ಕೇವಲ 20 ರೂ. ಕಟ್ಟಿದ್ರೆ 2 ಲಕ್ಷ ರೂಪಾಯಿ ಉಚಿತ : ಪ್ರತಿಯೊಬ್ಬರಿಗೆ ನರೇಂದ್ರ ಮೋದಿ ಸರಕಾರದ ಗಿಫ್ಟ್‌

ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆಯಲ್ಲಿ ಪ್ರತೀ ವರ್ಷ 20 ರೂಪಾಯಿಯಂತೆ  ಹೂಡಿಕೆ ಮಾಡಿದ್ರೆ ನೀವು 2 ಲಕ್ಷ ರೂಪಾಯಿ ಹಣವನ್ನು ಪಡೆಯಲು ಅವಕಾಶವಿದೆ.

Pradhan mantri Suraksha Bima Yojana : ಕೇಂದ್ರದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನೇತೃತ್ವದ ಸರಕಾರ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದೀಗ ಕೇವಲ 20 ರೂಪಾಯಿ ಕಟ್ಟಿದ್ರೆ ಸಾಕು 2 ಲಕ್ಷ ರೂಪಾಯಿಯನ್ನು ನೀಡುವ ಹೊಸ ಯೋಜನೆಯೊಂದನ್ನು ಕೇಂದ್ರದ ನರೇಂದ್ರ ಮೋದಿ ಸರಕಾರ ಜಾರಿಗೆ ತಂದಿದೆ. ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆಯ ಲಾಭವನ್ನು ಪ್ರತಿಯೊಬ್ಬರೂ ಪಡೆಯಬಹುದಾಗಿದೆ.

ಭಾರತೀಯ ಜೀವ ವಿಮಾ ನಿಗಮ (life insurance corporation) ಹಲವು ಜೀವ ವಿಮಾ ಯೋಜನೆಗಳನ್ನು (LIC Policy) ಜನರಿಗೆ ಪರಿಚಯಿಸುತ್ತಿದೆ. ಅಪಘಾತಗಳು ಸಂಭವಿಸಿದಾಗ ನೆರವಾಗುವ ಸಲುವಾಗಿಯೇ ಎಲ್‌ಐಸಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅದ್ರಲ್ಲೂ ಕೇಂದ್ರ ಸರಕಾರ ಸಹಭಾಗಿತ್ವದ ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆಗೆ ಸುಲಭವಾಗಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.

radhan mantri Suraksha Bima Yojana Get 2 Lakh rupees just pay 20 rs
Image Credit to Original Source

ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರದಲ್ಲಿ ಜಾರಿಗೊಳಿಸಿದ್ದಾರೆ. ಈ ಯೋಜನೆಯನ್ನು ಬ್ಯಾಂಕ್‌ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವ ಮೂಲಕ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. 18 ವರ್ಷ ವಯಸ್ಸಿನಿಂದ 70 ವರ್ಷದ ಒಳಗಿನವರು ಈ ಯೋಜನೆಗೆ ಸೇರಬಹುದಾಗಿದೆ.

ಇದನ್ನೂ ಓದಿ : PM ಕಿಸಾನ್ ಯೋಜನೆ : ದೀಪಾವಳಿ ಹೊತ್ತಲ್ಲೇ 8 ಕೋಟಿಗೂ ಅಧಿಕ ರೈತರಿಗೆ ಇಲ್ಲಿದೆ ಭರ್ಜರಿ ಗುಡ್‌ನ್ಯೂಸ್‌

ಬ್ಯಾಂಕ್‌ ಅಥವಾ ಅಂಚೆ ಕಚೇರಿಯ ಮೂಲಕ ಈ ಯೋಜನೆಗೆ ನೋಂದಣಿ ಮಾಡಿಸಿಕೊಂಡ್ರೆ ಪ್ರತೀ ವರ್ಷ 20 ರೂಪಾಯಿಯನ್ನು ಬ್ಯಾಂಕ್‌ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆಯಲ್ಲಿ ಪ್ರತೀ ವರ್ಷ 20 ರೂಪಾಯಿಯಂತೆ  ಹೂಡಿಕೆ ಮಾಡಿದ್ರೆ ನೀವು 2 ಲಕ್ಷ ರೂಪಾಯಿ ಹಣವನ್ನು ಪಡೆಯಲು ಅವಕಾಶವಿದೆ.

