Post Office New Offer : ಇಂಡಿಯನ್ ಪೋಸ್ಟ್ ನಿಂದ ಭರ್ಜರಿ ಆಫರ್ : ವಿವಾಹಿತರ ಖಾತೆಗೆ 59,400 ರೂ.ಜಮಾ

ಬೆಂಗಳೂರು : ಈಗಿನ ಕಾಲದಲ್ಲಿ ಹೆಚ್ಚಿನ ಜನರು ಹಣ ಉಳಿತಾಯ ಮಾಡುವ ಯೋಜನೆಯ ಕಡೆಗೆ ಗಮನ ಹರಿಸುತ್ತಾರೆ. ಜನರು ಹಣ ಉಳಿತಾಯ ಮಾಡುವುದು ಮಾತ್ರವಲ್ಲ, ತಾವು ಉಳಿತಾಯ ಮಾಡುವ ಹಣದ ಮೇಲೆ ನಿಶ್ಚಿತ ಆದಾಯ ಬಂದರೆ ಮತ್ತೊಂದು ರೀತಿಯ ನೆಮ್ಮದಿ (Post Office New Offer) ಎನ್ನುತ್ತಾರೆ. ಈಗಿನ ಕಾಲದಲ್ಲಿ ಹಣ ಉಳಿತಾಯ ಮಾಡುವುದಕ್ಕೆ ಬೇರೆ ಬೇರೆ ಮಾರ್ಗ ಹಾಗೂ ಬೇರೆ ಬೇರೆ ಯೋಜನೆಗಳಿವೆ. ಆದರೆ ಯಾವುದೇ ಅಪಾಯವಿಲ್ಲದೆ ಹಣವನ್ನು ಭವಿಷ್ಯಕ್ಕಾಗಿ ಹೂಡಿಕೆ ಯೋಜನೆಯಲ್ಲಿ ಹಣ ಹಾಕುವುದು ಮುಖ್ಯ. ಈ ದೃಷ್ಟಿಯಿಂದ ನೋಡುವುದಾದರೆ ಪೋಸ್ಟ್ ಆಫೀಸ್ ಹೂಡಿಕೆಗೆ ಅತ್ಯುತ್ತಮ ಆಯ್ಕೆಯಾಗಿದೆ. ಇಲ್ಲಿ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುವುದಲ್ಲದೆ, ಗಳಿಕೆ ಕೂಡಾ ಹೆಚ್ಚು. ಇನ್ನು ನೀವು ವಿವಾಹಿತರಾಗಿದ್ದರೆ ಪ್ರತಿ ತಿಂಗಳು ಆದಾಯ ಗಳಿಸಲು ಅಂಚೆ ಕಛೇರಿ ಅತ್ಯುತ್ತಮ ಮತ್ತು ಸುರಕ್ಷಿತ ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆಯ ಹೆಸರೇನು ಗೊತ್ತಾ ? :

ಅಂಚೆ ಕಚೇರಿಯ ಈ ಯೋಜನೆಯ ಹೆಸರು ಮಾಸಿಕ ಉಳಿತಾಯ ಯೋಜನೆ ಅಥವಾ ಮಂಥ್ಲಿ ಸೇವಿಂಗ್ ಸ್ಕೀಮ್. ಈ ಯೋಜನೆಯಲ್ಲಿ ಹಣ ಹೂಡುವ ಮೂಲಕ ಪ್ರತಿ ತಿಂಗಳು ಹಣ ಗಳಿಸುವುದು ಸಾಧ್ಯವಾಗುತ್ತದೆ. ಈ ಯೋಜನೆಯಲ್ಲಿ ಸಿಂಗಲ್ ಖಾತೆಯನ್ನು ತೆರೆಯಬಹುದು. ಇಲ್ಲದಿದ್ದರೆ ನೀವು ಮತ್ತು ನಿಮ್ಮ ಸಂಗಾತಿ ಇಬ್ಬರ ಹೆಸರಿನಲ್ಲಿ ಜಂಟಿ ಖಾತೆಯನ್ನು ತೆರೆಯಬಹುದು.

