರು ಈಗಾಗಲೇ ಪಿಎಂ ಕಿಸಾನ್ ಯೋಜನೆಯ ಪ್ರಯೋಜನವನ್ನು ಪಡೆಯಲಿದ್ದಾರೆ. ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹೆಸರಲ್ಲಿ ನೋಂದಾಯಿಸುವ ಮೂಲಕ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ಈಗಾಗಲೇ ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ಪ್ರಯೋಜನ ಪಡೆದಿದ್ದರೂ ಕೂಡ ಕೆವೈಸಿ ಕಾರಣಕ್ಕೆ ಪಟ್ಟಿಯಿಂದ ನಿಮ್ಮ ಹೆಸರು ಕೈ ಬಿಟ್ಟು ಹೋಗಿರುವ ಸಾಧ್ಯತೆಯಿದೆ. ಹೀಗಾಗಿ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲವೇ ಎಂದು ಪರಿಶೀಲನೆಯನ್ನು ನಡೆಸಲು ಸರಕಾರ ಅವಕಾಶ ಕಲ್ಪಿಸಿದೆ.
ಇದನ್ನೂ ಓದಿ : ಸುಕನ್ಯಾ ಸಮೃದ್ಧಿ ಯೋಜನೆ : 12000 ರೂ. ಹೂಡಿಕೆ ಮಾಡಿ ರೂ 70 ಲಕ್ಷ ಪಡೆಯಿರಿ
ನೀವು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದರೆ, ಇಲ್ಲಾ ಯೋಜನೆಗೆ ಹೊಸದಾಗಿ ಅರ್ಜಿಯನ್ನು ಸಲ್ಲಿಕೆ ಮಾಡಿದ್ದೆ, ನೀವು ಮಾಡಬೇಕಾಗಿರುವುದು ಇಷ್ಟೆ. ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನಿಮ್ಮ ನೋಂದಣಿ ಸಂಖ್ಯೆ, ಕ್ಯಾಪ್ಚಾ ಕೋಡ್ ಹೊಂದಿರುವ ಡೇಟಾ ಆಯ್ಕೆಯನ್ನು ಮಾಡಿದ್ರೆ, ಫಲಾನುಭವಿಗಳ ಪಟ್ಟಿಯನ್ನು ಪಡೆಯಬಹುದಾಗಿದೆ.

ಒಂದೊಮ್ಮೆ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೇ ಇದ್ದಲ್ಲಿ ಕೂಡ ರೈತ ಸೇವಾ ಕೇಂದ್ರಗಳಿಗೆ ಭೇಟಿಯನ್ನು ನೀಡುವ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಾ ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದ್ರೆ ನಿಮ್ಮ ಖಾತೆಗೆ ನಾಳೆ ಪಿಎಂ ಕಿಸಾನ್ ಯೋಜನೆಯ ಹಣ ಸಂದಾಯವಾಗಲಿದೆ.
ಇದನ್ನೂ ಓದಿ : ಈ ಕೆಲಸ ಮಾಡಿಸದಿದ್ರೆ ನಿಷ್ಕ್ರೀಯಗೊಳ್ಳಲಿದೆ ನಿಮ್ಮ ಪ್ಯಾನ್‌ಕಾರ್ಡ್ : ಸರಕಾರದಿಂದ ಹೊಸ ರೂಲ್ಸ್ ಜಾರಿ
PM Kisan Samman Nidhi money will be deposited in farmers account tomorrow, Is your name in the list of beneficiaries? Check out