ಅನಿರೀಕ್ಷಿತ ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಜೀವ ಹಾನಿ ಅಥವಾ ದೈಹಿಕ ನ್ಯೂನ್ಯತೆಗಳು ಉಂಟಾದಲ್ಲಿ ವ್ಯಕ್ತಿಗೆ 2 ಲಕ್ಷ ರೂಪಾಯಿ ವರೆಗೆ ವಿಮೆಯನ್ನು ಪಡೆಯಬಹುದಾಗಿದೆ. ಆರಂಭದಲ್ಲಿ ಈ ಯೋಜನೆಗೆ ವಾರ್ಷಿಕ 12 ರೂಪಾಯಿ ಪಾವತಿ ಮಾಡಬೇಕಾಗಿತ್ತು. ಆದ್ರೀಗ ಪ್ರೀಮಿಯಂ ಮೊತ್ತದಲ್ಲಿ 8 ರೂಪಾಯಿ ಏರಿಕೆ ಮಾಡಲಾಗಿದೆ.

Pradhan mantri Suraksha Bima Yojana Get 2 Lakh rupees just pay 20 rs
Image Credit to Original Source

ಇದನ್ನೂ ಓದಿ : ಸುಕನ್ಯಾ ಸಮೃದ್ಧಿ ಯೋಜನೆ : 12000 ರೂ. ಹೂಡಿಕೆ ಮಾಡಿ ರೂ 70 ಲಕ್ಷ ಪಡೆಯಿರಿ

ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಗೆ ಬ್ಯಾಂಕ್‌ ಖಾತೆ ಮಾಡಿಸುವ ವೇಳೆಯಲ್ಲಿ ಸೇರ್ಪಡೆ ಆಗಬಹುದು. ಅಲ್ಲದೇ ಯಾವುದೇ ಬ್ಯಾಂಕ್‌ ಶಾಖೆಯ ಮೂಲಕವೂ ನೋಂದಣಿ ಮಾಡಿಸಿಕೊಳ್ಳಲು ಅವಕಾಶವಿದೆ. ಅಷ್ಟೇ ಯಾಕೆ ನಿಮ್ಮ ಮೊಬೈಲ್‌ ಮೂಲಕವೇ ಆನ್‌ಲೈನ್‌ ಬ್ಯಾಂಕಿಂಗ್‌ ಮೂಲಕ ಸೇರ್ಪಡೆಗೆ ಅವಕಾಶ ನೀಡಲಾಗಿದೆ.

ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಗೆ ಸೇರ್ಪಡೆ ಆಗಲು, ಅಲ್ಲದೇ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ನೀವು https://jansuraksha.gov.in ಭೇಟಿ ನೀಡಬಹುದಾಗಿದೆ. ತುರ್ತು ಸಂದರ್ಭದಲ್ಲಿ ನೆರವಾಗುವ ಈ ಯೋಜನೆಗೆ ವಾರ್ಷಿಕವಾಗಿ 20 ರೂಪಾಯಿ ಪಾವತಿ ಮಾಡುವ ಮೂಲಕ ಸೇರ್ಪಡೆ ಆಗಬಹುದಾಗಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಬೆನ್ನಲ್ಲೇ, ಗೃಹಿಣಿಯರಿಗೆ ಉಚಿತವಾಗಿ ಸಿಗಲಿದೆ 50 ಸಾವಿರ ರೂ.

Pradhan mantri Suraksha Bima Yojana Get 2 Lakh rupees just pay 20 rs

Comments are closed.