ಈ ಖಾತೆಯಿಂದ ರೂ.59,400 ಜಮೆ :

ಈ ಯೋಜನೆಯಲ್ಲಿ ವಿವಾಹಿತರು ಜಂಟಿ ಖಾತೆಯನ್ನು ತೆರೆಯಬಹುದು. ಈ ಉಳಿತಾಯ ಖಾತೆಯ ಪ್ರಕಾರ, 9 ಲಕ್ಷ ರೂಪಾಯಿಯನ್ನು ಠೇವಣಿ ಮಾಡಬೇಕಾಗುತ್ತದೆ. ಹೀಗೆ ಠೇವಣಿ ಮಾಡಿದ ಹಣದ ಮೇಲೆ ಶೇಕಡಾ 6.6 ರ ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತದೆ. ಇನ್ನು ವಾರ್ಷಿಕ ಆದಾಯದ ಬಗ್ಗೆ ಮಾತನಾಡುವುದಾದರೆ, ಇದರಲ್ಲಿ ಸುಮಾರು 59,400 ರೂಪಾಯಿಗಳ ಲಾಭ ಸಿಗಲಿದೆ. ಅಂದರೆ ಪ್ರತಿ ತಿಂಗಳು ನಿಮ್ಮ ಖಾತೆಗೆ 4,950 ರೂಪಾಯಿಗಳು ಬರುತ್ತವೆ.

ಇದನ್ನೂ ಓದಿ : Children’s Mutual Funds : ಚೈಲ್ಡ್‌ ಮ್ಯೂಚುವಲ್‌ ಫಂಡ್‌ ಬಗ್ಗೆ ನಿಮಗೆ ಗೊತ್ತಾ; ನಿಮ್ಮ ಮಕ್ಕಳ ಭವಿಷ್ಯವನ್ನು ಹೀಗೆ ಸುರಕ್ಷಿತಗೊಳಿಸಿ

ಇದನ್ನೂ ಓದಿ : LIC Dhan Varsha Plan : ಎಲ್‌ಐಸಿ ಈ ಹೊಸ ಯೋಜನೆಯ ಪ್ರೀಮಿಯಂನಿಂದ ಪಡೆಯಿರಿ 10 ಪಟ್ಟು ಲಾಭ

ಇದನ್ನೂ ಓದಿ : Post Office New Scheme :ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ ರೂ.50 ಹೂಡಿಕೆ ಮಾಡಿ ರೂ.35 ಲಕ್ಷ ಪಡೆಯಿರಿ

ಲಾಭದ ಲೆಕ್ಕಾಚಾರ ವಿವರ :

ಈ ಯೋಜನೆಯ ಅಡಿಯಲ್ಲಿ, ನಿಮ್ಮ ಒಟ್ಟು ಠೇವಣಿಯ ವಾರ್ಷಿಕ ಬಡ್ಡಿಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಇದರಲ್ಲಿ ನಿಮ್ಮ ಒಟ್ಟು ಆದಾಯವನ್ನು ವಾರ್ಷಿಕ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಈ ಲಾಭವನ್ನು 12 ಭಾಗಗಳಾಗಿ ವಿಭಜಿಸಿದರೆ ಅದರಲ್ಲಿ ಒಂದು ಭಾಗವನ್ನು ಪ್ರತಿ ತಿಂಗಳು ನಿಮ್ಮ ಖಾತೆಗೆ ಬರುವಂತೆ ಮಾಡಬಹುದು. ಹೀಗೆ ಪ್ರತಿ ತಿಂಗಳು ಹಣ ತೆಗೆದುಕೊಳುವುದು ಅಗತ್ಯವಿಲ್ಲ ಎಂದಾದರೆ, ಅಸಲು ಮೊತ್ತದೊಂದಿಗೆ ಮೆಚ್ಯುರಿಟಿ ಸಮಯದಲ್ಲಿ ದೊಡ್ಡ ಮೊತ್ತವನ್ನು ಪಡೆದುಕೊಳ್ಳಬಹುದು.

Post Office New Offer: Huge Offer from Indian Post: Deposit Rs. 59,400 to Married Accounts

Comments are closed.